ಶುಶ್ರೂಷಕರಾದ ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುವದು
1 ರಾಜ್ಯಾಭಿರುಚಿಗಳು ನಮ್ಮ ಜೀವಿತದಲ್ಲಿ ಮೊದಲ ಸ್ಥಾನವನ್ನು ತಕ್ಕೊಳ್ಳುವದರಿಂದ, ನಮ್ಮ ಆಯ್ಕೆಯ ಸೇವೆಯಾದ ಶುಶ್ರೂಷೆಯಲ್ಲಿ ಪ್ರಗತಿಪರರಾಗಿರಲು ನಾವು ಪ್ರೇರಿತರಾಗಬೇಕು. (ಮಾರ್ಕ 13:10) ನಾವೆಷ್ಟೇ ಸಮಯದಿಂದ ಸಾರುತ್ತಿರಲಿ, ಶುಶ್ರೂಷಕರಾದ ನಾವು ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುತ್ತಾ ಇರಲು ಬಯಸಬೇಕು. ನಾವಿದನ್ನು ಮಾಡುವದು ಹೇಗೆ?
2 ಸಾಫಲ್ಯ ಕಸುಬಿನಲ್ಲಿರುವ ಹೆಚ್ಚಿನವರು ತಮ್ಮ ರಂಗದಲ್ಲಿ ಸದಾ ತಮ್ಮ ಜ್ಞಾನ ಮತ್ತು ನಿಪುಣತೆಗಳನ್ನು ನವೀಕರಿಸಲು ಹುಡುಕುತ್ತಾರೆ. ಅವರ ಜೀವನೋಪಾಯವೇ ಅದರಲ್ಲಿ ಆಧರಿಸಿರಬಹುದು. ಮನಸ್ಸಾಕ್ಷಿಯುಕ್ತ ಶುಶ್ರೂಷಕರಾದ ನಾವು ಸಹಾ, ಇತರರಿಗೆ ದೇವರ ರಾಜ್ಯದ ಕುರಿತು ಕಲಿಸುವದರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವದರಲ್ಲಿ ನಮ್ಮ ಕುಶಲತೆಯನ್ನು ಎಡೆಬಿಡದೆ ಹೆಚ್ಚಿಸುವ ಅಗತ್ಯವಿದೆ. ಎಲ್ಲಾ ತರದ ಜನರನ್ನು ಮನವೊಲಿಸಲು ನಾವು ಹೊಸ ಹೊಸ ವಿಧಾನಗಳನ್ನು ಹುಡುಕುತ್ತಿರಬೇಕು.—ಮತ್ತಾ. 28:19,20.
ಪಂಥಾಹ್ವಾನವನ್ನು ಎದುರಿಸಿ
3 ಕುರಿಗಳಂತವರನ್ನು ಒಟ್ಟುಗೂಡಿಸುವದನ್ನು ಯೆಹೋವನೀಗ ತ್ವರಿತಗೊಳಿಸುತ್ತಾನಾದ್ದರಿಂದ, ನಮ್ಮಲ್ಲಿ ಹೆಚ್ಚಿನವರು ತಮ್ಮ ನೆರೆಯವರನ್ನು ಹೆಚ್ಚೆಚ್ಚಾಗಿ ಸಂದರ್ಶಿಸುತ್ತಾರೆ. ಎಷ್ಟೋ ಹೆಚ್ಚು ಪ್ರಚಾರಕರಿಂದ ಮತ್ತು ಪಯನೀಯರರಿಂದ ಹೆಚ್ಚು ಸಾಕ್ಷಿಯ ಚಟುವಟಿಕೆಯು ಲೋಕರಂಗವನ್ನು ಬಡಿದೆಬ್ಬಿಸುತ್ತಲಿದೆ. ನಮ್ಮ ಅಧಿಕ ಚಟುವಟಿಕೆಯಿಂದಾಗಿ, ಒಮ್ಮೆ ಪರಿಣಾಮಕಾರಿಯಾಗಿದ್ದ ಆ ಪ್ರಸಂಗಗಳು ಈಗ ನಮಗೆ ಭೇಟಿಯಾಗುವ ಜನರಿಗೆ ಅಷ್ಟು ಅಪ್ಪೀಲಾಗುತ್ತಿರಲಿಕ್ಕಿಲ್ಲ. ನಮ್ಮ ಶುಶ್ರೂಷೆಯ ದರ್ಜೆಯನ್ನು ಪ್ರಗತಿಮಾಡುವ ಅಗತ್ಯ ಅಲ್ಲಿರಬಹುದು. 4 ನಮ್ಮ ಕಾರ್ಯದಲ್ಲಿ ನಿಜವಾಗಿಯೂ ಕುಶಲತೆ ಪಡೆಯಲು ನಾವು ಜನರೊಂದಿಗೆ ಖಂಡಿತಭಾವದಿಂದ ಮಾತಾಡುವ ಅವಶ್ಯತೆ ಇದೆ. ಜುಲೈ 15, 1988ರ ವಾಚ್ಟವರ್ ನಲ್ಲಿ ಕೊಡಲ್ಪಟ್ಟ ವ್ಯಾವಹಾರ್ಯ ಸಲಹೆಗಳ ಸದುಪಯೋಗವು ನಮಗಿದರಲ್ಲಿ ಸಹಾಯವಾಗುವದು. ಉದಾಹರಣೆಗಾಗಿ, ಪುಟ 16 ಪಾರಾ 6 ರಲ್ಲಿ, ನೀವು ಚಿರಪರಿಚಿತರಿರುವ ಹಾಗೂ ಪ್ರತೀವಾರ ಸಂದರ್ಶಿಸುವ ಕ್ಷೇತ್ರದಲ್ಲಿ ನಯವಾಗಿ ಹಾಗೂ ನಿಶ್ಚಿತ ರೀತಿಯಲ್ಲಿ ನಿಮ್ಮನ್ನು ಪರಿಚಯ ಮಾಡುವ ವಿಧಾನವನ್ನು ಚರ್ಚಿಸುತ್ತದೆ. “ನನ್ನ ಸ್ವಂತ ಚರ್ಚು ನನಗಿದೆ ಮತ್ತು ನನ್ನೆಲ್ಲಾ ಆತ್ಮಿಕ ಜರೂರಿಯನ್ನು ಅದು ನೋಡಿಕೊಳ್ಳುತ್ತದೆ” ಎಂದು ಕಳೆದವಾರ ನಿಮಗಂದ ವ್ಯಕ್ತಿಯನ್ನು ಹೇಗೆ ಗೋಚರಿಸಬಹುದೆಂಬ ಸಮಾಚಾರವು 16ನೇ ಪುಟದ 5ನೇ ಪಾರಾದಲ್ಲಿ ಕೊಡಲಾಗಿದೆ.
5 ಉಚಿತ ಮನೆ ಬೈಬಲಭ್ಯಾಸದ ನೇರವಾದ ನೀಡಿಕೆಯನ್ನು ಮಾಡುತ್ತಾ ನಿಮ್ಮ ಕ್ಷೇತ್ರವನ್ನು ನೀವು ಆವರಿಸಿರುವಿರೋ? ನಿಮ್ಮ ಸಭೆಯಲ್ಲಿರುವ ವ್ಯಾಪಾರೀ ಕ್ಷೇತ್ರದಲ್ಲಿ ನೀವು ಸೇವೆಮಾಡುತ್ತೀರೋ? ತಕ್ಕದಾದ ಹಾಗೂ ಫಲಫಲಿಸುವ ತಾಸುಗಳಲ್ಲಿ ಬೀದಿ ಸಾಕ್ಷಿಯನ್ನು ಮಾಡಲು ಶಕ್ಯವೋ? ಜುಲೈ 15, 1988ರ ವಾಚ್ಟವರ್ ಕೊಟ್ಟಿರುವ ಒಳ್ಳೇ ಸಲಹೆಗಳನ್ನು ಅವಶ್ಯವಾಗಿ ಪರಾಮರ್ಶಿಸಿರಿ. ಅಂತಹ ಸಲಹೆಗಳನ್ನು ಅನ್ವಯಿಸುವದರಿಂದ ಶುಶ್ರೂಷಕರಾದ ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸಲು ಸಹಾಯವಾಗುವದು.
6 ಪರಿಣಾಮಕಾರತೆಯಲ್ಲಿ ಪೂರ್ಣಪರತೆಯೂ ಸೇರಿದೆ. (ಎಫೆ. 6:13) ಒಂದಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿರಬಹುದಾದ ಮನೆಗಳನ್ನು ಗಮನಿಸಲು ವಿಚ್ಚರವಿರ್ರಿ. ಕೆಲವರು ಮನೇ ತಳದ ಕೊಟಡಿಗಳಲ್ಲಿ, ಅಥವಾ ಗ್ಯಾರೇಜುಗಳ ಮೇಲೆ, ಇಲ್ಲವೇ ಎದುರು ಬಾಗಲಿಂದ ನೇರವಾಗಿ ಹೋಗಲಾಗದಂತಹ ಬೇರೆ ಜಾಗಗಳಲ್ಲಿ ವಾಸಿಸುತ್ತಾರೆ. ಬೇರೆ ಬೇರೆ ಕುಟುಂಬ ಸದಸ್ಯರಿಗಾಗಿ ನೋಡಿರಿ—ಸಾಮಾನ್ಯವಾಗಿ ಮನೇ ಬಾಗಲಿಗೆ ಬಾರದ ವೃದ್ಥ ವ್ಯಕ್ತಿಗಾಗಿ ಅಥವಾ ಸಂದರ್ಶನೆ ಮಾಡುವಾಗ ಸಾಮಾನ್ಯವಾಗಿ ಮನೆಯಲ್ಲಿರದವರಿಗಾಗಿ ಹುಡುಕಿರಿ. ಒಂದುವೇಳೆ ಬೇರೊಂದು ಸಮಯದಲ್ಲಿ ಸಂದರ್ಶನ ಮಾಡುವದಾದರೆ, ಕುಟುಂಬದ ಬೇರೆ ಸದಸ್ಯರು ಸಿಗಲೂ ಬಹುದು. ಸಂಜಾವೇಳೆಯ ಸಾಕ್ಷಿಯು ಹೆಚ್ಚಾಗಿ ಅಂತಹ ಸಂದರ್ಭಗಳನ್ನು ಕೊಡುತ್ತವೆ.
ಅದನ್ನು ನಮ್ಮ ಗುರಿಯಾಗಿ ಮಾಡಿ
7 ಶುಶ್ರೂಷೆಯಲ್ಲಿ ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುವದು ನಮ್ಮಲ್ಲಿ ಹೆಚ್ಚಿನವರು ಗಳಿಸಬಹುದಾದ ಅರ್ಹ ಗುರಿಯು. ಅದಕ್ಕಾಗಿ ಹೃದಯಪೂರ್ವಕವಾದ ಪ್ರಾರ್ಥನೆ ಮತ್ತು ಪೂರ್ವ ತಯಾರಿಯು ಬೇಕು. ಕ್ಷೇತ್ರಸೇವೆಯಲ್ಲಿ ನಮ್ಮ ಪರಿಣಾಮಕಾರತೆಯು ಬೆಳೆದಷ್ಟಕ್ಕೆ, ತದ್ರೀತಿಯ ಪ್ರಗತಿಯನ್ನು ಮಾಡಲು ನಾವು ಬೇರೊಬ್ಬರಿಗೆ ಸಹಾಯ ಕೊಡಲೂ ಶಕ್ತರಾಗಬಹುದು.—ಗಲಾ. 6:6.
8 ನಮ್ಮ ಕಲಿಸುವ ಕಾರ್ಯವು “ಮಹಾ ಸಂಕಟ” ದೊಂದಿಗೆ ಅಂತ್ಯವಾಗದೆಂದು ನೆನಪಿನಲ್ಲಿಡಿ. (ಮತ್ತಾ.24:21) ಪುನರುತಿತ್ತರಿಗೆ ಯೆಹೋವನ ಮಾರ್ಗಗಳನ್ನು ಕಲಿಯುವರೇ ವರ್ಷಗಳ ಸಹಾಯ ಕೊಡುವಿಕೆಯು ಅಲ್ಲಿರುವದು. ಹಾಗೆ ಕಲಿಸಲ್ಪಟ್ಟವರು ನಿಷ್ಟೆಯಿಂದ ಕ್ರಿಸ್ತನ ಆಳಿಕೆಗೆ ಅಧೀನರಾಗುವದನ್ನು ಕಾಣುವಾಗ ಆ ಸಹಸ್ರ ವರ್ಷಕಾಲದಲ್ಲಿ ನಮ್ಮ ಸಂತೋಷವು ದ್ವಿಗುಣಿಸುವದು ನಿಶ್ಚಯ. ಹೀಗೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವದರಲ್ಲಿ ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುವ ಮೂಲಕ ನಾವು ನಮ್ಮ ಶುಶ್ರೂಷೆಯಲ್ಲಿ ಹೆಚ್ಚನ್ನು—ಎಲ್ಲವನ್ನೂ ಯೆಹೋವನ ಸ್ತುತಿ ಮತ್ತು ಘನಕ್ಕಾಗಿ ಪೂರೈಸಬಲ್ಲೆವು.