ತಾಳ್ಮೆಯಿಂದ ಫಲಕೊಡುತ್ತಾ ಇರ್ರಿ
1 ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ನಂತರ 30 ಕ್ಕೂ ಕಡಿಮೆ ವರ್ಷದಲ್ಲಿ ಅಪೊಸ್ತಲ ಪೌಲನು ಕೊಲೊಸ್ಸೆ ಸಭೆಗೆ ಬರೆಯುತ್ತಿದ್ದಾಗ, ಸುವಾರ್ತೆಯ ಸತ್ಯವು ಲೋಕದಲ್ಲೆಲ್ಲಾ ಹಬ್ಬಿ ಫಲ ಕೊಟ್ಟು ವೃದ್ಧಿಯಾಗುತ್ತಾ ಬಂದಿದೆ ಎಂದು ಹೇಳ ಶಕ್ತನಾದನು. (ಕೊಲೊ. 1:5, 6) ಯೆಹೋವನ ಸಾಕ್ಷಿಗಳು ಇಂದು ಒಂದು ಮಹಾ ಪ್ರಮಾಣದಲ್ಲಿ, ರಾಜ್ಯದ ಸುವಾರ್ತೆಯನ್ನು “ಭೂಲೋಕದ ಕಟ್ಟಕಡೆಯ ವರೆಗೂ” ಅಕ್ಷರಶ: ಮುಟ್ಟಿಸಿದ್ದಾರೆ. (ಅಪೊ. 1:8; ಯೋಹಾ. 14:12) 1989ನೇ ಸೇವಾ ವರ್ಷದಲ್ಲಿ ಸರಾಸರಿ ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ಲೋಕವ್ಯಾಪಕವಾಗಿ 5.6 ಸೇಕಡಾ ವೃದ್ಧಿಯಾಗಿದೆ ಮತ್ತು ನಾವು 212 ದೇಶಗಳಲ್ಲಿ 37,87,188 ಪ್ರಚಾರಕರ ಹೊಸ ಉಚ್ಛಾಂಕವನ್ನು ತಲಪಿದ್ದೇವೆ!
2 ಎಲ್ಲಿ ದೇವರ ರಾಜ್ಯದ ಸಾರುವಿಕೆಯು ನಿಷೇಧ್ಯವೋ ಮತ್ತು ವರದಿಗಳು ಅಪೂರ್ಣವೋ ಅಲ್ಲಿ ಇದಕ್ಕಿಂತಲೂ ಹೆಚ್ಚು ಅಂದರೆ 7.6 ಸೇಕಡಾ ವೃದ್ಧಿಯು ವರದಿಯಾಗಿದೆ! ಆ ದೇಶಗಳಲ್ಲಿ ಇರುವ ಅನೇಕ ಸಮಸ್ಯೆಗಳ ನಡುವೆಯೂ ಪ್ರಚಾರಕರು “ತಾಳ್ಮೆಯಿಂದ ಫಲಕೊಡುವದನ್ನು” ಮುಂದರಿಸಿದ್ದಾರೆ. (ಲೂಕ 8:15) ಕೆಲವು ಸ್ಥಳಗಳಲ್ಲಿ ಒತ್ತ ಡಗಳು ಕಡಿಮೆಯಾಗಿವೆ, ಆದರೆ ಬೇರೆ ದೇಶಗಳಲ್ಲಿ ಕಷ್ಟದ ಪರಿಸ್ಥಿತಿಗಳು ಬಿಡದೆ ಮುಂದರಿಯುತ್ತಿವೆ.
3 ರಾಜ್ಯದ ಸಾರುವಿಕೆಯನ್ನು ಮುಂದರಿಸಲು ಹೆಚ್ಚು ಸ್ವತಂತ್ರವಿರುವ ದೇಶಗಳಲ್ಲಿ, ನಾವು ಬೇರೆ ಸಮಸ್ಯೆಗಳನ್ನು ಎದುರಿಸುತ್ತೇವೆ. ನಿರಾಸಕ್ತಿ ಮತ್ತು ಉಪೇಕ್ಷೆಯು, ವಿಶೇಷವಾಗಿ ಭೌತಿಕ ಸಮೃದ್ಧಿಯ ದೇಶಗಳಲ್ಲಿ, ಎದುರಾಗುತ್ತವೆ. ಅಂಥಹ ಮನೋಭಾವವನ್ನು ಅವಲಂಬಿಸದಂತೆ ಯೆಹೋವನ ಸೇವಕರು ಎಚ್ಚರವಿರಬೇಕು. ಐಹಿಕ ಅಭಿರುಚಿಗಳು, ಸುಖಗಳು, ಮನೋರಂಜನೆ ಮತ್ತು ಇತರ ಅಪಕರ್ಶಣೆಗಳು ನಮ್ಮ ದೇವಪ್ರಭುತ್ವ ಚಟುವಟಿಕೆಗಳನ್ನು ಅತಿಕ್ರಮಿಸುವಂತೆ ನಾವು ಬಯಸಲಾರೆವು. ಇಲ್ಲವಾದರೆ ನಾವೂ ಉದಾಸೀನಗೊಂಡು, ತಾಳ್ಮೆಯಿಂದ ಫಲಕೊಡುತ್ತಾ ಇರುವ ಅಗತ್ಯವನ್ನು ಗಣ್ಯಮಾಡಲು ತಪ್ಪೇವು.—ಲೂಕ 21:34-36.
ತಾಳ್ಮೆ ಮತ್ತು ಪರಿಶ್ರಮ ಅಗತ್ಯ
4 ನಾವು ಸುವಾರ್ತೆಗೆ ವಿರೋಧವನ್ನು ಎದುರಿಸಲಿ ಇಲ್ಲವೇ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸಲು ಸೀಮಿತ ಸ್ವತಂತ್ರರಿರಲಿ, ತಾಳ್ಮೆಯು ಅತ್ಯಾವಶ್ಯಕ. ಕೆಲವು ದೇಶಗಳಲ್ಲಿ ಸಹೋದರರು ಹತ್ತಾರು ವರ್ಷಗಳಿಂದ ಪ್ರತಿಕೂಲ ಪರಿಸ್ಥಿತಿಯ ಕೆಳಗೇ ಕೆಲಸ ಮಾಡುತ್ತಿದ್ದಾರೆ. ಅಂಥಹ ವಿರೋಧದ ಕೆಳಗೆ ಅವರ ತಾಳ್ಮೆಯು ಅನುಕೂಲ ಸ್ಥಿತಿಗತಿಯನ್ನು ತಂದುಕೊಟ್ಟಿದೆ ಮತ್ತು ಅವರೀಗ ವಿಫುಲ ಆಶೀರ್ವಾದವನ್ನು ಕೊಯ್ಯುತ್ತಿದ್ದಾರೆ. (ರೋಮಾ. 5:3-5; ಗಲಾ. 6:9) ಯಾವುವೇ ಕಷ್ಟಗಳನ್ನು ಎದುರಿಸಲಿ, ನಾವು ತಾಳ್ಮೆ ತೋರಿಸುತ್ತಾ ಮುಂದರಿಯಬೇಕು. ರಾಜ್ಯದ ಸಾಕ್ಷಿಯು ಕೊಡಲ್ಪಡಲೇಬೇಕು, ಮತ್ತು ನಾವೆಲ್ಲರೂ ನಮ್ಮ ಸಮಗ್ರತೆಯನ್ನು ತೋರಿ ಸುತ್ತಾ ಮುಂದರಿಯಬೇಕು. ತಾಳ್ಮೆಯಿಂದಲೇ ನಾವು ನಮ್ಮ ಆತ್ಮವನ್ನು, ಜೀವವನ್ನು ಕಾಪಾಡಿಕೊಳ್ಳುವೆವು.—ಮಾರ್ಕ 13:10; ಲೂಕ 21:19.
5 ಸಾರುವ ಕಾರ್ಯದಲ್ಲಿ ಸೋತುಹೋಗದೆ ಯೆಹೋವನ ಸೇವೆಯಲ್ಲಿ ನಮ್ಮನ್ನು ಪರಿಶ್ರಮದಿಂದ ದುಡಿಸಿಕೊಳ್ಳುವ ಮೂಲಕ, ಆತ್ಮಿಕ ವಿಷಯಗಳನ್ನು ನಾವು ಅಲ್ಪವೆಂದೆಣಿಸುವದಿಲ್ಲವೆಂದು ತೋರಿಸಿ ಕೊಡುತ್ತೇವೆ. ಎಲ್ಲಿ ವಾಹನ ಸೌಕರ್ಯಗಳು ಕಷ್ಟವೋ, ಆರ್ಥಿಕ ಸಮಸ್ಯೆಗಳಿಂದಾಗಿ ಭೌತಿಕ ಅವಶ್ಯಕತೆಗಳ ಕೊರತೆಗಳು ಇವೆಯೋ ಆ ಕೆಲವು ದೇಶಗಳಲ್ಲಿ, ಸುವಾರ್ತೆಯ ಸಾರುವಿಕೆಯು ಬಿಡದೆ ಮುಂದರಿಯುತ್ತಿದೆ. ಅಂಥಹ ದೇಶಗಳಲ್ಲಿ ಸಭಾ ಪ್ರಚಾರಕರು ಪ್ರತಿ ತಿಂಗಳು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ 14-17 ತಾಸುಗಳನ್ನು ಹಾಕುತ್ತಾರೆ. ಅವರ ಪಯನೀಯರ ದರ್ಜೆಯೂ ಏಕಪ್ರಕಾರವಾಗಿ ವೃದ್ಧಿಯಾಗುತ್ತಿದೆ. ಇದು ಅನೇಕ ಆರ್ಥಿಕ ಸೌಲಭ್ಯಗಳಿರುವ ನಮ್ಮನ್ನು ನಿಂತು ಯೋಚಿಸುವಂತೆ ಮಾಡುತ್ತದೆ. ಅತಿ ಮಹತ್ವದ ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯ ಕಾರ್ಯದಲ್ಲಿ ನಮ್ಮ ಕ್ರಮದ ಪಾಲನ್ನು ನಾವು ವೃದ್ಧಿಸಬಲ್ಲೆವೋ?
ನಾವು ಹೆಚ್ಚನ್ನು ಮಾಡಬಲ್ಲೆವೋ?
6 ಕ್ಷೇತ್ರ ಸೇವೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ನಮ್ಮ ಕಾಲತಖ್ತೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಬೇಕಾದೀತು. ಭಾನುವಾರದಂದು ನಾವು ಸೇವೆಯಲ್ಲಿ ಒಂದು ತಾಸನ್ನು ಹಾಕುತ್ತೇವಾದರೆ, ಪ್ರಾಯಶ: ಇನ್ನೊಂದು ತಾಸನ್ನು ಪುನಃ ಸಂದರ್ಶನೆ ಯಾ ಬೈಬಲಭ್ಯಾಸದಲ್ಲಿ ಕಳೆಯುವ ಮೂಲಕ ಸಮಯವನ್ನು ಹೆಚ್ಚಿಸ ಬಹುದೋ? ಅಥವಾ ನಾವು ಒಂದು ಬೈಬಲಭ್ಯಾಸ ನಡಿಸುತ್ತೇವಾದರೆ, ಅಭ್ಯಾಸಕ್ಕೆ ಮುಂಚೆ ಸ್ವಲ್ಪ ಮನೆಮನೆಯ ಸೇವೆ ಯಾ ಕೆಲವು ಪುನಃ ಸಂದರ್ಶನೆ ಮಾಡುವ ಮೂಲಕ ಇನ್ನೊಂದು ತಾಸನ್ನು ಹೆಚ್ಚಿಸ ಬಲ್ಲೆವೋ? ಶನಿವಾರ ಪತ್ರಿಕಾ ಚಟುವಟಿಕೆಯಲ್ಲಿ ಎರಡು ತಾಸು ಕಳೆದ ಮೇಲೆ ಪತ್ರಿಕಾ ಮಾರ್ಗದಲ್ಲಿ ಪತ್ರಿಕೆ ನೀಡಿಯೋ ಅಥವಾ ಕೆಲವು ಪುನಃ ಸಂದರ್ಶನೆ ಮಾಡಿಯೋ ತಾಸು ಹೆಚ್ಚಿಸ ಬಹುದು. ಗ್ರಾಮೀಣ ಕ್ಷೇತ್ರಗಳ ವಾಸಿಸುವವರಿಗೆ ಬೀದಿ ಸಾಕ್ಷಿ ಯಲ್ಲಿ ಸ್ವಲ್ಪ ಸಮಯವನ್ನು ಕಳೆಯುವದು ಅನುಕೂಲವಾದೀತು. ಈ ರೀತಿ ಯಲ್ಲಿ ಮತ್ತು ಬೇರೆ ವಿಧ ಗಳಲ್ಲಿ, ಕ್ಷೇತ್ರ ಶುಶ್ರೂಷೆ ಯಲ್ಲಿ ನಮ್ಮ ಪಾಲನ್ನು ಹೆಚ್ಚಿಸಲು ನಾವು ಶಕ್ತ ರಾಗಬಹುದು. ಸಮಪಾಲಾಗಿ ಒಳ್ಳೇ ಫಲಿತಾಂಶಗಳೂ ವೃದ್ಧಿಯಾಗಬೇಕು.
7 ಕ್ಷೇತ್ರ ಸೇವೆಯಲ್ಲಿ ಪುನಃ ಸಂದರ್ಶನೆ ಮಾಡುವದರಲ್ಲಿ ಅಧಿಕ ಸಮಯವನ್ನು ಕಳೆಯುವದರಿಂದ ಹೆಚ್ಚು ಬೈಬಲಭ್ಯಾಸ ದೊರೆಯುತ್ತವೆ ನಿಸ್ಸಂಶಯ. ಕಾಲಾನಂತರ ಇದು ಇನ್ನೂ ಹೆಚ್ಚು ಜನರು ಸತ್ಯಕ್ಕೆ ಬರುವ ಮತ್ತು ರಾಜ್ಯದ ಸಾರುವಿಕೆಯನ್ನು ಪೂರೈಸಲು ನಮಗೆ ಸಹಾಯ ಮಾಡುವ ಅರ್ಥದಲ್ಲಿರುವದು.—ಮತ್ತಾ. 28:19, 20.
ಪ್ರಾರ್ಥನೆ ಅತ್ಯಾವಶ್ಯಕ
8 ತಾಳ್ಮೆಯಿಂದ ನಾವು ಫಲಕೊಡುತ್ತಾ ಇರಬೇಕಾದರೆ ಯೆಹೋವನ ಆಶೀರ್ವಾದವನ್ನು ನಾವು ಹುಡುಕಬೇಕು ಮತ್ತು ಆತನ ಆತ್ಮದ ಮಾರ್ಗದರ್ಶನಕ್ಕೆ ಬಿಟ್ಟುಕೊಡಬೇಕು. ನಮ್ಮ ಶುಶ್ರೂಷೆಯನ್ನು ಯೆಹೋವನಿಗೆ ಒಂದು ಪ್ರಾರ್ಥನೆಯ ವಿಷಯವಾಗಿ ಮಾಡಬೇಕು. ನಮ್ಮ ಕ್ಷೇತ್ರ ಚಟುವಟಿಕೆಯ ಕುರಿತು ಯೆಹೋವಗೆ ಪ್ರಾರ್ಥಿಸುವಾಗ, ನಾವಾತನ ಜತೆ ಕೆಲಸಗಾರರು ಎಂಬ ಜ್ಞಾಪಕವು ನಮಗೆ ಆಗುತ್ತ ದೆ. (1 ಕೊರಿ. 3:9) ಯೆಹೋವನ ಸಹಾಯದಿಂದ ನಾವು ನಮ್ಮ ಶುಶ್ರೂಷೆಯಲ್ಲಿ, ಆ ಕೂಡಲೇ ಫಲಿತಾಂಶಗಳನ್ನು ಕಾಣದಿದ್ದರೂ, ಸೈರಣೆಯಿಂದಿರಬಲ್ಲೆವು. ಕೆಲವು ಕ್ಷೇತ್ರಗಳಲ್ಲಿ ರಾಜ್ಯ ಪ್ರಚಾರಕರ ಅನೇಕ ವರ್ಷಗಳ ನಂಬಿಗಸ್ತ ಸೈರಣೆಯ ನಂತರವೇ ಅಭಿವೃದ್ಧಿಯು ತೋರಿಬಂದಿದೆ. ಭವಿಷ್ಯತ್ತನ್ನು ಮುನ್ನೋಡುವಾಗ, ಸೋತುಹೋಗಿ ಬಿಟ್ಟುಬಿಡದೆ, ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನಿರ್ವಹಿಸುವಂತೆ ಯೆಹೋವನ ಸಹಾಯ ಮತ್ತು ಮಾರ್ಗದರ್ಶನೆಗಾಗಿ ಹುಡುಕುವುದು ಅತ್ಯಾವಶ್ಯಕವು. (2 ತಿಮೊ. 4:5) ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯಲ್ಲಿ ಬಹಳ ಫಲವು ಇನ್ನೂ ಉತ್ಪಾದಿಸಲ್ಪಡುತ್ತಿದೆ.
9 ಯಾವಾಗಲೂ ಪ್ರಾರ್ಥಿಸುವ ಅಗತ್ಯವನ್ನು ಯೇಸು ಒತ್ತಿಹೇಳಿದ್ದನು. (ಲೂಕ 18:1) “ಎಡೆಬಿಡದೆ ಪ್ರಾರ್ಥಿಸಿರಿ” ಎಂದು ಪೌಲನು ಪ್ರಬೋಧಿಸಿದ್ದಾನೆ. (1 ಥೆಸ. 5:17) ಈಗ ಪ್ರಾರ್ಥನೆಯಲ್ಲಿ ನಿರತರಾಗಿರಲು ಜರೂರಿಯ ಕಾರಣಗಳು ನಮಗಿವೆ. ವರ್ಷವರ್ಷವೂ ಬೆಳೆಯುತ್ತಿರುವ ಹಿಂಡನ್ನು ಪಾಲಿಸುವುದರಲ್ಲಿ ಒಳಗೂಡಿರುವ ಅನೇಕ ಜವಾಬ್ದಾರಿಗಳು ಅಲ್ಲಿವೆ. ತಾಳ್ಮೆಯಿಂದ ಫಲಕೊಡುವಂತೆ ಇತರರಿಗೆ ಸಹಾಯ ಮಾಡಲೂ ನಾವು ಬಯಸುತ್ತೇವೆ. : ಪ್ರಚಾರಕರ ಮತ್ತು ಇಡೀ ಸಂಸ್ಥೆಯ ಹಲವಾರು ಅಗತ್ಯತೆಗಳ ಕಡೆಗೆ ಗಮನವು ಕೊಡಲ್ಪಡಬೇಕು. ಕಾರ್ಯದ ಬೆಂಬಲಕ್ಕಾಗಿ ಮತ್ತು ಬೈಬಲಾಧರಿತ ಸಾಹಿತ್ಯಗಳನ್ನು ಪ್ರಕಾಶಿಸುತ್ತಾ ಇರುವಂತೆ ದಾನಗಳ ಅಗತ್ಯವನ್ನು ಕಾಣುವಾಗ, ಈ ವಿಷಯದಲ್ಲಿ ದೇವಭೀರು ಜನರು ಉದಾರಿಗಳಾಗುವರೇ ಯೆಹೋವನು ಪ್ರೇರೇಪಿಸುವಂತೆ ನಾವು ಪ್ರಾರ್ಥಿಸ ಬಯಸಬೇಕು.—2 ಕೊರಿ. 9:8-11.
10 ಲೋಕ ವ್ಯಾಪಕ ಹೊಲದ ವಿವಿಧ ಭಾಗಗಳು ಹಿಂದೆಂದಿಗಿಂತಲೂ ದೇವಪ್ರಭುತ್ವ ಕಾರ್ಯಕ್ಕೆ ಅಧಿಕ ವಿಸ್ತಾರ್ಯವಾಗಿ ತೆರೆಯುವಾಗ, ಕೊಲೊಸ್ಸೆ 4:2 ರ ಶಾಸ್ತ್ರಿಯ ಸದ್ಬೋಧೆಯು ಹೆಚ್ಚು ಅರ್ಥಭರಿತವಾಗುತ್ತದೆ: “ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ.” ನಮ್ಮ ಸಹೋದರರು ಎಲ್ಲೆಲ್ಲಿಯೂ ಫಲ ಕೊಡುತ್ತಾ ಮುಂದರಿಯುವಂತೆ ಮತ್ತು ಹಿಂದೆ ಸಾಕ್ಷಿಕೊಡಲು ಹೆಚ್ಚು ಕಷ್ಟಕರವಾಗಿದ್ದ ಕ್ಷೇತ್ರಗಳಲ್ಲಿ ಕುರಿಸದೃಶ್ಯರಿಗೆ ಸಹಾಯ ಮಾಡುತ್ತಾ ಇರುವಂತೆ ನಾವು ಪ್ರಾರ್ಥಿಸಬೇಕು.
ಕೃತಜ್ಞತೆ ತೋರಿಸಿರಿ
11 ನಾವು ಅತಿಯಾಗಿ ಆನಂದಿಸುತ್ತಿರುವ ವಿಫುಲ ಆತ್ಮಿಕ ಒದಗಿಸುವಿಕೆಗಾಗಿ ನಾವೆಷ್ಟು ಕೃತಜ್ಞರು! ಇದಕ್ಕಾಗಿ ನಾವು ಯೆಹೋವನಿಗೆ ಉಪಕಾರ ಹೇಳ ಬಯಸಬೇಕು ಮತ್ತು ಆತನ ಆಶೀರ್ವಾದವು ನಂಬಿಗಸ್ತ ಆಳಿನ ಮೇಲೆ ಮತ್ತು ಅವನ ಆಡಳಿತಾ ಮಂಡಲಿಯ ಮೇಲೆ ಸದಾ ಇರುವಂತೆಯೂ ನಾವು ಪ್ರಾರ್ಥಿಸುತ್ತೇವೆ. ನಮ್ಮ ಪರವಾಗಿ ಮತ್ತು ಭೂಸುತ್ತಲೂ ಇರುವ ಕುರಿಸದೃಶ್ಯರ ಪರವಾಗಿ ಅವರ ದೀನ, ಅವಿಶ್ರಾಂತ ಪ್ರಯತ್ನಗಳು ಅತಿಯಾಗಿ ಗಣ್ಯಮಾಡಲ್ಪಡುತ್ತದೆ.
12 ರಾಜ್ಯದ ಬೀಜಗಳನ್ನು ಹಾಕುವಲ್ಲಿ ಪ್ರಚಂಡ ಪ್ರಮಾಣದಲ್ಲಿ ಸಾಹಿತ್ಯವನ್ನು ನೀಡಲಾಗಿರುತ್ತದೆ. (ಮತ್ತಾ. 13:3-8, 18-23) ಆದರೂ, ಬೈಬಲ್ ಮತ್ತು ಬೈಬಲ್ ಸಾಹಿತ್ಯಗಳಿಗಾಗಿ ಬೇಡಿಕೆಯು ಮುಂದರಿಯುತ್ತಾ ಇದೆ. ಪುನಃ ಸಂದರ್ಶನೆ ಮತ್ತು ಬೈಬಲಭ್ಯಾಸದ ರೂಪದಲ್ಲಿ ಮಹಾ ಪ್ರಮಾಣದ ಬೆಳೆಸುವಿಕೆ ಮತ್ತು ನೀರು ಹಾಕುವಿಕೆ ನಡಿಸಲ್ಪಟ್ಟಿದೆ ಎಂದು ಲೋಕ ವರದಿಯು ಸೂಚಿಸುತ್ತದೆ. ನಮ್ಮ ಶುಶ್ರೂಷೆಯ ಈ ಮಹತ್ವದ ಭಾಗದಲ್ಲಿ ನಾವು ನಮ್ಮ ಪಾಲನ್ನು ಮಾಡುತ್ತಾ ಮುಂದರಿದರೆ, ಅದನ್ನು ಬೆಳೆಯುವಂತೆ ಮಾಡುವ ಯೆಹೋವನ ಆಶೀರ್ವಾದಕ್ಕೆ ನಾವು ಕೃತಜ್ಞರು.—1 ಕೊರಿ. 3:6, 7.
ಇತರ ಅಗತ್ಯಗಳು
13 ಲೋಕದಲ್ಲಿದ್ದರೂ ಅದರ ಭಾಗವಾಗದೆ ಇರುವದರಿಂದ ಕ್ರೈಸ್ತರಿಗೆ ಪರೀಕ್ಷೆಗಳನ್ನು, ಸಂಕಷ್ಟಗಳನ್ನು ಎದುರಿಸುತ್ತಾ ಇರಲಿಕ್ಕಿದೆ. ಮತ್ತು ಈ ಕಡೇ ದಿನಗಳಲ್ಲಿ ಅದು ಇನ್ನೂ ಅಧಿಕವಾಗಲಿದೆ. ಕೆಲವರು ಈಗ ಹಿಂಸೆ ಅಥವಾ ಇತರ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದಾರೆ. ಇತರರು ಯುದ್ಧಛಿದ್ರಿತ ದೇಶಗಳಲ್ಲಿ ಕ್ರೈಸ್ತ ಚಟುವಟಿಕೆಗಳನ್ನು ನಡಿಸುತ್ತಾ ಇರಬೇಕಾಗಿದೆ. ನಮ್ಮ ಸಹೋದರರು ಭೂಕಂಪ, ಬಿರುಗಾಳಿ, ಚಂಡಮಾರುತಗಳ ವಿಪತ್ತನ್ನು ಅನುಭವಿಸಿದ್ದಾರೆ. ಇದು ಸಂಭವಿಸುವಾಗ, ಆ ಸ್ಥಳಗಳಲ್ಲಿರುವ ಸಹೋದರರಿಗಾಗಿ ನಾವು ಪ್ರಾರ್ಥಿಸಬೇಕು. (ಅಪೊ. 12:5; 2 ಕೊರಿ. 1:11 ಹೋಲಿಸಿ.) ಕೆಲವು ಸಾರಿ ನಮ್ಮ ಕಾರ್ಯದ ಮೇಲೆ ಹಾಕಿದ ನಿಷೇಧಗಳಿಗಾಗಿ, ನಮ್ಮ ಸಹೋದರರಿಗಾಗುವ ಹಿಂಸೆಗಾಗಿ ಅಥವಾ ರಾಜ್ಯಾಭಿರುಚಿಯನ್ನು ಪ್ರಭಾವಿಸುವ ಇತರ ವಿಷಯಗಳಿಗಾಗಿ ಮೇಲಧಿಕಾರಿಗಳನ್ನು ಗೋಚರಿಸುವದು ಯಾ ಅವರಿಗೆ ಪತ್ರ ಬರೆಯುವದು ಅವಶ್ಯವಾಗುತ್ತದೆ. ಅಂತಹ ಪರಿಸ್ಥಿತಿಗಳ ಕೆಳಗೆ ನಾವು ವೈಯಕ್ತಿಕವಾಗಿ ಸಾಧ್ಯವಾದದ್ದನ್ನು ಮಾಡುವೆವು ಮತ್ತು ನಮ್ಮ ಜತೆ ಸೇವಕರಿಗೆ ಅನುಗ್ರಹ ತೋರಿಸುವ ಪ್ರವೃತ್ತಿಯು ಅಧಿಕಾರಿಗಳಲ್ಲಿ ಉಂಟಾಗುವಂತೆ ನಾವು ಪ್ರಾರ್ಥನೆಯನ್ನು ಸಲ್ಲಿಸುವೆವು.—1 ತಿಮೊ. 2:1, 2.
14 ಸೈತಾನನ ಲೋಕದಲ್ಲಿ ಜೀವಿಸುವ ಕುಟುಂಬಗಳ ಮೇಲೆ ಅನೇಕ ಒತ್ತಡಗಳು ತರಲ್ಪಟ್ಟಿವೆ. (2 ಕೊರಿ. 4:4) ವಿವಾಹಿತ ದಂಪತಿಗಳು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾದೀತು. ದೈವಿಕ ಮಾರ್ಗದರ್ಶನೆಗಾಗಿ ಪ್ರಾರ್ಥಿಸುವಂತೆ ಅವರಿಗೆ ಉತ್ತೇಜನ ಕೊಡಬೇಕು, ಮತ್ತು ಅವರ ಪರವಾಗಿ ನಾವೂ ಪ್ರಾರ್ಥಿಸಬಹುದು. (1 ಕೊರಿ. 7:5; 1 ಪೇತ್ರ 3:7) ತಮ್ಮ ಮನೆವಾರ್ತೆಯನ್ನು ಚೆನ್ನಾಗಿ ಆಳುವಂತೆ ಮಾರ್ಗದರ್ಶನೆಗಾಗಿ ಕುಟುಂಬ ತಲೆಗಳು ಯಥಾರ್ಥವಾಗಿ ಪ್ರಾರ್ಥನೆ ಮಾಡುವದಾದರೆ ಯೆಹೋವನು ಅವರ ಪ್ರಾರ್ಥನೆಯನ್ನು ಕೇಳುವನೆಂಬದನ್ನು ಗಣ್ಯಮಾಡಬೇಕು. (ನ್ಯಾಯ. 13:8; ಫಿಲಿ. 4:6, 7) ಯುವಕರೂ ಹಾಗೂ ವಯಸ್ಕರೂ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಇದು ಶಾಲೆಯಲ್ಲಿ, ಐಹಿಕ ಉದ್ಯೋಗದಲ್ಲಿ, ಪ್ರಯಾಣದಲ್ಲಿ ಅಥವಾ ಬೇರೆ ಪರಿಸ್ಥಿತಿಗಳಲ್ಲಿ ನಡೆಯಬಹುದು. ಪ್ರಾರ್ಥನೆಯು ಈ ದುಷ್ಟ ಲೋಕದ ಆತ್ಮವನ್ನು ಎದುರಿಸಲು ಮತ್ತು ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯಾದದ್ದನ್ನು ನಡಿಸುತ್ತಾ, ಫಲಕೊಡುತ್ತಾ ಇರಲು ಸಹಾಯ ಮಾಡುತ್ತದೆ.—ಮತ್ತಾ. 6:13; ಎಫೆ. 6:13-18; 1 ಯೋಹಾ. 3:22.
15 ಯೆಹೋವನು ಪ್ರಾರ್ಥನೆಗೆ ಕಿವಿಗೊಡುವ ದೇವರು. (ಕೀರ್ತ. 65:2) ಆಗಿಂದಾಗ್ಯೆ ನಾವು ನಮ್ಮ ಚಿಂತಾಭಾರಗಳನ್ನು ಆತನ ಮೇಲೆ ಹಾಕುವ ಅಗತ್ಯವಿದೆ. (ಕೀರ್ತ. 55:22) ಎಲ್ಲಾ ರಾಜ್ಯಾಭಿರುಚಿಗಳಿಗಾಗಿ ಮತ್ತು ಎಲ್ಲೆಲ್ಲಿಯೂ ಇರುವ ನಮ್ಮ ಸಹೋದರರ ಕ್ಷೇಮಕ್ಕಾಗಿ ಪ್ರಾರ್ಥನೆಯ ಮೂಲಕ ನಮ್ಮ ಚಿಂತೆಯನ್ನು ತೋರಿಸುವ ಸಂದರ್ಭಗಳು ನಮಗಿವೆ. ಸಭೆಯಲ್ಲಿ ನಾಯಕತ್ವ ವಹಿಸುವವರ ಕೆಲಸವನ್ನು ಯೋಚಿಸುವಲ್ಲಿ, ಲೋಕವ್ಯಾಪಕ ವಿಸ್ತಾರ್ಯ ಕಾರ್ಯದ ಮಾರ್ಗದರ್ಶನೆ ಮಾಡುವವರ ಕೆಲಸವನ್ನು ಗಮನಿಸುವಲ್ಲಿ, ಆತ್ಮಿಕವಾಗಿ ಅಸ್ವಸ್ಥರಾಗಿರುವವರೊಂದಿಗೆ ವ್ಯವಹರಿಸುವಲ್ಲಿ ಅಥವಾ ಬೇರೆ ಚಿಕ್ಕ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ನಾವೆಲ್ಲರೂ ಇಂಥ ವಿಷಯಗಳನ್ನು ಯೆಹೋವನ ಮುಂದೆ ಪ್ರಾರ್ಥನೆಯಲ್ಲಿ ಇಡತಕ್ಕದ್ದು. (1 ಥೆಸ. 5:25; ಯಾಕೋ. 5:14-16) ಹೌದು, ನಮ್ಮ ಚಿಂತೆಗಳನ್ನು ಪೂರ್ಣ ವಿಶ್ವಾಸದಿಂದ ಯೆಹೋವನ ಮೇಲೆ ಹಾಕಬೇಕು, ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ನಾವೇನನ್ನು ಕೇಳಿದರೂ, ಆತನು ನಮಗೆ ಕಿವಿಗೊಡುವನು. (1 ಪೇತ್ರ 5:7; 1 ಯೋಹಾ. 5:14) ಹೀಗೆ ನಾವು ರಾಜ್ಯ ಸೇವೆಯಲ್ಲಿ ಆಸಕ್ತರಾಗಿರುತ್ತಾ, ತಾಳ್ಮೆಯಿಂದ ಫಲಕೊಡುತ್ತಾ ಇರುವಂತೆ ಸಹಾಯಮಾಡಲು ಸದಾ ಯೆಹೋವನೆಡೆಗೆ ನೋಡುತ್ತಿರೋಣ.