ದೇವಪ್ರಭುತ್ವ ವಾರ್ತೆಗಳು
ಬ್ರಿಟಿಷ್ ವರ್ಜಿನ್ ಐಲೆಂಡ್ಸ್: ಮೇ ತಿಂಗಳಲ್ಲಿ 136 ಪ್ರಚಾರಕರ ಹೊಸ ಉನ್ನತ ಸಂಖ್ಯೆಯು 206 ಬೈಬಲಭ್ಯಾಸಗಳನ್ನು ನಡಿಸಿತು, ಇದೂ ಒಂದು ಹೊಸ ಉನ್ನತ ಸಂಖ್ಯೆಯು.
ಫಿಜೀ: 1,642 ಪ್ರಚಾರಕರೊಂದಿಗೆ ಮೇ ತಿಂಗಳಲ್ಲಿ 77ನೇ ಅನುಕ್ರಮ ಉನ್ನತ ಸಂಖ್ಯೆ ಸಿಕ್ಕಿದೆ. ತಾಸುಗಳಲ್ಲಿ ಇವರು ತಮ್ಮ 32ನೇ ಅನುಕ್ರಮ ಉಚ್ಛಾಂಕವನ್ನು ಮತ್ತು ಪುನಃಸಂದರ್ಶನೆ ಮತ್ತು ಬೈಬಲಭ್ಯಾಸಗಳಲ್ಲಿ ತಮ್ಮ 48ನೇ ಅನುಕ್ರಮ ಉಚ್ಛಾಂಕವನ್ನು ಪಡೆದಿದ್ದಾರೆ. ಮೇ ತಿಂಗಳಲ್ಲಿ ಬ್ರಾಂಚ್ ಕ್ಷೇತ್ರದಲ್ಲಿ ಐದು ಹೊಸ ಸಭೆಗಳನ್ನು ಸ್ಥಾಪಿಸಲಾಯಿತು.
ಕೆನ್ಯ: ಪ್ರಚಾರಕರಲ್ಲಿ 6,000 ಬಿಂದುವನ್ನು ಮೊತ್ತಮೊದಲಾಗಿ ದಾಟಲಾಯಿತು, ಮೇ ತಿಂಗಳಲ್ಲಿ 6,065 ಹೊಸ ಉನ್ನತ ಸಂಖ್ಯೆಯೊಂದಿಗೆ.
ಕೊರಿಯ: ಮೇ ತಿಂಗಳಲ್ಲಿ 65,260 ಪ್ರಚಾರಕರು ವರದಿ ಮಾಡಿದರು, ಕಳೆದ 89 ತಿಂಗಳುಗಳಲ್ಲಿ ಅವರ 84ನೇ ಉನ್ನತ ಸಂಖ್ಯೆಯಿದು.
ಪಪುವ ನ್ಯೂಗಿನಿ: ಮೇ ತಿಂಗಳಲ್ಲಿ 2,547 ವರದಿಯೊಂದಿಗೆ ಪ್ರಚಾರಕರಲ್ಲಿ ಇನ್ನೊಂದು ಹೊಸ ಉನ್ನತ ಸಂಖ್ಯೆ ಸಿಕ್ಕಿದೆ.
ಯು. ಎಸ್. ವರ್ಜಿನ್ ಐಲೆಂಡ್ಸ್: ಮೇ ತಿಂಗಳ 19-ಪ್ರತಿಶತ ವೃದ್ಧಿಯು 560 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ತಂದಿದೆ.