ಪ್ರಶ್ನಾ ಪೆಟ್ಟಿಗೆ
● ನಾವು ನಮ್ಮ ಸಾಹಿತ್ಯವನ್ನು ಸದುಪಯೋಗಕ್ಕೆ ಹಾಕಲು ಬಯಸುತ್ತೇವಾದ್ದರಿಂದ, ಬೀದಿ ಸಾಕ್ಷಿಯಲ್ಲಿ ಪುಸ್ತಕ ನೀಡುವಾಗ ಯಾವ ವಿಧಾನವು ಅತ್ಯಂತ ಸಹಾಯಕಾರಿಯು?
ನಾವು ಬೀದಿ ಸಾಕ್ಷಿ ಕೊಡುವಾಗ, ಪತ್ರಿಕೆಗಳನ್ನು ಅಥವಾ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಜನರನ್ನು ಗೋಚರಿಸುವದು ಅತಿ ತಕ್ಕದಾಗಿದೆ. ನಮ್ಮ ಗುರಿಯು ಜನರೊಂದಿಗೆ ಸಂಭಾಷಣೆ ಮಾಡಲು ಪ್ರಯತ್ನಿಸುವದೇ ಆಗಿರಬೇಕು. ಆ ಮೂಲಕ ನಾವು ಸಂಪರ್ಕಿಸಿದ ವ್ಯಕ್ತಿಗೆ ಅಭಿರುಚಿ ಇದೆಯೋ ಇಲ್ಲವೋ ಮತ್ತು ಅವನು ನಮ್ಮ ಪತ್ರಿಕೆಗಳನ್ನು ಓದಲು ಒಪ್ಪುವನೋ ಇಲ್ಲವೋ ಎಂದು ನಾವು ನಿರ್ಧರಿಸಬಲ್ಲೆವು. ಪತ್ರಿಕೆಯ ಒಂದು ಲೇಖನವನ್ನು ಸಂಕ್ಷೇಪವಾಗಿ ಚರ್ಚಿಸಲು ಸಾಧ್ಯವಾದರೆ, ಅದು ಉತ್ತಮವೇ. ನಮ್ಮ ಕಾರ್ಯವು ಸ್ವಯಂಸೇವಕರಿಂದ ಮಾಡಲ್ಪಡುತ್ತದೆ, ವ್ಯಾಪಾರದ ಕಸುಬಲ್ಲ ಎಂದು ವಿವರಿಸಲೂ ಶಕ್ಯವಾದೀತು. ಕೆಲವು ಸಂದರ್ಭಗಳಲ್ಲಿ, ಪತ್ರಿಕೆಯ ವಿಷಯಗಳನ್ನು ಮತ್ತು ಅದರ ಪ್ರಯೋಜನವನ್ನು ತಿಳಿಸುತ್ತಾ ಹೋಗಲು ಆ ವ್ಯಕ್ತಿಯೊಂದಿಗೆ ನಡೆಯಬೇಕಾದೀತು.
ಆದರೂ, ನಾವು ವಿವೇಚನೆಯುಳ್ಳವರೂ ಪರಿಗಣನೆ ತೋರಿಸುವವರೂ ಆಗಿರಬೇಕು. ದಾರಿಯಲ್ಲಿ ನಮಗೆ ಸಿಗುವ ಜನರು ಎಷ್ಟು ಅವಸರದಿಂದ ಧಾವಿಸುತ್ತಾರೆಂದರೆ ಅವರ ಅಭಿರುಚಿಯನ್ನು ಕಂಡುಹಿಡಿಯಲು ಒಂದುವೇಳೆ ನಮಗೆ ಕಷ್ಟವಾದೀತು. ಅಂಥ ಸಂದರ್ಭಗಳಲ್ಲಿ, ಕೇವಲ ಒಂದು ಟ್ರೇಕ್ಟನ್ನು ನೀಡಿ ನಮ್ಮ ಹೆಚ್ಚಿನ ಸಾಹಿತ್ಯಕ್ಕಾಗಿ ಅವರ ಅಭಿರುಚಿಯನ್ನು ಎಬ್ಬಿಸುವದು ಮತ್ತು ಇನ್ನೊಮ್ಮೆ ಅವರು ಭೇಟಿಯಾಗುವಾಗ ಪುಸ್ತಕ ನೀಡಿ, ಚರ್ಚೆ ಮಾಡಲು ನಿಲ್ಲುವದು ಒಳ್ಳೆಯದು.
ಒಂದು ನಿರ್ದಿಷ್ಟ ಸ್ಥಳದಲ್ಲಿಯೇ ನಿಂತು ಕೆಲವು ಸಮಯ ಬೀದಿ ಕಾರ್ಯ ಮಾಡುವ ಮೂಲಕ ಜನರಿಗೆ ನಮ್ಮ ಪರಿಚಯವಾಗುತ್ತದೆ ಮತ್ತು ಸಂದರ್ಭ ಸಿಗುವಾಗ ನಮ್ಮೊಂದಿಗೆ ಮಾತಾಡಲು ಅವರು ಸಂತೋಷ ಪಡುವರು, ಹೀಗೆ ಅವರ ಅಭಿರುಚಿಯನ್ನು ನಿರ್ಧರಿಸಲು ನಮಗೆ ಸಾಕಷ್ಟು ಸಮಯ ಸಿಗುವದು.
ನಾವು ನಮ್ಮ ಸಾಹಿತ್ಯವನ್ನು ವಿವೇಕದಿಂದ ಉಪಯೋಗಿಸ ಬಯಸುತ್ತೇವೆ. ಆದ್ದರಿಂದ, ಅವನ್ನು ನೀಡಲು ತಕ್ಕದಾದ ಸಮಯವನ್ನು ಆರಿಸಲು ನಾವು ಪ್ರಯತ್ನ ಮಾಡಬೇಕು. ಹೀಗೆ ಮಾಡುವ ಮೂಲಕ ಅಭಿರುಚಿಯನ್ನು ಪುನಃಸಂದರ್ಶಿಸಲು ಏರ್ಪಡಿಸಬಹುದು ಮತ್ತು ನಮ್ಮ ಕಾರ್ಯವಿಧಾನವನ್ನು ವಿವರಿಸಲು ಸಮಯ ಸಿಗುವದು.