ನೀವು ಬೈಬಲ್ ಅಭ್ಯಾಸಗಳನ್ನು ನೀಡುತ್ತೀರೋ?
1 ಬೈಬಲನು ಅಭ್ಯಾಸಿಸುವ ಒಂದು ಅವಕಾಶವನ್ನು ಜನರಿಗೆ ನೀಡುವುದರಲ್ಲಿ ನೇರವಾದ ಸಾಮೀಪ್ಯತೆಯನ್ನು ಬಳಸುವುದರಿಂದ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಅನೇಕರು ಯಶಸ್ವಿಗಳಾಗಿದ್ದಾರೆ. ಅನೇಕಾವರ್ತಿ ಸಾಹಿತ್ಯವನ್ನು ನಿರಾಕರಿಸಿದಂಥ ವ್ಯಕ್ತಿಯೊಬ್ಬನು, ಬೈಬಲ್ ಅಭ್ಯಾಸವನ್ನು ನೀಡಿದಾಗ ಸುಲಭವಾಗಿಯೇ ಪ್ರತಿವರ್ತಿಸಿದನು. ಅವನಂದದ್ದು: “ಬೈಬಲನ್ನು ಅಭ್ಯಾಸಿಸಲು ನಾನು ಯಾವಾಗಲೂ ಬಯಸುತ್ತಿದ್ದೆ.” ಬೈಬಲ್ ಅಭ್ಯಾಸವೊಂದು ಆರಂಭಿಸಲ್ಪಟ್ಟಿತು, ಮತ್ತು ಇಡೀ ಕುಟುಂಬವೇ ತೀವ್ರವಾದ ಪ್ರಗತಿಯನ್ನು ಮಾಡಿತು.
2 ಅಭ್ಯಾಸಗಳನ್ನು ಆರಂಭಿಸುವ ಪ್ರಜ್ಞೆಯು ಎಲ್ಲರಲ್ಲೂ ಇರತಕ್ಕದ್ದು. ಕ್ರಿಸ್ತನ ಶಿಷ್ಯರಾಗುವುದರಲ್ಲಿ ವ್ಯಕ್ತಿಗಳು ಪ್ರಗತಿಯನ್ನು ಮಾಡುತ್ತಿರಬೇಕಾದರೆ, ಅವರಿಗೆ ಕಲಿಸಬೇಕಾಗಿದೆ. (ಮತ್ತಾ. 28:19, 20) ಕಲಿಸಲ್ಪಡಲು, ಅವರೊಂದಿಗೆ ಒಂದು ಬೈಬಲ್ ಅಭ್ಯಾಸವು ನಡಿಸಲ್ಪಡುವ ಆವಶ್ಯಕತೆಯಿರುತ್ತದೆ. ಬೈಬಲಿನ ಮತ್ತು ದೇವರ ಉದ್ದೇಶಗಳ ಕುರಿತು ಹೆಚ್ಚಿನದ್ದನ್ನು ಮನೆಯವನು ಹೇಗೆ ಕಲಿಯಸಾಧ್ಯವಿದೆ ಎಂಬುದನ್ನು ಪ್ರದರ್ಶಿಸಿ ತೋರಿಸುವ ನೀಡುವಿಕೆಯನ್ನು ಕೇವಲ ಮಾಡುವುದರಿಂದಲೂ ಅಭ್ಯಾಸಗಳನ್ನು ಕೆಲವೊಮ್ಮೆ ಆರಂಭಿಸಬಹುದು. ಒಬ್ಬ ಸಹೋದರನು ಶಾಂತಿಯ ಹೊಸ ಲೋಕದಲ್ಲಿ ಒಂದು ಜೀವಿತ ಟ್ರ್ಯಾಕ್ಟ್ನ ಮೂಲಕ ಐದು ಅಭ್ಯಾಸಗಳನ್ನು ಆರಂಭಿಸಲು ಶಕ್ತನಾದನು. ಅಷ್ಟೊಂದು ಅಭ್ಯಾಸಗಳನ್ನು ಅವನು ಕ್ರಮವಾಗಿ ನಡಿಸಲು ಶಕ್ತನಾಗಿರಲಿಲವ್ಲಾದುದರಿಂದ, ಬೈಬಲ್ ಅಭ್ಯಾಸಗಳನ್ನು ಇತರ ಪ್ರಚಾರಕರಿಗೆ ಹಸ್ತಾಂತರಿಸಲು ಆರಂಭಿಸಿದನು.
3 ಅಭ್ಯಾಸಗಳನ್ನು ಆರಂಭಿಸುವುದು ನಮಗೆ ಸುಲಭವೆಂದು ಕಂಡುಬಂದಲ್ಲಿ, ನಮ್ಮೊಂದಿಗೆ ಇತರ ಪ್ರಚಾರಕರನ್ನು ಕೊಂಡೊಯ್ಯಬಹುದು ಮತ್ತು ಅವರಿಗೂ ಅಭ್ಯಾಸಗಳು ಸಿಗುವಂತೆ ಸಹಾಯ ಮಾಡಬಹುದು. ಇಲ್ಲವೇ, ನಾವು ಆರಂಭಿಸಿದಂಥ ಕೆಲವು ಅಭ್ಯಾಸಗಳನ್ನು ಸಭೆಯಲ್ಲಿ ಇತರರಿಗೆ ನಾವು ವರ್ಗಾಯಿಸಸಾಧ್ಯವಿದೆ. ನೀವು ಒಂದು ಬೈಬಲ್ ಅಭ್ಯಾಸವನ್ನು ಮಾಡಲು ಬಯಸುವುದಾದರೆ, ಮನೆಮನೆಯ ಸೇವೆಯಲ್ಲಿ ನೀವು ಭೇಟಿಯಾಗುವವರಿಗೆ ಬೈಬಲ್ ಅಭ್ಯಾಸವೊಂದನ್ನು ಯಾಕೆ ನೀಡಬಾರದು? ಒಂದು ಸಂದರ್ಭದಲ್ಲಿ, ಪ್ರಚಾರಕನೊಬ್ಬನು ಅಷ್ಟೊಂದು ಆಸಕ್ತಿಯನ್ನು ತೋರಿಸಿರದ ಹದಿಪ್ರಾಯದ ಹುಡುಗಿಯೊಬ್ಬಳಿಗೆ ಪುನಃ ಭೇಟಿ ಮಾಡಿದನು. ಆದಾಗ್ಯೂ, ಅವಳಿಗೊಂದು ಬೈಬಲ್ ಅಭ್ಯಾಸವನ್ನು ಪ್ರಚಾರಕನು ನೀಡಿದನು, ಮತ್ತು ಅವಳು ಅದನ್ನು ಸ್ವೀಕರಿಸಿದಳು. ಅವಳೀಗ ದೀಕ್ಷಾಸ್ನಾನ ಪಡೆದಿರುತ್ತಾಳೆ, ಮತ್ತು ಅವಳ ಸಹೋದರಿ ಮತ್ತು ಅವಳ ಗಂಡನು ಕೂಡ ಕೂಟಗಳಿಗೆ ಹಾಜರಾಗುತ್ತಿದ್ದಾರೆ.—ಗಲಾ. 6:6.
4 ನಾವು ಅಭ್ಯಾಸವನ್ನು ಆರಂಭಿಸಿದ ಎಲ್ಲರೂ ಅಭ್ಯಾಸವನ್ನು ಮುಂದರಿಸುತ್ತಾರೆಂದಲ್ಲ. ಅಭ್ಯಾಸ ಮಾಡುವವರೆಲ್ಲರೂ ಸತ್ಯದೊಳಗೆ ಬರುತ್ತಾರೆಂದಲ್ಲ. ಆದರೆ ಕೆಲವರು ಬರುತ್ತಾರೆ. ಹೆಚ್ಚು ಅಭ್ಯಾಸಗಳನ್ನು ನಾವು ಆರಂಭಿಸಿದಷ್ಟಕ್ಕೆ, ಯೆಹೋವನ ಸ್ತುತಿಗಾರರಾಗಲು ನಾವು ಇತರರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚಿನ ಸಾಧ್ಯತೆಗಳು ಅಲ್ಲಿರುತ್ತವೆ.