ಸ್ಥಿರವಾದ ಅಸ್ತಿವಾರದ ಮೇಲೆ ಕಟ್ಟಲು ಕುರಿಗಳಂಥ ಜನರಿಗೆ ಸಹಾಯ ಮಾಡಿರಿ
1 ಮನೆಯೊಂದರ ಕಟ್ಟುವಿಕೆಯು ಜಾಗರೂಕವಾದ ಯೋಜನೆಯನ್ನು ಮತ್ತು ಕೇಂದ್ರಿತವಾದ ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. ಮನೆಯನ್ನು ರೂಪಿಸಿದ ಅನಂತರ, ಕಟ್ಟಡದ ಪ್ರದೇಶವು ತಯಾರಿಸಲ್ಪಡಬೇಕು ಮತ್ತು ಒಂದು ಸ್ಥಿರವಾದ ಅಸ್ತಿವಾರವನ್ನು ಹಾಕಬೇಕು. ಅದು ಕೊನೆಗೆ ಸಂಪೂರ್ಣಗೊಳ್ಳುವ ತನಕ ಯೋಜನೆಯು ಪ್ರಗತಿಪರವಾಗಿ ವಿಕಾಸಹೊಂದುತ್ತದೆ. ಹಾಗೆಯೇ, ಸತ್ಯವನ್ನು ಪ್ರಗತಿಪರವಾಗಿ ಕಲಿಯಲು ಕುರಿಗಳಂಥ ಜನರಿಗೆ ನಾವು ನೆರವು ನೀಡಬೇಕು. ಪ್ರಥಮ ಭೇಟಿಯಲ್ಲಿ ಆಸಕ್ತಿಯನ್ನು ಪ್ರಚೋದಿಸಲು ನಾವು ಯತ್ನಿಸುತ್ತೇವೆ. ಅದಾದಮೇಲೆ, ದೇವರ ಕುರಿತು ಮತ್ತು ಮಾನವಕುಲಕ್ಕಾಗಿ ಆತನ ಉದ್ದೇಶದ ಕುರಿತು ಮೂಲಭೂತ ಸತ್ಯಗಳನ್ನು ಕಲಿಸುವ ಮೂಲಕ ಒಂದು ಅಸ್ತಿವಾರವನ್ನು ಹಾಕುತ್ತಾ, ಪುನಃ ಭೇಟಿಗಳನ್ನು ನಾವು ಮಾಡುತ್ತೇವೆ.—ಲೂಕ 6:48.
2 ಅಸ್ತಿವಾರವನ್ನು ಹಾಕುವ ಮೊದಲಾದರೊ, ಕಟ್ಟಡದ ನಿವೇಶನವನ್ನು ಸಿದ್ಧಗೊಳಿಸುತ್ತೇವೊ ಎಂಬಂತೆ, ಮನೆಯವನ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಯಾವ ವಿಷಯವು ಈ ಹಿಂದೆ ಪರಿಗಣಿಸಲ್ಪಟ್ಟಿತ್ತು? ಯಾವ ವಚನಗಳನ್ನು ಉಪಯೋಗಿಸಲಾಗಿತ್ತು? ಪ್ರತಿಕ್ರಿಯೆಯು ಏನಾಗಿತ್ತು? ಯಾವ ಪ್ರಕಾಶನವನ್ನು ನೀಡಲಾಗಿತ್ತು? ಹಿಂದಿರುಗುವಾಗ, ನಿರ್ದಿಷ್ಟ ಅಂಶಗಳನ್ನು ಮನಸ್ಸಿನಲ್ಲಿಡಿ ಮತ್ತು ಅಸ್ತಿವಾರವನ್ನು ಪ್ರಗತಿಪರವಾಗಿ ಕಟ್ಟಿರಿ. ಪ್ರತಿ ಭೇಟಿಯೊಂದಿಗೆ ಮನೆಯವನ ಜ್ಞಾನವು ಬೆಳೆಯುತ್ತದೆ ಮತ್ತು ದೇವರಲ್ಲಿ ಅವನ ನಂಬಿಕೆಯು ಅಭಿವೃದ್ಧಿಗೊಳ್ಳುತ್ತದೆ.
3 “ಸದಾ ಜೀವಿಸಬಲ್ಲಿರಿ” ಪುಸ್ತಕವು ನೀಡಲ್ಪಟ್ಟಿರುವುದಾದರೆ, ನೀವು ಹೀಗೆ ಹೇಳಬಹುದು:
▪ “ನಿಮ್ಮನ್ನು ಮನೆಯಲ್ಲಿ ಕಾಣಲು ನಾನು ಬಹಳ ಸಂತೋಷಿಸುತ್ತೇನೆ. ನಾವು ಕಳೆದ ವಾರ ಚರ್ಚಿಸುತ್ತಿದ್ದಾಗ, ಸ್ಥಳಿಕವಾಗಿ ದೇವರಲ್ಲಿ ಆಸಕ್ತಿಯು ಇಳಿಮುಖವಾಗುತ್ತಿರುವುದನ್ನು ನಾವು ಪರಿಗಣಿಸಿದ್ದೆವು ಎಂದು ನೀವು ನೆನಪು ಮಾಡಿಕೊಳ್ಳಬಹುದು. ದೇವರಿಗೆ ಮಾನವಕುಲದಲ್ಲಿ ಆಸಕ್ತಿಯಿದೆ ಮತ್ತು ನೀತಿವಂತರು ಆತನ ರಾಜ್ಯದ ಮುಖಾಂತರ ಆಶೀರ್ವದಿಸಲ್ಪಡುವರೆಂದು ಬೈಬಲ್ ಸ್ಪಷ್ಟವಾಗಿಗಿ ರೂಪಿಸುತ್ತದೆ. [ಮತ್ತಾಯ 6:9, 10 ಓದಿರಿ.] ಆತನ ರಾಜ್ಯದ ಮೂಲಕ, ನೀತಿಯೂ, ನ್ಯಾಯವೂ ನೆಲಸುವುವು.” ಯೆಶಾಯ 11:3-5 ಓದಿ, ಮತ್ತು ತದನಂತರ ಸದಾ ಜೀವಿಸಬಲ್ಲಿರಿ ಪುಸ್ತಕದ ಒಂದನೆಯ ಅಧ್ಯಾಯದ ಪ್ರಥಮ ಎರಡು ಪ್ಯಾರಗ್ರಾಫ್ಗಳ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ. ವಿಷಯವನ್ನು ಹೇಗೆ ಅಭ್ಯಾಸಿಸಸಾಧ್ಯವೆಂದು ಪ್ರತ್ಯಕ್ಷಾಭಿನಯಿಸಿರಿ.
4 ಪ್ರಥಮ ಭೇಟಿಯಲ್ಲಿ ಶಾಂತಿಭರಿತ ಹೊಸ ಲೋಕ ಎಂಬ ಕಿರುಹೊತ್ತಗೆಯನ್ನು ನೀಡಿರುವುದಾದರೆ, ಹಿಂದೆ ಪರಿಗಣಿಸಲಾದ ಮುಖ್ಯ ಅಂಶಗಳಾದ, ಉತ್ತಮ ಪರಿಸ್ಥಿತಿಗಳ ಅಗತ್ಯ ಮತ್ತು ಬೈಬಲಿನ ವಾಗ್ದಾನಗಳ ಕುರಿತು ಪುನಃ ವಿಮರ್ಶಿಸಬಹುದು. ಹೊಸ ಲೋಕದಲ್ಲಿ ಜೀವಿಸಲಿಕ್ಕಾಗಿ ನಾವು ನಿಷ್ಕೃಷ್ಟವಾದ ಜ್ಞಾನವನ್ನು ತೆಗೆದುಕೊಳ್ಳಬೇಕು ಎಂಬುದನ್ನು ಒತ್ತಿಹೇಳಿರಿ. ಯೋಹಾನ 17:3ನ್ನು ಓದಿರಿ. ಇಂಥ ಜ್ಞಾನವನ್ನು ತೆಗೆದುಕೊಂಡ ಅನಂತರ, ನಾವು ದೇವರ ಚಿತ್ತವನ್ನು ಮಾಡಬೇಕೆಂದು ವಿವರಿಸಿರಿ. ಒಂದನೆಯ ಯೋಹಾನ 2:17ನ್ನು ಓದಿರಿ. ಕಿರುಹೊತ್ತಗೆಯ ಪುಟ 5 ರಿಂದ ನಿರ್ದಿಷ್ಟ ಅಂಶಗಳ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ.
5 ಪ್ರಥಮ ಭೇಟಿಯಲ್ಲಿ “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ನೀಡುವಾಗ, ಕುಟುಂಬ ಜೀವನದ ವಿಷಯವು ಎತ್ತಿಹೇಳಲ್ಪಟ್ಟಿದ್ದರೆ, ನೀವು ಹೀಗೆ ಹೇಳಬಹುದು:
▪ “ಕಳೆದ ಸಮಯ ನಾನು ನಿಮ್ಮನ್ನು ಭೇಟಿಯಾದಾಗ, ಕುಟುಂಬ ಜೀವನದ ವಿಷಯದ ಕುರಿತು ಚರ್ಚಿಸಿದೆವು. ಸಂತೋಷಕರವಾದೊಂದು ಕುಟುಂಬ ಜೀವನವನ್ನು ಹೊಂದಿರಲು, ಬೈಬಲಿನಲ್ಲಿ ಕಂಡುಕೊಳ್ಳಲಾದ ಮಾರ್ಗದರ್ಶನಗಳು ಅನುಸರಿಸಲ್ಪಡಬೇಕೆಂದು ನಾವು ಒಪ್ಪಿಕೊಂಡೆವು. ಮದುವೆಯನ್ನು ಸಾಫಲ್ಯಗೊಳಿಸಲಿಕ್ಕಾಗಿ ಯಾವುದರ ಅಗತ್ಯವಿದೆಯೆಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಪುಟಗಳು 243-6 ನಲ್ಲಿ ರೂಪಿಸಲಾದ ಮಾಹಿತಿಯಿಂದ ನಿರ್ದಿಷ್ಟ ಅಂಶಗಳನ್ನು ಎತ್ತಿಹೇಳಿರಿ. ಸೂಕ್ತವಾದಂತೆ, ದೃಷ್ಟಾಂತಗಳ ಮೇಲೆ ಮನೆಯವನ ಹೇಳಿಕೆಗಳಿಗಾಗಿ ಕೇಳಿರಿ ಮತ್ತು ಆರಿಸಲಾದ ಅಂಶಗಳನ್ನು ಪರಿಗಣಿಸಿರಿ. ಬೈಬಲ್ ತತ್ವಗಳ ಪ್ರಾಯೋಗಿಕ ಮೌಲ್ಯವನ್ನು ಒತ್ತಿಹೇಳಿರಿ.
6 ಕುಟುಂಬ ಜೀವನವನ್ನು ಆನಂದಿಸಿರಿ ಎಂಬ ಕಿರುಹೊತ್ತಗೆಯನ್ನು ನೀಡಿದ್ದರೆ, ಪುಟಗಳು 4 ಮತ್ತು 5 ರಲ್ಲಿ ರೂಪಿಸಲಾದ ಮುಖ್ಯ ಬೈಬಲ್ ತತ್ವಗಳನ್ನು ವಿಮರ್ಶಿಸಿರಿ. ಆಸಕ್ತಿಯು ಪ್ರಚೋದಿಸಲ್ಪಡುವುದಾದರೆ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಿರಿ. “ಕುಟುಂಬ ಜೀವನವನ್ನು ಸಾಫಲ್ಯಗೊಳಿಸುವುದು” ಎಂಬ 29 ನೆಯ ಅಧ್ಯಾಯವನ್ನು ಸೂಚಿಸಿರಿ, ಮತ್ತು ಮನೆಯವನೊಂದಿಗೆ ಮತ್ತು ಅವನ ಕುಟುಂಬದೊಂದಿಗೆ ಇದನ್ನು ಹೇಗೆ ಪರಿಗಣಿಸಬಹುದೆಂದು ತೋರಿಸಿರಿ.
7 ಪುನಃ ಭೇಟಿಗಳನ್ನು ಮಾಡುವುದರಲ್ಲಿ ನಮ್ಮೆಲ್ಲರಿಗೂ ಕ್ರಮವಾದ ಒಂದು ಪಾಲು ಇರಬೇಕು. ಸಪ್ಟಂಬರದಲ್ಲಿ ಪರಿಣಾಮಕಾರಿಯಾದ ಪುನಃ ಭೇಟಿಗಳನ್ನು ಮಾಡುವ ಮೂಲಕ ತೋರಿಸಲಾದ ಎಲ್ಲಾ ಆಸಕ್ತಿಯನ್ನು ಹಿಂಬಾಲಿಸಿರಿ.