ಆಪತ್ತನ್ನು ತೊಲಗಿಸುವಂತೆ ಯುವಕರಿಗೆ ಸಹಾಯಮಾಡುವುದು
1 ತನ್ನ ಅಮೂಲ್ಯ ದಾನವಾದ ಜೀವವನ್ನು ನಾವು ಆನಂದಿಸುವಂತೆ ಯೆಹೋವನು ಬಯಸುತ್ತಾನೆ. ಅದನ್ನು ಪೂರೈಸಲು, ಆತನು ನಮಗೆ ಸಾಕಷ್ಟು ವೈಯಕ್ತಿಕ ಸ್ವಾತಂತ್ರ್ಯವನ್ನು ಕೊಟ್ಟು ನಮ್ಮ ಹೃದಯದ ಅಪೇಕ್ಷೆಗಳನ್ನು ಬೆನ್ನಟ್ಟುವಂತೆ ಅನುಮತಿಸಿದ್ದಾನೆ. ಆದರೆ ಆ ಕ್ರಿಯಾ ಸ್ವಾತಂತ್ರ್ಯದೊಂದಿಗೆ, ನಾವು ಏನು ಮಾಡುತ್ತೇವೋ ಅದಕ್ಕಾಗಿ ನಮ್ಮನ್ನು ನ್ಯಾಯವಾಗಿ ಹೊಣೆಯಾಗಿಯೂ ಯೆಹೋವನು ಹಿಡಿಯುತ್ತಾನೆ.—ಪ್ರಸಂ. 11:9.
2 ನಾವು ಅಪೂರ್ಣರೂ ಪಾಪಿಗಳೂ ಆಗಿರಲಾಗಿ, ನಮ್ಮ ಜೀವಿತವನ್ನು ಮಾರ್ಗದರ್ಶಿಸುವ ರೀತಿಯ ಫಲಿತಾಂಶವಾಗಿ ಬರುವ ಆಪತ್ತನ್ನು ಹೇಗೆ ತೊಲಗಿಸ್ಯೇವು? (ಪ್ರಸಂ. 11:10) ಅನನುಭವಿಗಳಾದ ಯುವಕರು ಸಹಾ, ತಮಗೆ ಬರುವ ಆಪತ್ತನ್ನು ತೊಲಗಿಸ ಶಕ್ತರೋ? ಹೌದು, ಶಕ್ಯವಿದೆ ಎಂಬದು ನಮಗೆ ಸಂತೋಷಕರ. ಮಾರ್ಗದರ್ಶನೆಗಾಗಿ ನಮಗಿರುವ ಅಗತ್ಯವನ್ನು ಯೆಹೋವನು ಬಲ್ಲನು, ಮತ್ತು ಈ ಕಡೇ ದಿನಗಳನ್ನು ಗುರುತಿಸುವ ಸಂಕಷ್ಟಗಳ ಉಬ್ಬರದ ನಡುವೆ ಸುರಕ್ಷಿತವಾಗಿ ಪಾರಾಗಲು ಯುವಕರಿಗೂ ವೃದ್ಧರಿಗೂ ಆತನು ಸೂಚನೆ ಮತ್ತು ಮಾರ್ಗದರ್ಶನೆಯನ್ನು ಪ್ರೀತಿಯಿಂದ ಒದಗಿಸಿರುತ್ತಾನೆ.—ಜ್ಞಾನೋ. 19:7; ಜ್ಞಾನೋ 119:9; 2 ತಿಮೊ. 3:1.
ಹೆತ್ತವರ ಜವಾಬ್ದಾರಿಕೆ
3 ತೊಂದರೆಗಳು ಬರುವಾಗ ಯುವಕರಿಗೆ, “ಯಾವುದು ಕುಂಟಾಗಿದೆಯೋ ಅದು ಉಳುಕಿ ಹೋಗದೆ ವಾಸಿಯಾಗುವಂತೆ ಜೋಲುಬಿದ್ದ ಕೈಗಳನ್ನು ನೆಟ್ಟಗೆ ಮಾಡುವ” ಜವಾಬ್ದಾರ ಹೆತ್ತವರ ಅಗತ್ಯವಿದೆ. (ಇಬ್ರಿ. 12:12, 13) ಜೀವಕ್ಕೆ ನಡಿಸುವ ದಾರಿಯಲ್ಲಿ ಅವರ ಮಕ್ಕಳು ಮುಂದರಿಯುವಂತೆ ಸಹಾಯ ಮಾಡಲು ಹೆತ್ತವರು ತಮ್ಮ ಮಕ್ಕಳ ಯೋಚನೆ-ವಿಚಾರಗಳನ್ನು ಆಗಿಂದಾಗ್ಯೆ ಕ್ರಮಪಡಿಸುವ ಅವಶ್ಯಕತೆ ಇದೆ. ಇದಕ್ಕೆ, ಯೆಹೋವನ ಹೇರಳವಾದ ಆಶೀರ್ವಾದದೊಂದಿಗೆ, ತಾಳ್ಮೆ ಮತ್ತು ನಿಪುಣತೆಯೂ ಬೇಕು.
4 ತಮ್ಮ ಮಕ್ಕಳನ್ನು ಕೆಟ್ಟ ಪ್ರಭಾವಗಳಿಂದ ಪೂರ್ಣವಾಗಿ ತಡೆಗಟ್ಟಲು ಹೆತ್ತವರು ಶಕ್ತರಲ್ಲ. ಆದರೆ ಮಗುವಿನ ಮನಸ್ಸನ್ನು ಬಲಪಡಿಸುವುದು ಹೇಗೆ? ಅವನನ್ನು ‘ಯೆಹೋವನ ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಸಾಕಿಸಲಹುವ’ ಮೂಲಕವೇ. (ಎಫೆ. 6:4) ಬೇರೆ ವಿಷಯಗಳೊಂದಿಗೆ ಇದರಲ್ಲಿ, ಕುಟುಂಬ ಅಭ್ಯಾಸ, ಆತ್ಮಿಕ ಮತ್ತು ನೈತಿಕ ಮಾರ್ಗದರ್ಶನೆ, ಶಾಲಾನಂತರದ ಆರೋಗ್ಯಕರ ಚಟುವಟಿಕೆ, ತಕ್ಕದ್ದಾದ ಶಿಸ್ತು ಮತ್ತು ಹೆತ್ತವರ ಒಳ್ಳೆಯ ಮಾದರಿ ಸೇರಿರುತ್ತದೆ.
5 “ದೈವಿಕ ಭಕ್ತಿ” ಜಿಲ್ಲಾ ಅಧಿವೇಶನದಲ್ಲಿ ಹೊರಡಿಸಲ್ಪಟ್ಟ ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಪುಸ್ತಕವು, ಯುವ ಜನರ ಸಹಾಯಕ್ಕಾಗಿ ರಚಿಸಲ್ಪಟ್ಟಿದೆ. ತಮ್ಮ ಮಕ್ಕಳೊಂದಿಗೆ ಯೋಗ್ಯವಾದ ಮಟ್ಟಗಳ ವಿವೇಚನೆ ನಡಿಸಲು ಅದು ಹೆತ್ತವರಿಗೂ ಸಹಾಯ ಮಾಡುತ್ತದೆ. ಮಗುವಿನ ಮನಸ್ಸು ಮತ್ತು ಹೃದಯದೊಳಗೆ ದೇವರ ನಿಯಮಗಳು ಪರಿಣಾಮಕಾರಿಯಾಗಿ ತುಂಬಿಸಲ್ಪಟ್ಟರೆ ಈ ನಿಯಮಗಳು, ನಿಯಂತ್ರಣಗೊಳಿಸುವ ಅಥವಾ ಕ್ರಮಪಡಿಸುವ ಪ್ರಭಾವಗಳಾಗಿ ಕಾರ್ಯ ನಡಿಸುವವು. ಈ ಹೊಸ ಪುಸ್ತಕದಲ್ಲಿರುವ ಸಮಾಚಾರದ ಕುಟುಂಬ ಚರ್ಚೆಯು ಯುವಕರಿಗೆ, ಆಪತ್ತನ್ನು ತೊಲಗಿಸಿಕೊಳ್ಳಲು ಬಲಕೊಡುವದು.
6 ಯಂಗ್ ಪೀಪಲ್ ಆಸ್ಕ್ ಪುಸ್ತಕವು 1989ರಲ್ಲಿ ಹೊರಡಿಸಲ್ಪಟ್ಟಾಗ ಅಧಿವೇಶನದ ಭಾಷಕನು, ನೆರೆದಿದ್ದ ಯುವಕರ ಕಡೆಗೆ ಗಮನವೆಳೆದು, ಪುಸ್ತಕದ ಮೂಲ್ಯತೆಯನ್ನು ಎತ್ತಿಹೇಳಿದನು. ಕುಟುಂಬ ಚರ್ಚೆಗೆ ಅದನ್ನು ಆಧಾರವಾಗಿ ಉಪಯೋಗಿಸುವಂತೆ ಹೆತ್ತವರನ್ನು ಪ್ರೋತ್ಸಾಹಿಸಲಾಯಿತು. ಪ್ರತಿ ಅಧ್ಯಾಯದ ಕೊನೆಯಲ್ಲಿ “ಕ್ವೆಶ್ಚನ್ಸ್ ಫಾರ್ ಡಿಸ್ಕಶನ್” ಎಂದು ಕರೆಯಲ್ಪಡುವ ಒಂದು ವೈಶಿಷ್ಠ್ಯವು ಅಲ್ಲಿದೆ. ಆ ಪ್ರಶ್ನೆಗಳನ್ನು ವಿಷಯದ ವಿಶ್ಲೇಷಣೆಗಾಗಿ ಪಾರಾದಿಂದ ಪಾರಾಕ್ಕೆ ನಿರ್ದೇಶಿಸಿ ರಚಿಸಲಾಗಿಲ್ಲ. ಒಂದು ಇಡೀ ಅಧ್ಯಾಯನ್ನು ಓದಿದ ನಂತರವೇ, ಪ್ರಶ್ನೆಗಳನ್ನು ಗಮನಿಸಲು ಕುಟುಂಬಗಳು ಆಯ್ದುಕೊಳ್ಳಬಹುದು. ಅನುರೂಪ ಉಪಶೀರ್ಷಿಕೆಗಳ ಕೆಳಗಿನ ಸಮಾಚಾರ ಓದಲ್ಪಡುವಾಗ ಕೆಲವರು ಮಧ್ಯೆ ಮಧ್ಯೆಯೂ ಪ್ರಶ್ನೆಗಳನ್ನು ಚರ್ಚಿಸಬಹುದು.
ನಮ್ಮ ಕ್ಷೇತ್ರದ ಯುವಕರಿಗೆ ಸಹಾಯ ಮಾಡುವುದು
7 ನಮ್ಮ ಕ್ಷೇತ್ರದಲ್ಲಿ ಅನೇಕ ಯುವಕರನ್ನು ನಾವು ಕಾಣಬಹುದು. ಅವರಿಗಿರುವ ಕೆಲವು ಪ್ರಶ್ನೆಗಳು ಈ ಹೊಸ ಪುಸ್ತಕದಲ್ಲಿ ಉತ್ತರಿಸಲ್ಪಟ್ಟಿವೆ. ಆದ್ದರಿಂದ, ಜನವರಿಯಲ್ಲಿ ಯಂಗ್ ಪೀಪಲ್ ಆಸ್ಕ್ ಪುಸ್ತಕವನ್ನು ನಾವು ಕ್ಷೇತ್ರದಲ್ಲಿ ನೀಡಲಿದ್ದೇವೆ. ನೀವು ಉಪಯೋಗಿಸ ಬಯಸುವ ಒಂದು ಪ್ರಸಂಗವನ್ನು ನೀವು ಈ ಮೊದಲೇ ತಯಾರಿಸಿರಬಹುದು. ಅಥವಾ ಈ ಕೆಳಗಿನ ಪ್ರಸಂಗವನ್ನು ನೀವು ಉಪಯೋಗಿಸ ಬಯಸಬಹುದು.
8 “ಯೌವನವು ನಮ್ಮ ಜೀವಿತದ ಅತ್ಯಂತ ಸಂತೋಷಕರ ಸಮಯವಾಗಿ ನಾವು ಅಗಾಗ್ಯೆ ನೆನಸುತ್ತೇವೆ. ಆದರೆ ದುರ್ದೈವದಿಂದ, ಅನೇಕ ಅಸಂತೋಷಿತ ಯುವಕರನ್ನು ನಾವಿಂದು ಕಾಣುತ್ತೇವೆ, ಅಲ್ಲವೇ? [ಉತ್ತರಕ್ಕೆ ಅವಕಾಶ ಕೊಡಿ.] ಬದಲಾಗುತ್ತಿರುವ ಮಟ್ಟಗಳು ಒಂದು ಗೊಂದಲದ ಲೋಕವನ್ನು ಉಂಟುಮಾಡಿವೆ, ಯುವಕರನ್ನು ಬಾಧಿಸುವ ಅನೇಕ ಸಮಸ್ಯೆಗಳನ್ನು ತಂದು ಅವರ ಸಂತೋಷವನ್ನು ಅಪಹರಿಸಿವೆ. ನಂಬಲರ್ಹವಾದ ಮಾರ್ಗದರ್ಶನೆಯನ್ನು ನಾವೆಲ್ಲಿ ಕಾಣಬಹುದು? [ಉತ್ತರಕ್ಕೆ ಅವಕಾಶ ಕೊಡಿ.] ಕೀರ್ತನೆ 119:9 ರಲ್ಲಿ ಬೈಬಲು ಏನನ್ನುತ್ತದೆಂಬದನ್ನು ಗಮನಿಸಿರಿ. [ಓದಿ.] ಯಾವುದು ಯೋಗ್ಯವೂ ಅದನ್ನು ಕಲಿಸುವುದರಲ್ಲಿ ಹೆತ್ತವರ ಜವಾಬ್ದಾರಿಕೆಯನ್ನು ಬೈಬಲು ಎತ್ತಿಹೇಳುತ್ತಾ, ಜ್ಞಾನೋಕ್ತಿ 1:8 ರಲ್ಲಿ ಈ ಸೂಚನೆಯನ್ನು ಕೊಟ್ಟಿದೆ. [ಓದಿ.] ಇದಕ್ಕೆ ಹೊಂದಿಕೆಯಲ್ಲಿ, ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಎಂಬ ಈ ಪುಸ್ತಕವು ಬೈಬಲಿನಲ್ಲಿ ಆಧರಿತವಾದ ವ್ಯಾವಹಾರ್ಯ ಮಾರ್ಗದರ್ಶನೆಯನ್ನು ನೀಡುತ್ತದೆ ಮತ್ತು ಯುವಕರು ಹೇಗೆ ಭವಿಷ್ಯವನ್ನು ಯಶಸ್ವೀಯಾಗಿ ಎದುರಿಸಿ ಸಂತೋಷವನ್ನು ಪಡೆಯಬಹುದು ಎಂದು ಮನಗಾಣುವಂತೆ ಸಹಾಯ ಮಾಡುವ ನಿಜ ಜೀವಿತ ಅನುಭವಗಳು ಇದರಲ್ಲಿವೆ. [ಆಸಕ್ತಿಯನ್ನು ಎಬ್ಬಿಸಲು ಕೆಲವಾರು ಅಧ್ಯಾಯಗಳನ್ನು ಎತ್ತಿಹೇಳಿರಿ.] ಈ ಸಹಾಯಕಾರಿ ಮತ್ತು ಸುಂದರ ಚಿತ್ರಗಳುಳ್ಳ ಪುಸ್ತಕವನ್ನು ಕೇವಲ 15 ರೂಪಾಯಿಗೆ ನೀವು ಪಡೆಯಬಹುದು.”
9 ಯುವಕರು ತಮ್ಮ ಶಕ್ತಿಗಳನ್ನು ವಿವೇಕವೂ ಪ್ರಯೋಜನಕರವೂ ಆದ ಕಾರ್ಯಗಳಲ್ಲಿ ಪ್ರಯೋಗಿಸುವ ಅಗತ್ಯವಿದೆ ಎಂದು ಬೈಬಲು ಸೂಚಿಸುತ್ತದೆ. ನಿಶ್ಚಯವಾಗಿಯೂ ಈ ಹೊಸ ಪುಸ್ತಕವು ಅನೇಕರನ್ನು ಅಪರಿಮಿತ ಜ್ಞಾನದ ಮೂಲವಾದ ಬೈಬಲಿನ ಕಡೆಗೆ ನಡಿಸುವುದು. ಯುವಕರನ್ನು ಈಗ ಒಂದು ಪೂರ್ಣ ಜೀವನಕ್ಕೆ ಮತ್ತು ಮುಂದೆ ಒಂದು ಸುಭದ್ರ ಭವಿಷ್ಯಕ್ಕೆ ನಡಿಸಲು ಎಂತಹ ಅಮೂಲ್ಯ ಉಪಕರಣವು!—ಪ್ರಸಂ. 12:1.