ಕೈದಿಗಳೊಂದಿಗೆ ಪತ್ರವ್ಯವಹಾರವು
1 ರಾಜ್ಯದ ಸಂದೇಶದಿಂದ ಅನೇಕ ತರದ ಜನರನ್ನು ಸಂಪರ್ಕಿಸಲಾಗುತ್ತದೆ. ಕೈದಿಗಳಿಗೆ ಸಾಕ್ಷಿಕೊಡುವ ವಿಷಯದಲ್ಲೇನು? ಒಳ್ಳೇ ಪ್ರತಿಕ್ರಿಯೆಯನ್ನು ತೋರಿಸಿರುವ ಸೆರೆವಾಸಿಗಳ ಕುರಿತಾಗಿ ಕೆಲವು ಸಿಶಿತ್ಚ ವರದಿಗಳು ಸಿಕ್ಕಿರುತ್ತವೆ. ಪರದೇಶದ ಹಲವಾರು ಸಂಸ್ದಾಪನೆಗಳಲ್ಲಿ ಅವರಿಗಾಗಿ ಬೈಬಲಭ್ಯಾಸಗಳು ಮತ್ತು ಕೂಟಗಳು ನಡಿಸಲ್ಪಡುತ್ತಾ ಇವೆ. ಇದರಿಂದಾಗಿ ಹೊಸ ಶಿಷ್ಯರು ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸುವಂತೆ ಮತ್ತು ಸ್ನಾನಿತರಾಗುವಂತೆ ಶಕ್ಯವಾಗಿದೆ.
2 ಅನೇಕ ಸಂದರ್ಭಗಳಲ್ಲಿ ಸೆರೆಯರಿಗೆ ಪತ್ರವ್ಯವಹಾರದ ಮೂಲಕ ಸಾಕ್ಷಿ ಕೊಡಲಾಗುತ್ತದೆ. ಇದರ ಕುರಿತಾಗಿ ಒಂದು ಎಚ್ಚರಿಕೆಯನ್ನು ಪುನ: ಕೊಡುವದು ಅವಶ್ಯವೆಂದು ನಮ್ಮ ಅನಿಸಿಕೆಯು. ಇತರರೊಂದಿಗೆ ಪತ್ರವ್ಯವಹಾರ ಮಾಡಲು ಆತುರಪಡುವ ಕೆಲವು ಕೈದಿಗಳಿಗೆ ಸಂದೇಹಾಸ್ಪದ ಹೇತುಗಳಿರುವದು ಕಂಡುಬಂದಿದೆ. ಸೆರೆವಾಸಿಗಳಿಗೆ ಪತ್ರಬರೆದು ಬೈಬಲ್ ಸಮಾಚಾರ ಮತ್ತು ಉತ್ತೇಜನವನ್ನು ಕೊಡುವದು ಯೋಗ್ಯವಾದರೂ, ಹಣ ಯಾ ವೈಯಕ್ತಿಕ ಕೊಡುಗೆಗಳೇ ಮುಂತಾದವನ್ನು ಸೆರೆವಾಸಿಗಳು ಅದಕ್ಕಾಗಿ ಕೇಳಿಕೊಂಡಾಗ್ಯೂ ನಾವು ಕಳುಹಿಸಬಾರದು.
3 ಗಂಡು ಕೈದಿಗಳೊಂದಿಗೆ ಯೋಗ್ಯತೆಪಡೆದ ಸಹೋದರರು ಮಾತ್ರವೇ ಪತ್ರವ್ಯವಹಾರ ಮಾಡುವಂತೆ ಬಲವಾಗಿ ಸೂಚಿಸಲಾಗಿದೆ. ಹೆಣ್ಣು ಕೈದಿಗಳಿಗೆ ಯೋಗ್ಯತೆ ಇರುವ ಸಹೋದರಿಯರು ಬರೆಯಬೇಕು. ವೈಯಕ್ತಿಕ ಸಭಾಸದಸ್ಯರು ಸೆರೆಮನೆಗಳನ್ನು ಗೊತ್ತುಗುರಿಯಿಲ್ಲದೆ ಸಂದರ್ಶಿಸಬಾರದು ಮತ್ತು ಒಳವಾಸಿಗಳೊಂದಿಗೆ ಆಪ್ತ ಸಹವಾಸ ಮಾಡಬಾರದು.
4 ಕೈದಿಗಳಿಂದ ಆಸಕ್ತಿ ತೋರಿಸಲ್ಪಟ್ಟಾಗ ಅಂತವರ ಹೆಸರು ಮತ್ತು ವಿಳಾಸಗಳನ್ನು ವಿಶಿಷ್ಟ ಸೆರೆಮನೆಯ ಕ್ಷೇತ್ರದಲ್ಲಿರುವ ಸಭೆಗೆ ಕೊಡಬೇಕು. ಅಲ್ಲಿನ ನುರಿತ ಸಹೋದರರು ಆ ಸೆರೆವಾಸಿಗಳನ್ನು ಸಂದರ್ಶಿಸುವರು ಮತ್ತು ಶಕ್ಯವಾದಲ್ಲಿ, ಸತ್ಯದಲ್ಲಿ ನಿಜಾಸಕ್ತಿ ಉಳ್ಳವರೊಂದಿಗೆ ಅಭ್ಯಾಸ ಎರ್ಪಡಿಸುವರು.
5ಆದರೂ ಸೆರೆವಾಸಿಗಳೊಂದಿಗೆ ಸಂಪರ್ಕಿಸುವಾಗ ಎಚ್ಚರಿಕೆ ವಹಿಸಬೇಕೆಂದು ನಾವು ಪುನ: ಸೂಚಿಸ ಬಯಸುತ್ತೇವೆ.