ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ
ಭಾಗ 2: ಉತ್ಸಾಹವನ್ನು ಕಟ್ಟುವುದು
1 ಒಂದು ಚಟುವಟಿಕೆಯನ್ನು ನಾವು ಆನಂದಿಸುವಾಗ ಅದರಲ್ಲಿ ಅತ್ಯುತ್ಸಾಹದಿಂದಿರುವುದು ಹೆಚ್ಚು ಸುಲಭ. ಒಬ್ಬನು ಯಾವದಕ್ಕಾಗಿ ತಯಾರಿಸಿದ್ದಾನೋ ಅದನ್ನು ಮಾಡುವುದರಲ್ಲಿ ಅವನು ಸಂತೋಷ ಪಡುತ್ತಾನೆಂಬದೂ ಸಾಮಾನ್ಯವಾಗಿ ಸತ್ಯ. ನಮ್ಮ ಸೇವೆಯನ್ನು ಪೂರ್ಣವಾಗಿ ಪೂರೈಸುವದಲ್ಲಾದರೂ ಇದು ಖಂಡಿತವಾಗಿಯೂ ಖರೆ.—2 ತಿಮೊ. 4:5.
ತಯಾರಿಯು ಅತ್ಯಾವಶ್ಯಕ
2 ಕ್ಷೇತ್ರಸೇವೆಯಲ್ಲಿ ನಮ್ಮ ಉತ್ಸಾಹವು ನಾವು ಎಷ್ಟು ಚೆನ್ನಾಗಿ ತಯಾರಿಸಿದ್ದೇವೆ ಮತ್ತು ಎಷ್ಟು ಭಾರಿ ಸೇವೆಗೆ ಹೋಗುತ್ತೇವೆ ಎಂಬದಕ್ಕೆ ನೇರವಾಗಿ ಸಂಬಂಧಿಸಿದೆ. ಉದಾಹರಣೆಗೆ, ನಮ್ಮ ಮನೆ-ಮನೆಯ ಸೇವೆಯಲ್ಲಿ ನಮಗೆ ಸಿಗುವ ವ್ಯಕ್ತಿಯು ಮುಸ್ಲಿಮನಾಗಿದ್ದರೆ ನಾವೇನು ಹೇಳಬಹುದು? ಚೆನ್ನಾಗಿ ತಯಾರಿಸಿದ ಪ್ರಚಾರಕನು ಹೀಗನ್ನಬಹುದು: “ಇದು ಅಭಿರುಚಿಯ ಸಂಗತಿ. ನಾನು ಅನೇಕ ಮುಸ್ಲಿಮರೊಂದಿಗೆ ಮಾತಾಡಿದ್ದೇನೆ. ಈ ಕೈಪಿಡಿಯಲ್ಲಿ ನಿಮ್ಮ ಧರ್ಮದ ಕೆಲವು ಬೋಧನೆಗಳನ್ನು ನಾನು ಇತ್ತೀಚೆಗೆ ಓದಿದ್ದೇನೆ. [ರೀಸನಿಂಗ್ ಪುಸ್ತಕದ 23ನೇ ಪುಟಕ್ಕೆ ತಿರುಗಿರಿ.] ನೀವು ಯೇಸುವನ್ನು ಪ್ರವಾದಿಯಾಗಿ ನಂಬುತ್ತೀರಿ ಆದರೆ ಮಹಮ್ಮದನು ನಿಮಗೆ ಕೊನೆಯ ಮತ್ತು ಮಹಾ ಪ್ರವಾದಿಯೆಂದು ಅದು ಹೇಳುತ್ತದೆ. ಅದು ನಿಜವೂ? [ಪ್ರತಿಕ್ರಿಯೆಗೆ ಸಮಯ ಕೊಡಿ.] ಮೋಶೆಯು ಸಹಾ ನಿಜ ಪ್ರವಾದಿಯೆಂದು ನೀವು ನಂಬುತ್ತೀರೋ? [ಹೌದೆಂದು ಹೇಳುವ ಪ್ರತಿಕ್ರಿಯೆ ಇರಬಹುದು.] ದೇವರ ವೈಯಕ್ತಿಕ ನಾಮದ ಕುರಿತು ದೇವರು ತಾನೇ ಮೋಶೆಗೆ ಏನಂದನೆಂದು ಪವಿತ್ರ ಶಾಸ್ತ್ರದಿಂದ ನಾನು ನಿಮಗೆ ತೋರಿಸಲೋ?” ಅನಂತರ, ನೀವು ವಿಮೋಚನಕಾಂಡ 6:3ನ್ನು ಓದಬಹುದು. ಈ ರೀತಿಯಲ್ಲಿ ನೀವು ಒಂದು ಆಸಕ್ತಿಯುಳ್ಳ ಸಂಭಾಷಣೆಯನ್ನು ಆರಂಭಿಸಬಹುದು.
3 ವಿಶಿಷ್ಟ ಪುಟಗಳ ನಂಬ್ರವನ್ನು ನೆನಪಿಡುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟ. ಆದರೆ ತುಸು ತಯಾರಿ ಮತ್ತು ಪ್ರ್ಯಾಕ್ಟಿಸ್ನಿಂದ, ನಾವು ರೀಸನಿಂಗ್ ಪುಸ್ತಕದ ಆರಂಭದಲ್ಲಿರುವ “ಸಂಭಾಷಣಾ ತಡೆಗಟ್ಟು” ವಿಭಾಗವನ್ನು ಉಪಯೋಗಿಸಬಹುದು. ಒಂದು ವಿಶಿಷ್ಟ ಧರ್ಮದಿಂದ ತಮ್ಮನ್ನು ಗುರುತುಪಡಿಸುವ ಜನರಿಗೆ ಪ್ರತಿವರ್ತನೆ ತೋರಿಸುವ ವಿಧಾನವನ್ನು ತಿಳಿಸುವ ಹಲವಾರು ಪುಟಗಳ ಸಮಾಚಾರವು ಅದರಲ್ಲಿ ಇದೆ.
4 ರೀಸನಿಂಗ್ ಪುಸ್ತಕದಲ್ಲಿ ಅತ್ಯುತ್ತಮ ಪೀಠಿಕೆಗಳ ಒಂದು ವಿಭಾಗವೂ ಇದೆ. ನಿಮ್ಮ ಪೀಠಿಕೆಗಳ ಇದಕ್ಕನುಸಾರವಾಗಿ ಏಕೆ ಹೆಣೆಯಬಾರದು? ನಮ್ಮ ಪ್ರಸಂಗವನ್ನು ಪರಿಸ್ಥಿತಿಗನುಸಾರ ಹೆಣೆಯುವಂತೆ ನಮಗದು ಸಹಾಯ ಮಾಡುವದು. ರೀಸನಿಂಗ್ ಪುಸ್ತಕದ ಅನೇಕ ವಿಷಯಗಳ ಕೊನೆಯಲ್ಲಿ, “ಯಾರಾದರೂ ಹೀಗೆ ಕೇಳಿದರೆ?” ಎಂಬ ಭಾಗವಿದೆ. ಆ ವಿಷಯಕ್ಕೆ ಸಂಬಂಧಿಸಿದ ವಿಶಿಷ್ಟ ಪ್ರಶ್ನೆಗಳಿಗೆ ಮತ್ತು ಅಡಿಗ್ಡಳಿಗೆ ಅವು ಚೂಪಾದ ಸಮಾಚಾರಯುಕ್ತ ಉತ್ತರವನ್ನು ಒದಗಿಸುತ್ತದೆ. ಆದರೂ, ಈ ಎಲ್ಲಾ ಉತ್ತಮ ಸಮಾಚಾರವು, ನಾವದನ್ನು ವಿಸ್ತಾರ್ಯವಾಗಿ ಬಳಿಸಿದರೆ ಮಾತ್ರವೇ ಮೂಲ್ಯತೆಯದ್ದಾಗಿರುವದು.
ತಯಾರಿಸುವ ವಿಧಾನ
5 ಸೇವಾ ಕೂಟದಲ್ಲಿ ಚರ್ಚಿಸಲ್ಪಡುವ ಯಾವದೇ ಪ್ರಕಾಶನಗಳ ಕುರಿತು ಎಚ್ಚರದಿಂದಿರ್ರಿ. ಚರ್ಚೆಗಳಲ್ಲಿ ಮತ್ತು ದೃಶ್ಯಗಳಲ್ಲಿ ನಿರ್ದೇಶಿಸಲು ಅವು ನಿಮ್ಮೊಂದಿಗಿರಲಿ. ಹೀಗೆ ಬೇರೆಯವರ ತಯಾರಿಯಿಂದ ನೀವು ಅಧಿಕ ಪೂರ್ಣ ಪ್ರಯೋಜನವನ್ನು ಪಡೆಯುವಿರಿ.
6 ಸೇವೆಗಾಗಿ ತಯಾರಿಸಲು ಸ್ವಲ್ಪ ಸಮಯವನ್ನು ವ್ಯಯಿಸುವುದು ಸಹಾಯಕಾರಿಯು. ನಿಮಗೆ ಬೇಕಾದ ಸಾಹಿತ್ಯವನ್ನು ಪಡೆದುಕೊಳ್ಳಲು ಖಚಿತಮಾಡಿಕೊಳ್ಳಿರಿ. ಸಂಭಾಷಣೆಗಾಗಿ ವಿಷಯವನ್ನು ನೋಡಲು ಕೆಲವು ನಿಮಿಷಗಳನ್ನು ಉಪಯೋಗಿಸಿರಿ. ಬಳಸಿದ ವಚನಗಳನ್ನು ಪುನರಾವರ್ತಿಸಿರಿ, ತೋರಿಸಲಿರುವ ಪುಸ್ತಕದಲ್ಲಿ ಮಾತಾಡತಕ್ಕ ವಿಶಿಷ್ಟ ವಿಷಯಗಳನ್ನು ಹೆಕ್ಕಿರಿ. ಇದನ್ನು ಕುಟುಂಬವಾಗಿ ಒಟ್ಟಾಗಿ ಮಾಡುವುದು ಅತ್ಯಂತ ಸಹಾಯಕಾರಿ.
7 ಪ್ರ್ಯಾಕ್ಟಿಸ್ ಸೆಶ್ಯನ್ಗಳನ್ನು ಮಾಡಿರಿ. ಹಲವಾರು ಸಮಯಗಳಲ್ಲಿ—ಸಭಾ ಪುಸ್ತಕಭ್ಯಾಸದ ನಂತರ, ಸಮಾಜಿಕ ಒಕ್ಕೂಟಗಳಲ್ಲಿ, ಕಾರ್ ಗುಂಪುಗಳಲ್ಲಿ ಮತ್ತು ಮನೆಬಾಗಲುಗಳ ನಡುವೆ ಪ್ರಸಂಗದ ಪ್ರ್ಯಾಕ್ಟಿಸ್ ಮಾಡಬಹುದು. ಪ್ರಸಂಗಗಳನ್ನು ನೀಡುವುದು ಮತ್ತು ಅಡಿಗ್ಡಳನ್ನು ನಿವಾರಿಸುವ ವಿಧವನ್ನು ತೋರಿಸುವುದು ತೀರಾ ಆನಂದಕರವಾಗಬಲ್ಲದು ಮತ್ತು ನಮ್ಮ ನೈಪುಣ್ಯಗಳನ್ನು ಚೂಪುಗೊಳಿಸಲು ಅವು ಉತ್ತಮ ಸಂದರ್ಭಗಳನ್ನು ಒದಗಿಸುತ್ತದೆ.
8 ಶ್ರದ್ದೆಯುಳ್ಳ ತಯಾರಿಯು ಶುಶ್ರೂಷೆಗಾಗಿ ನಮ್ಮ ಉತ್ಸಾಹವನ್ನು ಕಟ್ಟುತ್ತದೆ ಮತ್ತು ಹೀಗೆ ನಾವು ನುರಿತ ಕೆಲಸಗಾರರಾಗುವೆವು ಹಾಗೂ ಆನಂದಕರ ತೃಪ್ತಿಯನ್ನು ಕೊಯ್ಯುವೆವು.—ಯೋಹಾ. 2:17.