ಪರಿಣಾಮಕಾರಕ ಪೀಠಿಕೆಗಳು
1 ಮನೆ ಮನೆಯ ಸೇವೆಯಲ್ಲಿ ಭಾಗವಹಿಸುವಾಗ, “ಮೊದಲಾಗಿ ನಾನು ಎನು ಹೇಳಲಿ” ಎಂಬ ಪ್ರಶ್ನೆಯು ಸದಾ ನಮ್ಮನ್ನು ಭಾದಿಸುತ್ತದೆ. ಕ್ಷೇತ್ರಸೇವೆಯಲ್ಲಿ ಒಳ್ಳೇ ಫಲಿತಾಂಶವನ್ನು ಪಡೆಯುವ ಅನುಭವಸ್ಥ ಪ್ರಚಾರಕರು ಹಲವಾರು ಸಹಾಯಕ ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಯಾವುವು?
2 ಮೊದಲಾಗಿ, ನಾವು ಮಾತಾಡುವ ಜನರಲ್ಲಿ ನಾವು ಪ್ರಾಮಾಣಿಕ ಆಸಕ್ತಿಯನ್ನು ತೋರಿಸುವದು ಮಹತ್ವದ್ದು. ಅಂತಹ ವೈಯಕ್ತಿಕ ಆಸಕ್ತಿಯು ನುಡಿಗಳಲ್ಲಿ ಹಾಗೂ ನಡೆಯಲ್ಲಿ ಪ್ರದರ್ಶಿಸಲ್ಪಡುತ್ತದೆ. ಮನೆಯವನ ದೃಷ್ಟಿಕೋನವನ್ನು ಗಮನಕ್ಕೆ ತಕ್ಕೊಳ್ಳುವದೂ ಮಹತ್ವದ್ದು. ತಕ್ಕದಾದ ಪಶ್ನೆಗಳನ್ನು ಕೇಳಿರಿ ಮತ್ತು ಜಾಗ್ರತೆಯಿಂದ ಅವನ ಪ್ರತಿಕ್ರಿಯೆಗೆ ಕಿವಿಗೊಡಿರಿ. ನಾವು ಚರ್ಚಿಸುವ ವಿಷಯದಿಂದ ಮನೆಯವನು ಹೇಗೆ : ಪ್ರಯೋಜನ ಪಡೆಯುತ್ತಾನೆಂದು ತಿಳಿಯಲು ನಾವು ಅವನಿಗೆ ಅವಶ್ಯವಾಗಿ ಸಹಾಯಮಾಡಬೇಕು.
ಅವರ ದೃಷ್ಟಿಕೋನವನ್ನು ಗಮನಿಸಿರಿ
3 ಸುಖರೆಂಬ ಊರಿನ ಬಾವಿಯ ಬಳಿಯಲ್ಲಿ ಸಮಾರ್ಯದ ಸ್ತ್ರೀಗೆ ಯೇಸು ಸಾಕ್ಷಿ ಕೊಟ್ಟಾಗ, ಅವನ ಕೆಲವು ಹೇಳಿಕೆಗಳು ಅವಳಿಗೆ ಸೋಜಿಗವಾಗಿ ಕಂಡವು. ಅವು ಅವಳ ಯೋಚನೆಗೆ ಅಥವಾ ಅವಳ ಆರಾಧನಾ ವಿಧಾನಕ್ಕೆ ಹೊಂದಿಕೆಯಾಗಿರಲಿಲ್ಲ. ಯೇಸು ಜಾಗ್ರತೆಯಿಂದ ಕಿವಿಗೊಟ್ಟನು ಮತ್ತು ಉತ್ತರಕೊಡುವಾಗ, ಅವಳೇನಂದಳೋ ಅದನ್ನು ಗಮನಕ್ಕೆ ತಂದುಕೊಂಡನು. ಅವಳಿಗೆ ಸಹಾಯ ಮಾಡ ಬಯಸಿದನು. (ಯೋಹಾ.4:13, 14, 19-26) ಈ ವಿಷಯದಲ್ಲಿ ಯೇಸುವಿನ ಮಾದರಿಯನ್ನು ನಾವು ಕ್ಷೇತ್ರಸೇವೆಯಲ್ಲಿ ಅನುಸರಿಸುತ್ತೇವೋ?
4 “ನನಗೆ ನನ್ನ ಸ್ವಂತ ಧರ್ಮವಿದೆ” ಎಂದು ಹೇಳುವ ಮೂಲಕ ಜನರು ನಮ್ಮ ಆರಂಭದ ಮಾತುಗಳಿಗೆ ಪ್ರತಿಕ್ರಿಯೆ ತೋರಿಸಿದರೆ ನೀವೇನುಮಾಡುವಿರಿ? “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ” ಎಂದು ಬೈಬಲ್ ಲೇಖಕನು ಹೇಳಿದ್ದಾನೆ. (ಜ್ಞಾನೋ.15:28) ನೀವಿದನ್ನು ಮಾಡುತ್ತೀರೋ? ಈ ವಚನದ ತತ್ವವನ್ನು ಮನಸ್ಸಲ್ಲಿಟ್ಟು ರೀಸನಿಂಗ್ ಪುಸ್ತಕದ 18-19 ಪುಟಗಳಲ್ಲಿರುವ ಸಮಾಚಾರವನ್ನು ನೀವು ಗಮನಿಸಿರುವಿರೋ? ನಿಮ್ಮ ಪೀಠಿಕೆಗಳನ್ನು ಪರಿಣಾಮಕಾರಿಯಾಗಿ ಮಾಡುವದನ್ನು ಕಲಿಯಲು ಕ್ಷೇತ್ರಸೇವೆಯಲ್ಲಿ ಪರಿಣಾಮಕಾರಿಯಾದ ಪ್ರಚಾರಕರೊಂದಿಗೂ ನೀವು ಸೇವೆಮಾಡಬಹುದು.
5 ತಮಗೆ ತಮ್ಮ ಸ್ವಂತ ಧರ್ಮವಿದೆಂದು ಅಡ್ಡಿ ಹೇಳುವ ಕ್ಷೇತ್ರಗಳಲ್ಲಿ, ಅವರ ಹೇಳಿಕೆಯನ್ನು ಮೊದಲೇ ಗ್ರಹಿಸಿಕೊಂಡು ವಿಷಯವನ್ನು ನಾವೇ ಮೊದಲು ಮುಂತರುವದು ಪ್ರಯೋಜನಕಾರಿ. ಉದಾಹರಣೆಗಾಗಿ, ಆರಂಭದ ವಂದನಾ ಮಾತುಗಳ ನಂತರ ಹೀಗನ್ನಿರಿ: “ನಿಮಗೆ ನಿಮ್ಮ ಸ್ವಂತ ಧರ್ಮವಿದೆಯೇ? (ಅವರ ಉತ್ತರಕ್ಕೆ ಕಿವಿಗೊಡಿರಿ.) ಹಾಗೆಂದು ನಾನು ನೆನಸುವೆ ಯಾಕೆಂದರೆ ಈ ಕ್ಷೇತ್ರದ ಹೆಚ್ಚು ಜನರಿಗೆ ಅದು ಇದೆ. ಆದರೂ, ಈ ಬೆಳಗ್ಗೆ ನನ್ನ ಸಂದರ್ಶನದ ಕಾರಣವು. . . ” ಅನಂತರ ನೀವು ಚರ್ಚಿಸ ಬಯಸುವ ವಿಷಯವನ್ನು ಮುಂದರಿಸಬಹುದು.
6 ಹೆಚ್ಚಿನ ಮನೆಯವರು “ನಾನು ಕಾರ್ಯಮಗ್ನನಿದ್ದೇನೆ” ಎಂದು ಹೇಳುವದಾದರೆ ರೀಸನಿಂಗ್ ಪುಸ್ತಕದ 19-20 ಪುಟಗಳಲ್ಲಿರುವ ಒಂದು ಯಾ ಹೆಚ್ಚಿನ ವಿಚಾರಗಳನ್ನು ನೀವು ಆರಿಸಬಹುದು ಮತ್ತು ನಿಮ್ಮ ಕ್ಷೇತ್ರದ ಅಗತ್ಯತೆಗಳಿಗೆ ಅವನ್ನು ಹೊಂದಿಸಬಹುದು. ಆಗಿಂದಾಗ್ಯೆ ಕೇಳಿಬರುವ ಅಡ್ಡಿಗಳ ಮುನ್ನೋಟದಲ್ಲಿ ಈ ಹೇಳಿಕೆಗಳ ಹಲವಾರು ವಿಧವನ್ನುಪಯೋಗಿಸಬಹುದು.
ರೀಸನಿಂಗ್ ಪುಸ್ತಕದಿಂದ ಪೀಠಿಕೆಗಳನ್ನು ಉಪಯೋಗಿಸುವದು
7 ರೀಸನಿಂಗ್ ಪುಸ್ತಕದ ಪೀಠಿಕೆಗಳನ್ನುಪಯೋಗಿಸಿದರಲ್ಲಿ ಅನೇಕರು ಸಾಫಲ್ಯ ಪಡೆದಿರುತ್ತಾರೆ. ಜನರು ಸಾಮಾನ್ಯವಾಗಿ ಚಿಂತಿಸುವ ವಿಷಯಗಳಾದ ಸದ್ಯದ ಘಟನೆಗಳು, ವೈಯಕ್ತಿಕ ಸುರಕ್ಷೆ, ಉದ್ಯೋಗ, ಮನೆ, ಕುಟುಂಬಜೀವನ ಮತ್ತು ಭವಿಷ್ಯವೇ ಮುಂತಾದವುಗಳನ್ನು ಅದು ಚರ್ಚಿಸುತ್ತದೆ. ಅದಲ್ಲದೆ, ರೀಸನಿಂಗ್ ಸೂಚಿಸುವ ಪೀಠಿಕೆಗಳ ಮಾತುಗಳು ಮನೆಯವನನ್ನು ಉತ್ತರಕೊಡುವಂತೆ ಆಮಂತ್ರಿಸುತ್ತದೆಂಬದನ್ನು ಗಮನಿಸಿರಿ. ನೀಡಲ್ಪಟ್ಟ ಸಮಾಚಾರದ ಮಹತ್ವವನ್ನು ಕಾಣಲು ಅದು ಅವನಿಗೆ ಸಹಾಯ ಮಾಡುತ್ತದೆ ಮತ್ತು ಅವನ ಮೇಲೆ : ಪ್ರಭಾವಿಸುತ್ತದೆ. ಈ ಪೀಠಿಕೆಗಳನ್ನು ಪರಿಣಾಮಕಾರಿಯಾಗಿ ಬಳಸುವದಾದರೆ, ಅತಿ ಸಾಮಾನ್ಯವಾಗಿ ಮನೆಯವರು ಮುಂತರುವ ಅಡ್ಡಿಗಳನ್ನು ಅವು ತಡೆಯಬಲ್ಲವು.
8 ನಿಮ್ಮ ಕ್ಷೇತ್ರದಲ್ಲಿ ಅತಿ ಪರಿಣಾಮಕಾರಿ ಎಂದು ನೀವು ನಂಬುವ ಪೀಠಿಕೆಗಳಿಗೆ ಜಾಗ್ರತೆಯ ಗಮನಕೊಡಿರಿ. ರೀಸನಿಂಗ್ ಪುಸ್ತಕದ ಪೀಠಿಕೆಗಳನ್ನುಪಯೋಗಿಸುವದನ್ನು ಕಲಿಯಿರಿ. ಬೇರೆ ಪ್ರಚಾರಕರ ಅನುಭವದಿಂದ ಪ್ರಯೋಜನ ಪಡೆಯಿರಿ. ನಿಮ್ಮ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ಬೇಡಿರಿ. ಒಳ್ಳೇ ಪ್ರಯತ್ನ ಮತ್ತು ಯೆಹೋವನ ಆಶೀರ್ವಾದದಿಂದಾಗಿ ನಿಮ್ಮ ಕ್ಷೇತ್ರದ ಹೆಚ್ಚು ಜನರು ರಕ್ಷಣಾ ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆಯನ್ನು ತೋರಿಸ್ಯಾರು.