ಪುನಃ ಭೇಟಿಗಳಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನುಪಯೋಗಿಸುವುದು
1 ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದವರ ಪರಾಂಬರಿಕೆ ಮಾಡುವುದರಲ್ಲಿ ಶ್ರದ್ಧೆಯುಳ್ಳವರಾಗಿರುವ ಪ್ರಾಮುಖ್ಯತೆಯು ಅಪೊಸ್ತಲ ಪೌಲನಿಗೆ ತಿಳಿದಿತ್ತು. ಅವನು ಅವರನ್ನು, ಯಾವುದಕ್ಕೆ ಕ್ರಮವಾದ ನೀರೆರೆಯುವ ಮತ್ತು ಕೃಷಿಮಾಡುವ ಅಗತ್ಯವಿದೆಯೊ ಆ ಎಳೇ ಗಿಡಗಳಿಗೆ ಹೋಲಿಸಿದನು. (1 ಕೊರಿಂ. 3:6-9) ತದ್ರೀತಿಯಲ್ಲಿ ಇಂದು, ಅವರ ಆತ್ಮಿಕ ಬೆಳವಣಿಗೆಯನ್ನು ಬೆಳಸಲು ನಾವು ಪುನಃ ಭೇಟಿಗಳನ್ನು ಮಾಡುವಾಗ ಆಸಕ್ತರಿಗೆ ನಾವು ಕೋಮಲವಾದ ಆರೈಕೆಯನ್ನು ಮಾಡುವ ಅಗತ್ಯ ಇರುತ್ತದೆ.
2 ನಾವು ಭೇಟಿ ನೀಡುವ ವ್ಯಕ್ತಿಗಳಿಗೆ ನಮ್ಮ ಹಿಂದಿನ ಭೇಟಿಯಲ್ಲಿ ಮಾತಾಡಿದ ವಿಷಯಗಳನ್ನು ನೆನಪಿಗೆ ತರುವಂತೆ ಸಹಾಯ ಮಾಡಲು ಆಗಾಗ್ಯೆ ಮರುಜ್ಞಾಪಕ ಮಾಡುವ ಜರೂರಿಯಿರುತ್ತದೆ ಎಂದು ನೆನಪಿನಲ್ಲಿಡುವುದು ಒಳ್ಳೆಯದು. ಆದುದರಿಂದ, ಪ್ರತಿಯೊಂದು ಪುನಃ ಭೇಟಿಯಲ್ಲಿ, ಅದರ ಹಿಂದಿನ ಸಂದರ್ಶನದಲ್ಲಿ ನೀವು ಚರ್ಚಿಸಿದ್ದನ್ನು ಸಂಕ್ಷಿಪ್ತವಾಗಿ ಪರಾಮರ್ಶಿಸುವುದು, ವಿಶೇಷವಾಗಿ ಮನೆಯವನು ಗಣ್ಯಮಾಡಿದ ವಿಚಾರಗಳ ಮೇಲೆ ಕೇಂದ್ರೀಕರಿಸುವುದು ಸೂಕ್ತವಾಗಿರಬಲ್ಲದು. ಚರ್ಚೆಯಲ್ಲಿ ಮನೆಯವನನ್ನು ಒಳಗೂಡಿಸಿರಿ ಮತ್ತು ಅವನ ಅಭಿರುಚಿಗಳನ್ನು ಮತ್ತು ಅಗತ್ಯತೆಗಳನ್ನು ಸುಲಭವಾಗಿ ವಿವೇಚಿಸಿರಿ.
3 ಪುನಃ ಸಂದರ್ಶನಗಳನ್ನು ಮಾಡುವಲ್ಲಿ, “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ನೀಡಲ್ಪಟ್ಟಿರಲಿ ಯಾ ಇಲ್ಲದಿರಲಿ, ಅಭ್ಯಾಸವೊಂದನ್ನು ಆರಂಭಿಸಲು ಈ ನೇರ ಪ್ರಸ್ತಾವನೆಯನ್ನು ಬಳಸಲು ನೀವು ಬಯಸಬಹುದು:
▪ “ನಾವು ಮಾತಾಡುತ್ತಿರುವ ಅನೇಕ ಜನರು ಈ ಪುಸ್ತಕದ ಉಪಯೋಗದೊಂದಿಗೆ ಬೈಬಲಿನ ಅವರ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದಾರೆ.” ಅನಂತರ ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಪರಿವಿಡಿಯ ತಖ್ತೆಯ ಕಡೆಗೆ ತೆರಳಿ, ನೀವು ಈ ಪ್ರಶ್ನೆಯನ್ನು ಕೇಳಸಾಧ್ಯವಿದೆ: “ಇಲ್ಲಿರುವ ಯಾವ ವಿಷಯವು ನಿಮಗೆ ಅತಿ ಆಸಕ್ತಿಯನ್ನುಂಟುಮಾಡುತ್ತದೆ?” ಅವನು ಆಸಕ್ತಿಯನ್ನು ವ್ಯಕ್ತಪಡಿಸಿದ ಅಧ್ಯಾಯದೆಡೆಗೆ ತೆರಳಿರಿ ಮತ್ತು ಪ್ರತಿಯೊಂದು ಪ್ಯಾರಗ್ರಾಫ್ನ ಅತಿ ಮಹತ್ವದ ವಿಚಾರಗಳನ್ನು ಅವನು ಗ್ರಹಿಸಿಕೊಳ್ಳಲು ಶಕ್ತನಾಗುವಂತೆ, ಅಂಕಿಗಳಿರುವ ಪ್ಯಾರಗ್ರಾಫ್ಗಳಿಗನುಗುಣವಾಗಿ ಪ್ರತಿಯೊಂದು ಪುಟದ ಕೆಳಭಾಗದಲ್ಲಿರುವ ಪ್ರಶ್ನೆಗಳು ಹೇಗೆ ಜೋಡಿಸಲ್ಪಟ್ಟಿವೆ ಎಂದು ಮನೆಯವನಿಗೆ ತೋರಿಸಿರಿ. ಕೆಲವೇ ಪ್ಯಾರಗ್ರಾಫ್ಗಳನ್ನು ಮಾತ್ರ ಆವರಿಸಿರಿ ಮತ್ತು ಪುನಃ ಸಂದರ್ಶಿಸಲು ನಿಶ್ಚಿತ ಏರ್ಪಾಡುಗಳನ್ನು ಮಾಡಿರಿ.
4 ಇನ್ನೊಂದು ಪ್ರಸ್ತಾವನೆಯು ಹೀಗಿರಸಾಧ್ಯವಿದೆ:
▪ “ಕಳೆದ ವಾರದ ನಮ್ಮ ಚರ್ಚೆಯಲ್ಲಿ ನಾನು ನಿಜವಾಗಿಯೂ ಆನಂದಿಸಿದೆನು. ನಾವು ಅವರ ಮನೆಗಳಿಗೆ ಭೇಟಿ ನೀಡುತ್ತಾ ಇರುವುದು ಯಾಕೆ ಎಂದು ಅನೇಕ ಜನರು ಚಿಂತೆಯನ್ನು ವ್ಯಕ್ತಪಡಿಸಿರುತ್ತಾರೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಈ ಪುಸ್ತಕದ ಪುಟ 29 ರಲ್ಲಿ ಮಾಡಿರುವ ಹೇಳಿಕೆಯು ನಿಮಗೆ ಸ್ವಾರಸ್ಯಕರವಾಗಬಹುದೆಂದು ನಾನು ಯೋಚಿಸಿದೆ. [ಪ್ಯಾರಗ್ರಾಫ್ 11 ನ್ನು ಓದಿರಿ.] ಇಲ್ಲಿ ನಾವು ಓದಿದ ವಿಷಯದ ಆಧಾರದ ಮೇಲೆ, ನಮ್ಮ ಆರಾಧನೆಯು ದೇವರಿಗೆ ಸ್ವೀಕೃತವಾಗಲು ಏನು ಆವಶ್ಯಕವಾಗಿದೆಯೆಂದು ನೀವು ಹೇಳುವಿರಿ? [ಪ್ರತಿವರ್ತಿಸಲು ಬಿಡಿರಿ ಮತ್ತು ಅನಂತರ ಮನೆಯವನನ್ನು ಪ್ರಶಂಸಿರಿ.] ಹಿಂದೆ ಯೇಸುವಿನ ದಿನಗಳಲ್ಲಿ, ಅವರ ಆರಾಧನೆಯು ದೇವರಿಗೆ ಸ್ವೀಕೃತವಾಗಿರುತ್ತದೆಂದು ನೆನಸಿದವರು ಅಲಿದ್ದರು. ಅವರ ಕುರಿತಾಗಿ ಈ ಅಧ್ಯಾಯದ ಪ್ಯಾರಗ್ರಾಫ್ 2 ರಲ್ಲಿ ಏನು ಹೇಳಲ್ಪಟ್ಟಿದೆ ಎಂದು ಗಮನಿಸಿರಿ.” ಓದಿರಿ ಮತ್ತು ಹೇಳಿಕೆಗಳ ಮೇಲೆ ವ್ಯಾಖ್ಯಾನಿಸಿರಿ.
5 ಮೊದಲಿನ ಭೇಟಿಯಲ್ಲಿ “ಸದಾ ಜೀವಿಸಬಲ್ಲಿರಿ” ಪುಸ್ತಕ ನೀಡಿರುವಲ್ಲಿ ಹಿಂಬಾಲಿಸಿ ಹೋಗುವಾಗ, ನೀವು ಹೀಗನ್ನಸಾಧ್ಯವಿದೆ:
▪ “ಕಳೆದ ಸಮಯ ನಾನು ಭೇಟಿ ನೀಡಿದಾಗ ಬದಲಾವಣೆಯ ಅಗತ್ಯವಿರುವ ಲೋಕ ಪರಿಸ್ಥಿತಿಗಳ ಕುರಿತು ನಾವು ಚರ್ಚಿಸಿದ್ದೆವು. ದೇವರು ದುಷ್ಟತನಕ್ಕೆ ಏಕೆ ಅವಕಾಶ ಕೊಟ್ಟಿದ್ದಾನೆ ಎಂದು ನೀವೆಂದಾದರೂ ಆಶ್ಚರ್ಯಪಟ್ಟಿದ್ದೀರೋ?” ಪ್ರತಿವರ್ತನೆಗೆ ಅನುಮತಿಸಿರಿ ಮತ್ತು ಪುಟ 99 ರ ಪ್ಯಾರಗ್ರಾಫ್ 2 ಕ್ಕೆ ತೆರಳಿ, ಅಲ್ಲಿರುವ ಅಭ್ಯಾಸದ ಪ್ರಶ್ನೆಗಳನ್ನು ಗಮನಿಸಿರಿ. ಈ ಪ್ಯಾರಗ್ರಾಫ್ನ್ನು ಓದಿರಿ ಮತ್ತು ಶಾಸ್ತ್ರವಚನಗಳನ್ನು ನೋಡುತ್ತಾ ಚರ್ಚಿಸಿರಿ. ಈ ಪುಸ್ತಕದ ಆಯ್ದ ಚಿತ್ರಗಳಿಗೆ ತೆರಳುತ್ತಾ, ಚರ್ಚೆಗೆ ಕೂಡಿಸಬಹುದು, ಉದಾಹರಣೆಗೆ ಪುಟಗಳು 78, 84-5, 119, 147, 149-53 ಮತ್ತು 156-8.
6 ಒಂದು ಟ್ರ್ಯಾಕ್ಟ್ನ್ನು ಬಿಟ್ಟುಬಂದ ಕಡೆಯಲ್ಲಿ: ಕೆಲವೊಮ್ಮೆ ಆರಂಭದ ಭೇಟಿಯಲ್ಲಿ ಒಂದು ಟ್ರ್ಯಾಕ್ಟ್ನ್ನು ಬಿಟ್ಟುಬಂದಿರುತ್ತೇವೆ. ಪುನಃ ಭೇಟಿಯನ್ನು ಮಾಡುವಾಗ, ನಮೂದಿಸಲ್ಪಟ್ಟ ಶಾಸ್ತ್ರವಚನದೊಂದಿಗೆ ಟ್ರ್ಯಾಕ್ಟ್ನಿಂದ ಒಂದೆರಡು ಪ್ಯಾರಗ್ರಾಫ್ಗಳನ್ನು ನೀವು ಚರ್ಚಿಸಸಾಧ್ಯವಿದೆ. ಅನಂತರ ಟ್ರ್ಯಾಕ್ಟ್ನಲ್ಲಿ ನಮೂದಿಸಲ್ಪಟ್ಟ ಒಂದು ಶಾಸ್ತ್ರವಚನವು ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಅಧಿಕ ವಿವರವಾಗಿ ಹೇಗೆ ಚರ್ಚಿಸಲ್ಪಟ್ಟಿದೆ ಎಂದು ತೋರಿಸಿರಿ. ವ್ಯಕ್ತಿಯು ಆಸಕ್ತಿಯನ್ನು ತೋರ್ಪಡಿಸುವಲ್ಲಿ, ನೀವು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಬಹುದು ಮತ್ತು ನಿಮ್ಮ ಮುಂದಿನ ಸಂದರ್ಶನದಲ್ಲಿ ಚರ್ಚೆಯನ್ನು ಮುಂದುವರಿಸಲು ಏರ್ಪಾಡುಗಳನ್ನು ಮಾಡಿರಿ.
7 ನಮ್ಮ ವಶದಲ್ಲಿರುವ ಕ್ರೈಸ್ತ ನಂಬಿಕೆಯ ಎಳೆಯ ಗಿಡಗಳಿಗೆ ನೀರೆರೆಯುವುದನ್ನು ನಾವು ನಂಬಿಕೆಯಿಂದ ಪರಾಮರಿಕೆ ಮಾಡುತ್ತಿರುವಾಗ, ದೇವರು ತನ್ನ ಸ್ವಂತ ಸ್ತುತಿ ಮತ್ತು ಮಹಿಮೆಗಾಗಿ ಅವನ್ನು ಬೆಳೆಯುವಂತೆ ಮಾಡುವನು.—1 ಕೊರಿಂ. 3:7.