ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು
1 ಒಂದು ಮನೆ ಬೈಬಲ್ ಅಧ್ಯಯನದ ಮೂಲಕ ಯಾರಿಗಾದರೂ ಸತ್ಯವನ್ನು ಕಲಿಸುವುದು, ನಿಜ ಕ್ರೈಸ್ತರಿಗಾಗಿರುವ ಅತ್ಯಂತ ಫಲಕೊಡುವ ಮತ್ತು ತೃಪ್ತಿಕರ ಅನುಭವಗಳಲ್ಲಿ ಒಂದಾಗಿದೆ. ಆದರೂ, ಅವರೊಂದು ಬೈಬಲ್ ಅಧ್ಯಯನವನ್ನು ಆರಂಭಿಸಿ, ಅದನ್ನು ನಡೆಸಲು ಅಶಕ್ತರೆಂದು ಎಣಿಸಿಕೊಳ್ಳುವುದರಿಂದ, ಕೆಲವರು ಪ್ರತಿಫಲ ಮತ್ತು ತೃಪ್ತಿಯನ್ನು ಹೆಚ್ಚಿಸುವ ಶುಶ್ರೂಷೆಯ ಈ ಕ್ಷೇತ್ರದಲ್ಲಿ ಭಾಗವಹಿಸದೆ ಇರಬಹುದು. ಅನೇಕ ಎದ್ದುಕಾಣುವ ಪ್ರಚಾರಕರು ಮತ್ತು ಪಯನೀಯರರು ಒಮ್ಮೆ ಆ ರೀತಿ ಎಣಿಸಿಕೊಂಡಿದ್ದರು. ಹಾಗಿದ್ದರೂ, ಯೆಹೋವನಲ್ಲಿ ಭರವಸೆ ಇಡುವ ಮೂಲಕ ಮತ್ತು ನಮ್ಮ ರಾಜ್ಯದ ಸೇವೆ ಯಲ್ಲಿರುವ ಸೂಚನೆಗಳನ್ನು ಅನ್ವಯಿಸುವ ಮೂಲಕ, ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಮತ್ತು ನಡೆಸುವುದು ಹೇಗೆಂದು ಅವರು ಕಲಿತು, ಶುಶ್ರೂಷೆಯಲ್ಲಿ ತಮ್ಮ ಆನಂದವನ್ನು ಹೆಚ್ಚಿಸಿಕೊಂಡರು. ನೀವೂ ಅದೇ ಗುರಿಯನ್ನು ಇಟ್ಟುಕೊಳ್ಳಬಲ್ಲಿರಿ.
2 ನೇರ ವಿಧಾನವನ್ನು ಮತ್ತು ಕಿರುಹೊತ್ತಗೆಗಳನ್ನು ಉಪಯೋಗಿಸುವುದು: ನೇರ ವಿಧಾನದ ಮೂಲಕ ಒಂದು ಅಧ್ಯಯನವನ್ನು ಆರಂಭಿಸುವುದು ಅತೀ ಸುಲಭವಾದ ರೀತಿಗಳಲ್ಲಿ ಒಂದಾಗಿದೆ. ಬೈಬಲನ್ನು ಅಭ್ಯಾಸಿಸಲು ಒಂದು ಆದರದ ಆಮಂತ್ರಣ ತಾನೇ ಕೆಲವು ಜನರಿಗೆ ಬೇಕಾಗಿರುವುದು. ಇದನ್ನು ಕೇವಲ ಮನೆಯವನನ್ನು ಹೀಗೆ ಕೇಳುವ ಮೂಲಕ ಮಾಡಲು ಸಾಧ್ಯ: “ಒಂದು ವೈಯಕ್ತಿಕ ಮನೆ ಬೈಬಲ್ ಅಧ್ಯಯನವನ್ನು ಹೊಂದಿರಲು ಮತ್ತು ಬೈಬಲಿನ ಹಾಗೂ ಭೂಮಿಗಾಗಿ ದೇವರ ಉದ್ದೇಶದ ಕುರಿತಾಗಿ ನಿಮ್ಮ ಜ್ಞಾನವನ್ನು ಹೆಚ್ಚಿಸಲು ನೀವು ಬಯಸುವಿರೊ?” ಅಥವಾ ಒಂದು ಮನೆ ಬೈಬಲ್ ಅಧ್ಯಯನವು ಹೇಗೆ ನಡೆಸಲ್ಪಡುತ್ತದೆ ಎಂಬುದನ್ನು ನೀವು ಪ್ರತ್ಯಕ್ಷಾಭಿನಯಿಸಲು ಸಂತೋಷಿಸುವಿರಿ ಎಂದು ಮನೆಯವನಿಗೆ ನೀವು ಹೇಳಬಹುದು. ಅನೇಕರು ಈ ನೀಡಿಕೆಯನ್ನು ನಿರಾಕರಿಸಬಹುದಾದರೂ, ಅದನ್ನು ಸ್ವೀಕರಿಸಬಹುದಾದ ಯಾರನ್ನಾದರೂ ನೀವು ಕಂಡುಕೊಳ್ಳುವುದರಲ್ಲಿ ನಿಮಗಾಗುವ ಆನಂದದ ಕುರಿತು ಯೋಚಿಸಿರಿ!
3 ನಮ್ಮ ಕಿರುಹೊತ್ತಗೆಗಳಲ್ಲಿ ಒಂದನ್ನು ಉಪಯೋಗಿಸುವ ಮೂಲಕ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದು ಇನ್ನೊಂದು ವಿಧವಾಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಶಕ್ತಿಶಾಲಿಯಾದ ಮತ್ತು ಮನವರಿಕೆ ಮಾಡುವ ಒಂದು ಸಂದೇಶವನ್ನು ಅವು ಸಾದರಪಡಿಸುತ್ತವೆ. ಒಂದು ಕಿರುಹೊತ್ತಗೆಯಲ್ಲಿ ಅಧ್ಯಯನವೊಂದನ್ನು ಹೇಗೆ ಆರಂಭಿಸ ಸಾಧ್ಯ? ಅವನಲ್ಲಿ ಆಸಕ್ತಿ ಹುಟ್ಟಿಸಬಹುದೆಂದು ನೀವು ನಂಬುವ ಒಂದು ಕಿರುಹೊತ್ತಗೆಯನ್ನು ಮನೆಯವನಿಗೆ ಕೊಡುವ ಮೂಲಕ ಇದನ್ನು ಮಾಡಬಹುದು. ಆಮೇಲೆ, ಆರಂಭಿಕ ಹೆಜ್ಜೆಯನ್ನು ತೆಗೆದುಕೊಳ್ಳಿ, ಮತ್ತು ನಿಮ್ಮೊಂದಿಗೆ ಮೊದಲನೆಯ ಪ್ಯಾರಗ್ರಾಫನ್ನು ಓದುವಂತೆ ಮನೆಯವನನ್ನು ಆಮಂತ್ರಿಸಿರಿ. ನಮೂದಿಸಲಾದ ವಚನಗಳನ್ನು ನೋಡಿರಿ, ಮತ್ತು ಅವು ವಿಷಯಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಚರ್ಚಿಸಿರಿ. ಪ್ರಥಮ ಭೇಟಿಯಲ್ಲಿ, ನೀವು ಕೇವಲ ಒಂದು ಯಾ ಎರಡು ಪ್ಯಾರಗ್ರಾಫ್ಗಳನ್ನು ಪರಿಗಣಿಸಬಹುದು. ಬೈಬಲಿನಿಂದ ಅವನು ಆಸಕ್ತಿಕರ ವಿಷಯಗಳನ್ನು ಕಲಿಯುತ್ತಿದ್ದಾನೆಂದು ಮನೆಯವನು ಗಣ್ಯಮಾಡಲು ಪ್ರಾರಂಭಿಸಿದಂತೆ, ನಿಮ್ಮ ಚರ್ಚೆಯಲ್ಲಿ ನೀವು ವ್ಯಯಿಸುವ ಸಮಯವನ್ನು ಹೆಚ್ಚಿಸಲು ನೀವು ಶಕ್ತರಾಗಬಹುದು.
4 ಕೇವಲ ಬೈಬಲನ್ನು ಉಪಯೋಗಿಸುವುದು: ಕೆಲವೊಮ್ಮೆ ಒಬ್ಬ ವ್ಯಕ್ತಿಯು ಬೈಬಲನ್ನು ಚರ್ಚಿಸಲು ಒಪ್ಪಿಕೊಳ್ಳುವುದಾದರೂ, ಔಪಚಾರಿಕವಾದೊಂದು ಅಧ್ಯಯನವನ್ನು ಸ್ವೀಕರಿಸಲು ಯಾ ನಮ್ಮ ಪ್ರಕಾಶನಗಳಲ್ಲಿ ಒಂದರ ಉಪಯೋಗವನ್ನು ಮಾಡಲು ಒಲವಿಲ್ಲದಂತೆ ತೋರಬಹುದು. ಸದಾ ಜೀವಿಸಬಲ್ಲಿರಿ ಪುಸ್ತಕ ಅಥವಾ ರೀಸನಿಂಗ್ ಪುಸ್ತಕದ ಭಾಗಗಳ ಮೇಲೆ ಆಧಾರಿತವಾದ ಆಸಕ್ತಿಕರ ಶಾಸ್ತ್ರ ಸಂಬಂಧವಾದ ಚರ್ಚೆಗಳನ್ನು ತಯಾರಿಸುವ ಮೂಲಕ, ಆದರೆ ಆಸಕ್ತಿವುಳ್ಳ ವ್ಯಕ್ತಿಯನ್ನು ಭೇಟಿಯಾಗುವಾಗ ಕೇವಲ ಬೈಬಲನ್ನು ಉಪಯೋಗಿಸುವ ಮೂಲಕ ನೀವು ಒಂದು ಬೈಬಲ್ ಅಧ್ಯಯನವನ್ನು ಇನ್ನೂ ಆರಂಭಿಸಬಲ್ಲಿರಿ ಮತ್ತು ನಡೆಸಬಲ್ಲಿರಿ. ಅಂಥ ಚರ್ಚೆಗಳು 15 ಯಾ 20 ನಿಮಿಷಗಳು ಯಾ ಇನ್ನೂ ಹೆಚ್ಚು ಕಾಲ, ಸನ್ನಿವೇಶಗಳ ಮೇಲೆ ಅವಲಂಬಿಸುತ್ತಾ ದೀರ್ಘವಾಗಿರಬಲ್ಲದು. ಕ್ರಮವಾಗಿ ಮತ್ತು ಬೈಬಲ್ ಸತ್ಯಗಳನ್ನು ಕಲಿಸುವುದಕ್ಕಾಗಿ ಪ್ರಗತಿಪರ ವಿಧಾನದೊಂದಿಗೆ ಮಾಡುವುದಾದರೆ, ನೀವೊಂದು ಬೈಬಲ್ ಅಧ್ಯಯನವನ್ನು ಆರಂಭಿಸಿದ್ದೀರಿ ಮತ್ತು ಅದನ್ನು ಹಾಗೆ ವರದಿಸ ಸಾಧ್ಯವಿದೆ. ಸಮಯವು ಸೂಕ್ತವಾದಾಗ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪರಿಚಯಪಡಿಸಿರಿ, ಮತ್ತು ಅದರಲ್ಲಿ ಒಂದು ಔಪಚಾರಿಕ ಅಧ್ಯಯನವನ್ನು ನಡೆಸಿರಿ.
5 ಕ್ಷೇತ್ರ ಸೇವೆಯಲ್ಲಿ ಅವಕಾಶಗಳನ್ನು ಕಂಡುಹಿಡಿಯುವುದರ ಜೊತೆಗೆ, ನೆರೆಯವರು, ಸಹವಾಸಿಗಳು, ಯಾ ಕುಟುಂಬ ಸದಸ್ಯರೊಂದಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನೀವು ಪ್ರಯತ್ನಿಸಿದ್ದೀರೊ? ಅದು ಸ್ವಲ್ಪ ಸಮಯದ ಹಿಂದೆ ಆಗಿತ್ತೊ? ನೀವು ಇತ್ತೀಚೆಗೆ ಮತ್ತೆ ಪ್ರಯತ್ನಿಸಿದ್ದೀರೊ? ಒಂದು ವಿಧಾನವು ಕೆಲಸಮಾಡದಿದ್ದಲ್ಲಿ, ಇನ್ನೊಂದನ್ನು ಪ್ರಯತ್ನಿಸಲು ನೀವು ಪರಿಗಣಿಸಿದ್ದೀರೊ?
6 ಕೊಟ್ಟಂಥ ಸೂಚನೆಗಳನ್ನು ನೀವು ಅನ್ವಯಿಸುವುದಾದರೆ, ಕ್ಷೇತ್ರ ಸೇವೆಯಲ್ಲಿ ಎಡೆಬಿಡದೆ ಇರುವುದಾದರೆ, ಮತ್ತು ಆತನ ಆಶೀರ್ವಾದಕ್ಕಾಗಿ ಯೆಹೋವನಲ್ಲಿ ಭರವಸೆ ಇಡುವುದಾದರೆ, ಅಧ್ಯಯನಗಳನ್ನು ಆರಂಭಿಸುವುದರಲ್ಲಿ ನೀವು ಸಫಲರಾಗಬಲ್ಲಿರಿ. ಸತ್ಯದ ಶಕ್ತಿಯ ಮತ್ತು ಯೆಹೋವನು ಕೊಡುವ ಸಹಾಯದ ಕೀಳಂದಾಜು ಎಂದಿಗೂ ಮಾಡಬೇಡಿರಿ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸಿ ಮತ್ತು ನಡೆಸುವ ಮೂಲಕ ಶುಶ್ರೂಷೆಯಲ್ಲಿ ನಿಮ್ಮ ಆನಂದವನ್ನು ನೀವು ಹೆಚ್ಚಿಸುವಂತಾಗಲಿ.