ಸುವಾರ್ತೆಯನ್ನು ನೀಡುವದು—ಯುವಕರಿಗೆ
1 ಈ ಆಧುನಿಕ ಯುಗವು ಸಾಮಾನ್ಯವಾಗಿ ಯುವಜನರಿಗೆ ಅತ್ಯಂತ ಕಷ್ಟಮಯವಾಗಿ ರುಜುವಾಗಿರುತ್ತದೆ. ಆದರೂ ಶತಮಾನಗಳ ಮುಂಚೆ, ದೇವರಿಂದ ಪ್ರೇರಿತನಾದ ಒಬ್ಬ ಮನುಷ್ಯನು ಬರೆದದ್ದು: “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” (ಕೀರ್ತನೆ 119:9) ನಿಶ್ಚಯವಾಗಿ, ಯೆಹೋವನ ವಾಕ್ಯದಲ್ಲಿ ಆಧರಿತವಾದ ಮಾರ್ಗದರ್ಶನೆಯು ಇಂದು ಸಾವಿರಾರು ಯುವ ಜನರಿಗೆ ಸಹಾಯ ಮಾಡುತ್ತಿದೆ.
2 “ಯಂಗ್ ಪೀಪಲ್ ಆಸ್ಕ್ . . . ” ಲೇಖನಗಳನ್ನು ಅವೇಕ್! ಪತ್ರಿಕೆಯಲ್ಲಿ ದಿದ ಬಳಿಕ, ಒಬ್ಬ ಯುವಕನು ಹೇಳಿದ್ದು: “ನಾನು ಕ್ರಮವಾಗಿ ಡೇಟಿಂಗ್ ಮಾಡುತ್ತಿದ್ದೆ ಯಾಕಂದರೆ ಅದು ಶಿಷ್ಟಾಚಾರ ಎಂಬ ಭಾವನೆ ನನ್ನಲ್ಲಿತ್ತು. ಅನಂತರ, ಅವೇಕ್! ಪತ್ರಿಕೆ ನಾನು ಓದಿದಾಗ, ಅದು ನನ್ನ ಮೂಲ್ಯತೆಗಳನ್ನು ಒಳ್ಳೆಯದಕ್ಕಾಗಿ ಬದಲಾಯಿಸಿತು. ಮತ್ತು ಮದುವೆಯಾಗಲು ಸಿದ್ಧನಾಗುವ ತನಕ ಡೇಟಿಂಗನ್ನು ಬಿಟ್ಟುಬಿಟ್ಟೆ.” ಕೊಡಲ್ಪಟ್ಟ ವ್ಯಾವಹಾರ್ಯ ಸೂಚನೆಯಿಂದಾಗಿ ಅವನು ಪ್ರಯೋಜನ ಹೊಂದಿದನೆಂಬದು ವ್ಯಕ್ತ . ಈಗ ಯುವಜನರು ಸುಲಭವಾಗಿ ಸಂಪರ್ಕಿಸಬಹುದಾದ ಒಂದು ಮೂಲ್ಯ ಶಾಸ್ತ್ರೀಯ ಉಗಮವು ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಎಂಬ ಹೊಸ ಪುಸ್ತಕದ ರೂಪದಲ್ಲಿ ಪ್ರಕಾಶಿತವಾಗಿದೆ. ನಿಮ್ಮ ಕ್ಷೇತ್ರದಲ್ಲಿರುವ ಯುವಜನರಿಗೆ ಅಥವಾ ಶಾಲೆಯಲ್ಲಿನ ಯುವಕರಿಗೆ ಈ ಪುಸ್ತಕವು ದೊರೆಯುವಂತೆ ನೀವೇನು ಮಾಡಬಹುದು?
ಯುವ ಜನರಲ್ಲಿ ಅಭಿರುಚಿ ತೋರಿಸಿರಿ
3 ಯೆಹೋವನ ವಾಕ್ಯದ ಮೂಲ್ಯತೆಯನ್ನು ಯುವ ಜನರು ಗಣ್ಯಮಾಡುವಂತೆ ಒಡಂಬಡಿಸುವುದು, ಪಂಥಾಹ್ವಾನವಾಗಬಲ್ಲದು. (ಜ್ಞಾನೋಕ್ತಿ 22:15 ನೋಡಿ) ಆದರೂ, ಅಪೊಸ್ತಲ ಪೌಲನು ಹೇಳಿದ್ದು: “ಯೆಹೂದ್ಯರನ್ನು ಸಂಪಾದಿಸಿ ಕೊಳ್ಳುವದಕ್ಕೆ ನಾನು ಯೆಹೂದ್ಯರಿಗೆ ಯೆಹೂದ್ಯನಂತಾದೆನು.” (1 ಕೊರಿ. 9:20) ಅರ್ಹಪಾತ್ರ ಆತ್ಮಿಕ ಮಾರ್ಗದರ್ಶನೆಯನ್ನು ಯುವಕರು ಕಂಡುಕೊಂಡು, ಗಣ್ಯಮಾಡಬೇಕಾದರೆ ಮೊದಲಾಗಿ ನೀವು ಅವರನ್ನು ಮತ್ತು ಅವರ ಸಮಸ್ಯೆಗಳನ್ನು ತಿಳುಕೊಳ್ಳಬೇಕು. ಯುವಜನರಿಗೆ ಯಾವುದರಲ್ಲಿ ಅಭಿರುಚಿ ಇದೆ ಮತ್ತು ಶಾಲೆಯಲ್ಲಿ, ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅವರ ಸಮಸ್ಯೆ ಏನು ಎಂಬ ಸರಣಿಯಲ್ಲಿ ನೀವು ಯೋಚಿಸುವ ಅಗತ್ಯವಿದೆ. ಯುವಕರಿಗೆ ಸಾಕ್ಷಿ ಕೊಡುವಾಗ ಈ ತಿಳುವಳಿಕೆಯು, ನಿಮ್ಮ ಪೀಠಿಕೆಗಳಲ್ಲಿ, ನಿಮ್ಮ ಹೇಳಿಕೆಗಳಲ್ಲಿ ಮತ್ತು ನೀವು ಕೇಳುವ ಪ್ರಶ್ನೆಗಳಲ್ಲಿ ಪ್ರತಿಬಿಂಬಿಸಬೇಕು. ಯಂಗ್ ಪೀಪಲ್ ಆಸ್ಕ್ ಹೊಸ ಪುಸ್ತಕದ ಅನುಕ್ರಮಣಿಕೆಯಲ್ಲಿರುವ ವಿಷಯಗಳು, ಏನು ಹೇಳಬೇಕೆಂಬ ಅತ್ಯುತ್ತಮ ವಿಚಾರ ಧಾರೆಗಳ ಮೂಲವನ್ನು ಒದಗಿಸುತ್ತವೆ. ಈ ವಿಷಯಗಳನ್ನು ಪರಿಚಯ ಮಾಡಿಕೊಳ್ಳುವ ಮೂಲಕ ಇಂದು ಹೆಚ್ಚಿನ ಯುವ ಜನರ ವಿಚಾರಗಳೇನೆಂಬ ಒಳನೋಟವು ನಿಮಗೆ ಸಿಗುವುದು.
ನೀವೇನನ್ನಬಹುದು
4 ಮನೆ ಮನೆಯ ಸೇವೆ ಮಾಡುವಾಗ, ಎಲ್ಲಿ ಮಕ್ಕಳು ಇದ್ದಾರೆಂಬದನ್ನು ಅವಲೋಕಿಸಿರಿ. ದಿನ ದಿನದ ಸಮಸ್ಯೆಗಳನ್ನು ನಿಭಾಯಿಸಲು ಜನರಿಗೆ ನೆರವಾಗುವ ಒಂದು ಸಾರ್ವಜನಿಕ ಸೇವೆಯನ್ನು ನೀವು ಮಾಡುತ್ತಿದ್ದೀರೆಂದು ವಿವರಿಸಿರಿ. ಅಂತಹ ಮನೆಗಳಲ್ಲಿ ಮಕ್ಕಳೊಂದಿಗೆ ತಾನೇ ಮಾತಾಡಲು ನೀವು ಶಕ್ತರಾಗಬಹುದು. ಪುಸ್ತಕದಲ್ಲಿರುವ ವ್ಯಾವಹಾರ್ಯ ಸೂಚನೆಯ ಒಂದು ಉದಾಹರಣೆಯನ್ನು ಎತ್ತಿಹೇಳಿರಿ. ಕೀರ್ತನೆ 119:9ರ ಸತ್ಯಪರತೆಯನ್ನು ಕಾಣುವಂತೆ ಅವರಿಗೆ ಸಹಾಯ ಮಾಡುವುದೇ ನಿಮ್ಮ ಗುರಿ ಎಂಬದನ್ನು ಮನಸ್ಸಿನಲ್ಲಿಡಿರಿ.
5 ಯುವಕನೊಂದಿಗೆ ಮಾತಾಡುವಾಗ, ಸ್ನೇಹಪರತೆಯನ್ನು ತೋರಿಸಿರಿ ಮತ್ತು ಆದರದಿಂದ ಉಪಚರಿಸಿರಿ. ಅಭಿವಂದನೆ ಹೇಳಿದ ಬಳಿಕ, ಹೀಗನ್ನಿರಿ: “ನಿನ್ನಂಥ ಯುವಕರು ಈ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳನ್ನು ನಿಭಾಯಿಸುವರೇ ಸಹಾಯಮಾಡಲು ನಾನೊಂದು ಸಾರ್ವಜನಿಕ ಸೇವೆಯನ್ನು ಮಾಡುತ್ತಿದ್ದೇನೆ. ನೀನು ನಿಜವಾಗಿ ಮಾಡಬಯಸದ ಒಂದು ವಿಷಯವನ್ನು ಮಾಡುವಂತೆ ಮುನ್ನೂಕಿಸಲ್ಪಟ್ಟ ಅನುಭವವು ನಿನಗೆಂದಾದರೂ ಆಗಿದೆಯೇ? ಅಥವಾ, ನಿನ್ನ ಸ್ವಂತ ಇಷ್ಟದಿಂದಲ್ಲ, ಬೇರೆಯವರು ಅದನ್ನು ಮಾಡುತ್ತಾರೆಂಬ ಕಾರಣ ಮಾತ್ರದಿಂದ ವಿಷಯಗಳನ್ನು ಮಾಡುವ ಪ್ರವೃತ್ತಿ ನಿನ್ನಲ್ಲಿ ಉಂಟೋ? ಅಂಥ ಸಮಾನಸ್ಥರ ಒತ್ತಡವನ್ನು ನಿಭಾಯಿಸುವುದು ಹೇಗೆಂದು ನೀನು ಯೋಚಿಸಿರುವಿಯೋ?” ಅವನ ಉತ್ತರದ ಬಳಿಕ ಪುಸ್ತಕದ 9ನೇ ಅಧ್ಯಾಯ ತೆರೆದು, ಹೀಗನ್ನಿರಿ: “ಈ ಹೊಸ ಪುಸ್ತಕವು ತನ್ನ 77ನೇ ಪುಟದಲ್ಲಿ ಏನನ್ನುತ್ತದೆಂದು ನೋಡಿ. [ತಕ್ಕದ್ದಾದ ಪಾರಾವನ್ನು ಓದಿರಿ.] ಈ ಸಮಸ್ಯೆಯನ್ನು ಪರಿಹರಿಸಲು ಯುವಕರಿಗೆ ಬೈಬಲಿನ ಒಂದು ಅಭ್ಯಾಸವು ಸಹಾಯ ಮಾಡುವುದೆಂದು ನೀವು ನೆನಸುತ್ತೀರೋ? [ಉತ್ತರಕ್ಕೆ ಅವಕಾಶ ಕೊಡಿ.] ಕೀರ್ತನೆ 119:9 ರಲ್ಲಿ ಏನನ್ನುತ್ತದೆಂದು ಗಮನಿಸಿರಿ. [ಓದಿ.] ಅನುಕ್ರಮಣಿಕೆಯಲ್ಲಿರುವಂತಹ ವಿಷಯಗಳು ಕಷ್ಟದ ಪರಿಸ್ಥಿತಿಗಳನ್ನು ಪರಿಹರಿಸಲು ಯುವಕರಿಗೆ ಬೈಬಲು ಸಹಾಯ ಮಾಡಬಲ್ಲದೆಂದು ತೋರಿಸುತ್ತವೆ. [ಪುಸ್ತಕ ಕೊಡಿರಿ.] ಇದು ರೂ. 15ಕ್ಕೆ ನಿಮ್ಮದು.”
6 ಇನ್ನೂ ಶಾಲೆಗೆ ಹೋಗುತ್ತಿರುವ ಪ್ರಚಾರಕರು ನೀವಾಗಿದ್ದರೆ, ನಮ್ಮ ರಾಜ್ಯದ ಸೇವೆಯ ಸಪ್ಟಂಬರ 1989ರ ಸಂಚಿಕೆಯಲ್ಲಿ ಕೊಡಲಾದ ಸಲಹೆಗಳನ್ನು ಹಿಂಬಾಲಿಸಿರಿ. ಹಾಗೆ ಮಾಡಿದ್ದಲ್ಲಿ ಅನೇಕ ಸಂತೋಷದ ಪ್ರತಿಫಲಗಳು ನಿಮ್ಮದಾಗುವವು.
7 ಯೆಹೋವನು “ಯಾವನಾದರೂ ನಾಶವಾಗುವುದರಲ್ಲಿ ಇಷ್ಟಪಡುವುದಿಲ್ಲ.” (2 ಪೇತ್ರ 3:9) ಅವರಲ್ಲಿ ಯುವಕರೂ ಸೇರಿದ್ದಾರೆ. ಆದರೂ ಹೆಚ್ಚಿನ ಯುವಕರು, ಹರ್ಮಗೆದ್ದೋನನ್ನು ಪಾರಾಗಲಾರರು. ಯುವಜನರಿಗೆ ಪರಿಣಾಮಕಾರಿಯಾಗಿ ಸಾರುವ ನಮ್ಮ ಪ್ರಯತ್ನಗಳ ಫಲವಾಗಿ ಹಲವಾರು ಯೌವನಸ್ಥರು, ಯೆಹೋವನ ಸ್ತುತಿಗಾಗಿ, ರಕ್ಷಣೆಯನ್ನು ಪಡೆಯುವಂತಾಗಲಿ.