ಸುವಾರ್ತೆಯನ್ನು ನೀಡುವದು—ಬೀದಿ ಸಾಕ್ಷಿಕಾರ್ಯದ ಮೂಲಕ
1 ಜ್ಞಾನೋಕ್ತಿ 1:20 ಹೇಳುವುದು: “ಜ್ಞಾನವೆಂಬಾಕೆ ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ಧ್ವನಿಗೈಯುತ್ತಾಳೆ.” ಈ ಮಾತುಗಳು ಇಂದು ಯೆಹೋವನ ಸೇವಕರಲ್ಲಿ ಸತ್ಯವಾಗಿದೆ; ವಿಶೇಷವಾಗಿ, ತಾವು ಎಲ್ಲಿ ಜನರನ್ನು ಕಾಣುತ್ತಾರೋ ಅಲ್ಲಿ ಅವರು ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರುವಾಗಲೇ. ಯೇಸುವಿನಂತೆ ಮತ್ತು ಕ್ರೈಸ್ತ ಪೂರ್ವದ ಪ್ರವಾದಿಗಳಂತೆ ಜನರ ಕಡೆಗಿರುವ ನಮ್ಮ ನಿಜ ಪ್ರೀತಿಯು, ಎಲ್ಲಾ ಕಡೆಗಳಲ್ಲಿ, ಎಲ್ಲಾ ಜನರಿಗೆ ಸತ್ಯವನ್ನು ನೀಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.—ಯೆರೆ. 11:6; ಮಾರ್ಕ 6:56; ಲೂಕ 13:22, 26.
2 ಒಬ್ಬನೊಂದಿಗೆ ಸತ್ಯದ ಕುರಿತು ಮಾತಾಡಲು ಸಾಮಾನ್ಯವಾಗಿ ಅವನ ಮನೆಯು ಅತ್ಯಂತ ಅಪೇಕ್ಷಣೀಯವಾದ ಸ್ಥಳವಾಗಿದ್ದರೂ, ನಾವು ಮನೆ ಮನೆಯ ಸಂದರ್ಶನೆ ಮಾಡುವಾಗ ಅನೇಕ ಜನರು ಮನೆಯಲ್ಲಿರುವುದಿಲ್ಲ. ಮನೆಯವರು ಮನೆಯಲ್ಲಿರುವಾಗ ಹೆಚ್ಚಾಗಿ, ನಾವು ಹಿಂದೆ ಮಾತಾಡಿದ್ದ ಅದೇ ವ್ಯಕ್ತಿ ಮನೆ ಬಾಗಲಿಗೆ ಬರುತ್ತಾರೆ, ಕುಟುಂಬದ ಬೇರೆ ಸದಸ್ಯರು ಸಿಗುವುದಿಲ್ಲ. ಆದ್ದರಿಂದ, ಬೀದಿ ಸಾಕ್ಷಿಗೆ ನಮ್ಮ ಶುಶ್ರೂಷೆಯಲ್ಲಿ ನಿಶ್ಚಿತ ಸ್ಥಾನವು ಇರಬೇಕು. ಬೀದಿ ಸಾಕ್ಷಿಯು, ಒಬ್ಬ ಪಯನೀಯರನು ಹೇಳಿದಂತೆ, “ಉದ್ರೇಕಿಸುವ, ಹೊಸತಾದ, ಮತ್ತು ಮನೆಯಲ್ಲಿ-ಇರುವ ಟೆರಿಟೆರಿಯಾಗಿ” ಇರುವುದನ್ನು ನೀವು ಕಾಣುವಿರಿ.
ಬೆಚ್ಚಗೆನ ಸಕಾರಾತ್ಮಕ ಭಾವ
3 ಒಂದೇ ಕ್ಷೇತ್ರದಲ್ಲಿ ಕ್ರಮವಾಗಿ ಬೀದಿ ಸಾಕ್ಷಿ ಮಾಡುವುದನ್ನು ಏಕೆ ಪ್ರಯತ್ನಿಸಿ ನೋಡಬಾರದು? ಇದನ್ನು ಮಾಡುವ ಒಬ್ಬಾಕೆ ಸಹೋದರಿ “ತನ್ನ” ಬೀದಿಯಲ್ಲಿರುವ ಹೆಚ್ಚಿನ ಅಂಗಡಿಗಾರರ ಮತ್ತು ಬೇರೆ ಜನರ ಒಳ್ಳೇ ಪರಿಚಯ ತನಗಾಗಿದೆ ಎನ್ನುತ್ತಾಳೆ. ಒಂದು ಒಳ್ಳೇ ಸಂಬಂಧವು ಬೆಳೆದು ಬಂದಿದೆ ಮತ್ತು ಇದು ಅನೇಕ ಫಲದಾಯಕ ಬೈಬಲ್ ಚರ್ಚೆಗಳಿಗೆ ದಾರಿತೆರೆದಿದೆ. ಬೀದಿ ಸಾಕ್ಷಿಯಲ್ಲಿ ಪೂರಾ ಆನಂದಿಸುವ ಒಬ್ಬ ಸಹಾಯಕ ಪಯನೀಯರನು ತಾನು ಅಂಗಡಿಗಳನ್ನು ನೋಡುತ್ತಾ ಇರುವವರನ್ನು, ಕಾರ್ಗಳಲ್ಲಿ ಕೂತಿರುವರನ್ನು, ಬಸ್ಸ್ಗಳಿಗಾಗಿ ಕಾಯುತ್ತಿರುವವರನ್ನು ಮತ್ತು ಹಿಂದಿನ ಸಂದರ್ಭಗಳಲ್ಲಿ ಬೇಡವೆಂದು ಹೇಳಿದವರನ್ನೂ ಗೋಚರಿಸ ಪ್ರಯತ್ನಿಸುತ್ತೇನೆ ಅನ್ನುತ್ತಾನೆ. ಹೆದರದೆ ಒಡಂಬಡಿಸಬೇಕಾದರೆ ಧೈರ್ಯ ಮತ್ತು ಒಳ್ಳೇ ತೀರ್ಮಾನ ಬೇಕು, ಆದರೂ ಅತಿರೇಕವಾಗಿ ಒತ್ತಾಯಿಸಬಾರದು.
4 ಪರಿಣಾಮಕಾರಿ ಬೀದಿ ಸಾಕ್ಷಿಯ ಕೀಲಿಕೈ ಒಂದು ಬೆಚ್ಚಗೆನ, ಉಲ್ಲಾಸಭರಿತ ಮತ್ತು ಪ್ರಾಮಾಣಿಕ ಗೋಚರವೇ ಆಗಿದೆ. ನಸುನಗೆಯಿರಲಿ. ಸಾಧ್ಯವಾದರೆ ವ್ಯಕ್ತಿಯ ನೋಟವನ್ನು ಹಿಡಿಯಿರಿ, ಇಲ್ಲವಾದರೆ, ಮುಂದರಿದು ಒಂದು ಸ್ನೇಹಪರ ಗೋಚರವನ್ನು ಮಾಡಿರಿ. ಪರಿಸ್ಧಿತಿಗಳನ್ನು ಅವಲೋಕಿಸಿ, ಅವುಗಳ ಉಪಯೋಗವನ್ನು ಮಾಡಿರಿ. ಜೀನಸುಗಳ ಚೀಲಗಳನ್ನು ಎತ್ತಿಕೊಂಡು ಹೋಗುತ್ತಿರುವ ಮಹಿಳೆಯರನ್ನು ಒಬ್ಬ ಸಹೋದರಿ ಅವಲೋಕಿಸುತ್ತಾ, ಅನ್ನುವುದು: “ಆಹಾರ ಪದಾರ್ಥಗಳನ್ನು ಖರೀದಿಸಿದ್ದೀರೆಂತ ಕಾಣುತ್ತದೆ. ಈ ದಿನಗಳಲ್ಲಿ ಅದರ ಬೆಲೆ ಬಹಳ ನಿಶ್ಚಯ. ಆದರೆ ನಿಮ್ಮ ಮನಸ್ಸು ಮತ್ತು ಹೃದಯಕ್ಕಾಗಿ ತುಸು ಉತ್ತೇಜಕವಾದ ಆಹಾರದ ಕುರಿತೇನು? ನಾನೀ ಲೇಖನವನ್ನು ಆನಂದಿಸಿದೆ. . . .” ಮಕ್ಕಳಿರುವ ಬೇರೆಯವರಿಗೆ ಅವಳನ್ನುವುದು: “ನಿಮಗಿಬ್ಬರು ಚೆಲೋ ಮಕ್ಕಳಿದ್ದಾರೆಂತ ತೋರುತ್ತದೆ. ಮಕ್ಕಳು ದೇವರಿಂದ ದೊರೆತ ಆಶೀರ್ವಾದವೆಂದು ನಿಮಗೆ ಗೊತ್ತೋ? ಇಲ್ಲಿ ತುಸು ನೋಡಿರಿ. . . ” ಆಳವಾದ ಯೋಚನೆಯಲ್ಲಿರುವ ಜನರನ್ನು ಗೋಚರಿಸುತ್ತಾ, ಅವಳನ್ನುವುದು: “ನೀವೇನನ್ನೋ ಕುರಿತು ಯೋಚಿಸುತ್ತೀರೆಂತ ಕಾಣುತ್ತದೆ. ಈ ಲೋಕವಿಂದು ತೊಂದರೆಗಳಿಂದ ತುಂಬಿಹೋಗಿದೆ, ಅಲ್ಲವೇ? ಒಂದು ಒಳ್ಳೆಯ ಸಮಯವೆಂದಾದರೂ ಬರುವುದೆಂದು ನೀವು ನೆನಸುತ್ತೀರೋ . . .?”
5 ಒಬ್ಬನು ದಾರಿಯಲ್ಲಿ ವೇಗವಾಗಿ ನಡಿಯುತ್ತಾನಾದರೆ, ಒಂದು ಟ್ರೇಕ್ಟನ್ನು ಅವನ ಕೈಯಲ್ಲಿಟ್ಟು, ಹೀಗನ್ನಿ: “ನಿಮಗೆ ಬಿಡುವಾದಾಗ ಓದಲು ಒಂದು ಸುವಾರ್ತೆ ಇಲ್ಲಿದೆ, ತಕ್ಕೊಳ್ಳಿ.” ಜನರು ಅವಸರದಲ್ಲಿದ್ದವೆಂತ ಕಂಡರೆ, ಪತ್ರಿಕೆಗಳನ್ನು ನೀಡಿರಿ ಮತ್ತು ಅವು ಚಂದಾ ಮೂಲಕವಾಗಿ ಸಿಗುತ್ತವೆಂದು ಹೇಳಿ, ಚಂದಾ ದರ ತಿಳಿಸಿರಿ. ಸಾಧ್ಯವಾದಾಗಲೆಲ್ಲಾ ಜನರ ಕೈಯಲ್ಲಿ ಸಾಹಿತ್ಯವನ್ನು ಕೊಡುವುದು ಒಳ್ಳೆಯದು.
6 ಬೀದಿ ಸಾಕ್ಷಿಯ ಕುರಿತು ಮೊದಮೊದಲು ಹೆದರುತ್ತಿದ್ದ ಅನೇಕ ಪ್ರಚಾರಕರು ಈಗ ಅದನ್ನು ತಮ್ಮ ಅಚ್ಚುಮೆಚ್ಚಿನ ಸಾರುವ ವಿಧಾನವಾಗಿ ನೋಡುತ್ತಾರೆ. ಆದರೆ ಅಪಾಯಕರ ಕ್ಷೇತ್ರಗಳಲ್ಲಿ ಕೆಲಸಮಾಡುವಾಗ ಅಥವಾ ಅಸುರಕ್ಷಿತವಾದ ಸಮಯಗಳಲ್ಲಿ ಜಾಗ್ರತೆಯನ್ನು ವಹಿಸಬೇಕು ನಿಶ್ಚಯ. ಚಿಕ್ಕ ಊರುಗಳಲ್ಲಿಯೂ ಸಾಮಾನ್ಯವಾಗಿ ಕಾರ್ಯಮಗ್ನ ಸ್ಥಳಗಳಿವೆ. ಸಾರ್ವಜನಿಕ ವಾಹನಸೌಕರ್ಯ ಕೇಂದ್ರಗಳಲ್ಲಿ ಅಥವಾ ಕಾರ್ ಪಾರ್ಕಿಂಗ್ಗಳಲ್ಲಿ ಜನರನ್ನು ಸುವಾರ್ತೆಯಿಂದ ಗೋಚರಿಸ ಸಾಧ್ಯವಿದೆ. ಸಂದರ್ಭವನ್ನು ಬಿಡದೆ ಹಿಡಿಯಿರಿ ಮತ್ತು ಕೇಳುವವರ ಆಶೀರ್ವಾದಕ್ಕಾಗಿ ಮತ್ತು ಯೆಹೋವನ ಗೌರವಕ್ಕಾಗಿ, ನಿಮ್ಮ ಧ್ವನಿಯು ಜ್ಞಾನದೊಂದಿಗೆ ಬೀದಿಗಳಲ್ಲಿ ಮತ್ತು ಪೇಟೆ ಚೌಕಗಳಲ್ಲಿ ಕೇಳಿಬರಲಿ.—ಜ್ಞಾನೋ. 1:20.