ಬೈಬಲನ್ನು ಹೆಚ್ಚಾಗಿ ಉಪಯೋಗಿಸುವುದು
1 “ದೇವರ ವಾಕ್ಯವು ಸಜೀವವಾದದ್ದು; ಕಾರ್ಯಸಾಧಕವು.” (ಇಬ್ರಿ. 4:12) ಅದರ ಕಾರ್ಯ ಸಾಧಕತೆ ಮತ್ತು ಸಜೀವತ್ವವನ್ನು ಕಾಣಲು ಅದನ್ನು ಓದಬೇಕು ಮತ್ತು ಅನ್ವಯಿಸಬೇಕು. ಇದನ್ನು ಅಧಿಕವಾಗಿ ನಿರ್ವಹಿಸಲು ಯೆಹೋವನ ಸಂಸ್ಥೆಯು, ವಿಶೇಷವಾಗಿ 1954 ರಿಂದಾರಂಭಿಸಿ, ನಮ್ಮ ಮನೆ ಮನೆಯ ಸೇವೆಯಲ್ಲಿ ಬೈಬಲನ್ನುಪಯೋಗಿಸಲು ನಮ್ಮನ್ನು ಉತ್ತೇಜಿಸಿತು. ಮನೆ ಮನೆಯ ಭೇಟಿಗಳಲ್ಲಿ 3-8 ನಿಮಿಷಗಳ ಪ್ರಸಂಗವನ್ನು ಕೊಡುವಂತೆ ಮತ್ತು ಮಹತ್ವದ ವಿಷಯದ ಬಗ್ಗೆ ಬೈಬಲ್ ಹೇಳುವುದನ್ನು ಮನೆಯವರ ಗಮನಕ್ಕೆ ತರುವಂತೆ ನಮಗೆ ತರಬೇತು ಸಿಕ್ಕಿತು.
2 ಇತ್ತೀಚಿನ ವರ್ಷಗಳಲ್ಲಿ, ನಮ್ಮ ರಾಜ್ಯದ ಸೇವೆ ಕ್ರಮವಾಗಿ ಸಂಭಾಷಣೆಗಾಗಿ ವಿಷಯವನ್ನು ಪ್ರಕಟಿಸಿ, ಕ್ಷೇತ್ರಸೇವೆಯಲ್ಲಿ ಬಳಸುವ ವಿಷಯದ ಮೇಲೆ 2-3 ವಚನಗಳನ್ನು ಒದಗಿಸುತ್ತಾ ಬಂದಿದೆ. ಉದಾಹರಣೆಗೆ, ನಮ್ಮ ಸದ್ಯದ ಸಂಭಾಷಣೆಗಾಗಿ ವಿಷಯವು “ದೇವರ ರಾಜ್ಯವು ಏನನ್ನು ಮಾಡಲಿದೆ” ಎಂಬದರ ಕುರಿತಾಗಿದೆ. ಉಪಯೋಗಿಸಲಿರುವ ವಚನಗಳು ಭವಿಷ್ಯಗಾಗಿ ದೇವರು ಕೊಟ್ಟಿರುವ ಆಶ್ಚರ್ಯಕರ ನಿರೀಕ್ಷೆಯನ್ನು ಎತ್ತಿಹೇಳುತ್ತವೆ.
3 ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಿಕ್ಕೆ ಅಭ್ಯಾಸಮಾಡುವ ಅಗತ್ಯವಿದೆ ಮತ್ತು ದೇವರ ವಾಕ್ಯ ನಿಜವಾಗಿ ಸಜೀವವೂ ಕಾರ್ಯಸಾಧಕವೂ ಆಗಿದೆಂದು ಜನರು ಮನಗಾಣುವಂತೆ ನೆರವಾಗುವ ಅಪೇಕ್ಷೆಬೇಕು. ಪತ್ರಿಕಾ ಚಟುವಟಿಕೆಯಲ್ಲಿ ಸಂಕ್ಷೇಪವೂ ಚುಟುಕೂ ಆದ ಪ್ರಸಂಗವನ್ನುಪಯೋಗಿಸಲು ನಾವು ಉತ್ತೇಜಿಸಲ್ಪಟ್ಟರೂ, ಕ್ಷೇತ್ರ ಸೇವೆಯ ಇತರ ವೈಶಿಷ್ಟ್ಯಗಳಲ್ಲಿ ಬೈಬಲನ್ನು ಉಪಯೋಗಿಸುವ ವಿಷಯದಲ್ಲಿ ನಾವು ಅಲಕ್ಷದಿಂದಿರಬಾರದು. ಎಷ್ಟೆಂದರೂ ನಾವು ಬೈಬಲ್ ವಿದ್ಯಾರ್ಥಿಗಳು, ಮತ್ತು ಮಾನವರಿಗೂ ಈ ಭೂಮಿಗೂ ಯೆಹೋವನು ಏನನ್ನು ತರಲಿದ್ದಾನೆಂದು ಜನರಿಗೆ ಬೈಬಲಿಂದಲೇ ತೋರಿಸ ಪ್ರಯತ್ನಿಸುವ ಮೂಲಕ, ನಾವು ಅಂತವರೆಂದು ರುಜುಪಡಿಸುವುದಕ್ಕಿಂತ ಬೇರೆ ಉತ್ತಮ ವಿಧಾನ ಯಾವುದಿದೆ?
ರೀಸನಿಂಗ್ ಪುಸ್ತಕದಿಂದ ಸಹಾಯ
4 ನಮ್ಮ ರಾಜ್ಯದ ಸೇವೆ ಯಲ್ಲಿರುವ ಸಂಭಾಷಣೆಗಾಗಿ ವಿಷಯವಲ್ಲದೆ, ನಮಗೆ ರೀಸನಿಂಗ್ ಫ್ರಮ್ ದ ಸ್ಕಿಪ್ಚರ್ಸ್ ಪುಸ್ತಕವೂ ಇದೆ. ಪುಟ 9-15 ರ ಪೀಠಿಕೆಗಳನ್ನು ನೀವು ಪರಾಮರ್ಶಿಸುವಲ್ಲಿ, ರಾಜ್ಯ ಸಂದೇಶವನ್ನು ಪ್ರಸ್ತಾಪಿಸುವಾಗ ಬಳಸಬಹುದಾದ ಬೈಬಲ್ ವಚನಗಳ ನಿರ್ದೇಶನೆಗಳನ್ನು ಕಾಣುವಿರಿ. ಬೈಬಲ್ ಏನನ್ನುತ್ತದೋ ಅದನ್ನು ಜನರಿಗೆ ತೋರಿಸಲು ಅದಕ್ಕೆ ಹೋಗುವ ಅನೇಕಾನೇಕ ವಿವಿಧ ವಿಧಾನಗಳು ಅದರಲ್ಲಿವೆ.
5 ಉದಾಹರಣೆಗೆ, ಕೆಲವು ಮನೆಯವರು ವೃದ್ಧರ ಕುರಿತು ಚಿಂತಿತರಾಗಿದ್ದರೆ, ರೀಸನಿಂಗ್ ಪುಸ್ತಕದ 14ನೇ ಪುಟದಲ್ಲಿ “ವೃದ್ಧಾಪ್ಯ⁄ಮರಣ ವಿಷಯದ ಕೆಳಗೆ ಸೂಚಿತವಾದ ಪೀಠಿಕೆಗಳು ಸಹಾಯಕಾರಿಯು. “ನಾವು ವೃದ್ಧರಾಗುವುದೂ ಸಾಯುವುದೂ ಏಕೆಂದು ನೀವೆಂದಾದರೂ ಯೋಚಿಸಿದ್ದೀರೋ? ರೋಮಾಯ 5:12 ರಲ್ಲಿ ಪ್ರೇರಿತ ಬೈಬಲ್ ಲೇಖಕನು ಎನು ಬರೆದಿದ್ದಾನೆಂದು ತೋರಿಸಲು ನಾನು ಬಯಸುತ್ತೇನೆ” ಎಂಬ ಪ್ರಶ್ನೆಯು ಎಷ್ಟು ಯುಕ್ತವಾಗಿರುವುದು. ಅನಂತರ ಹೀಗನ್ನಬಹುದು: “ನಾವು ವೃದ್ಧರಾಗುವುದೂ ಸಾಯುವುದೂ ಯಾಕೆಂದು ಬೈಬಲ್ ತಿಳಿಸುವಾಗ, ಅದು ಭವಿಷ್ಯಕ್ಕಾಗಿ ಒಂದು ಅತ್ಯಂತ ಆಶ್ಚರ್ಯಕರ ನಿರೀಕ್ಷೆಯನ್ನೂ ಪ್ರಕಟನೆ 21:3, 4ರಲ್ಲಿ ನಮಗೆ ಒದಗಿಸುತ್ತದೆ.” ಆಮೇಲೆ ಪ್ರಸ್ತುತ ಪುಸ್ತಕವನ್ನು ತೋರಿಸ ಸಾಧ್ಯವಿದೆ.
6 ಈ ದಿನಗಳಲ್ಲಿ ಎಷ್ಟೋ ಸಲ ಜನರು “ಬೇಡ, ತುಂಬಾ ಕೆಲ್ಸದಲ್ಲಿದ್ದೇನೆ” ಅನ್ನುತ್ತಾರೆ. ಅನೇಕರು ನಿಜವಾಗಿ ಕಾರ್ಯಮಗ್ನರು ಮತ್ತು ಅವರು ಹಾಗಿರುವುದನ್ನು ನಾವು ಗಣನೆಗೆ ತರಬೇಕು. ಆದಾಗ್ಯೂ, ಪರಿಸ್ಥಿತಿಯು ಯುಕ್ತವಾಗಿದ್ದಲ್ಲಿ, ಹೀಗನ್ನಬಹುದು: “ನಿಮ್ಮ ಭಾವನೆ ನನಗೆ ಗೊತ್ತು, ಯಾಕೆಂದರೆ ಇವು ಅತ್ಯಂತ ಕಾರ್ಯಮಗ್ನ ಸಮಯ. ಆದರೂ ಈ ಒಂದು ವಿಚಾರವನ್ನು ನಿಮಗೆ ಕೊಟ್ಟುಹೋಗಲು ನಾನು ಬಯಸುವೆ” ಎಂದು ಹೇಳಿ ಸದ್ಯದ ನಮ್ಮ ಸಂಭಾಷಣೆಗಾಗಿ ವಿಷಯದ ಒಂದು ವಚನದ ಕಡೆಗೆ ತಿರುಗಿರಿ. ಅದನ್ನು ಓದಿದ ನಂತರ, ಯಾವ ಪುಸ್ತಕ ನೀವು ನೀಡುತ್ತೀರಿ ಎಂದು ಬೇಗನೇ ತಿಳಿಸಬಹುದು, ತಕ್ಕದಾದ ಟ್ರೇಕ್ಟನ್ನು ಕೊಡಬಹುದು, ಅಥವಾ ಇನ್ನೊಮ್ಮೆ ಬೇಗನೇ ಬಂದು ಸಾಯದೇ ಇರಬಹುದಾದ ಆಸಕ್ತಿಭರಿತ ಸಂಭಾವ್ಯತೆಯ ಕುರಿತು ಹೆಚ್ಚನ್ನು ತಿಳಿಸಲು ಬಯಸುವಿರೆಂದು ಹೇಳಬಹುದು.
7 ನಮ್ಮ ಶುಶ್ರೂಷೆಯಲ್ಲಿ ದೇವರ ವಾಕ್ಯವನ್ನು ನಿಪುಣತೆಯಿಂದ ಉಪಯೋಗಿಸುವ ಬೈಬಲ್ ವಿದ್ಯಾರ್ಥಿಗಳು ನಾವೆಂದು ಜನರು ಕಾಣುವಾಗ ಅದೆಷ್ಟು ಒಳ್ಳೆಯದು! ಇಂದು ದೇವರ ವಾಕ್ಯದಲ್ಲಿ ಆತುಕೊಂಡಿರುವ ಮತ್ತು ದೈನಂದಿನದ ಜೀವಿತದಲ್ಲಿ ಅದನ್ನುಪಯೋಗಿಸುವ ಜನರನ್ನು ಗುರುತಿಸಲು ಅದು ಅವರಿಗೆ ಸಹಾಯ ಮಾಡುತ್ತದೆ. ಹೀಗೆ, ಪತ್ರಿಕಾದಿನವನ್ನು ಹೊರತು, ಕ್ರಮದ ಸಾಹಿತ್ಯ ನೀಡುವಾಗಲ್ಲೆಲ್ಲಾ ಬೈಬಲನ್ನು ಉಪಯೋಗಿಸಲು ಸಿದ್ಧರಾಗಿರ್ರಿ. ಬೈಬಲನ್ನು ಬಳಸಲು ನಾವು ಮಾಡುವ ಪ್ರಯತ್ನಗಳು ನಮ್ಮ ಶುಶ್ರೂಷೆಯ ಮೇಲೆ ದೇವರ ಆಶೀರ್ವಾದವನ್ನು ತರುವುದು ಮತ್ತು ದೇವರ ವಾಕ್ಯ ಸಜೀವವಾದದ್ದು, ಕಾರ್ಯಸಾಧಕವು, ಮತ್ತು ಅವರ ಜೀವಿತಗಳನ್ನು ಪ್ರಭಾವಿಸ ಶಕ್ತವಾಗಿದೆ ಎಂದು ಅನೇಕರಿಗೆ ತಿಳಿದುಬರುವುದು.