ನೀವು ಕಂಡುಕೊಂಡಂಥ ಆಸಕ್ತಿಯನ್ನು ಪುನಃ ಸಂಪರ್ಕಿಸಿರಿ
1 ಮನೆಯಿಂದ ಮನೆಗೆ ಕೆಲಸಮಾಡುವಾಗ, ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ನಾವು ವ್ಯಯಿಸಲು ಶಕ್ತರಾಗಿರುವ ಒಟ್ಟು ಸಮಯದ ವಿಷಯದಲ್ಲಿ ನಾವು ಸಾಮಾನ್ಯವಾಗಿ ಸೀಮಿತರಾಗಿರುತ್ತೇವೆ. ಹೆಚ್ಚಿನ ವಿದ್ಯಮಾನಗಳಲ್ಲಿ ನಿಜವಾದ ಕಲಿಸುವಿಕೆಯ ಕೆಲಸವು, ನಾವು ಪುನರ್ಭೇಟಿಗಳನ್ನು ಮಾಡುವಾಗ ಮತ್ತು ಬೈಬಲ್ ಅಧ್ಯಯನಗಳನ್ನು ನಡೆಸುವಾಗ ಮಾಡಲಾಗುತ್ತದೆ. (ಮತ್ತಾ. 28:19, 20) ಪುನರ್ಭೇಟಿಯಲ್ಲಿ ಪರಿಣಾಮಕಾರಿಯಾಗಿ ಕಲಿಸುವ ಸಲುವಾಗಿ, ಪ್ರಥಮ ಭೇಟಿಯಲ್ಲಿ ನಾವು ಚರ್ಚಿಸಿದ ವಿಷಯವನ್ನು ಪುನರ್ವಿಮರ್ಶಿಸಬೇಕು ಮತ್ತು ನಂತರ ಹೆಚ್ಚಿನ ಚರ್ಚೆಗಾಗಿ ತಯಾರಿಸಬೇಕು.
2 ಕುಟುಂಬ ಏರ್ಪಾಡಿನ ಅಸ್ಥಿರತೆಯ ಕುರಿತು ನೀವು ಮಾತಾಡಿದ್ದರೆ, “ಸದಾ ಜೀವಿಸಬಲ್ಲಿರಿ” ಪುಸ್ತಕದ 29 ನೆಯ ಅಧ್ಯಾಯದಲ್ಲಿರುವ ವಿಷಯವನ್ನು ನೀವು ಉಪಯೋಗಿಸಬಹುದು. ನೀವು ಹೀಗೆ ಹೇಳಬಹುದು:
▪ “ಒಂದು ಸಂತೋಷಕರ ಕುಟುಂಬ ಜೀವಿತವನ್ನು ಪಡೆಯುವ ಸಲುವಾಗಿ, ಬೈಬಲ್ ಸಲಹೆಯನ್ನು ಅನುಸರಿಸುವ ಬುದ್ಧಿವಂತಿಕೆಯ ಕುರಿತು ನಾವು ಹಿಂದೆ ಮಾತಾಡಿದೆವು. ಇಂದು ಕುಟುಂಬಗಳನ್ನು ಒಂದುಗೂಡಿಸುವ ಕೀಲಿಕೈ ಯಾವುದೆಂದು ನೀವು ಭಾವಿಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 247 ರಲ್ಲಿರುವ ಪ್ಯಾರಗ್ರಾಫ್ 27ಕ್ಕೆ ಸೂಚಿಸಿರಿ, ಮತ್ತು ಕೊಲೊಸ್ಸೆ 3:12-14ನ್ನು ಓದಿರಿ. ಯಥಾರ್ಥವಾದ ಪ್ರೀತಿಯು ಕುಟುಂಬಗಳನ್ನು ಒಟ್ಟಿಗೆ ಹೇಗೆ ಹಿಡಿದಿಡಬಲ್ಲದೆಂದು ತೋರಿಸುತ್ತಾ, ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದ ಒಂದು ವ್ಯವಸ್ಥಿತ ಅಧ್ಯಯನವು, ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಸಹಾಯ ಮಾಡಬಲ್ಲದೆಂದು ವಿವರಿಸಿರಿ.
3 ನಿಮ್ಮ ಪ್ರಥಮ ಭೇಟಿಯಲ್ಲಿ ನೀವು ಕ್ಷೀಣಿಸುತ್ತಿರುವ ಲೋಕ ಪರಿಸ್ಥಿತಿಗಳ ಕುರಿತು ಚರ್ಚಿಸಿದ್ದರೆ, ಹೀಗೆ ಹೇಳುವ ಮೂಲಕ ನೀವು ಅದನ್ನು ಮುಂದುವರಿಸಬಹುದು:
▪ “ನಾವು ಎಂದಾದರೂ ಶಾಂತಿಯಲ್ಲಿ ಜೀವಿಸಲಿರುವಲ್ಲಿ, ದೊಡ್ಡ ಬದಲಾವಣೆಗಳು ಅಗತ್ಯವಾಗಿವೆಯೆಂಬುದಾಗಿ ನೀವು ಒಪ್ಪುವಿರೆಂದು ನಾನು ನಿಶ್ಚಿತನಾಗಿದ್ದೇನೆ. ನಮ್ಮ ಸಮಸ್ಯೆಗಳ ಮೂಲ ಕಾರಣ ಸೈತಾನನಾಗಿದ್ದಾನೆಂದು ಬೈಬಲು ತೋರಿಸುತ್ತದೆ. ಇಷ್ಟು ಸಮಯದ ವರೆಗೆ ಮುಂದುವರಿಯಲು ದೇವರು ಅವನನ್ನು ಅನುಮತಿಸಿರುವುದೇಕೆ ಎಂದು ಅನೇಕರು ಕುತೂಹಲಪಡುತ್ತಾರೆ. ನೀವು ಏನು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಪುಟ 20, ಪ್ಯಾರಗ್ರಾಫ್ 14 ಮತ್ತು 15ಕ್ಕೆ ತಿರುಗಿರಿ, ಮತ್ತು ಸೈತಾನನನ್ನು ಇನ್ನೂ ಏಕೆ ನಾಶಮಾಡಿಲ್ಲವೆಂಬುದನ್ನು ವಿವರಿಸಿರಿ. ಆಮೇಲೆ ಹತ್ತಿರದ ಭವಿಷ್ಯತ್ತಿನಲ್ಲಿ ನಾವು ಏನನ್ನು ನಿರೀಕ್ಷಿಸಬಲ್ಲೆವೆಂದು ತೋರಿಸುವ ರೋಮಾಪುರ 16:20ನ್ನು ಓದಿರಿ.
4 ರಾಜ್ಯದ ಆಳಿಕೆಯ ಕೆಳಗೆ ನೆರವೇರಲಿರುವ ಆಶೀರ್ವಾದಗಳ ಕುರಿತು ನೀವು ಮಾತಾಡಿದ್ದರೆ, ನಿಮ್ಮ ಪುನರ್ಭೇಟಿಯಲ್ಲಿ, ನೀವು ಹೀಗೆ ಹೇಳಬಹುದು:
▪ “ದೇವರ ರಾಜ್ಯವು ಭೂಮಿಗೆ ಮತ್ತು ಮಾನವಜಾತಿಗೆ ಅದ್ಭುತಕರವಾದ ಆಶೀರ್ವಾದಗಳನ್ನು ತರುವುದು. ಆ ಆಶೀರ್ವಾದಗಳು ಇಲ್ಲಿ, ಪುಟಗಳು 12 ಮತ್ತು 13 ರಲ್ಲಿ ಚೆನ್ನಾಗಿ ದೃಷ್ಟಾಂತಿಸಲ್ಪಟ್ಟಿವೆ. ನಿಮಗೆ ಇಷ್ಟವಾಗುವಂತಹ ಯಾವ ವಿಷಯವನ್ನು ನೀವು ನೋಡುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ರೀತಿಯ ಲೋಕದಲ್ಲಿ ಜೀವಿಸುವುದು ಹೇಗಿರುವುದೆಂದು ಯೋಚಿಸಿರಿ.” ಪ್ಯಾರಗ್ರಾಫ್ 12ನ್ನು ಓದಿರಿ. ಆಸಕ್ತಿ ಇದ್ದರೆ, ಪ್ಯಾರಗ್ರಾಫ್ 13ರ ಪ್ರಶ್ನೆಯನ್ನು ಕೇಳಿರಿ ಮತ್ತು ಉತ್ತರವನ್ನು ಚರ್ಚಿಸಿರಿ. ರಾಜ್ಯದ ಆಶೀರ್ವಾದಗಳ ಕುರಿತಿರುವ ಹೆಚ್ಚಿನ ಪ್ರಶ್ನೆಗಳನ್ನು ಈ ಅಧ್ಯಾಯವು ಉತ್ತರಿಸುತ್ತದೆ ಎಂದು ತೋರಿಸಿರಿ ಮತ್ತು ನಿಮ್ಮ ಮುಂದಿನ ಭೇಟಿಯಲ್ಲಿ ಅವುಗಳನ್ನು ಚರ್ಚಿಸಲು ನೀವು ಸಂತೋಷಿಸುವಿರೆಂದು ಹೇಳಿರಿ.
5 ಹೀಗೆ ಹೇಳುವ ಮೂಲಕ ನೀವು ಒಂದು ಅಧ್ಯಯನವನ್ನು ಆರಂಭಿಸಲು ಶಕ್ತರಾಗಿರಬಹುದು:
▪ “ಈ ಪುಸ್ತಕದ ಸಹಾಯದಿಂದ ತಮ್ಮ ಬೈಬಲ್ ಪ್ರಶ್ನೆಗಳಿಗೆ ಉತ್ತರಗಳನ್ನು ಅನೇಕ ಜನರು ಕಂಡುಕೊಂಡಿದ್ದಾರೆ.” ಪರಿವಿಡಿಗೆ ತಿರುಗಿರಿ, ಮತ್ತು ಕೇಳಿರಿ: “ಇಲ್ಲಿ ಯಾವ ವಿಷಯವು ನಿಮಗೆ ಹೆಚ್ಚು ಅಭಿರುಚಿಯುಳ್ಳದ್ದಾಗಿದೆ?” ಒಂದು ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅವರ ಆಸಕ್ತಿಯನ್ನು ಸೆರೆಹಿಡಿದ ಅಧ್ಯಾಯಕ್ಕೆ ತಿರುಗಿರಿ, ಮತ್ತು ಮೊದಲನೆಯ ಪ್ಯಾರಗ್ರಾಫ್ನ್ನು ಓದಿರಿ. ಪ್ರತಿಯೊಂದು ಪ್ಯಾರಗ್ರಾಫ್ನಲ್ಲಿರುವ ಮುಖ್ಯ ಅಂಶಗಳನ್ನು ಪ್ರತಿಯೊಂದು ಪುಟದ ಕೆಳಭಾಗದಲ್ಲಿರುವ ಪ್ರಶ್ನೆಗಳು ಹೇಗೆ ಎತ್ತಿತೋರಿಸುತ್ತವೆ ಎಂಬುದನ್ನು ವಿವರಿಸಿರಿ. ಒಂದು ಯಾ ಎರಡು ಪ್ಯಾರಗ್ರಾಫ್ಗಳನ್ನು ಚರ್ಚಿಸುವ ಮೂಲಕ ದೃಷ್ಟಾಂತಿಸಿರಿ, ಮತ್ತು ತದನಂತರ ಪುನಃ ಭೇಟಿಯಾಗಲು ಏರ್ಪಾಡುಗಳನ್ನು ಮಾಡಿರಿ.
6 ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿನ ಆಸಕ್ತಿಯನ್ನು ಅನುಸರಿಸುವುದು, ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ಸಾಧಿಸುವುದರ ನಮ್ಮ ಬಯಕೆಯನ್ನು ಪ್ರದರ್ಶಿಸುತ್ತದೆ. (2 ತಿಮೊ. 4:5) ನಮ್ಮ ಕೇಳುಗರು ನಿತ್ಯಜೀವಕ್ಕಾಗಿ ಪ್ರಯತ್ನಪಡುವಂತೆ ಸಹಾಯಮಾಡಲು ನಾವು ಶಕ್ತರಾಗಬಹುದು.—ಯೋಹಾನ 17:3.