ಸುವಾರ್ತೆಯನ್ನು ನೀಡುವದು-ಟ್ರೇಕ್ಟ್ಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ
1 1987 ರ “ಯೆಹೋವನಲ್ಲಿ ಭರವಸ” ಜಿಲ್ಲಾ ಸಮ್ಮೇಲನದಲ್ಲಿ ನಾಲ್ಕು ಹೊಸ ಟ್ರೇಕ್ಟ್ಗಳು ಹೊರಡಿಸಲ್ಪಟ್ಟವು. ಅವುಗಳ ಹೆಸರು ವೈ ಯುಕ್ಯಾನ್ ಟ್ರಸ್ಟ್ ದ ಬೈಬಲ್, ವಾಟ್ ಡು ಜೆಹೋವಸ್ ವಿಟ್ನೆಸಸ್ ಬಿಲಿವ್? ಲೈಫ್ ಇನ್ ಎ ಪೀಸ್ಫುಲ್ ನ್ಯೂ ವಲ್ಡ್, ವಾಟ್ ಹೋಪ್ ಫಾರ್ ದ ಡೆಡ್ ಲವ್ಡ್ ವನ್ಸ್? ಎಂದಾಗಿತ್ತು. ನೀವು ಈ ಟ್ರೇಕ್ಟ್ಗಳನ್ನು ಕೆತ್ರದಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೀರೋ?
2 ಜನರು ಮನೆಯಲ್ಲಿಲ್ಲದಾಗ ಅನೇಕ ಪ್ರಚಾರಕರು ಟ್ರೇಕ್ಟ್ಗಳನ್ನು ಬಿಟ್ಟುಹೋಗುತ್ತಾರೆ. ಭೇಟಿಯ ಸಮಯದಲ್ಲಿ ಕಿವಿಗೊಡಲು ತೀರಾ ಕಾರ್ಯಮಗ್ನ ಜನರಿಗೂ ಅವರದನ್ನು ನೀಡುತ್ತಾರೆ. ಮನೆ ಬಾಗಲಲ್ಲಿ ಟ್ರೇಕ್ಟ್ನ್ನುಪಯೋಗಿಸಿ ತಮ್ಮನ್ನು ಪರಿಚಯ ಮಾಡಿಸಿದರೆ ಅದು ಮನೆಯವನ ಆಸಕ್ತಿಯನ್ನು ಎಬ್ಬಿಸಲು ಸಹಾಯಕರವಾಗುವದನ್ನು ಕೆಲವರು ಕಂಡಿದ್ದಾರೆ. ಇನ್ನು ಕೆಲವರು ಪುಸ್ತಕ ನೀಡಲ್ಪಡದಲ್ಲಿ ಆದರೆ ಆಸಕ್ತಿ ತೋರಿಸಿದವರಿಗೆ ಅದನ್ನು ಉಚಿತವಾಗಿ ನೀಡಲು ಇಪ್ಟೈಸುತ್ತಾರೆ.
ಅವನ್ನು ಯಾವಾಗ ಮತ್ತು ಹೇಗೆ ಬಳಸುವದು
3 ಅವನ್ನು ವಿವಿಧ ರೀತಿಯಲ್ಲಿ ಬಳಸುವರೇ ಎಚ್ಚರವಿರುವ ಮೂಲಕ ಟ್ರೇಕ್ಟ್ಗಳನ್ನು ನೀಡಲು ಅನೇಕ ಸಂಧಿಗಳು ನಮಗೆ ದೊರಕಬಹುದು. ಉದಾರಣೆಗಾಗಿ ಸಂಬಂಧಿಕರಿಗೆ ಸಾಕ್ಷಿ ನೀಡುವಾಗ ಟ್ರೇಕ್ಟ್ಗಳು ಸಹಾಯಕಾರಿಯಾಗಬಲ್ಲವು. ರಜೆಯಲ್ಲಿರುವಾಗ, ಶಾಪಿಂಗ್ ಯಾ ಪ್ರಯಾಣ ಮಾಡುವಾಗ, ಶಾಲೆಯಲ್ಲಿ ಯಾ ನಿಮ್ಮ ಕೆಲ್ಸದ ಸ್ಥಳದಲ್ಲಿ ಟ್ರೇಕ್ಟ್ಗಳನ್ನುಪಯೋಗಿಸ ಸಾಧ್ಯವಿದೆ. ಟ್ರೇಕ್ಟ್ಗಳನ್ನು ಅವು ಸುಲಭವಾಗಿ ದೊರಕುವ ಜಾಗಗಳಲ್ಲಿ ಅಂದರೆ ನಿಮ್ಮ ಕೋಟು ಯಾ ಶರ್ಟಿನ ಪಾಕೆಟಲ್ಲಿ, ಪರ್ಸ್ ಯಾ ಬ್ರೀಫ್ಕೇಸಲ್ಲಿ ಇಡುತ್ತೀರೋ? ಎಲ್ಲಾ ಸಮಯದಲ್ಲಿ ಟ್ರೇಕ್ಟನ್ನು ಬಳಿಯಲ್ಲಿಡುವ ಮೂಲಕ ಅನೌಪಚಾರಿಕ ಸಾಕ್ಷಿಗೆ ನಿಮಗೆ ಉತ್ತೇಜನ ದೊರಕಬಹುದು. ಟ್ರೇಕ್ಟ್ಗಳನ್ನು ನೀಡುವ ಸಂದರ್ಭಗಳಿಗಾಗಿ ಯಾಕೆ ಹುಡುಕಬಾರದು?
4 ಸಂದಭವು ಯಾವುದೇ ಇರಲಿ, ಒಂದು ಹೆಚ್ಚು ಪರಿಣಾಮಕಾರಿಯಾದ ಸಾಕ್ಷಿಯನ್ನೀಯಲು ನೀವು ಟ್ರೇಕ್ಟ್ನ್ನು ಬಳಸಬಹುದು. ಅವುಗಳಲ್ಲಿರುವ ಸಂದೇಶವು ಚಿಕ್ಕದಾಗಿದ್ದರೂ, ಅವು ಹೇಳುವ ವಿಷಯಗಳು ಭರವಸ ಕಟ್ಟುವವುಗಳೂ ಸ್ಪಷ್ಟವಾದ ಶಾಸ್ತ್ರೀಯ ವಾದದಿಂದ ಆಧರಿಸಿದವುಗಳೂ ಆಗಿವೆ. ಟ್ರೇಕ್ಟ್ಗಳು ವರ್ಣರಂಜಿತ ಚಿತ್ರಗಳಿಂದ ಕೂಡಿದ್ದು ಶುಶ್ರೂಷೆಯಲ್ಲಿ ಹೆಚ್ಚು ಒಳ್ಳೇದನ್ನು ಪೂರೈಸಬಲ್ಲ ಉಪಯುಕ್ತ ಸಾಧನಗಳಾಗಿವೆ. ಎಲ್ಲೆಲ್ಲಿಯೂ ಇರುವ ಜನರಿಗೆ ಅದನ್ನು ನೀಡಲು ಎಚ್ಚರದಿಂದಿರ್ರಿ.
ಕ್ಷೇತ್ರ ಸೇವೆಯಲ್ಲಿ
5 ಮನೆಮನೆಯ ಸೇವೆ ಮಾಡುವಾಗ ರಾಜ್ಯದ ಸಂದೇಶದಲ್ಲಿ ಜನರ ಆಸಕ್ತಿಯನ್ನು ಬೆಳೆಸಲು ಟ್ರೇಕ್ಟ್ಗಳ ವಿಚಾರಪ್ರೇರಕ ಶೀರ್ಷಿಕೆಗಳ ಸದುಪಯೋಗವನ್ನು ನೀವು ಮಾಡಿದ್ದೀರೋ? ಕೆಲವು ಪ್ರಚಾರಕರು ತಮ್ಮ ಪೀಠಿಕೆಯಲ್ಲೀ ಟ್ರೇಕ್ಟಿನ ಶೀರ್ಷಿಕೆಯನ್ನು ಎತ್ತಿಹೇಳುತ್ತಾರೆ. ನೀವು ಸಹಾ ಇದನ್ನೇಕೆ ಪ್ರಯತ್ನಿಸಬಾರದು? ಹೀಗನ್ನಿರಿ: “ಹಲ್ಲೋ, ನಿಮ್ಮನ್ನು ಮನೆಯಲ್ಲಿ ಕಂಡು ಸಂತೋಷ. ಒಂದು ಅತಿ ಮಹತ್ವದ ಸಂದೇಶವನ್ನು ಕೊಡಲು ನಾನು ಬಂದಿರುತ್ತೇನೆ. ಲೈಫ್ ಇನ್ ಎ ಪೀಸ್ಫುಲ್ ನ್ಯೂ ವಲ್ಡ್ ಎಂಬ ಈ ಟ್ರೇಕ್ಟಲ್ಲಿ ನೀವದನ್ನು ಕಾಣುವಿರಿ. ಇದು ನಿಮಗೆ ಉಚಿತವಾಗಿ ನೀಡಲ್ಪಡುತ್ತದೆ. (ಮನೆಯವನಿಗೆ ಕೊಟ್ಟು ಎದುರುಪುಟಕ್ಕೆ ಗಮನವೆಳೆಯಿರಿ.) ಇಂತಹ ಶಾಂತಿಯುಕ್ತ ಪರಿಸರದಲ್ಲಿ ನೀವು ಜೀವಿಸ ಬಯಸಲಾರಿರೋ?” ಪರಿಸ್ಥಿತಿಯು ಅನುಮತಿಸಿದರೆ ಸಂಭಾಷಣೆಗಾಗಿ ವಿಷಯವನ್ನು ಮುಂದರಿಸಿ ತಿಂಗಳ ನೀಡುವಿಕೆಗೆ ಜೋಡಿಸಿರಿ.
6 ನೀವು ವಾಸಿಸುವ ಸ್ಥಳವನ್ನು ಹೊಂದಿಕೊಂಡು, ನಿಮ್ಮ ಸಂದೇಶವು ಬೈಬಲಿನದ್ದು ಎಂದು ಹೇಳುವದು ಪ್ರಯೋಜನಕಾರಿಯಾಗಿ ನೀವು ಕಾಣಬಹುದು. ವೈ ಯು ಕ್ಯಾನ್ ಟ್ರಸ್ಟ್ ದ ಬೈಬಲ್ ಎಂಬೀ ಟ್ರೇಕ್ಟ್ ನಿಮ್ಮ ನೆರೆಹೊರೆಯಲ್ಲಿ ಅತಿ ಪರಿಣಾಮಕಾರಿಯಾಗಬಹುದು. ಉದಾಹರಣೆಗಾಗಿ ಹೀಗನ್ನಿರಿ: “ನಾವಿಂದು ನಮ್ಮ ನೆರೆಯವರೊಂದಿಗೆ ಒಂದು ಉಚಿತವಾದ ಬೈಬಲ್ ಸಂದೇಶವನ್ನು ಬಿಟ್ಟುಹೋಗುತ್ತೇವೆ. ಇದು ನಿಮ್ಮ ಪ್ರತಿಯು. (ಮನೆಯನಿಗೆ ಕೊಡಿ.) ಇದು ಬೈಬಲಿನ ವಿಷಯವೆಂಬದನ್ನು ನೀವು ಕಾಣಬಹುದು. ಜನರು ಬೈಬಲಲ್ಲಿ ನಂಬಿಕೆ ಕಳಕೊಂಡಿದ್ದಾರೆಂದು ನೀವು ನೆನಸುತ್ತೀರೋ? (ಉತ್ತರಕ್ಕೆ ಅವಕಾಶಕೊಡಿ) ಬೈಬಲನೇನನ್ನುತ್ತದೋ ಅದರಲ್ಲಿ ಭರವಸವಿಡಲು ನಿಮಗೆ ಈ ಟ್ರೇಕ್ಟ್ ಸಹಾಯ ಮಾಡುವದು.” ಸಂಭಾಷಣೆಗಾಗಿ ವಿಷಯವನ್ನು ಮುಂದರಿಸುತ್ತಾ ಭೂಮಿಗಾಗಿ ದೇವರು ಕಾದಿರಿಸಿರುವ ಆಶೀರ್ವಾದಗಳನ್ನು ತಿಳಿಸಿರಿ.
7 ಬೈಬಲ್ ಟ್ರೇಕ್ಟ್ಗಳನ್ನು ಹಂಚುವದು “ಸುವಾರ್ತೆ” ನೀಡುವ ಕಾಲಪರೀಕ್ಷಿತ ಹಾಗೂ ಪರಿಣಾಮಕಾರಕ ಸಾಧನವು. (ಮತ್ತಾ.24:14) ನಮ್ಮ ಬಹಿರಂಗ ಸೇವೆಯಲ್ಲಿ ಮತ್ತು ಅನೌಪಚಾರಿಕ ಸಾಕ್ಷಿಯಲ್ಲಿ ಅವು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ನಾವು ನಮ್ಮ ಸುಂದರವಾದ ಟ್ರೇಕ್ಟ್ಗಳನ್ನು ಒಳ್ಳೇ ಸಾಕ್ಷಿನೀಡಲು ಬಳಸೋಣ ಮತ್ತು ಇತರರು ದೇವರರಾಜ್ಯದ ಕುರಿತು ಕಲಿಯುವಂತೆ ಸಹಾಯಮಾಡೋಣ.