ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/00 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ಪೆಟ್ಟಿಗೆ
    1990 ನಮ್ಮ ರಾಜ್ಯದ ಸೇವೆ
  • ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯಲು ಮಕ್ಕಳಿಗೆ ನೆರವಾಗಿರಿ
    1990 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಚೌಕ
    2010 ನಮ್ಮ ರಾಜ್ಯದ ಸೇವೆ
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
2000 ನಮ್ಮ ರಾಜ್ಯದ ಸೇವೆ
km 5/00 ಪು. 7

ಪ್ರಶ್ನಾ ರೇಖಾಚೌಕ

◼ ಕೂಟಗಳಲ್ಲಿ ಯೋಗ್ಯವಾದ ಸಭ್ಯಾಚಾರವನ್ನು ಕಾಪಾಡಿಕೊಳ್ಳುವಂತೆ ತಮ್ಮ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಅಟೆಂಡಂಟರು ಹೆತ್ತವರಿಗೆ ಹೇಗೆ ನೆರವು ನೀಡಬಲ್ಲರು?

ಚುರುಕಾಗಿರುವುದು ಮತ್ತು ಬಹಳ ಸಮಯದ ವರೆಗೆ ಒಂದೇ ಕಡೆ ಕುಳಿತುಕೊಳ್ಳದೇ ಇರುವುದು ಮಕ್ಕಳ ಸಹಜ ಸ್ವಭಾವವಾಗಿದೆ. ಕೂಟವು ಮುಗಿಯುವ ವರೆಗೂ ಅವರು ಅದುಮಿಟ್ಟುಕೊಂಡಿದ್ದ ಶಕ್ತಿಯು, ರಾಜ್ಯ ಸಭಾಗೃಹದಲ್ಲಿ ಇಲ್ಲವೆ ಕೂಟಗಳು ನಡೆಯುವ ಇತರ ಸ್ಥಳಗಳಲ್ಲಿ, ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ, ಅಥವಾ ಕಾಲುಹಾದಿಯಲ್ಲಿ ಬೇರೆ ಮಕ್ಕಳ ಹಿಂದೆ ಓಡುವಂತೆ ಅಥವಾ ಆ ಮಕ್ಕಳನ್ನು ಓಡಿಸಿಕೊಂಡು ಹೋಗುವಂತೆ ಅವರನ್ನು ಪ್ರಚೋದಿಸಬಹುದು. ಆದರೂ, ‘ಶಿಕ್ಷಿಸದೆ ಬಿಟ್ಟ ಹುಡುಗನು ಹೆತ್ತವರ ಮಾನವನ್ನು ಕಳೆಯುವನು’ ಎಂಬ ಜ್ಞಾನೋಕ್ತಿಯು ಸತ್ಯ.—ಜ್ಞಾನೋ. 29:15.

ಮಕ್ಕಳು ಓಡುತ್ತಿರುವಾಗ ನಮ್ಮ ವೃದ್ಧ ಸಹೋದರ ಸಹೋದರಿಯರಿಗೆ ಢಿಕ್ಕಿಹೊಡೆದು, ಅವರನ್ನು ಕೆಳಗೆ ಬೀಳಿಸಿದ್ದರಿಂದ, ಅವರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲು ನಮಗೆ ದುಃಖವಾಗುತ್ತದೆ. ಇದು ಅನುಚಿತವಾದ ಕಷ್ಟಾನುಭವವನ್ನು ಹಾಗೂ ಹೆತ್ತವರಿಗೆ ಮತ್ತು ಸಭೆಗೆ ಅನಗತ್ಯವಾದ ವೆಚ್ಚಗಳನ್ನು ತಂದೊಡ್ಡಿದೆ. ತಮ್ಮ ಸ್ವಂತ ಕ್ಷೇಮಕ್ಕಾಗಿ ಮತ್ತು ಇತರರ ಸುರಕ್ಷೆಗಾಗಿ, ಮಕ್ಕಳನ್ನು ರಾಜ್ಯ ಸಭಾಗೃಹದ ಒಳಗೆ ಅಥವಾ ಹೊರಗೆ ಓಡಲು ಮತ್ತು ಆಟವಾಡಲು ಬಿಡಬಾರದು.

ನಮ್ಮ ಆರಾಧನಾ ಸ್ಥಳಗಳಿಗೆ ಯೋಗ್ಯವಾದ ಗೌರವವನ್ನು ಕೊಡುವಂತೆ ತಮ್ಮ ಮಕ್ಕಳಿಗೆ ತರಬೇತಿ ನೀಡುವ ಶಾಸ್ತ್ರೀಯ ಜವಾಬ್ದಾರಿಯು ಹೆತ್ತವರಿಗಿದೆ. (ಪ್ರಸಂ. 5:1ಎ) ನಮ್ಮ ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ, ‘ಎಲ್ಲವೂ ಮರ್ಯಾದೆಯಿಂದ ನಡೆಯುವಂತೆ’ ಮತ್ತು ಅಲ್ಲಿ ‘ಒಳ್ಳೆಯ ಕ್ರಮವು’ ಇರುವಂತೆ ನೋಡಿಕೊಳ್ಳಲಿಕ್ಕಾಗಿ ಅಟೆಂಡಂಟರನ್ನು ನೇಮಿಸಲಾಗುತ್ತದೆ. (1 ಕೊರಿಂ. 14:40; ಕೊಲೊ. 2:5) ಆದುದರಿಂದ, ಈ ಎಲ್ಲ ಸ್ಥಳಗಳ ಒಳಗೆ ಮತ್ತು ಹೊರಗೆ, ಅಟೆಂಡಂಟರು ಕಾರ್ಯಕ್ರಮಕ್ಕೆ ಮುಂಚೆ, ಕಾರ್ಯಕ್ರಮ ನಡೆಯುತ್ತಿರುವ ಸಮಯದಲ್ಲಿ, ಮತ್ತು ಕಾರ್ಯಕ್ರಮದ ಬಳಿಕ ತುಂಬ ಎಚ್ಚರದಿಂದ ಕಾರ್ಯನಡಿಸಬೇಕು. ಒಂದು ಮಗುವು ಓಡುತ್ತಿರುವಲ್ಲಿ ಅಥವಾ ಪುಂಡಾಟಮಾಡುತ್ತಿರುವಲ್ಲಿ, ನಯವಾದ ರೀತಿಯಲ್ಲಿ ಅಟೆಂಡಂಟನು ಆ ಮಗುವನ್ನು ತಡೆದು, ಹಾಗೆ ಮಾಡುವುದು ಏಕೆ ಒಳ್ಳೇದಲ್ಲ ಎಂಬುದನ್ನು ವಿವರಿಸಸಾಧ್ಯವಿದೆ. ಆ ಮಗುವಿನ ಹೆತ್ತವನಿಗೂ ಆ ಸಮಸ್ಯೆಯ ಬಗ್ಗೆ ಮತ್ತು ಮಗುವಿನ ಮೇಲೆ ಗಮನವಿಡುವುದರ ಅಗತ್ಯದ ಬಗ್ಗೆ ದಯೆಯಿಂದ ತಿಳಿಸಬೇಕು. ಆಗ ಮಗುವಿನ ಹೆತ್ತವರು ಸಹ ಯೋಗ್ಯವಾದ ರೀತಿಯಲ್ಲಿ ಪ್ರತಿಕ್ರಿಯಿಸಬೇಕು.

ಕೂಟಗಳು ನಡೆಯುತ್ತಿರುವಾಗ ಕೆಲವೊಮ್ಮೆ ಶಿಶುಗಳು ಅಥವಾ ಚಿಕ್ಕ ಮಕ್ಕಳು ಅಳಬಹುದು ಅಥವಾ ತೊಂದರೆ ಕೊಡಬಹುದು ಎಂಬುದು ಅರ್ಥಮಾಡಿಕೊಳ್ಳ ತಕ್ಕ ಸಂಗತಿಯೇ. ಕಾರ್ಯಕ್ರಮವು ಆರಂಭವಾಗುವ ಕಡಿಮೆಪಕ್ಷ 20 ನಿಮಿಷಗಳಿಗೆ ಮುಂಚೆ ಬರುವ ಅಟೆಂಡಂಟರು, ಸಭಾಂಗಣದಲ್ಲಿರುವ ಕೊನೆಯ ಒಂದೆರಡು ಸಾಲುಗಳನ್ನು, ತಮ್ಮ ಎಳೆಯ ಮಕ್ಕಳೊಂದಿಗೆ ಕುಳಿತುಕೊಳ್ಳಲು ಬಯಸುವಂತಹ ಹೆತ್ತವರಿಗೋಸ್ಕರ ಕಾದಿರಿಸಸಾಧ್ಯವಿದೆ. ಈ ಕುರ್ಚಿಗಳನ್ನು ಅವರಿಗೋಸ್ಕರ ಬಿಟ್ಟುಕೊಡುವ ಮೂಲಕ ನಮ್ಮಲ್ಲಿ ಉಳಿದವರೆಲ್ಲರೂ ಸಹಕಾರವನ್ನು ತೋರಿಸಬೇಕು.

ಒಂದು ಮಗುವು ತೊಂದರೆಕೊಡುತ್ತಾ ಹೋದಲ್ಲಿ, ಹೆತ್ತವರು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕು. ಒಂದುವೇಳೆ ಹೆತ್ತವರು ಹಾಗೆ ಮಾಡದಿದ್ದಲ್ಲಿ ಮತ್ತು ಮಗುವಿನ ತೊಂದರೆಯು ಅಪಕರ್ಷಣೆಯಾಗಿರುವಲ್ಲಿ, ಮಗುವನ್ನು ಸಭಾಂಗಣದಿಂದ ಹೊರಗೆ ಕರೆದುಕೊಂಡು ಹೋಗುವಿರೋ ಎಂದು ಅಟೆಂಡಂಟನು ಹೆತ್ತವರನ್ನು ದಯಾಭಾವದಿಂದ ಕೇಳತಕ್ಕದ್ದು. ಎಳೆಯ ಮಕ್ಕಳಿರುವ ಹೊಸಬರನ್ನು ನಾವು ಕೂಟಗಳಿಗೆ ಆಮಂತ್ರಿಸುವಾಗ, ನಾವು ಅವರೊಂದಿಗೆ ಕುಳಿತುಕೊಳ್ಳಬೇಕು ಮತ್ತು ಅವರ ಮಕ್ಕಳು ಅಳುವುದಾದರೆ ಅಥವಾ ಬೇರೆ ರೀತಿಯಲ್ಲಿ ತೊಂದರೆಕೊಡುತ್ತಿರುವುದಾದರೆ ನಾವು ಅವರಿಗೆ ಸಹಾಯ ಮಾಡಬೇಕು.

ಎಲ್ಲ ಪ್ರಾಯದ ಮಕ್ಕಳನ್ನು ರಾಜ್ಯ ಸಭಾಗೃಹದಲ್ಲಿ ನೋಡುವುದು ಮತ್ತು ದೇವರ ಮನೆವಾರ್ತೆಯಲ್ಲಿ ಅವರ ಒಳ್ಳೆಯ ನಡತೆಯನ್ನು ಗಮನಿಸುವುದು ನಮಗೆ ಆನಂದವನ್ನು ಉಂಟುಮಾಡುತ್ತದೆ. (1 ತಿಮೊ. 3:15) ಆರಾಧನೆಗಾಗಿರುವ ಯೆಹೋವನ ಏರ್ಪಾಡಿಗೆ ಗೌರವವನ್ನು ತೋರಿಸುವ ಮೂಲಕ, ಮಕ್ಕಳು ಆತನಿಗೆ ಘನತೆಯನ್ನು ತರುತ್ತಾರೆ ಮತ್ತು ಸಭೆಯಲ್ಲಿರುವ ಎಲ್ಲರೂ ಅವರನ್ನು ಗಣ್ಯಮಾಡುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ