ಕ್ಷೇತ್ರ ಸೇವೆಯಲ್ಲಿ ಬೈಬಲ್ನ್ನು ಉಪಯೋಗಿಸಿರಿ
1 ಬೈಬಲಿನ ಪ್ರೇರಿತ ವಾಕ್ಯಗಳು ಜನರ ಮೇಲೆ ಬಲವುಳ್ಳ ಪ್ರಭಾವವನ್ನು ಹಾಕಬಲ್ಲವು. ಈ ಕಾರಣಕ್ಕಾಗಿ, ಒಂದನೇ ಶತಕದ ಕ್ರೈಸ್ತರು ಸುವಾರ್ತೆಯನ್ನು ಸಾರುವಾಗ ಪವಿತ್ರ ಶಾಸ್ತ್ರದ ಸದುಪಯೋಗವನ್ನು ಮಾಡಿದ್ದರು. ಪೌಲನು ತನ್ನ ಮಾತುಗಳನ್ನು ‘ಶಾಸ್ತ್ರಾಧಾರದಿಂದ’ ವಿವೇಚಿಸಿ, ಅರ್ಥ ವಿವರಿಸಿ, ನಿರ್ದೇಶನೆಗಳಿಂದ ರುಜುಪಡಿಸಿದ್ದನು. (ಅಪೊ. 17:2, 3) ಅಪೊಲ್ಲೋಸನು ಯೆಹೂದ್ಯರಿಗೆ ಸಾಕ್ಷಿಕೊಟ್ಟಾಗ, “ಯೇಸುವೇ ಕ್ರಿಸ್ತನೆಂದು ಶಾಸ್ತ್ರಾಧಾರದಿಂದ ತೋರಿಸಿ” ಕೊಟ್ಟಿದ್ದನು.—ಅಪೊ. 18:24-28.
2 ಇಂದು ಯೆಹೋವನ ಸಾಕ್ಷಿಗಳು ಇದೇ ಮಾದರಿಯನ್ನು ಅನುಸರಿಸುತ್ತಾರೆ. ಮಾರ್ಚ್ 1, 1986ರ ವಾಚ್ಟವರ್, ಪುಟ 26 ರಲ್ಲಿ ಹೇಳಿದ್ದು: “ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗಹಿಸುವಾಗ ಅವರು ಸಾರುವ ಸಂದೇಶವು, ದೇವರ ಸ್ವಂತ ವಾಕ್ಯವಾಗಿದೆಯೇ ಹೊರತು ಮೂಲತಃ ಅವರದ್ದಲ್ಲ, ಎಂದು ಜನರು ತಿಳಿಯುವಂತೆ ಅವರು ಬಯಸುತ್ತಾರೆ. ಆದ್ದರಿಂದ, ಅವರು ಬೈಬಲಿನ ನೇರ ಉಪಯೋಗವನ್ನು ಮಾಡುತ್ತಾರೆ, ಸಾಧ್ಯವಾದಾಗಲ್ಲೆಲ್ಲಾ ಇತರರಿಗೆ ಅದರಿಂದ ಕಾರ್ಯಥಃ ಓದಿಹೇಳುತ್ತಾರೆ.” ನಿಮ್ಮ ಶುಶ್ರೂಷೆಯಲ್ಲಿ ಬೈಬಲಿನ ಪೂರ್ಣ ಉಪಯೋಗವನ್ನು ನೀವು ಮಾಡುತಿದ್ದೀರೋ? ನಿಮ್ಮ ಕ್ಷೇತ್ರದ ಮುಖ್ಯ ದೇಶೀಯ ಭಾಷೆಯ ಒಂದು ಬೈಬಲಿನ ಪ್ರತಿಯನ್ನು ಯಾವಾಗಲೂ ನಿಮ್ಮೊಂದಿಗೆ ಒಯ್ಯಲು ನಿಶ್ಚಯ ಮಾಡಿರಿ ಮತ್ತು ಸಾಧ್ಯವಾದಲ್ಲೆಲ್ಲಾ ಅದನ್ನುಪಯೋಗಿಸಿರಿ.
ಯಾಕೆ ಪರಿಣಾಮಕಾರಿ
3 ಬೈಬಲ್ ಅಷ್ಟು ಪರಿಣಾಮಕಾರಿ ಏಕೆ? ಏಕಂದರೆ ಅದು ದೇವರ ವಾಕ್ಯವಾಗಿದೆ ಮತ್ತು “ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು.” (ಇಬ್ರಿ. 4:12) ಶಾಸ್ತ್ರೀಯ ಸತ್ಯಕ್ಕೆ ಒಡ್ಡಲ್ಪಟ್ಟಾಗ, ವ್ಯಕ್ತಿಗಳ ನಿಜ ಹೇತುಗಳು ಎದ್ದುಕಾಣುತ್ತವೆ. ಉದಾಹರಣೆಗಾಗಿ, ಯೆಹೋವನ ಸೇವೆಯಲ್ಲಿ ತೀವ್ರ ಪ್ರಗತಿಯನ್ನು ಮಾಡಿದ ಒಬ್ಬ ಯುವ ದಂಪತಿಗಳನ್ನು, ಅವರಷ್ಟು ಶೀಘ್ರವಾಗಿ ಸುವಾರ್ತೆಗೆ ಪ್ರತಿಕ್ರಿಯಿಸಿದ್ದು ಹೇಗೆಂದು ಕೇಳಲಾಯಿತು. ಅವರ ಉತ್ತರ? “ಬೈಬಲೇ ಕಾರಣ” ಎಂದರವರು. ಅವರನ್ನು ಸಂದರ್ಶಿಸಿದ ಪ್ರಚಾರಕನು ಅವರ ಗಮನವನ್ನು ಬೈಬಲಿಗೆ ನಡಿಸಿದಾಗ ಅವರು, “ಒಳ್ಳೇ ಕುರುಬನ” ಸರ್ವವನ್ನು ಗುರುತಿಸಿದರು.—ಯೋಹಾ. 10:14; w78 6⁄1, ಪುಟ 22-3.
4 ಕ್ಷೇತ್ರದಲ್ಲಿ ಬೈಬಲನ್ನು ಉಪಯೋಗಿಸುವಾಗ ಕೆಲವು ಸಾರಿ ತುಸು ನ್ಯೂನತೆಯು ನಿಮಗೆ ಭಾಸವಾಗುತ್ತದೋ? ಎಲ್ಲಾ ಸಭಾಕೂಟಗಳಿಗೆ ತಯಾರಿ ಮತ್ತು ಹಾಜರಿಯೂ ಸೇರಿಸಿರುವ ಒಂದು ಒಳ್ಳೇ ವೈಯಕ್ತಿಕ ಅಧ್ಯಯನದ ಕಾರ್ಯಕ್ರಮವು ನಿಮ್ಮನ್ನು, ಸಕಲ ಸತ್ಕಾರ್ಯಗಳಿಗೆ ಸನ್ನದ್ಧಗೊಳಿಸುವುದು ಮತ್ತು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. (2 ತಿಮೊ. 3:16, 17) ಸೇವಾ ಸಂಗಡಿಗರು ಮತ್ತು ಕುಟುಂಬ ಸದಸ್ಯರು ಒಬ್ಬರೊಂದಿಗೊಬ್ಬರು ‘ಸಂಭಾಷಣೆಗಾಗಿ ವಿಷಯ’ವನ್ನು ಪ್ರ್ಯಾಕ್ಟಿಸ್ ಮಾಡಿ ನೋಡಬಹುದು. ಹಾಗೂ, ರೀಸನಿಂಗ್ ಪುಸ್ತಕದ ಪುಟ 9-15ರ ಹೆಚ್ಚಿನ ಪೀಠಿಕೆಗಳು ಸಂಭಾಷಣೆಯ ಆರಂಭದಲ್ಲೀ ಶಾಸ್ತ್ರವಚನವನ್ನು ಓದುವುದನ್ನು ಒಳಗೂಡಿವೆ. ಇವುಗಳಲ್ಲಿ ಕೆಲವನ್ನು ಯಾಕೆ ಪ್ರ್ಯಾಕ್ಟಿಸ್ ಮಾಡಬಾರದು? ಯಾವುದು ವ್ಯಾವಹಾರ್ಯವೋ ಮತ್ತು ನಿಮ್ಮ ಕ್ಷೇತ್ರದ ಜನರ ಆಸಕ್ತಿಯನ್ನು ಸೆಳೆದು ಹಿಡಿಯುತ್ತದೋ ಅದನ್ನು ಉಪಯೋಗಿಸಿರಿ.
ಯುಕ್ತ ನಿರ್ಣಯ ಮಾಡಿರಿ
5 ಮನೆಯವನು ಬೈಬಲಿನ ತನ್ನ ಸ್ವಂತ ಪ್ರತಿಯನ್ನು ತರುವಂತೆ ಮತ್ತು ನಮ್ಮೊಂದಿಗೆ ಒಂದು ವಚನವನ್ನು ಓದುವಂತೆ ಅಮಂತ್ರಿಸಲು ನಾವು ಬಯಸುವ ಸಮಯಗಳಿವೆ. ಇಂಥ ಪರಿಸ್ಥಿತಿಗಳಲ್ಲಿ ಒಳ್ಳೇ ತೀರ್ಮಾನ ಮಾಡಿರಿ. (ರೀಸನಿಂಗ್ ಪುಸ್ತಕ, ಪುಟ 67, ಪಾರಾ 3 ಮತ್ತು ಪುಟ 279, ಪಾರಾ 2 ನೋಡಿ.) ಸಂಕ್ಷಿಪ್ತತೆಯು ಬೇಕಾದಾಗ, ಸಂಭಾಷಣೆಗಾಗಿ ವಿಷಯದ ಕೇವಲ ಒಂದೇ ವಚನವನ್ನು ಓದಲು ನಾವು ನಿರ್ಣಯಿಸಬಹುದು. ಅಥವಾ, ಮನೆಯವನು ಕಾರ್ಯಮಗ್ನನೆಂದು ಕಂಡಲ್ಲಿ, ವಚನವನ್ನು ಕೇವಲ ಉದ್ಧರಿಸಿ ಹೇಳಬಹುದು ಮತ್ತು ಅದು ಬೈಬಲಿಂದ ಉದ್ಧರಿಸಿದ ವಚನವೆಂದು ಮನೆಯವನಿಗೆ ತಿಳಿಸಬಹುದು. ಯೇಸು ಮತ್ತು ಅವನ ಅಪೊಸ್ತಲರಿಗೆ ಸಾರುವ ಕಾರ್ಯದಲ್ಲಿ ಕೊಂಡೊಯ್ಯಲು ಹಿಬ್ರೂ ಶಾಸ್ತ್ರದ ವೈಯಕ್ತಿಕ ಪ್ರತಿಗಳಿರಲಿಲ್ಲ. ಆದರೂ ಅವರು ಅದರಿಂದ ವಿಸ್ತಾರ್ಯವಾಗಿ ಉದ್ಧರಿಸಿ ಹೇಳಿದ್ದರು. ನಾವು ಸಹಾ ಬೈಬಲ್ ವಚನಗಳನ್ನು ನೆನಪಿನಲ್ಲಡಬೇಕು, ಹೀಗೆ ಶುಶ್ರೂಷೆಯಲ್ಲಿ ಉಪಯೋಗಿಸಲು ಅದು ನಮ್ಮ ಮನಸ್ಸಲ್ಲಿ ಉಳಿಯುವುದು.
6 ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು’ ಎಂದು ತಿಮೊಥಿಗೆ ಪೌಲನು ಬೋಧಿಸಿದನು. (2 ತಿಮೊ. 2:15) ಅದೇ ಬೋಧೆಯು ಇಂದು ನಮಗೂ ಅನ್ವಯಿಸುತ್ತದೆ. ನಮ್ಮ ಕ್ಷೇತ್ರಸೇವೆಯಲ್ಲಿ ಬೈಬಲನ್ನು ಪದೆಪದೇ ಉಪಯೋಗಿಸುವ ಮೂಲಕ ಯೇಸುವನ್ನು ಮತ್ತು ಅಪೊಸ್ತಲರನ್ನು ಅನುಕರಿಸಲು ನಾವು ಬಯಸುತ್ತೇವೆ. ಸಾಧ್ಯವಾದಾಗಲ್ಲೆಲ್ಲಾ ಅದರಿಂದ ಓದಿರಿ, ಅವಶ್ಯಬಿದ್ದಲ್ಲಿ ಸ್ಮರಣೆಯಿಂದ ಉದ್ಧರಿಸಿ ಹೇಳಿರಿ. ಇದನ್ನು ಪರಿಣಾಮಕಾರಿಯಾಗಿ ಮಾಡುವದರಿಂದ ನಾವು ದೇವರ ಶುಶ್ರೂಷಕರೆಂದೂ ಮತ್ತು ನಮ್ಮ ಸಂದೇಶವು ಆತನ ವಾಕ್ಯದಲ್ಲಿ ದೃಢವಾಗಿ ಆಧರಿಸಿದೆಯೆಂದೂ ಸ್ಪಷ್ಟವಾಗುವುದು.