ಸುವಾರ್ತೆಯನ್ನು ನೀಡುವದು—ನೇರ ವಿಧಾನದಿಂದ ಅಭ್ಯಾಸಗಳನ್ನು ಪ್ರಾರಂಭಿಸುವುದು
1 “ಶಿಷ್ಯರನ್ನಾಗಿ ಮಾಡುವಂತೆ” ಯೇಸು ನಮಗೆ ಆಜ್ಞಾಪಿಸಿದ್ದಾನೆ. (ಮತ್ತಾ. 28:19) ಇದನ್ನು ಪೂರೈಸಲು ಸಾಮಾನ್ಯವಾಗಿ ನಾವು ಆಸಕ್ತ ಜನರೊಂದಿಗೆ ಬೈಬಲಭ್ಯಾಸ ನಡಿಸುವದು ಅವಶ್ಯಕ. ಕ್ಷೇತ್ರ ಸೇವೆಯಲ್ಲಿ ಬೈಬಲಭ್ಯಾಸಗಳನ್ನು ಪ್ರಾರಂಭಿಸಲು ನೇರವಾದ ವಿಧಾನವನ್ನು ಉಪಯೋಗಿಸುವ ಮೂಲಕ ನಾವಿದನ್ನು ಬೇಗನೇ ನಿರ್ವಹಿಸ ಸಹಾಯವಾಗುವದು. ಅಲ್ಲದೆ, ನಮ್ಮ ಸಂದರ್ಶನದ ಮುಖ್ಯ ಉದ್ದೇಶವನ್ನು ಸ್ಪಷ್ಟವಾಗಿಗಿ ಪರಿಚಯ ಪಡಿಸಲೂ ಇದು ಸಾಧ್ಯಮಾಡುತ್ತದೆ.
2 ಬೈಬಲಭ್ಯಾಸ ಪ್ರಾರಂಭಿಸುವುದರಲ್ಲಿ ನೇರ ವಿಧಾನವನ್ನು ಉಪಯೋಗಿಸುವಾಗ ನಾವೇನನ್ನಬಹುದು? ಒಂದು ಅತಿ ಸರಳವಾದ ವಿಧಾನವು ಅತ್ಯುತ್ತಮ. ನಾವು ಹೀಗನ್ನಬಹುದು: “ಬೈಬಲನ್ನು ತಿಳಿಯುವಂತೆ ಜನರಿಗೆ ಸಹಾಯ ಮಾಡುವುದರಲ್ಲಿ ನಾನು ಆಸಕ್ತನಾಗಿದ್ದೇನೆ. ಅದನ್ನು ನಿಮ್ಮೊಂದಿಗೆ ಮತ್ತು ನಿಮ್ಮ ಕುಟುಂಬದೊಂದಿಗೆ ಯಾವ ಖರ್ಚು ಮತ್ತು ನಿರ್ಬಂಧವೂ ಇಲ್ಲದೆ ಉಚಿತವಾಗಿ ನಡಿಸಲು ನಾನು ಸಂತೋಷ ಪಡುತ್ತೇನೆ. ನಿಮ್ಮ ಬೈಬಲನ್ನು ನಾವು ಉಪಯೋಗಿಸಬಹುದು. ನಿಮ್ಮಲ್ಲಿ ಅದು ಇರದಿದ್ದರೆ, ನಿಮಗದು ಸಿಗುವಂತೆ ನಾನು ಏರ್ಪಡಿಸಬಲ್ಲೆ.”
3 ಇನ್ನೊಂದು ವಿಧಾನವು ಹೀಗಿದೆ: “ನಾನು ಇಂದು ಸಂದರ್ಶಿಸುವ ಉದ್ದೇಶವು ಮನೆ ಬೈಬಲಭ್ಯಾಸವನ್ನು ಪ್ರೋತ್ಸಾಹಿಸುವುದಕ್ಕಾಗಿ. ಈ ಲೋಕವು ಎತ್ತಕಡೆ ಸಾಗುತ್ತಿದೆ ಮತ್ತು ದೇವರು ನಮಗಾಗಿ ಏನನ್ನು ಕಾದಿರಿಸಿದ್ದಾನೆ ಎಂಬದನ್ನು ತಿಳಿಯುವದಕ್ಕೆ ಇದು ನಿಮಗೆ ಸಹಾಯ ಮಾಡುವದು. ನಿಮ್ಮ ಬೈಬಲಿನಿಂದ ಹೆಚ್ಚು ಪ್ರಯೋಜನವನ್ನು ಹೇಗೆ ಹೊಂದಬಹುದೆಂದು ನಿಮಗೆ ತೋರಿಸಲು ನಾನು ಸಂತೋಷ ಪಡುತ್ತೇನೆ. ಇದಕ್ಕೆ ಯಾವ ಖರ್ಚು ಯಾ ನಿರ್ಬಂಧಗಳು ನಿಮಗಿರಲಾರವು.” ಮನೆಯವನು ಒಪ್ಪುವದಾದರೆ, ಲೈಫ್ ಇನ್ ಪೀಸ್ಫುಲ್ ನ್ಯೂವರ್ಲ್ಡ್ ಟ್ರೇಕ್ಟನ್ನು ಅಥವಾ ಕ್ರಿಯೇಶನ್ ಪುಸ್ತಕವನ್ನು, ಪ್ರಾಯಶಃ ಪುಟ 324 ಪಾರಾ 6ನ್ನುಪಯೋಗಿಸಿ, ಅಭ್ಯಾಸ ಆರಂಭಿಸಬಹುದು. ಈ ಅಧ್ಯಾಯದ ಆರಂಭದ ಪುಟಗಳು ಪರದೈಸವನ್ನು ಪುನಃಸ್ಥಾಪಿಸುವ ಯೆಹೋವನ ಉದ್ದೇಶವನ್ನು ಎತ್ತಿಹೇಳುತ್ತವೆ.
4 ಬೈಬಲ್ ಟ್ರೇಕ್ಟ್ಗಳನ್ನು ಉಪಯೋಗಿಸುವುದು: ನೇರ ವಿಧಾನವನ್ನು ಉಪಯೋಗಿಸುವಾಗ ಟ್ರೇಕ್ಟನ್ನು ಬಳಸುವದು ಸಹಾಯಕಾರಿ ಎಂದು ಅನೇಕರು ಕಂಡುಕೊಂಡಿದ್ದಾರೆ. ಮನೆಯವನು ಬಾಗಲಿಗೆ ಬರುವಾಗ, ಲೈಫ್ ಇನ್ ಎ ಪೀಸ್ಫುಲ್ ನ್ಯೂ ವರ್ಲ್ಡ್ ಟ್ರೇಕ್ಟನ್ನು ಮನೆಯವನಿಗೆ ತೆರೆದು ಕೈಯಲ್ಲಿ ಕೊಡಿರಿ, ಹೀಗೆ ಅವನು ಇಡೀ ಚಿತ್ರವನ್ನು ನೋಡಶಕ್ತನಾಗುವನು. ಇನ್ನೊಂದು ಟ್ರೇಕ್ಟನ್ನು ಕೈಯಲ್ಲಿ ಹಿಡಿದು, ಮೊದಲ ಎರಡು ಪಾರಾದಲ್ಲಿರುವ ಪ್ರಶ್ನೆಗಳನ್ನು ಓದಿರಿ ಇಲ್ಲವೇ ಸಾರಾಂಶವಾಗಿ ತಿಳಿಸಿರಿ. ಉತ್ತರವನ್ನು ಚರ್ಚಿಸಿರಿ ಮತ್ತು ಒಂದೆರಡು ವಚನಗಳನ್ನು ಆಧಾರವಾಗಿ ಓದಿರಿ. ಅನಂತರ, ನೀವು ಆ ಚರ್ಚೆಯಲ್ಲಿ ಆನಂದಿಸಿದಿರಿ ಎಂದು ಹೇಳಿ, ಪುನಃಬರಲು ಏರ್ಪಡಿಸಿರಿ. ಯುಕ್ತವೆಂದು ಕಂಡರೆ, ಸಂಕ್ಷೇಪವಾಗಿ ನಮ್ಮ ಮನೆ ಬೈಬಲಭ್ಯಾಸ ಕಾರ್ಯಕ್ರಮವನ್ನು ವಿವರಿಸಿರಿ ಅಥವಾ ಕೇವಲ ಪುನಃ ಸಂದರ್ಶನೆಗಾಗಿ ಏರ್ಪಡಿಸಿರಿ ಮತ್ತು ಟ್ರೇಕ್ಟ್ನಲ್ಲಿರುವ ಮುಂದಿನ ವಿಷಯವನ್ನು ಚರ್ಚಿಸಿರಿ.
5 ಪುನಃ ಬರಲು ಏರ್ಪಡಿಸುವಾಗ, ಮನೆಯವನಿಗೆ ಆಸಕ್ತಿ ಹುಟ್ಟುವದೆಂದು ನೀವು ನೆನಸುವ ಒಂದು ವಿಷಯವನ್ನು ಅವನಿಗೆ ತಿಳಿಸುವದು ಒಳ್ಳೆಯದು. ಇದನ್ನು ಪ್ರಶ್ನಾರೂಪವಾಗಿ ತಿಳಿಸಬಹುದು. ಅದು ಮನೆಯವನನ್ನು ಆ ಪ್ರಶ್ನೆಗೆ ಉತ್ತರ ಪಡೆಯುವದಕ್ಕಾಗಿ ನಿಮ್ಮ ಮರುಭೇಟಿಗೆ ಮುನ್ನೋಡುವಂತೆ ಮಾಡುವುದು.
6 ಕ್ರಿಯೇಶನ್ ಪುಸ್ತಕವು ಅನೇಕ ರೀತಿಯಲ್ಲಿ ಮಹತ್ತರವಾಗಿದೆ. ದೇವರ ಅಸ್ತಿತ್ವಕ್ಕೆ ಅದು ದೃಢವಾದ ರುಜುವಾತನ್ನು ಕೊಡುತ್ತದೆ. ವಿಕಾಸವಾದವು ಏಕೆ ಸತ್ಯವಾಗಿರ ಸಾಧ್ಯವಿಲ್ಲವೆಂಬದನ್ನು ಅದು ತೋರಿಸುತ್ತದೆ. ನಾವು ಬೈಬಲ್ನಲ್ಲಿ ಏಕೆ ಭರವಸವಿಡ ಸಾಧ್ಯವಿದೆಂಬದನ್ನು ಅದು ತಿಳಿಸುತ್ತದೆ. 18 ಮತ್ತು 19ನೇ ಅಧ್ಯಾಯಗಳ ಚಿತ್ರಗಳು ಪ್ರಾಮಾಣಿಕ ಹೃದಯದ ಜನರನ್ನು ಗಮನವನ್ನು ಸೆಳೆದು, ಬೈಬಲಿನಲ್ಲಿ ಮತ್ತು ಯೆಹೋವನ ಉದ್ದೇಶಗಳಲ್ಲಿ ಆಸಕ್ತಿಯನ್ನು ಚೇತರಿಸಬಹುದು. ಹೀಗೆ, ನಾವೆಲ್ಲರೂ ಅಭ್ಯಾಸ ಆರಂಭಿಸಲು ಇರುವ ಎಲ್ಲಾ ಸಂದರ್ಭಗಳನ್ನು ಉಪಯೋಗಿಸುತ್ತಾ, “ಶಿಷ್ಯರನ್ನಾಗಿ ಮಾಡುವ” ನಮ್ಮ ನಿಯೋಗದಲ್ಲಿ ಪಾಲಿಗರಾಗೋಣ.—ಮತ್ತಾ. 24:14; 28:19, 20; ಮಾರ್ಕ 13:10.