ಸುವಾರ್ತೆಯನ್ನು ನೀಡುವದು ಮನೆ ಬೈಬಲ್ ಅಭ್ಯಾಸಗಳನ್ನು ನೀಡುವದರಿಂದ
1 ಸಪ್ಟಂಬರ 1991ರ ನಮ್ಮ ರಾಜ್ಯದ ಸೇವೆಯ ಪುರವಣಿಯು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವ ಕಾರ್ಯವಿಧಾನದಲ್ಲಿ ನೆಡುವ ಮತ್ತು ನೀರನ್ನು ಹೊಯ್ಯುವ ನಮ್ಮ ಜವಾಬ್ದಾರಿಕೆಯನ್ನು ನಮ್ಮ ನೆನಪಿಗೆ ತಂದಿತ್ತು. ರಾಜ್ಯದ ಸಂದೇಶಕ್ಕೆ ಪ್ರತಿವರ್ತನೆ ತೋರಿಸುವ ಜನರ ಕಡೆಗೆ ನಮ್ಮ ಪ್ರೀತಿಯು ಬೈಬಲ್ ಅಭ್ಯಾಸಗಳನ್ನು ನಡಿಸುವಂತೆ ನಮ್ಮನ್ನು ಪ್ರಚೋದಿಸಬೇಕೆಂದು ನಮಗದು ತೋರಿಸಿತ್ತು. ಮನೆ ಬೈಬಲ್ ಅಭ್ಯಾಸಗಳನ್ನು ನೀಡುವದು ಶಿಷ್ಯರನ್ನಾಗಿ ಮಾಡುವ ನಮ್ಮ ನಿಯೋಗವನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ.—ಮತ್ತಾಯ 28:19, 20.
2 ನೀಡಲ್ಪಟ್ಟ ಉತ್ತಮ ಉತ್ತೇಜನೆಯನ್ನು ವ್ಯವಹಾರಕ್ಕೆ ಹಾಕಲು ನಮ್ಮಲ್ಲಿ ಹೆಚ್ಚಿನವರು ಆರಂಭಿಸಿರುವದನ್ನು ನೋಡುವದು ಒಳ್ಳೇದು. ಬಹಳ ಅಧಿಕ ಬೈಬಲ್ ಅಭ್ಯಾಸಗಳು ನಡಿಸಲ್ಪಡುತ್ತಾ ಇವೆ ಎಂದು ವರದಿಯು ತೋರಿಸುತ್ತದೆ. 1990ರ ಸೇವಾ ವರ್ಷಕ್ಕಿಂತಲೂ 1991ರಲ್ಲಿ 17 ಶೇಕಡಾ ಬೈಬಲ್ ಅಭ್ಯಾಸಗಳಲ್ಲಿ ಏರುವಿಕೆಯ ವರದಿಯು ಮಾಡಲ್ಪಟ್ಟಿದೆ. ಮೊತ್ತಮೊದಲ ಬಾರಿಗೆ ಅಭ್ಯಾಸಗಳನ್ನು ಮಾಡಲು ಆರಂಭಿಸಿದವರು ಖಂಡಿತವಾಗಿಯೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಅವರಿಗೆ ಪಾಲಿರುವದರಲ್ಲಿ ಆನಂದಿಸುತ್ತಾರೆ. ನಮ್ಮ ಶುಶ್ರೂಷೆಯ ಈ ಬಹುಮಾನವನ್ನೀಯುವ ವಿಭಾಗದಲ್ಲಿ ಇನ್ನೂ ಹೆಚ್ಚಿನವರು ಹೇಗೆ ಭಾಗವಹಿಸಬಹುದು?
3 ಈ ತಿಂಗಳ ನೀಡುವಿಕೆಯನ್ನು ಉಪಯೋಗಿಸಿರಿ: ಹೊಸ ಬೈಬಲ್ ಅಭ್ಯಾಸಗಳನ್ನು ಆರಂಭಿಸುವಂತೆ ಹುಡುಕಲು ದಶಂಬರ ತಿಂಗಳು ವಿಶೇಷವಾಗಿ ಯುಕ್ತವಾದದ್ದಾಗಿದೆ. ನಾವು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಮತ್ತು ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಪುಸ್ತಕವನ್ನು ನೀಡಲಿದ್ದೇವೆ. ರೀಸನಿಂಗ್ ಪುಸ್ತಕದಲ್ಲಿರುವ ಸಲಹೆಗಳನ್ನು ಉಪಯೋಗಿಸುವದು ಮನೆಯವನಲ್ಲಿ ಆಸಕ್ತಿಯನ್ನು ಬೆಳೆಸುವ ಒಂದು ಉತ್ತಮ ವಿಧಾನವಾಗಿದೆ.
4 ರೀಸನಿಂಗ್ ಪುಸ್ತಕದ 10ನೆಯ ಪುಟದಲ್ಲಿ ಸೂಚಿಸಲ್ಪಟ್ಟ ಪೀಠಿಕೆಗಳನ್ನು ಉಪಯೋಗಿಸುವದರ ಮೂಲಕ ನಾವು ಬೈಬಲನ್ನು ಮುಖ್ಯವಾಗಿ ತೋರಿಸಬಹುದು. ಬೈಬಲಿನ ಕಡೆಗೆ ಗಮನ ಸೆಳೆಯಬಹುದಾದ ಐದು ಭಿನ್ನವಾದ ರೀತಿಗಳನ್ನು ಅಲ್ಲಿ ಪಟ್ಟಿ ಮಾಡಲಾಗಿದೆ. ಜೀವಿತದ ಪ್ರಶ್ನೆಗಳಿಗೆ ಬೈಬಲಿನ ಉತ್ತರಗಳನ್ನು ಹುಡುಕಲು ಜನರಿಗೆ ಪ್ರೋತ್ಸಾಹಿಸುವದರ ಮೂಲಕ ಒಂದು ಬೈಬಲ್ ಅಭ್ಯಾಸಕ್ಕೆ ದಾರಿಯನ್ನು ತೆರೆಯಬಹುದಾಗಿದೆ.
5 ರೀಸನಿಂಗ್ ಪುಸ್ತಕದ 12ನೆಯ ಪುಟದಲ್ಲಿರುವ “ಹೋಮ್ ಬೈಬಲ್ ಸಡ್ಟೀಸ್” ಎಂಬ ಉಪಶೀರ್ಷಿಕೆಯ ಕೆಳಗೆ ಗಾಡ್ಸ್ ವರ್ಡ್ ಪುಸ್ತಕದ ಕಡೆಗೆ ಗಮನ ಸೆಳೆಯಲು ಪ್ರಯೋಜನಕಾರಿಯಾಗಿರುವ ಎರಡು ಸಲಹೆಗಳು ಅಲ್ಲಿವೆ. ಪುಸ್ತಕವನ್ನು ಒಂದು ಕ್ರಮಬದ್ಧ ರೀತಿಯ ಅಭ್ಯಾಸದ ವಿಧಾನದಲ್ಲಿ ಉಪಯೋಗಿಸಲು ಪ್ರೋತ್ಸಾಹವನ್ನೀಯುತ್ತವೆ. ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲು ನೀವು ನೇರ ವಿಧಾನವನ್ನು ಉಪಯೋಗಿಸುವದಾದರೆ, ಆಕ್ಟೋಬರ, 1991ರ ನಮ್ಮ ರಾಜ್ಯದ ಸೇವೆಯಲ್ಲಿರುವ ಉತ್ತಮ ಸಲಹೆಗಳನ್ನು ನೀವು ಅನುಸರಿಸಸಾಧ್ಯವಿದೆ.
6 ಯೆಹೋವನಲ್ಲಿ ಭರವಸವಿಡಿರಿ: ಬೈಬಲ್ ಅಭ್ಯಾಸ ಕಾರ್ಯದಲ್ಲಿ ಯಶಸ್ವೀಯಾಗಬೇಕಾದರೆ, ಬೈಬಲ್ ಅಭ್ಯಾಸಗಳನ್ನು ನೀಡುವದರಿಂದ ಯಶಸ್ವೀಯು ಯೆಹೋವನ ಸಹಾಯದಿಂದ ಮಾತ್ರವೇ ಪಡೆಯಸಾಧ್ಯವಿದೆ ಎಂದು ನಾವು ನೆನಪಿನಲ್ಲಿಡತಕ್ಕದ್ದು. ಜನರಿಗೆ ಸಹಾಯ ಮಾಡುವ ನಮ್ಮ ಪ್ರಯತ್ನದಲ್ಲಿ ಅವನು ಒಂದು ಮುಖ್ಯ ಪಾತ್ರವನ್ನು ಆಡುತ್ತಾನೆ. (1 ಕೊರಿಂ. 3:6) ಆದಕಾರಣ, ಅಭ್ಯಾಸಮಾಡಲು ಒಬ್ಬನನ್ನು ಕಂಡುಕೊಳ್ಳಲು ಶಕ್ತನಾಗುವಂತೆ ನಾವು ಪ್ರಾರ್ಥಿಸುವದು ಮಾತ್ರವಲ್ಲ, ಕಂಡುಕೊಂಡ ಆಸಕ್ತಿಯವನ ಪ್ರಗತಿಯ ಕುರಿತೂ ನಾವು ಪ್ರಾರ್ಥಿಸತಕ್ಕದ್ದು. (ಯೋಹಾನ 16:23) “ದೇವರ ಜೊತೆ ಕೆಲಸಗಾರರು” ನಾವಾಗಿದ್ದೇವೆ ಎಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು.—1 ಕೊರಿಂ. 3:9.