ಪ್ರಚಲಿತ ಘಟನೆಗಳ ನಿಜಾರ್ಥವನ್ನು ಗಣ್ಯಮಾಡುವದು
1 “ಈ ಪ್ರಪಂಚದ ತೋರಿಕೆಯು ಬದಲಾಗುತ್ತಾ ಇದೆ.” (1 ಕೊರಿ. 7:31, NW) ತೀವ್ರವಾಗಿ ಸಂಭವಿಸುತ್ತಿರುವ ಸದ್ಯದ ಘಟನೆಗಳಿಂದ ಇದು ಪ್ರತಿಬಿಂಬಿತವಾಗಿದೆ. ಯೆಹೋವನ ಸಂಸ್ಥೆಯೊಳಗೆ ಸಂಭವಿಸುತ್ತಿರುವ ಬೇರೆಲ್ಲಾ ವಿಷಯಗಳೊಂದಿಗೆ, ಇದು ನಿಮಗೆ ವೈಯಕ್ತಿಕವಾಗಿ ಯಾವ ಅರ್ಥದಲ್ಲಿದೆ?—ಲೂಕ 21:28.
2 ಈ 20ನೇ ಶತಮಾನದಲ್ಲಿ ಬೈಬಲ್ ಪ್ರವಾದನೆಯ ನೆರವೇರಿಕೆಯು ಈ ಇಡೀ ದುಷ್ಟ ವ್ಯವಸ್ಥೆಯ ಅಂತ್ಯವು ಸಮೀಪವಿದೆ ಎಂಬದನ್ನು ದೃಢಪಡಿಸುತ್ತದೆ. (ಮತ್ತಾ. 24:3-14. ಲೂಕ 21:7-11) “ಇವೆಲ್ಲಾ ಸಂಭವಿಸುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ” ಎಂದು ಯೇಸು ಹೇಳಿದ್ದಾನೆ. (ಲೂಕ 21:32) ಯೆಹೋವನ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಇನ್ನೂ ತಕ್ಕೊಳ್ಳದ ನಿಮ್ಮ ಕ್ಷೇತ್ರದ ಜನರಿಗೆ ಇದು ಯಾವ ಅರ್ಥದಲ್ಲಿದೆ ಎಂಬದನ್ನು ನೀವು ಗಣ್ಯಮಾಡುತ್ತೀರೋ? ಮಾಡುತ್ತೀರಾದರೆ, ನಿಮ್ಮ ಕ್ಷೇತ್ರ ಶುಶ್ರೂಷೆಯ ಮೇಲೆ ಇದು ಹೇಗೆ ಪರಿಣಾಮ ಬೀರಬೇಕು?—ಲೂಕ 21:34-36.
3 ಸಮಯ ಇನ್ನೂ ಇರುವಾಗಲೇ ಇತರರಿಗೆ ಸಹಾಯ ಮಾಡಿರಿ: ಸುವಾರ್ತೆಯನ್ನು ಪ್ರಚುರಪಡಿಸುವಂತೆ ಅನುಕೂಲವಾದ ಸಮಯದ ಸದುಪಯೋಗ ಮಾಡುವಂತೆ ಯೇಸು ತನ್ನ ಶಿಷ್ಯರನ್ನು ಪ್ರೇರೇಪಿಸಿದನು. (ಯೋಹಾ. 9:4) ಇದೇ ಬುದ್ಧಿವಾದವನ್ನು ಪ್ರತಿಧ್ವನಿಸುತ್ತಾ ಅಪೊಸ್ತಲ ಪೌಲನು ಕೊಲೊಸ್ಸೆಯ ಸಹೋದರರಿಗೆ, “ಅನುಕೂಲ ಸಮಯವನ್ನು ಬೆಲೆಯುಳ್ಳದ್ದೆಂದು ಖರೀದಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ” ಎಂದು ಹೇಳಿದ್ದಾನೆ.—ಕೊಲೊ. 4:5, NW.
4 ಕೆಲವರು ಸಮಯವನ್ನು ಖರೀದಿಸುವ ಅಪೊಸ್ತಲನ ಬುದ್ಧಿವಾದಕ್ಕೆ ಕಿವಿಗೊಟ್ಟಿದ್ದಾರೆ ಮತ್ತು ಕ್ರಮದ ಪಯನೀಯರರಾಗಿದ್ದಾರೆ. ಅನೇಕ ಯುವಕರು ಇನ್ನೂ ಶಾಲೆಯಲ್ಲಿರುವಾಗಲೇ ಕ್ರಮದ ಪಯನೀಯರ ಸೇವೆಗಿಳಿದಿದ್ದಾರೆ ಮತ್ತು ಅದನ್ನು ಒಳ್ಳೇ ಸಾಫಲ್ಯದಿಂದ ಮಾಡುತ್ತಿದ್ದಾರೆ. ಯುವಕರು ಶಾಲೆಯಲ್ಲಿ ಸಮಯವನ್ನು ಖರೀದಿಸಿ, ತಮ್ಮ ಸಹಪಾಠಿಗಳಿಗೆ ಇಂದು ಸಂಭವಿಸುತ್ತಿರುವ ವಿಷಯಗಳ ನಿಜಾರ್ಥವನ್ನು ತಿಳಿಯಲು ಮತ್ತು ದೇವರ ರಾಜ್ಯದ ಕೆಳಗಿನ ಭವಿಷ್ಯದ ಭವ್ಯ ನಿರೀಕ್ಷೆಯನ್ನು ಕೊಡಲು ಸಹಾಯ ಮಾಡಬಹುದು.—ಪ್ರಸಂ. 12:1.
5 ನವಂಬರದ ಕ್ಷೇತ್ರ ಸೇವೆಯ ಪ್ರತಿಯೊಂದು ಸಂದರ್ಭದಲ್ಲಿ ಎಚ್ಚರ! [ಅವೇಕ್!] ಪತ್ರಿಕೆಯನ್ನು ನೀಡುವ ಮೂಲಕ ನಾವು ಸಮಯದ ಸದುಪಯೋಗವನ್ನು ಮಾಡಬಲ್ಲೆವು. ಈ ಪ್ರಕಾಶನವು ಪ್ರಚಲಿತ ಘಟನೆಗಳ ನಿಜಾರ್ಥದ ಒಳನೋಟವನ್ನು ನಮಗೆ ಕೊಡುತ್ತದೆ. ಮನೆ ಮನೆಯ ಸೇವೆಯಲ್ಲಿ ಸಿಗುವ ಎಲ್ಲರಿಗೆ ಅದನ್ನು ನೀಡಿರಿ. ನಿಮ್ಮ ಸಹಪಾಠಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಅದನ್ನು ನೀಡಲು ಮೊದಲ-ಹೆಜ್ಜೆ ತಕ್ಕೊಳ್ಳಿರಿ. ನಿಮ್ಮ ಪರಿಚಯದ ಜನರಿಗೆ ವಿಶಿಷ್ಠವಾಗಿ ಆಸಕ್ತಿ ಇರುವಂಥ ವಿಷಯಗಳನ್ನು ಎತ್ತಿಹೇಳಿರಿ. ಉದಾಹರಣೆಗೆ, ಒಕ್ಟೋಬರ 8, 1991ರ ಎಚ್ಚರ! [ಇಂಗ್ಲಿಷ್] ಪತ್ರಿಕೆಯಲ್ಲಿ ಮಕ್ಕಳ ಮೇಲೆ ನಡಿಸಲ್ಪಡುವ ದುರಾಚಾರದ ಕುರಿತಾದ ಲೇಖನಗಳಿವೆ. ಅನೇಕ ಜನರು ಈ ವಿಷಯವಾಗಿ ಚಿಂತಿತರಾಗಿರುತ್ತಾರೆ.
6 ಸದ್ಯದ ಸಂಭಾಷಣೆಗಾಗಿ ವಿಷಯವನ್ನು ನಾವು ಹೇಗೆ ಉಪಯೋಗಿಸಬಹುದು? ನಿಮ್ಮ ಪರಿಚಯ ಹೇಳಿದ ನಂತರ, ಮನೆಯವನಿಗೆ ಹೀಗೆ ಕೇಳಬಹುದು: “ಇಷ್ಟು ನಿರಾಶಜನಕ ಪರಿಸ್ಥಿತಿಗಳನ್ನು ನಾವಿಂದು ಎದುರಿಸುವದೇಕೆಂದು ನೀವು ನೆನಸುತ್ತೀರಿ?” ಅವನ ಪ್ರತಿಕ್ರಿಯೆಯ ನಂತರ, ಹೀಗೆ ಕೂಡಿಸಬಹುದು: “ಅನೇಕಾನೇಕ ಜನರಿಗೆ ಜೀವಿತವು ಆಶಾಶೂನ್ಯವೂ ನಿರಾಶಜನಕವೂ ಆಗಿದೆ ಎಂದು ಬೈಬಲು ಒಪ್ಪುತ್ತದೆ. ಪ್ರಸಂಗಿ 2:17ರಲ್ಲಿ ಏನು ಹೇಳಿದೆ ಎಂಬದನ್ನು ಗಮನಿಸಿರಿ. [ಓದಿ.] ಇಲ್ಲಿ ಹೇಳಿದ ವಿಷಯವನ್ನು ನೀವು ಒಪ್ಪುತ್ತೀರೋ? [ಪ್ರತಿಕ್ರಿಯೆಗೆ ಎಡೆಗೊಡಿ.] ಅನೇಕ ಸಮಸ್ಯೆಗಳುಳ್ಳ ಒಬ್ಬ ವ್ಯಕ್ತಿಗೆ ಯಾವುದು ಸಾಂತ್ವನವನ್ನು ತರುವದು ಎಂದು ನೀವು ನೆನಸುತ್ತೀರಿ? [ಉತ್ತರಿಸಲು ಎಡೆಗೊಡಿ.] ಜೀವಿತಕ್ಕೆ ಒಂದು ನಿಶ್ಚಿತ ಹೊರನೋಟವನ್ನು ಕೊಡುವ ಒಂದು ವಚನವು ಇಲ್ಲಿದೆ. [ಕೀರ್ತನೆ 37: 39, 40 ಓದಿ.] ಯೆಹೋವನ ಸಾಕ್ಷಿಗಳು ಬೈಬಲ್ ಶಿಕ್ಷಣವನ್ನು ಪ್ರೋತ್ಸಾಹಿಸುವದು ಇದಕ್ಕಾಗಿಯೇ. ದೃಷ್ಟಾಂತಕ್ಕಾಗಿ, ನಮ್ಮ ಹೊಸ ಎಚ್ಚರ! ಪತ್ರಿಕೆಯಲ್ಲಿ ಚರ್ಚಿಸಲಾದ ಈ ವಿಷಯವನ್ನು ನೋಡಿರಿ.” ಅನಂತರ, ಚಂದಾ ನೀಡಿರಿ. ಚಂದಾ ನಿರಾಕರಿಸಲ್ಪಟ್ಟಲ್ಲಿ, ಎರಡು ಪತ್ರಿಕೆಗಳನ್ನು ನೀಡಲು ಪ್ರಯತ್ನಿಸಿರಿ.
7 ಯೆಹೋವನನ್ನು ಸೇವಿಸಲು ಇವು ರೋಮಾಂಚಕರ ಸಮಯಗಳೆಂಬದಕ್ಕೆ ಯಾವ ಸಂಶಯವೂ ಇಲ್ಲ. ಈ ನಿಜತ್ವವು ನಮ್ಮೆಲ್ಲರನ್ನು ಈ ತಿಂಗಳ ಎಲ್ಲಾ ಸಂದರ್ಭಗಳ ಸದುಪಯೋಗವನ್ನು ಮಾಡಿ, ಪ್ರಚಲಿತ ಘಟನೆಗಳ ಹಿಂದಿರುವ ನಿಜಾರ್ಥವನ್ನು ಹೆಚ್ಚೆಚ್ಚು ಪ್ರಾಮಾಣಿಕ ಜನರು ಕಾಣುವಂತೆ ನೆರವಾಗಲು ಪ್ರೇರೇಪಿಸಲಿ.