ಪ್ರಶ್ನಾ ಪೆಟ್ಟಿಗೆ
▪ ಅಸ್ನಾನಿತ ಪ್ರಚಾರಕರಾಗಿ ಅಂಗೀಕರಿಸಲ್ಪಡುವ ಮುಂಚೆ ಕ್ರೈಸ್ತ ಹೆತ್ತವರ ಎಳೆಯ ಮಕ್ಕಳು ಎಷ್ಟರಮಟ್ಟಿಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಬಹುದು?
ಕ್ರೈಸ್ತ ಹೆತ್ತವರಿಗೆ ಅವರ ಮಕ್ಕಳು ಯೆಹೋವನ ಪ್ರೌಢ, ಭಕ್ತಿಯುಳ್ಳ ಸೇವಕರಾಗಿ ಬೆಳೆಯಬೇಕೆಂಬ ಅಪೇಕ್ಷೆಯಿದೆ. (1 ಸಮು. 2:18, 26; ಲೂಕ 2:40) ಬಹಳ ಚಿಕ್ಕ ಪ್ರಾಯದಲ್ಲಿಯೆ, ಕ್ರೈಸ್ತ ಕುಟುಂಬಗಳಲ್ಲಿನ ಮಕ್ಕಳಿಗೆ ಅವರ ಬೈಬಲ್ ಆಧಾರಿತ ನಂಬಿಕೆಯ ಸಮರ್ಥನೆಯಲ್ಲಿ ಸ್ಪಷ್ಟ ಹೇಳಿಕೆಗಳನ್ನು ಮಾಡಲು ಸಾಧ್ಯವಿರಬೇಕು. ಶೈಶವದಿಂದಲೇ ಕ್ಷೇತ್ರ ಸೇವೆಯಲ್ಲಿ ಅವರ ಹೆತ್ತವರೊಂದಿಗೆ ಅವರು ಜೊತೆಗೂಡುವಲ್ಲಿ ಮಕ್ಕಳ ಆತ್ಮಿಕ ಬೆಳವಣಿಗೆಯ ವೇಗ ವೃದ್ಧಿಯಾಗುತ್ತದೆ. ಆದರೆ ಅವರು ಕ್ಷೇತ್ರ ಸೇವೆಯಲ್ಲಿ ಆನಂದ ಹೊಂದ ಬೇಕಾದಲ್ಲಿ, ಅಸ್ನಾನಿತ ಪ್ರಚಾರಕರಾಗಲು ಬಯಸುವಲ್ಲಿ, ಮತ್ತು ರಾಜ್ಯ ಸಾರುವಿಕೆಯ ಕೆಲಸದಲ್ಲಿ ಭಾಗವಹಿಸುತ್ತಾ ಮುಂದುವರಿಯ ಬೇಕಾದಲ್ಲಿ ಹೃದಯದಿಂದ ಪ್ರೇರೇಪಣೆ ಹೊಂದುವುದು ಎಳೆಯರಿಗೆ ಪ್ರಾಮುಖ್ಯವಾಗಿದೆ. ಹೆತ್ತವರ ಮೂಲಕ ಜಾಗ್ರತೆಯ ತರಬೇತಿಯು ಅವಶ್ಯವಾಗಿದೆ. (1 ತಿಮೊಥಿ. 4:6; 2 ತಿಮೊಥಿ. 2:15) ಹೆತ್ತವರ ಒಪ್ಪಿಗೆ ಇರುವಲ್ಲಿ ಕೆಲವೊಮ್ಮೆ ಬೇರೆ ಸಮರ್ಥ ಪ್ರಚಾರಕರು ಸಹಾಯ ನೀಡಬಹುದು.—ನಮ್ಮ ಶುಶ್ರೂಷೆ, 100 (om 99-100) ಪುಟ ನೋಡಿ.
ಸ್ವದರ್ತನೆಯ ಮಕ್ಕಳಾಗಿ ಮನೆ ಮನೆಯ ಕಾರ್ಯದಲ್ಲಿ ತಮ್ಮ ಕ್ರೈಸ್ತ ಹೆತ್ತವರೊಂದಿಗೆ ಜೊತೆಗೂಡುವಾಗ, ಶುಶ್ರೂಷೆಯಲ್ಲಿ ತೊಡಗಿಸಿಕೊಳ್ಳುವ ವಿಧವನ್ನು ಅವರು ಕಲಿಯುತ್ತಾರೆ. ಆದರೆ ಅವರು ತಮ್ಮ ಸ್ವಂತ ಸಾಮರ್ಥ್ಯ ಮತ್ತು ಕುಶಲತೆಯ ಒಂದು ಪರಿಮಿತಿಯನ್ನು ಬೆಳೆಯಿಸುವಷ್ಟರ ವರೆಗೆ ಅಸ್ನಾನಿತ ಪ್ರಚಾರಕರೆಂದು ಅವರನ್ನು ಪರಿಗಣಿಸಲಾಗುವದಿಲ್ಲ. ಅವರು ಒಟ್ಟಾಗಿ ಕೆಲಸ ಮಾಡುವಾಗ ಮಗುವು ಸಾಕ್ಷಿ ಕೊಡುವಲ್ಲಿ ಎಷ್ಟರಮಟ್ಟಿಗೆ ಭಾಗಿಯಾಗಬಹುದೆಂದು ಕ್ರೈಸ್ತ ಹೆತ್ತವರು ನಿರ್ಧರಿಸಬಹುದು. ಅಸ್ನಾನಿತ ಪ್ರಚಾರಕರಾಗಿ ಇನ್ನೂ ಕೂಡ ಅಂಗೀಕರಿಸಲ್ಪಡದೆ ಇರುವ ಮಕ್ಕಳು ಪುನರ್ಭೇಟಿಗಳನ್ನು ಸ್ವತಃ ತಾವಾಗಿಯೇ ಮಾಡಬಾರದು ಯಾ ಕ್ಷೇತ್ರ ಸೇವೆಯಲ್ಲಿ ಬೇರೆ ಮಕ್ಕಳೊಂದಿಗೆ ಹೋಗಕೂಡದು. ಹೆತ್ತವರು ಅವರ ಮಕ್ಕಳನ್ನು ಕ್ಷೇತ್ರ ಸೇವೆಗಾಗಿ ತಯಾರಿಸಬಹುದು ಮತ್ತು ವಚನವನ್ನೋದುವುದು, ಟ್ರ್ಯಾಕ್ಟ್ ಯಾ ಪತ್ರಿಕೆಯನ್ನು ನೀಡುವುದು, ಅಥವಾ ಸಾಹಿತ್ಯದಲ್ಲಿನ ಒಂದು ಚಿತ್ರವನ್ನು ತೋರಿಸುವುದರ ಮೂಲಕ, ವಿವಿಧ ರೀತಿಗಳಲ್ಲಿ ಅವರು ಭಾಗವಹಿಸುವಂತೆ ಬಿಡಬಹುದು. ಮಗುವು ವಯಸ್ಸಿನಲ್ಲಿ ಬೆಳೆದ ಹಾಗೆ, ಚರ್ಚೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಅವನಿಗಾಗಬಹುದು.
ಸರಿಯಾದ ತರಬೇತಿಯೊಂದಿಗೆ, ತರುಣರು ಅವರ ಹೆತ್ತವರ ಮಾರ್ಗದರ್ಶನೆಗೆ ಪ್ರತಿವರ್ತಿಸುವಾಗ ಮತ್ತು ಒಂದು ಕ್ರಮಬದ್ಧ ವರ್ತನೆಯಿಂದ ತಮ್ಮನ್ನೇ ನಡೆಸಿಕೊಳ್ಳುವಾಗ, ಶುಶ್ರೂಷೆಯ ಗಂಭೀರತೆಯನ್ನು ಗಣ್ಯ ಮಾಡಲು ಕಲಿಯುತ್ತಾರೆ. ಬೇರೆಯವರು ಅವರ ಜಾಗ್ರತೆಯನ್ನು ತಕ್ಕೊಳ್ಳುವರು ಎಂಬ ನಿರೀಕ್ಷೆಯಲ್ಲಿ, ಕ್ಷೇತ್ರ ಸೇವೆಗಾಗಿ ಕೂಟದಲ್ಲಿ ಅಸ್ನಾನಿತ ಪ್ರಚಾರಕರೆಂದು ಇನ್ನೂ ಕೂಡ ಅಂಗೀಕರಿಸಲ್ಪಡದಿರುವ ಮಕ್ಕಳನ್ನು, ಹೆತ್ತವರು ಬಿಟ್ಟುಬಿಡಬಾರದು. ಅವರ ಮಕ್ಕಳ ಕಾರ್ಯಾದಿಗಳ ಮೇಲ್ವಿಚಾರಣೆ ನಡೆಸುವುದು ತಮ್ಮ ವೈಯಕ್ತಿಕ ಜವಾಬ್ದಾರಿ ಎಂದು ಆಸಕ್ತಿ ವಹಿಸುವ ಹೆತ್ತವರು ಒಪ್ಪಿಕೊಳ್ಳುತ್ತಾರೆ. ಖಂಡಿತವಾಗಿಯೂ, ಶುಶ್ರೂಷೆಯಲ್ಲಿ ಯೆಹೋವನನ್ನು ಸೇವಿಸುವಲ್ಲಿ ಅಪ್ಪಟ ಅಭಿರುಚಿ ತೋರಿಸುವಂಥಾ ತರುಣ ಮಕ್ಕಳನ್ನು ತರಬೇತಿಗೊಳಿಸುವುದರಲ್ಲಿ ಸಹಾಯ ಮಾಡಲು ಸಭೆಯಲ್ಲಿ ಬೇರೆ ಜವಾಬ್ದಾರರಾದ ಪ್ರಚಾರಕರು ಇಷ್ಟವುಳ್ಳವರಾಗಿರಬಹುದು.