ಮನೆಯಿಂದ ಮನೆಗೆ ನಮ್ಮ ಪತ್ರಿಕೆಗಳನ್ನು ಉಪಯೋಗಿಸುವುದು
1 ಎಚ್ಚರ!ದ ಉದ್ದೇಶವು ಅದರ ಪ್ರತಿ ಸಂಚಿಕೆಯ ಪುಟ 4 ರಲ್ಲಿ ಸ್ಪಷ್ಟವಾಗಿಗಿ ತಿಳಿಸಲಾಗಿದೆ: “ಇಸವಿ 1914ರ ಘಟನೆಗಳನ್ನು ನೋಡಿದ ಸಂತತಿಯು ಗತಿಸಿಹೋಗುವ ಮೊದಲು, ಶಾಂತಿಯ ಮತ್ತು ಭದ್ರ ನೂತನ ಲೋಕವೊಂದರ ನಿರ್ಮಾಣಿಕನ ವಾಗ್ದಾನದಲ್ಲಿ ಈ ಪತ್ರಿಕೆಯು ಭರವಸೆಯನ್ನು ಕಟ್ಟುತ್ತದೆ.” ನಿಶ್ಚಯವಾಗಿಯೂ, ಇಂಥ ಒಂದು ಪತ್ರಿಕೆಯು ಮನೆಯಿಂದ ಮನೆಯ ನಮ್ಮ ಶುಶ್ರೂಷೆಯಲ್ಲಿ ಸಾಧ್ಯವಾದಷ್ಟು ವ್ಯಾಪಕ ಹಂಚಿಕೆಗೆ ಯೋಗ್ಯವಾಗಿದೆ!
2 ಆತ್ಮಿಕವಾಗಿ ಒಲವಿಲ್ಲದೆ ಇರುವ ಜನರ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಎಚ್ಚರ! ಒಂದು ಅತ್ಯುತ್ತಮ ಮಾರ್ಗವಾಗಿದೆ. ಪ್ರತಿಯೊಂದು ಸಂಚಿಕೆಯನ್ನು ಓದುವಾಗ, ಇತರರೊಂದಿಗೆ ಹಂಚಿಕೊಳ್ಳಲು ಸೂಕ್ತವಾದ ಅಂಶಗಳಿಗಾಗಿ ನೋಡಿರಿ. ಕೆಲವು ಪ್ರಚಾರಕರು ತಮ್ಮ ವೈಯಕ್ತಿಕ ಪ್ರತಿಯಲ್ಲಿ ಟಿಪ್ಪಣಿಗಳನ್ನು ಮಾಡುತ್ತಾರೆ, ಮತ್ತು ಪ್ರತ್ಯೇಕವಾದ ಆ ಸಂಚಿಕೆಯೊಂದಿಗೆ ಕ್ಷೇತ್ರ ಸೇವೆಗೆ ಹೋಗುವ ಮೊದಲು, ಮನೆಯವರೊಂದಿಗೆ ಹಂಚಿಕೊಳ್ಳಲು ಮನಸ್ಸಿನಲ್ಲಿ ನಿರ್ದಿಷ್ಟ ಅಂಶಗಳನ್ನು ಇಟ್ಟುಕೊಳ್ಳುವ ಸಲುವಾಗಿ ಅಂಕನಗಳನ್ನು ಪುನಃ ವಿಮರ್ಶಿಸುತ್ತಾರೆ.
3 ನಾವು ಉಪಯೋಗಿಸುತ್ತಿರುವ ಎಚ್ಚರ!ದ ಸಂಚಿಕೆಯಲ್ಲಿ ಚರ್ಚಿಸಲಾದ ಒಂದು ವಿಷಯದ ಮೇಲೆ ಸ್ಪಷ್ಟವಾಗಿದ ಒಂದು ಹೇಳಿಕೆಯನ್ನು ಮಾಡುವ ಮೂಲಕ ನಮ್ಮ ನಿರೂಪಣೆಯನ್ನು ಆರಂಭಿಸಲು ನಾವು ಆರಿಸಬಹುದು.
ಮನೆಯವನು ಆಸಕ್ತಿಯನ್ನು ತೋರಿಸುವುದಾದರೆ, ಪ್ರಾಯಶಃ ಹೀಗೆ ಹೇಳುವ ಮೂಲಕ ನಾವು ಪತ್ರಿಕೆಯನ್ನು ಪರಿಚಯ ಪಡಿಸಬಲ್ಲೆವು:
▪ “ವಿಷಯದ ಮೇಲೆ ಹೆಚ್ಚಿನ ವಿವರಗಳನ್ನು ಎಚ್ಚರ!ದ ಈ ಲೇಖನವು ಕೊಡುತ್ತದೆ.” ಆಮೇಲೆ ಈ ಮೊದಲೇ ಆಯ್ಕೆ ಮಾಡಿದ್ದ ಒಂದೆರಡು ಸಾಲುಗಳನ್ನು ಓದಿ, ಮುಂದುವರಿಸಿರಿ: “ಈ ವಿಷಯದಲ್ಲಿ ನೀವು ಆಸಕ್ತರಾಗಿ ತೋರುವುದರಿಂದ, ಎಚ್ಚರ!ದ ಈ ಸಂಚಿಕೆಯಲ್ಲಿರುವ ಈ ಲೇಖನವನ್ನು ಅಷ್ಟೇ ಅಲ್ಲದೆ ಇತರ ಸಮಯೋಚಿತ ಲೇಖನಗಳನ್ನು ಓದಲು ನೀವು ಬಯಸುವಿರೋ? ಹಾಗಿರುವಲ್ಲಿ, ಅದನ್ನು ಮತ್ತು ಅದರ ಸಂಗಾತಿ ಪತ್ರಿಕೆಯಾದ ಕಾವಲಿನಬುರುಜು ಪತ್ರಿಕೆಯನ್ನು ನಿಮ್ಮೊಂದಿಗೆ ರೂ. 6ರ ಕಾಣಿಕೆಗೆ ಬಿಟ್ಟುಹೋಗಲು ನಾನು ಸಂತೋಷಿಸುತ್ತೇನೆ.”
4 ಮನೆಯವನು ಆತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಸರಳವಾಗಿ ಅಭಿವ್ಯಕ್ತ ಪಡಿಸಿದರೆ, ಕಡೇ ದಿನಗಳ ಕುರಿತು 2 ತಿಮೊಥೆಯ 3:1-5 ರಂಥ ವಚನಕ್ಕೆ ನಾವು ಸೂಚಿಸಬಹುದು. ತದನಂತರ, ನಮ್ಮ ಪತ್ರಿಕೆಗಳಲ್ಲಿ ಅವನ ಆಸಕ್ತಿಯನ್ನು ಕೆರಳಿಸಲು, ಕಾವಲಿನಬುರುಜು ಪತ್ರಿಕೆಯ ಪ್ರಚಲಿತ ಸಂಚಿಕೆಯ ಪುಟ 2 ರಿಂದ ನೇರವಾಗಿ ಓದಬಹುದು. ಆ ಭಾಗವು ಹೀಗೆ ಪ್ರಾರಂಭಿಸುತ್ತದೆ: “ಕಾವಲಿನಬುರುಜು ಪತ್ರಿಕೆಯ ಉದ್ದೇಶ.” ಅದಾದಮೇಲೆ, ಅವನಿಗೆ ಕಾವಲಿನಬುರುಜು ಮತ್ತು ಎಚ್ಚರ!ದ ಪ್ರಚಲಿತ ಸಂಚಿಕೆಗಳನ್ನು ನೀಡಿರಿ.
5 ಜನರು ಧರ್ಮಗಳಲ್ಲಿ ಆಸಕ್ತರೆಂದು ತೋರುವ ಕೆಲವು ಟೆರಿಟೊರಿಗಳಲ್ಲಿ, ಪತ್ರಿಕೆಗಳನ್ನು ಪ್ರದರ್ಶಿಸುವ ಬದಲು, ನೀವು ಹೀಗೆ ಹೇಳಬಹುದು:
▪ “ಈ ಸಮುದಾಯದಲ್ಲಿ, ನಮ್ಮ ಧರ್ಮದಿಂದ ಭಿನ್ನವಾದ ಹಲವಾರು ಧರ್ಮಗಳನ್ನು ಆಚರಿಸುವ ಜನರನ್ನು ನಾವು ಭೇಟಿಯಾಗುತ್ತೇವೆ. ದೇವರಿಗಾಗಿ ಮಾನವಕುಲದ ಅನ್ವೇಷಣೆಯು ಅನೇಕ ಭಿನ್ನವಾದ ದಿಕ್ಕುಗಳನ್ನು ತೆಗೆದುಕೊಂಡಿದೆ. [ಅ. ಕೃತ್ಯಗಳು 17:26, 27 ಓದಿರಿ.] ತಾವಾಗಿಯೇ ದೇವರನ್ನು ಹುಡುಕುವ ಬದಲು ಜನರು ಸಾಮಾನ್ಯವಾಗಿ ತಮ್ಮ ಹೆತ್ತವರ ಧರ್ಮವನ್ನು ಅನುಸರಿಸುತ್ತಾರೆಂದು ನೀವು ಒಪ್ಪುತ್ತೀರೊ? [ಹೇಳಿಕೆಗಾಗಿ ಅನುಮತಿಸಿರಿ.] ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಈ ಪುಸ್ತಕದ ಮೊದಲನೆಯ ಅಧ್ಯಾಯದಲ್ಲಿ ಮಾಡಲಾದ ಅಂಶವೇ ಅದಾಗಿದೆ. [ಪುಟ 8 ರಲ್ಲಿರುವ 12 ನೆಯ ಪ್ಯಾರಗ್ರಾಫಿನ ಮಾಹಿತಿಯನ್ನು ಎತ್ತಿತೋರಿಸಿರಿ.] ಬೇರೆ ಧರ್ಮಗಳ ಕುರಿತು ಕಲಿಯುವುದು ಪ್ರಬೋಧಿಸುವಂಥದ್ದೂ ಶೈಕ್ಷಣಿಕವಾದದ್ದೂ ಆಗಿದೆ. ಈ ಪುಸ್ತಕವು ಲೋಕದ ಶ್ರೇಷ್ಠ ಧರ್ಮಗಳ ಮೂಲ, ಆಚರಣೆಗಳು, ಮತ್ತು ಬೋಧನೆಗಳನ್ನು ವಿವರಿಸುತ್ತದೆ.” ಸಮಯವು ಅನುಮತಿಸಿದಂತೆ, ಅಧ್ಯಾಯಗಳ ಪಟ್ಟಿಯನ್ನು ಮತ್ತು ಪುಸ್ತಕದಲ್ಲಿರುವ ಒಂದು ಯಾ ಎರಡು ದೃಷ್ಟಾಂತಗಳನ್ನು ಮನೆಯವನಿಗೆ ತೋರಿಸಿರಿ.
6 ನಾವು ಮನೆಯಿಂದ ಮನೆಗೆ ಹೋಗುವಾಗ, ಜನರು ಆತ್ಮಿಕ ಪ್ರಗತಿಯನ್ನು ಮಾಡಲು ಸಹಾಯ ನೀಡುವ ಲೋಕದಲ್ಲಿನ ಎರಡು ಅತ್ಯುತ್ತಮವಾದ ಉಪಕರಣಗಳು—ಕಾವಲಿನಬುರುಜು ಮತ್ತು ಎಚ್ಚರ! ನಮ್ಮಲ್ಲಿ ಇದೆ ಎಂಬುದನ್ನು ನಾವು ಜ್ಞಾಪಕದಲ್ಲಿಡೋಣ. ಈ ಪತ್ರಿಕೆಗಳಲ್ಲಿ ಮನೆಯವರುಗಳ ಆಸಕ್ತಿಯನ್ನು ಪ್ರಚೋದಿಸುವಲ್ಲಿ ಮತ್ತು ಪ್ರತಿಯೊಂದು ಸಂದರ್ಭದಲ್ಲಿ ಅವುಗಳನ್ನು ನೀಡುವಲ್ಲಿ ನಾವು ಕಾರ್ಯ ಮಾಡುವವರಾಗೋಣ.