ನಮ್ಮ ಸಾಹಿತ್ಯವನ್ನು ವಿವೇಕಯುತವಾಗಿ ಉಪಯೋಗಿಸೋಣ
1 ಸಾಹಿತ್ಯದ ನಮ್ಮ ವ್ಯವಸ್ಥಿತ ಉಪಯೋಗವು ವಾಚ್ಟವರ್ ಪತ್ರಿಕೆಯ ಜುಲೈ 1, 1879ರ ಸಂಚಿಕೆಯ 6,000 ಪ್ರತಿಗಳ ವಿತರಣೆಯೊಂದಿಗೆ ಆರಂಭವಾಯಿತು. ಅಂದಿನಿಂದ, ವಿಭಿನ್ನ ರೀತಿಯ ಸಾಹಿತ್ಯ ಐಟಮ್ಗಳು ಬೃಹತ್ ಪ್ರಮಾಣದಲ್ಲಿ ಮುದ್ರಿಸಲ್ಪಟ್ಟಿವೆ ಮತ್ತು ವಿತರಿಸಲ್ಪಟ್ಟಿವೆ.
ಸಾಹಿತ್ಯವನ್ನು ವಿತರಿಸುವ ಸರಳೀಕೃತ ಏರ್ಪಾಡು
2 ನವೆಂಬರ್ 1999ರ ಮಧ್ಯಭಾಗದಲ್ಲಿ, ಪತ್ರಿಕೆಗಳನ್ನು ಮತ್ತು ಸಾಹಿತ್ಯಗಳನ್ನು ಪ್ರಚಾರಕರಿಗೆ ಮತ್ತು ಆಸಕ್ತ ವ್ಯಕ್ತಿಗಳಿಗೆ, ಸಾಹಿತ್ಯವನ್ನು ವಿತರಿಸುವ ಸರಳೀಕೃತ ಏರ್ಪಾಡಿಗನುಸಾರ ಕೊಡಲಾಗುವುದು, ಅಂದರೆ ಒಂದು ಐಟಮ್ ಅನ್ನು ಪಡೆದುಕೊಳ್ಳಲು ನಿರ್ದಿಷ್ಟ ವಂತಿಗೆಯನ್ನು ಕೇಳುವ ಅಥವಾ ಸೂಚಿಸುವ ಅಗತ್ಯವಿಲ್ಲವೆಂಬುದನ್ನು ವಿವರಿಸಲಾಗಿತ್ತು. ಸಾಹಿತ್ಯವು ನೀಡಲ್ಪಟ್ಟಾಗ, ಸುವಾರ್ತೆಯನ್ನು ಪ್ರಚುರಪಡಿಸುವ ಲೋಕವ್ಯಾಪಕ ಕೆಲಸವನ್ನು ಬೆಂಬಲಿಸಲು ಸ್ವ-ಇಚ್ಛೆಯಿಂದ ಮಾಡಲಾಗುವ ದಾನಗಳನ್ನು ಸ್ವೀಕರಿಸಲಾಗುವುದು. ಯೆಹೋವನು ಈ ಏರ್ಪಾಡನ್ನು ಆಶೀರ್ವದಿಸುವನೆಂಬ ನಂಬಿಕೆಯು ನಮಗಿದೆ.—ಮತ್ತಾಯ 6:33ನ್ನು ಹೋಲಿಸಿರಿ.
ಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಭಾಯಿಸುವುದು
3 ಆಸಕ್ತಿಯನ್ನು ಕೆರಳಿಸುವ ಉದ್ದೇಶದಿಂದ ನಾವು ಸುವಾರ್ತೆಯ ಸಾದರಪಡಿಸುವಿಕೆಯನ್ನು ಮುಂದುವರಿಸುವೆವು. ಆಸಕ್ತಿಯು ತೋರಿಸಲ್ಪಡದಿದ್ದಲ್ಲಿ, ಸಾಹಿತ್ಯವನ್ನು ನೀಡುವ ಅಗತ್ಯವಿರುವುದಿಲ್ಲ. ಆಸಕ್ತಿ ತೋರಿಸದಿರುವವರಿಗೆ ನಮ್ಮ ಸಾಹಿತ್ಯವನ್ನು ನೀಡುವ ಮೂಲಕ ನಾವದನ್ನು ಹಾಳುಮಾಡಲು ಬಯಸುವುದಿಲ್ಲ. ಇನ್ನೊಂದು ಕಡೆಯಲ್ಲಿ, ಆಸಕ್ತಿಯು ತೋರಿಸಲ್ಪಡುವಲ್ಲಿ ಮತ್ತು ಮನೆಯವನು ಸಾಹಿತ್ಯವನ್ನು ಓದಲು ಒಪ್ಪುವುದಾದರೆ, ನಾವು ಅದನ್ನು ನೀಡಬಹುದು. ನಾವು ನಮ್ಮ ಸಾಹಿತ್ಯವನ್ನು ವಿವೇಕಯುತವಾಗಿ ಉಪಯೋಗಿಸಲು ಬಯಸುತ್ತೇವೆ.
4 ಸಾಹಿತ್ಯವನ್ನು ತೋರಿಸಿದ ನಂತರ ನೀವು ಈ ಕೆಳಗಿನ ಕೆಲವು ಹೇಳಿಕೆಗಳನ್ನು ಮಾಡಬಹುದು: “ಈ ಪ್ರಕಾಶನವನ್ನು ಓದಲು ನೀವು ಬಯಸುವುದಾದರೆ, ನಾನು ಅದನ್ನು ನಿಮ್ಮಲ್ಲಿ ಬಿಟ್ಟುಹೋಗಲು ಸಂತೋಷಿಸುತ್ತೇನೆ.” ಆಗ ಪ್ರಾಯಶಃ ಮನೆಯವನು ಹೀಗೆ ಕೇಳಬಹುದು: “ಇದರ ಬೆಲೆ ಎಷ್ಟು?” ನೀವು ಹೀಗೆ ಉತ್ತರಿಸಬಹುದು: “ನಾವು ವ್ಯಾಪಾರ ಕೆಲಸದಲ್ಲಿ ತೊಡಗಿಲ್ಲ. ನಾವು ಈ ಸಾಹಿತ್ಯವನ್ನು ಮಾರುವುದಿಲ್ಲ. ನಿತ್ಯಜೀವಕ್ಕೆ ನಡೆಸುವ ಮಾರ್ಗವನ್ನು ಜನರು ಕಲಿತುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ನಾವು ಇಂದು ನಿಮ್ಮ ನೆರೆಹೊರೆಯಲ್ಲಿ ಮಾಡುತ್ತಿರುವ ಈ ಕೆಲಸವನ್ನು ಲೋಕದ ಸುತ್ತಲೂ 233 ದೇಶಗಳಲ್ಲಿ ಸ್ವ-ಇಚ್ಛೆಯಿಂದ ಮಾಡಲಾಗುತ್ತಿದೆ. ಈ ಕೆಲಸಕ್ಕಾಗಿ ನೀವು ದಾನವನ್ನು ಕೊಡಲು ಅಪೇಕ್ಷಿಸುವುದಾದರೆ, ನಾನು ಅದನ್ನು ಸ್ವೀಕರಿಸಲು ಹರ್ಷಿಸುತ್ತೇನೆ.”
5 ಪತ್ರಿಕೆಗಳನ್ನು ನೀಡುವಾಗ, ನಿರ್ದಿಷ್ಟ ಲೇಖನದ ಕುರಿತು ನೀವು ಪ್ರಶ್ನೆಗಳನ್ನು ಎಬ್ಬಿಸಬಹುದು ಮತ್ತು ಆಮೇಲೆ ಹೀಗನ್ನಬಹುದು: “ಈ ಲೇಖನದಲ್ಲಿರುವ ಅಂಶಗಳನ್ನು ನೀವು ಗಮನಿಸಬೇಕೆಂದು ನಾನು ಬಯಸುತ್ತೇನೆ. ಈ ಎರಡು ಪತ್ರಿಕೆಗಳನ್ನು ನೀವು ಓದಲು ಬಯಸುವುದಾದರೆ, ನಾನು ಅದನ್ನು ನಿಮ್ಮಲ್ಲಿ ಬಿಟ್ಟುಹೋಗಲು ಸಂತೋಷಿಸುವೆ.” ಅವು ಸ್ವೀಕರಿಸಲ್ಪಡುವುದಾದರೆ, ನೀವು ಹೀಗೆ ಕೂಡಿಸಿ ಹೇಳಬಹುದು: “ಈ ಮಾಹಿತಿಯನ್ನು ನಿಮಗೆ ಕೊಡಲು ನಾನು ಸಂತೋಷಿಸುತ್ತೇನೆ. ಈ ವಿಷಯವನ್ನು ನಿಜವಾಗಿಯೂ ಬೋಧಪ್ರದವಾಗಿ ಕಂಡುಕೊಳ್ಳುವಿರೆಂದು ನಾನು ನೆನಸುತ್ತೇನೆ. ವಾಸ್ತವದಲ್ಲಿ, ನಿಮ್ಮ ದೃಷ್ಟಿಕೋನವೇನೆಂಬುದನ್ನು ತಿಳಿದುಕೊಳ್ಳಲು ನಾನು ಪುನಃ ಒಮ್ಮೆ ಮುಂದಿನ ವಾರ ಹಿಂದಿರುಗಿ ಬರಲು ಬಯಸುತ್ತೇನೆ. ಕಾವಲಿನಬುರುಜು ಪತ್ರಿಕೆಯು 132 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟು, ಲೋಕದ ಸುತ್ತಲೂ 2,20,00,000ಕ್ಕಿಂತಲೂ ಹೆಚ್ಚಿನ ಪ್ರತಿಗಳು ವಿತರಿಸಲ್ಪಡುತ್ತವೆ. ಈ ಕೆಲಸವು ಸ್ವ-ಇಚ್ಛೆಯ ದಾನಗಳಿಂದ ಬೆಂಬಲಿಸಲ್ಪಡುತ್ತದೆ. ಈ ಶೈಕ್ಷಣಿಕ ಕೆಲಸಕ್ಕೆ ನೀವು ಸಹ ಚಿಕ್ಕ ದಾನವನ್ನು ಕೊಡಲು ಬಯಸುವುದಾದರೆ, ನಾವು ಅದನ್ನು ಸ್ವೀಕರಿಸಲು ಸಂತೋಷಿಸುತ್ತೇವೆ.”
6 ಕೆಲವೊಂದು ಸಂದರ್ಭಗಳಲ್ಲಿ, ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳ ಕುರಿತು ವಿವರಿಸುವುದು ಕಷ್ಟಕರವಾಗಿರಬಹುದು. ಉದಾಹರಣೆಗೆ, ಒಬ್ಬ ಆಸಕ್ತಿಯುಳ್ಳ ಮನೆಯವನು ಹೀಗೆ ಕೇಳಬಹುದು: “ನೀವು ಇದನ್ನು ಹೀಗೆಯೇ ಕೊಟ್ಟು ಹೋಗುತ್ತೀರೋ?” ನಾವು ಹೀಗೆ ಉತ್ತರಿಸಬಹುದು: “ನೀವು ಈ ಪ್ರಕಾಶನವನ್ನು ಓದಲು ಮತ್ತು ಅದನ್ನು ಇಟ್ಟುಕೊಳ್ಳಲು ಬಯಸುವುದಾದರೆ, ಹೌದು, ಇದು ನಿಮ್ಮದೇ ಆಗುತ್ತದೆ. ನಾವು ಮಾತಾಡಿದಂತಹ ವಿಷಯವನ್ನು ಚರ್ಚಿಸಲು ಮತ್ತು ನಮ್ಮ ಲೋಕವ್ಯಾಪಕ ಕೆಲಸದ ಕುರಿತು ಹೆಚ್ಚನ್ನು ತಿಳಿಯಪಡಿಸಲು ನಾನು ಮುಂದಿನ ವಾರ ನಿಮ್ಮಲ್ಲಿಗೆ ಬರಲು ಬಯಸುತ್ತೇನೆ.” ನಮ್ಮ ಕೆಲಸಕ್ಕೆ ಹೇಗೆ ಹಣಸಹಾಯ ನೀಡಲಾಗುತ್ತದೆಂಬುದನ್ನು ಮುಂದಿನ ಭೇಟಿಗಳಲ್ಲಿ ನೀವು ಮನೆಯವನಿಗೆ ತಿಳಿಸಬಹುದು.
7 ಅಥವಾ ಮನೆಯವನು ಸಾಹಿತ್ಯವನ್ನು ತಕ್ಷಣವೇ ಸ್ವೀಕರಿಸಬಹುದು ಮತ್ತು ಹೀಗನ್ನಬಹುದು, “ನಿಮಗೆ ಉಪಕಾರ.” ನೀವು ಹೀಗೆ ಹೇಳುವ ಮೂಲಕ ಅವರಿಗೆ ಉತ್ತರವನ್ನು ಕೊಡಬಹುದು: “ತುಂಬ ಸಂತೋಷ. ನೀವು ಅದನ್ನು ಓದುವುದರಲ್ಲಿ ಆನಂದಿಸುವಿರೆಂದು ನನಗೆ ಗೊತ್ತಿದೆ. ಈ ಕೆಲಸವು ಲೋಕವ್ಯಾಪಕವಾಗಿ ನಡೆಯುತ್ತಿರುವುದರಿಂದ ಇದಕ್ಕೆ ಎಲ್ಲಿಂದ ಹಣ ಸಿಗುತ್ತದೆಂಬುದರ ಕುರಿತು ಅನೇಕರು ಯೋಚಿಸುತ್ತಾರೆ. ನಮ್ಮ ಪ್ರಕಾಶನಗಳನ್ನು ಸ್ವೀಕರಿಸುವ ಅನೇಕರು ತಾವು ಕಲಿಯಲಿರುವ ವಿಷಯಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನ ವಿತರಣೆಯು ಸಾಧ್ಯವಾಗುವಂತೆ ಚಿಕ್ಕ ದಾನಗಳನ್ನು ಸ್ವ-ಇಚ್ಛೆಯಿಂದ ಕೊಡಲು ಮುಂದಾಗಿದ್ದಾರೆ. ಜನರು ಹಾಗೆ ಸ್ವ-ಇಚ್ಛೆಯಿಂದ ಕೊಡುವುದಾದರೆ, ನಾವದನ್ನು ಸಂತೋಷದಿಂದ ಸ್ವೀಕರಿಸುತ್ತೇವೆ.”
ನಿಜವಾದ ಆಸಕ್ತಿಯು ಇದೆಯೋ?
8 ಸಾಹಿತ್ಯವನ್ನು ಮನಬಂದಂತೆ ವಿತರಿಸುವುದು ನಮ್ಮ ಉದ್ದೇಶವಲ್ಲವೆಂಬುದು ಸ್ಪಷ್ಟ. ನಮ್ಮ ಸಾಹಿತ್ಯವು ತನ್ನ ಉದ್ದೇಶವನ್ನು ಪೂರೈಸಬೇಕೆಂದು ನಾವು ಬಯಸುತ್ತೇವೆ. ಆ ಉದ್ದೇಶವೇನೆಂದರೆ, ಪ್ರಾಮಾಣಿಕ ಹೃದಯದ ಜನರು ಯೆಹೋವನ ಅದ್ಭುತಕರವಾದ ಉದ್ದೇಶಗಳನ್ನು ಇನ್ನೂ ಹೆಚ್ಚಾಗಿ ಕಲಿತುಕೊಳ್ಳಲು ಸಹಾಯ ಮಾಡುವುದಾಗಿದೆ. ಆತ್ಮಿಕ ವಿಷಯಗಳಿಗೆ ಯಾವುದೇ ಗಣ್ಯತೆಯನ್ನು ತೋರಿಸದಿರುವ ವ್ಯಕ್ತಿಗಳೊಂದಿಗೆ ಸಾಹಿತ್ಯವನ್ನು ಬಿಟ್ಟುಬರುವುದು ವ್ಯರ್ಥವಾಗಿರಸಾಧ್ಯವಿದೆ. (ಇಬ್ರಿ. 12:16) ಸಾಹಿತ್ಯದ ಪರಿಣಾಮಕಾರಿ ವಿತರಣೆಯು, ನೈಜವಾದ ಆಸಕ್ತಿಯನ್ನು ಕಂಡುಕೊಳ್ಳುವ ನಿಮ್ಮ ಸಾಮರ್ಥ್ಯದ ಮೇಲೆ ಹೊಂದಿಕೊಂಡಿರುತ್ತದೆ. ಇಂತಹ ಆಸಕ್ತಿಯು ಹೇಗೆ ತೋರಿಸಲ್ಪಡಬಹುದು? ದಯಾಭರಿತವಾಗಿ ನಿಮ್ಮೊಂದಿಗೆ ಸಂಭಾಷಿಸಲಿಕ್ಕಾಗಿರುವ ಮನೆಯವನ ಸಿದ್ಧಮನಸ್ಸು ಒಂದು ಒಳ್ಳೆಯ ಸೂಚನೆಯಾಗಿದೆ. ಅಥವಾ ನೀವು ಮಾತನಾಡುವಾಗ ಗಮನವಿಟ್ಟು ಕೇಳಿಸಿಕೊಳ್ಳುವುದು, ಪ್ರಶ್ನೆಗಳಿಗೆ ಪ್ರತಿಕ್ರಿಯೆ ತೋರಿಸುವುದು ಮತ್ತು ಅಭಿಪ್ರಾಯವೊಂದನ್ನು ವ್ಯಕ್ತಪಡಿಸುವುದು ಚರ್ಚೆಯಲ್ಲಿ ಅವರು ಒಳಗೂಡಿದ್ದಾರೆಂಬುದನ್ನು ಸೂಚಿಸುತ್ತದೆ. ಗೌರವಭರಿತವಾಗಿ ಹಾಗೂ ಸ್ನೇಹಭಾವದಿಂದ ನಿಮ್ಮೊಂದಿಗೆ ಮಾತನಾಡುವುದು ದಯಾಭರಿತ ಪ್ರವೃತ್ತಿಯನ್ನು ಸೂಚಿಸುತ್ತದೆ. ಬೈಬಲಿನಿಂದ ನೀವು ಓದುವಾಗ ಅದನ್ನು ಆಲಿಸುವುದು ಸಹ ದೇವರ ವಾಕ್ಯಕ್ಕಾಗಿ ಅವರಿಗಿರುವ ಗೌರವವನ್ನು ತೋರಿಸುತ್ತದೆ. ಅನೇಕ ವೇಳೆ, ನೀಡಲಾಗುವ ಸಾಹಿತ್ಯವನ್ನು ಅವರು ಓದುವರೋ ಎಂದು ಕೇಳುವುದು ಸಹಾಯಕಾರಿಯಾಗಿರುವುದು. ಅಷ್ಟುಮಾತ್ರವಲ್ಲದೆ, ಸಂಭಾಷಣೆಯನ್ನು ಮುಂದುವರಿಸಲಿಕ್ಕಾಗಿ ನೀವು ಪುನಃ ಭೇಟಿ ನೀಡುವಿರೆಂದು ಕೂಡ ಅವರಿಗೆ ತಿಳಿಸಬಹುದು. ಒಂದು ಸಕಾರಾತ್ಮಕ ಪ್ರತಿಕ್ರಿಯೆಯು ಅವರ ಆಸಕ್ತಿಯನ್ನು ತೋರಿಸುವ ಹೆಚ್ಚಿನ ಸಾಕ್ಷ್ಯವಾಗಿದೆ. ನಿಜವಾದ ಆಸಕ್ತಿಯ ಇಂತಹ ಸಾಕ್ಷ್ಯಗಳನ್ನು ನೀವು ಗಮನಿಸುವಾಗ, ಆ ವ್ಯಕ್ತಿಯು ಪಡೆದುಕೊಳ್ಳುವ ಯಾವುದೇ ಸಾಹಿತ್ಯದ ಉತ್ತಮ ಉಪಯೋಗವನ್ನು ಮಾಡುವನೆಂಬ ಖಾತ್ರಿ ನಿಮಗಿರಬಹುದು.
9 ನಮ್ಮ ಕೆಲಸದ ವಿಧಾನದಲ್ಲಿ ಮಾಡಲಾಗಿರುವ ಈ ಹೊಂದಾಣಿಕೆಯು, “ನಾವು ದೇವರ ವಾಕ್ಯವನ್ನು ಕಲೆಬೆರಿಕೆಮಾಡು”ವವರಲ್ಲ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯವನ್ನು ಕೊಡುತ್ತದೆ. (2 ಕೊರಿಂ. 2:17) ನಾವು ಲೋಕದಿಂದ ಭಿನ್ನರಾಗಿದ್ದೇವೆಂಬುದನ್ನು ಸಹ ಇದು ತೋರಿಸುತ್ತದೆ.—ಯೋಹಾ. 17:14.
10 ಮಹಾ ಬಾಬೆಲಿನ ನಾಶನವು ಸಮೀಪಿಸುತ್ತಿರುವಂತೆಯೇ, ಎಲ್ಲ ಧಾರ್ಮಿಕ ಘಟಕಾಂಶಗಳ ವಿರುದ್ಧ ಒತ್ತಡಗಳು ಹೆಚ್ಚಾಗುತ್ತಾ ಇರುತ್ತವೆ. ಅತಿ ಪ್ರಾಮುಖ್ಯ ರಾಜ್ಯ ಸಾರುವಿಕೆಯ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿದು, ಇನ್ನೂ ಅನೇಕರನ್ನು ರಕ್ಷಣೆಯ ದಾರಿಗೆ ತರುವುದು ನಮ್ಮ ಮುಖ್ಯ ಚಿಂತೆಯಾಗಿದೆ.—ಮತ್ತಾ. 24:14; ರೋಮಾ. 10:13, 14.