ಸುವಾರ್ತೆಯನ್ನು ನೀಡುವದು—ಟ್ರೇಕ್ಟ್ಗಳೊಂದಿಗೆ
1 “ನಾನು ಹಾದು ಹೋಗುವಾಗ ಒಬ್ಬಾಕೆ ಮಹಿಳೆ, ನನಗೆ ಬೈಬಲ್ ಟ್ರೇಕ್ಟೊಂದನ್ನು ನೀಡಿದಳು, ಅದರ ಹೆಸರು ಲೈಫ್ ಇನ್ ಎ ಪೀಸ್ಫುಲ್ ನ್ಯೂ ವರ್ಲ್ಡ್” ಎಂದು ಒಬ್ಬ ಮನುಷ್ಯನು ಸೊಸೈಟಿಗೆ ಬರೆದನು. “ಅದನ್ನು ಓದುವ ಮೊದಲು ನಾನು ಕುಗ್ಗಿಹೋಗಿದ್ದೆ ಆದರೆ ನಂತರ, ಆತ್ಮೋನ್ನತಿ ಮತ್ತು ಶಾಂತಿಯು ನನಗಾಯಿತು.” ಈ ಮನುಷ್ಯನು ಅಧಿಕ ಸಮಾಚಾರವನ್ನು ಬಯಸಿದನು ಮತ್ತು ಅದಕ್ಕಾಗಿ ಬರೆಯುತ್ತಾ, ವಿವರಿಸಿದ್ದು: “ನಿಮ್ಮಿಂದ, ‘ಯು ಕ್ಯಾನ್ ಲಿವ್ವ್ ಫಾರೆವರ್ ಇನ್ ಪಾರಡೈಸ್ ಆನ್ ಅರ್ಥ್’ ಪುಸ್ತಕವನ್ನು ಪಡೆಯಲಿಕ್ಕಾಗಿ ನಾನು ಆತುರದಿಂದ ಎದುರು ನೋಡುತ್ತಿದ್ದೇನೆ.”
2 ನಿಶ್ಚಯವಾಗಿಯೂ ಈಗ ಯೆಹೋವನನ್ನು ಸ್ತುತಿಸುವ ಅನೇಕರ ಆತ್ಮಿಕ ಹಸಿವು, ಟ್ರೇಕ್ಟ್ಗಳಿಂದಲೇ ಉದ್ರೇಕಿತವಾಗಿದೆ. ನಿಮ್ಮ ಶುಶ್ರೂಷೆಯಲ್ಲಿ ಟ್ರೇಕ್ಟ್ಗಳನ್ನು ನೀವು ಉಪಯೋಗಿಸುತ್ತೀರೋ? ಅನೇಕರು ಉಪಯೋಗಿಸುತ್ತಾರೆ. ಬ್ರೂಕ್ಲಿನ್ ಒಂದರಲ್ಲಿಯೇ, 12 ಕೋಟಿ 20 ಲಕ್ಷಕ್ಕಿಂತಲೂ ಹೆಚ್ಚು ಪೀಸ್ಫುಲ್ ನ್ಯೂ ವರ್ಲ್ಡ್ ಟ್ರೇಕ್ಟ್ಗಳು ಹಾಗೂ ಬೇರೆ ಮೂರು ಟ್ರೇಕ್ಟ್ಗಳಾದ, ವೈ ಯು ಕ್ಯಾನ್ ಟ್ರಸ್ಟ್ ದ ಬೈಬಲ್, ವಾಟ್ ಡು ಜೆಹೋವಸ್ ವಿಟ್ನೆಸಸ್ ಬಿಲಿವ್? ಮತ್ತು ವಾಟ್ ಹೋಪ್ ಫಾರ್ ದ ಡೆಡ್ ಲವ್ಡ್ ವನ್ಸ್? ಇವುಗಳ ಸುಮಾರು 25 ಕೋಟಿ ಪ್ರತಿಗಳನ್ನು ಮುದ್ರಿಸಲಾಗಿದೆ.
3 ಈ ಸಂಕ್ಷಿಪ್ತ ಸಂದೇಶಗಳಲ್ಲಿ ವಿವರಿಸಲಾದ ದೇವರ ವಾಕ್ಯದ ಶಕ್ತಿಗೆ ನಾವೆಂದೂ ಕಡಿಮೆ ಬೆಲೆ ಕಟ್ಟಬಾರದು. (ಇಬ್ರಿ. 4:12; ಜೆಕರ್ಯ 4:10 ಯಾಕೋಬ 3:4, 5 ಹೋಲಿಸಿ.) ಒಬ್ಬ ಸಾಕ್ಷಿಯು ಬರೆದದ್ದು: “ವಾಚ್ಟವರ್ ಸೊಸೈಟಿಯ ಅನೇಕ ಟ್ರೇಕ್ಟ್ಗಳನ್ನು ನಾನು ಓದುತ್ತಾ ಕಟ್ಟಕಡೆಗೆ, ಸತ್ಯವನ್ನು ನಾನು ಕಲಿತೆ.” ಅವನು ವಿವರಿಸಿದ್ದು: “ಈ ಅವಸರದ ಲೋಕದಲ್ಲಿ ಜನರು, ಓದಲಿಕ್ಕೆ ಹೆಚ್ಚು ಸಮಯ ಕೊಡಬಯಸುವುದಿಲ್ಲ. ಆದರೆ ಈ ಟ್ರೇಕ್ಟ್ಗಳು ಒಂದು ಮಹತ್ವದ ಸಂದೇಶಕ್ಕೆಷ್ಟು ಬೇಕೋ ಅಷ್ಟೇ ಉದ್ದವಿದೆ. ಆದರೆ ಅದನ್ನು ನೋಡುವ ಮೊದಲೇ ಜನರನ್ನು ಅದರಿಂದ ದೂರ ಸರಿಸುವಷ್ಟು ಉದ್ದವಿಲ್ಲ.”
4 ಹಲವಾರು ಕಾರಣಗಳಿಂದಾಗಿ ಜನರು, ನಮ್ಮಿಂದ ಪುಸ್ತಕಗಳನ್ನು ತಕ್ಕೊಳ್ಳಲು ಹಿಂಜರಿಯುತ್ತಾರೆ. ಬರೇ ಒಂದು ಟ್ರೇಕ್ಟನ್ನಾದರೆ, ಆರಾಮದಿಂದ ಪಡಕೊಳ್ಳುತ್ತಾರೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಒಂದು ಚಿಕ್ಕ ಪ್ಲಾಸಿಕ್ಟ್ ಹೋಲ್ಡರಲ್ಲಿ ಟ್ರೇಕ್ಟುಗಳನ್ನಿಟ್ಟು, ಮನೆಯವನು ತನಗೆ ಬೇಕಾದದ್ದನ್ನು ಅದರಿಂದ ಆರಿಸಿಕೊಳ್ಳುವಂತೆ ಬಿಡುತ್ತಾನೆ. “ಮುಖ್ಯವಾಗಿ ಆರಿಸಲ್ಪಡುವ ಟ್ರೇಕ್ಟ್,” ಅವನು ಬರೆದದ್ದು, “ವಾಟ್ ಡು ಜೆಹೋವಸ್ ವಿಟ್ನೆಸಸ್ ಬಿಲಿವ್? ಎಂಬದು.”
ಪ್ರಾರಂಭದ ಸಂಪರ್ಕದಲ್ಲಿ
5 ಸಂಭಾಷಣೆಗಳನ್ನು ಆರಂಭಿಸುವ ಒಂದು ಪರಿಣಾಮಕಾರಕ ಮಾರ್ಗವು, ಒಂದು ಟ್ರೇಕ್ಟನ್ನು ಅಥವಾ ಕರಪತ್ರವನ್ನು ಕೊಡುವುದೇ ಎಂದು ಕೆಲವು ಪ್ರಚಾರಕರು ಕಂಡಿದ್ದಾರೆ. ಅದನ್ನು ನೀಡುವ ಮೂಲಕ, ಒಂದುವೇಳೆ ಬಾಗಲನ್ನು ತೆರೆಯಲು ಹಿಂಜರಿಯುವ ಮನೆಯವನು ತೆರೆಯಲು ಪ್ರೇರಿಸಲ್ಪಟ್ಟಾನು.
6 ಮನೆಯವನು ಕೆಲಸ ಮಗ್ನನಿದ್ದಲ್ಲಿ ಅಥವಾ ತೊಂದರೆಯಲ್ಲಿದ್ದಲ್ಲಿ, ಪ್ರಾಯಶಃ ಅಲ್ಲಿ ಬೇಕಾದದ್ದು ಟ್ರೇಕ್ಟ್ ಮಾತ್ರವೇ. ಮೃತರಿಗಿರುವ ನಿರೀಕ್ಷೆಯ ಕುರಿತಾದ ಟ್ರೇಕ್ಟ್ನಿಂದ ಒಬ್ಬಾಕೆ ಸ್ತ್ರೀ ಎಷ್ಟು ಆದರಣೆ ಪಡೆದಳೆಂದರೆ, ಅಧಿಕ ಸಮಾಚಾರಕ್ಕಾಗಿ ಸೊಸೈಟಿಗೆ ಬರೆದಳು. ಮನೆಯಲ್ಲಿ ಯಾರೂ ಸಿಕ್ಕದಾಗ ಮನೆಯವನಿಗಾಗಿ ಒಂದು ಟ್ರೇಕ್ಟನ್ನು, ಹಾದುಹೋಗುವವರಿಗೆ ಕಾಣಿಸದ ಜಾಗದಲ್ಲಿ ಬಿಟ್ಟುಹೋಗಬಹುದು.
ಪುನರ್ಭೇಟಿಗಳಲ್ಲಿ
7 ಹಿಂದೆ ತುಸು ಆಸಕ್ತಿ ತೋರಿಸಲ್ಪಟ್ಟ ಸ್ಥಳಕ್ಕೆ ಹಿಂತಿರುಗಿ ಹೋಗುವಾಗ, ಹೀಗನ್ನಬಹುದು: “ಹಲ್ಲೋ ! [ನನ್ನ ಹೆಸರು] ನಿಮ್ಮನ್ನು ಮನೆಯಲ್ಲಿ ಕಾಣುವುದಕ್ಕೆ ನಿಜವಾಗಿ ಸಂತೋಷ. ಮೊದಲಾಗಿ ನಿಮ್ಮ ಭೇಟಿಯಾದಾಗ ಬೈಬಲಿನ ಕುರಿತು ಮಾತಾಡಲು ನೀವು ಸಮಯ ಕೊಟ್ಟದ್ದು ನನ್ನನ್ನು ಪ್ರಭಾವಿಸಿದೆ. ನಿಮಗೆ ಆಸಕ್ತಿ ಹುಟ್ಟಿಸಬಹುದೆಂದು ನಾನು ನೆನಸುವ ಕೆಲವು ಅಧಿಕ ಸಮಾಚಾರ ನನ್ನಲ್ಲಿದೆ. ಲೈಫ್ ಇನ್ ಎ ಪೀಸ್ಫುಲ್ ನ್ಯೂ ವರ್ಲ್ಡ್ ಎಂಬ ಈ ಟ್ರೇಕ್ಟ್ನಲ್ಲಿ ಅದು ಕಂಡುಬರುತ್ತದೆ. ನಿಮಗೆ ನೆನಪಿರಬಹುದು ಕಳೆದ ಸಾರಿ ನಾವು, ನಿಜ ಶಾಂತಿ ಮತ್ತು ಬಾಳುವ ಜೀವನದ ಬಗ್ಗೆ ಬೈಬಲಿನ ವಾಗ್ದಾನದ ಕುರಿತು ಮಾತಾಡಿದ್ದೆವು. ಆದರೆ ಆ ವಾಗ್ದಾನಗಳ ಕುರಿತು ಓದುವಾಗ ಅನೇಕರು ಪರಲೋಕದ ಕುರಿತು ಮಾತ್ರವೇ ಯೋಚಿಸುತ್ತಾರೆ. ಆ ಆಶೀರ್ವಾದಗಳು ಇಲ್ಲಿ ಭೂಮಿಯಲ್ಲಿ ಸಂಭವಿಸಲಿವೆಂದು ಕೀರ್ತನೆ 37:29 ಹೇಳುವುದನ್ನು ಗಮನಿಸಿರಿ. [ವಚನ ಓದಿರಿ, ಟ್ರೇಕ್ಟಲ್ಲಿ ಅದೆಲ್ಲಿದೆಂದು ಮನೆಯವನಿಗೆ ತೋರಿಸಿರಿ.] ಇದು ಅಭಿರುಚಿಯ ಸಂಗತಿಯಲ್ಲವೇ? [ಹಲವಾರು ಪಾರಾಗಳನ್ನು ಚರ್ಚಿಸಿರಿ.] ಈ ಟ್ರೇಕ್ಟಲ್ಲಿ ಇನ್ನೂ ಅನೇಕ ಉತ್ತೇಜಕ ವಚನಗಳಿವೆ ಮತ್ತು ಅವೂ ಇಷ್ಟೇ ಅನಂದದಾಯಕವೆಂದು ನೀವು ಕಾಣುವಿರಿ. ಮುಂದಿನ ಸಲ ನಾನು ಬರುವಾಗ, ಪ್ರಾಯಶಃ ಇಂದು ಮಾಡಿದಂತೆ ಅವುಗಳಲ್ಲಿ ಕೆಲವನ್ನು ಒಟ್ಟಾಗಿ ನಾವು ಓದಬಹುದು.”
8 ನಿಜವಾಗಿಯೂ ನಮ್ಮ ಟ್ರೇಕ್ಟ್ಗಳು ಯೆಹೋವನಿಂದ ಬಂದ ದಾನಗಳು. ಆತನ ಸ್ತುತಿಗಾಗಿ ಮತ್ತು ನಮ್ಮ ನಿತ್ಯ ಆಶೀರ್ವಾದಕ್ಕಾಗಿ ಒಂದು ಪರಿಣಾಮಕಾರಕ ಶುಶ್ರೂಷೆಯನ್ನು ನಾವು ನಿರ್ವಹಿಸುವಾಗ, ನಾವೀ ಮೂಲ್ಯವಾದ ಸಾಧನವನ್ನು ನೈಪುಣ್ಯದಿಂದ ಉಪಯೋಗಿಸೋಣ.—ಜ್ಞಾನೋ. 22:29.