ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/90 ಪು. 6
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1990 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ಚೌಕ
    2010 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ರೇಖಾಚೌಕ
    2000 ನಮ್ಮ ರಾಜ್ಯದ ಸೇವೆ
  • ಯೆಹೋವನ ಆರಾಧನೆಗಾಗಿ ಇರುವ ಸ್ಥಳಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯಲು ಮಕ್ಕಳಿಗೆ ನೆರವಾಗಿರಿ
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1990 ನಮ್ಮ ರಾಜ್ಯದ ಸೇವೆ
km 1/90 ಪು. 6

ಪ್ರಶ್ನಾ ಪೆಟ್ಟಿಗೆ

● ಸಭಾ ಕೂಟಗಳಲ್ಲಿ ಎಟೆಂಡೆಂಟರಾಗಿ ಸೇವೆ ಮಾಡುವವರ ಕರ್ತವ್ಯಗಳು ಯಾವುವು?

ಕೂಟಗಳಿಗೆ ಬರುವವರೆಲ್ಲರಿಗೆ ಎಟೆಂಡೆಂಟರು ಹಾರ್ದಿಕ ಸ್ವಾಗತವನ್ನು ನೀಡಬೇಕು. ತಡವಾಗಿ ಬಂದವರನ್ನು ಕೂಡ್ರಿಸುವದು, ಹಾಜರಿಯನ್ನು ದಾಖಲೆ ಮಾಡುವದು, ಕ್ರಮ ಮತ್ತು ಸುರಕ್ಷೆಯನ್ನು ಕಾಪಾಡುವದು, ರಾಜ್ಯ ಸಭಾಗ್ಯಹದಲ್ಲಿ ವಾಯುಸಂಚಾರವೇ ಮುಂತಾದವುಗಳನ್ನು ನೋಡಿಕೊಳ್ಳುವದು ಅವರ ಕರ್ತವ್ಯಗಳಲ್ಲಿ ಕೂಡಿದೆ. ಎಟೆಂಡೆಂಟರು ಸ್ನೇಹಪರರೂ ಹೊಣೆಗಾರರೂ ಆಗಿದ್ದು ತಮ್ಮ ಜವಾಬ್ದಾರಿಕೆಗಳನ್ನು ಪೂರೈಸುವದರಲ್ಲಿ ಹೆಜ್ಜೆವಹಿಸುವವರೂ ಆಗಿರಬೇಕು.—ಒಎಮ್‌. ಪುಟ 63-4.

ಎಟೆಂಡೆಂಟರು ಹೊಸಬರ ಅಗತ್ಯತೆಗಳಿಗೆ ಎಚ್ಚರಿತರಾಗಿದ್ದು, ಅವರಿಗೆ ಸ್ವಾಗತವಿರುವಂತೆ ಮತ್ತು ಅವರು ಆಸನಗಳನ್ನು ಕಂಡುಕೊಳ್ಳುವಂತೆ ನೆರವಾಗಬೇಕು. ಹೊಸಬರ ಪರಿಚಯ ಮಾಡಿಸಿಕೊಂಡು ಸ್ವಾಗತದ ಅನಿಸಿಕೆಯು ಅವರಿಗಾಗುವಂತೆ ನೆರವಾಗಲು ಸಭೆಯ ಎಲ್ಲರು ಸಿದ್ಧರಾಗಿರಬೇಕು. ತಡವಾಗಿ ಬಂದವರನ್ನು ದೊರೆಯುವ ಆಸನಗಳಿಗೆ ನಡಿಸುವಾಗ, ಆ ಮೊದಲೇ ಕೂತಿರುವವರಿಗೆ ತೊಂದರೆಯಾಗದಂತೆ ಎಟೆಂಡೆಂಟರು ಜಾಗ್ರತೆ ವಹಿಸಬೇಕು. ಆಗಿಂದಾಗ್ಯೆ ಅಭ್ಯಾಸದ ಪತ್ರಿಕೆಗಳನ್ನು ಅವರು ಹೊಸಬರಿಗೆ ಒದಗಿಸುವರು.

ಕೂಟದ ಸಮಯದಲ್ಲಿ ಕ್ರಮವನ್ನು ಕಾಪಾಡುವದು ಅತ್ಯಾವಶ್ಯಕವು. ಹೆತ್ತವರು ತಮ್ಮ ಮಕ್ಕಳನ್ನು ಕೂಟಗಳಿಗೆ ತರುವಂತೆ ನಾವು ಉತ್ತೇಜಿಸುತ್ತೇವಾದ್ದರಿಂದ ಆಗಿಂದಾಗ್ಯೆ ಸ್ವಲ್ಪ ಗಲಾಟೆಯು ಅಲ್ಲಿರುವದು. ಆದರೆ ಮಕ್ಕಳು ಚಟಪಡಿಸುತ್ತಾ, ಪುಂಡಾಟ ಮಾಡುತ್ತಾರಾದರೆ ಎಟೆಂಡೆಂಟರು ದಯೆಯಿಂದ ಸಹಾಯ ನೀಡುತ್ತಾ, ಪ್ರಾಯಶ: ಹೆತ್ತವರು ತಮ್ಮ ಮಗುವನ್ನು ಸ್ವಲ್ಪ ಸಮಯಕ್ಕಾಗಿ ಹೊರಗೊಯ್ಯುವಂತೆ ಸೂಚಿಸಬಹುದು. ಚಿಕ್ಕ ಮಕ್ಕಳಿರುವ ಹೆತ್ತವರು ಬೇಕಾದಾಗ ಸುಲಭವಾಗಿ ಹೊರಗೆ ಹೋಗುವಂತಹ ಜಾಗದಲ್ಲಿ ಕೂತರೆ ಬೇರೆಯವರಿಗೆ ಕೊಂಚವೂ ಅಪಕರ್ಶನೆಯಾಗದಂತೆ ಮಾಡಶಕ್ತರು.

ಸುರಕ್ಷೆಯು ಸಮಸ್ಯೆಯಾಗಿರುವ ಜಾಗಗಳಲ್ಲಿ ವಿರೋಧಕರ ವ್ವಿದ್ವಂಸ ಯಾ ಗಲಭೆಯ ವಿರುದ್ದ ಸುರಕ್ಷೆಗಾಗಿ ಎಟೆಂಡೆಂಟರನ್ನು ನೇಮಿಸಬೇಕು. ರಾಜ್ಯಗೃಹದ ಒಳಗಿನ ಯಾರಾದರೂ ಕೂಟಗಳನ್ನು ವ್ಯಸ್ತಮಾಡಲು ಪ್ರಯತ್ನಿಸಿದರೆ ಅವನನ್ನು ಹೊರಗೆ ಕಳುಹಿಸಬೇಕು. ಅವನು ಹೋಗದಿದ್ದರೆ ಮತ್ತು ಗಲಾಟೆಮಾಡುತ್ತಾ ಇದ್ದರೆ ಹಿರಿಯರು ಅಧಿಕಾರಿಗಳನ್ನು ಸಂಪರ್ಕಿಸಬಹುದು. ಕೆಲವು ಕ್ಷೇತ್ರಗಳಲ್ಲಿ ಕೂಟದ ವೇಳೆ ರಾಜ್ಯಗೃಹದ ಪಾರ್ಕಿಂಗ್‌ ಕ್ಷೇತ್ರಗಳನ್ನು ಪರೀಕ್ಷಿಸಲು ಸಹೋದರರನ್ನು ನೇಮಿಸುವದು ಅವಶ್ಯವಾದೀತು.—ಕೆಎಮ್‌ 12⁄84 ಪುಟ 4.

ಹಾಜರಿಯ ಲೆಕ್ಕವನ್ನು ತಕ್ಕೊಳ್ಳುವಾಗ, ಸ್ವಲ್ಪ ಮಟ್ಟಿಗಾದರೂ ಕಿವಿಗೊಡುವ ಮತ್ತು ಕೂಟಗಳಿಂದ ಪ್ರಯೋಜನಿಸುವ ಎಲ್ಲಾ ದೊಡ್ಡವರನ್ನು ಹಾಗೂ ಚಿಕ್ಕ ಮಕ್ಕಳನ್ನು ಲೆಕ್ಕಿಸಬೇಕು.—ಕೆಎಮ್‌ 8⁄79 ಪುಟ 4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ