ಅಭಿರುಚಿಯುಳ್ಳವರಿಗೋಸ್ಕರ ಚಿಂತೆ ತೋರಿಸಿರಿ
1 ಜನರಿಗೋಸ್ಕರ ಚಿಂತೆಯನ್ನು ತೋರಿಸುವುದರಲ್ಲಿ, ಎಲ್ಲರಿಗಿಂತಲೂ ಮೇಲಾಗಿ, ಯೆಹೋವನು ವಿಶಾಲ ಹೃದಯಿಯಾಗಿದ್ದಾನೆ. ಭೌತಿಕ ವಸ್ತುಗಳನ್ನು ಹೇರಳವಾಗಿ ಆತನು ದಯಪಾಲಿಸಿರುವುದು ಮಾತ್ರವಲ್ಲ ನಮಗೆ ಅವಶ್ಯವಾದ ಮತ್ತು ನಾವು ಆನಂದಿಸುವ ಆತ್ಮಿಕ ವಿಷಯಗಳನ್ನು ಕೂಡ ಕೊಟ್ಟಿರುತ್ತಾನೆ. ನಮ್ಮ ಬಗ್ಗೆ ಆತನಿಗೆ ಎಷ್ಟು ಚಿಂತೆ ಇದೆಯೆಂದರೆ ಆತನು ನಮ್ಮ ಹೃದಯಗಳನ್ನು ಕೂಡ ಪರೀಕ್ಷಿಸುತ್ತಾನೆ.—ಕೀರ್ತ. 139:23.
2 ಯೇಸುವು ಭೂಮಿಯಲ್ಲಿದ್ದಾಗ, ಬೇರೆಯವರಿಗೋಸ್ಕರ ಚಿಂತೆಯನ್ನು ತೋರಿಸುವ ತನ್ನ ತಂದೆಯ ಮಾದರಿಯನ್ನು ಪರಿಪೂರ್ಣವಾಗಿ ಅನುಸರಿಸಿದನು. “ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲೆ,” ಎಂದು ಒಬ್ಬ ಮನುಷ್ಯನು ಯೇಸುವಿಗಂದದ್ದು ನಿಮಗೆ ನೆನಪಿದೆಯೋ? ಯೇಸುವು ಪ್ರತಿವರ್ತಿಸಿದ್ದು, “ನನಗೆ ಮನಸ್ಸುಂಟು.” (ಮತ್ತಾಯ 8:1-3) ಒಬ್ಬಾಕೆ ವಿಧವೆಯು ದುಃಖದಲ್ಲಿರುವುದನ್ನು ಯೇಸು ಕಂಡಾಗ, ಆತನು ಮಾಡಿದ್ದೇನು? ಅವಳಿಗೆ ಸಹಾಯ ಮಾಡಲು ಅವನು ನಿಂತನು. (ಲೂಕ 7:11-15) ಅಭಿರುಚಿಯುಳ್ಳವರಿಗೋಸ್ಕರ ಚಿಂತೆಯನ್ನು ತೋರಿಸಲು ನೀವು ಹೆಚ್ಚು ಎಚ್ಚರದಿಂದಿರಬಹುದೋ?
3 ನಮ್ಮ ತಂದೆ, ಯೆಹೋವನ ಮತ್ತು ಆತನ ಮಗ, ಯೇಸು ಕ್ರಿಸ್ತನ ಅನುಕರಣೆಯಲ್ಲಿ, ನಾವು ಕೂಡ ಬೇರೆಯವರಲ್ಲಿ ವೈಯಕ್ತಿಕ ಅಭಿರುಚಿಯನ್ನು ತೋರಿಸಲೇ ಬೇಕು. ಮನೆಯಿಂದ ಮನೆಯ ಒಂದು ನಿಷ್ಕೃಷ್ಟವಾದ ದಾಖಲೆಯನ್ನು ಇಡುವುದರ ಮೂಲಕ ನಾವಿದನ್ನು ಮಾಡುತ್ತೇವೆ. ಇದರಲ್ಲಿ ಪ್ರಥಮ ಭೇಟಿಯಲ್ಲಿ ಅಭಿರುಚಿಯುಳ್ಳ ವ್ಯಕ್ತಿಯೊಂದಿಗೆ ಚರ್ಚಿಸಿದ ವಿಷಯದೊಂದಿಗೆ ಆತನ ಹೆಸರು ಮತ್ತು ಸರಿಯಾದ ವಿಳಾಸ ಬರೆದುಕೊಳ್ಳುವುದು ಒಳಗೂಡಿರುತ್ತದೆ. ನಂತರ, ಪುನರ್ಭೇಟಿಯನ್ನು ಮಾಡುವ ಮುನ್ನ, ಒಳ್ಳೆಯದಾಗಿ ತಯಾರಿಸಿರಿ. ನಾವೊಂದು ವೇಳೆ ಹಿಂದಿನ ಭೇಟಿಯಲ್ಲಿ ಪತ್ರಿಕೆಗಳನ್ನು ಬಿಟ್ಟದ್ದಲ್ಲಿ, ಪ್ರಾಯಶಃ ನಮ್ಮ ಪುನರ್ಭೇಟಿಯು ಲೇಖನಗಳಲ್ಲೊಂದರಲ್ಲಿ ತಿಳಿಸಲಾದ ನಿರ್ದಿಷ್ಟ ವಿಷಯದ ಮೇಲೆ ಆಧರಿಸಬಹುದು. ಅದನ್ನು ಹೇಗೆ ಮಾಡಬಹುದೆಂದು ಗಮನಿಸಿರಿ.
4 ನೀವು ಒಂದು ವೇಳೆ ನೊವೆಂಬರ್ 1, 1992ರ ಕಾವಲಿನಬುರುಜನ್ನು ಬಿಟ್ಟಿರುವಲ್ಲಿ ಮತ್ತು ಪುಟ 6 ರ “ದೇವರ ನಿತ್ಯ ಜೀವದ ಕೊಡುಗೆ” ಎಂಬ ಉಪಶಿರೋನಾಮದ ಮೇಲೆ ಮಾತು ಕೇಂದ್ರೀಕರಿಸಿದ್ದಲ್ಲಿ, ನೀವು ನಿಮ್ಮ ಪುನರ್ಭೇಟಿಯಲ್ಲಿ ಎತ್ತಿ ತೋರಿಸಲು ಪ್ರಕಟನೆ 21:4 ಮತ್ತು ಯೋಹಾನ 17:3ನ್ನು ತಯಾರಿಸಬಹುದು.
ಉದಾಹರಣೆಗಾಗಿ, ಪ್ರಕಟನೆ 21:4ನ್ನು ಓದಿದ ನಂತರ, ನೀವು ಹೀಗೆ ಕೇಳಬಹುದು:
▪ “ನಿತ್ಯ ಜೀವವನ್ನು ನಾವು ಹೇಗೆ ಪಡೆಯಬಹುದು? [ಹೇಳಿಕೆ ನೀಡಲು ಅನುಮತಿಸಿರಿ.] ಪುಟ 7 ರಲ್ಲಿ ಚಿತ್ರಿಸಲಾದಂತಹ ಒಂದು ಲೋಕದಲ್ಲಿ ಜೀವವನ್ನು ಪಡೆಯಲು ಏನು ಅವಶ್ಯವೆಂದು ಯೇಸು ಹೇಳಿದ್ದನ್ನು ಕೇಳಿರಿ.” ತದನಂತರ ಯೋಹಾನ 17:3ನ್ನು ಓದಿರಿ, ದೇವರ ಮತ್ತು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದರ ಮೂಲಕ ಶಾಂತಿಭರಿತ ನೂತನ ಲೋಕದಲ್ಲಿ ನಿತ್ಯ ಜೀವವನ್ನು ಪಡೆದುಕೊಳ್ಳ ಸಾಧ್ಯವಿದೆ ಎಂದು ಎತ್ತಿ ತೋರಿಸಿರಿ. ಒಂದುವೇಳೆ ಸ್ವಲ್ಪ ಅಭಿರುಚಿಯು ತೋರಿಸಲ್ಪಟ್ಟಲ್ಲಿ, ಶಾಂತಿಭರಿತ ಹೊಸ ಲೋಕದಲ್ಲಿ ಜೀವನವೆಂಬ ಟ್ರ್ಯಾಕ್ಟ್ನಿಂದ ಒಂದು ಅಭ್ಯಾಸವನ್ನು ಆರಂಭಿಸಲು ಪ್ರಯತ್ನಿಸಿರಿ.
5 ನೊವೆಂಬರ್ 8, 1992ರ ಎಚ್ಚರ!ದಿಂದ, “ಜಗತ್ತಿನ ಜನಸಂಖ್ಯಾ ವೃದ್ಧಿ—ಭವಿಷ್ಯತ್ತಿನ ವಿಷಯವೇನು?” ಎಂಬದರ ಮೇಲೆ ಚರ್ಚಿಸುವುದರ ಮೂಲಕ ನಿಮಗೆ ಒಳ್ಳೇ ಪ್ರತಿಕ್ರಿಯೆ ದೊರಕಬಹುದು. ನೀವು ಪುನರ್ಭೇಟಿ ಮಾಡುವಾಗ, ಕೀರ್ತನೆ 72:12, 16ರ ಮೇಲೆ ಚರ್ಚೆಯನ್ನು ಮಾಡಬಹುದು.
ನೀವು ಕೇಳಬಹುದು:
▪ “ಇಂದು ಲೋಕದಲ್ಲಿ ಆಹಾರದ ಕೊರತೆ ಇದೆ ಎಂದು ಕಂಡುಬರುವುದರ ಪರಿಹಾರವೇನಾಗಿರಬಹುದೆಂದು ನೀವು ನಂಬುತ್ತೀರಿ?” ಪ್ರತ್ಯುತ್ತರವನ್ನು ಪರಿಗಣಿಸಿರಿ ಮತ್ತು ನಂತರ ಹೀಗನ್ನಿರಿ: “ಅಭಿರುಚಿಕರವಾಗಿ, ಹತ್ತಿರದ ಭವಿಷ್ಯದಲ್ಲಿ ಲೋಕದಿಂದ ಈ ಸಮಸ್ಯೆಯನ್ನು ತೆಗೆದುಬಿಡುವೆನೆಂದು ಯೆಹೋವನು ವಾಗ್ದಾನಿಸಿದ್ದಾನೆ. [ಕೀರ್ತನೆ 72:12, 16 ನ್ನು ಓದಿರಿ] ಆಹಾರ ಒದಗಣೆಯ ಮತ್ತು ಮನುಷ್ಯನ ಎಲ್ಲ ವ್ಯವಹಾರಗಳು ಪರಿಪೂರ್ಣವಾಗಿ ಆಳಲ್ಪಡುವ ಮತ್ತು ಇಂದು ಎದುರಿಸಲ್ಪಡುತ್ತಿರುವ ಆಹಾರದ ಅಭಾವಗಳಿಂದಾಗಿ ಮತ್ತು ಬೆಲೆ ಏರಿಕೆಗಳಿಂದ ಯಾರೂ ಕಷ್ಟಕ್ಕೊಳಪಡದ ಸಮಯವನ್ನು ಬೈಬಲ್ ಸೂಚಿಸುತ್ತದೆ.” ತದನಂತರ ಶಾಂತಿಭರಿತ ಹೊಸ ಲೋಕದಲ್ಲಿ ಜೀವನವೆಂಬ ಟ್ರ್ಯಾಕ್ಟ್ನ್ನು ಪರಿಗಣಿಸುವುದರ ಮೂಲಕ ಭವಿಷ್ಯತ್ತಿನ ಬೇರೆ ಆಶೀರ್ವಾದಗಳನ್ನು ಎತ್ತಿ ಹೇಳಿರಿ, ಮತ್ತು ಅಧ್ಯಯನಕ್ಕೆ ಕೊಂಡೊಯ್ಯಿರಿ.
6 ಮನೆಯವರ ಬಳಿ ಈಗಾಗಲೆ ನಮ್ಮ ಸಾಹಿತ್ಯಗಳಲ್ಲೊಂದು ಇರುವದಾದರೆ ಆಗೇನು? ಒಂದು ಅಧ್ಯಯನವನ್ನು ಆರಂಭಿಸಲು ಅದನ್ನೇ ಯಾಕೆ ಉಪಯೋಗಿಸಬಾರದು? ಅದು ಒಂದು ವೇಳೆ ಸದಾ ಜೀವಿಸಬಲ್ಲಿರಿ ಪುಸ್ತಕವಾಗಿರುವಲ್ಲಿ, ಪರಿವಿಡಿಯ ಪಟ್ಟಿಗೆ ತಿರುಗಿರಿ ಮತ್ತು ಮನೆಯವರನ್ನು ಅವರು ಚರ್ಚಿಸಲಿಚ್ಛಿಸುವ ವಿಷಯವನ್ನು ಆರಿಸಲು ಕೇಳಿರಿ. ನಂತರ ನೀವು ಒಂದು ಯಾ ಎರಡು ಪ್ಯಾರಗ್ರಾಫ್ಗಳನ್ನು ಗಮನಿಸುವುದರ ಮೂಲಕ ಅಧ್ಯಯನವನ್ನು ಆರಂಭಿಸಬಹುದು.
7 ಒಳ್ಳೇ ತಯಾರಿಯನ್ನು ಮಾಡಿ, ಪರಿಣಾಮಕಾರಿ ಪುನರ್ಭೇಟಿಗಳನ್ನು ಮಾಡುವುದರ ಮೂಲಕ ಅಭಿರುಚಿಯುಳ್ಳವರಿಗೋಸ್ಕರ ಚಿಂತೆಯನ್ನು ತೋರಿಸುವುದು ಆದಷ್ಟು ಹೆಚ್ಚು ಜನರು ರಕ್ಷಣೆಯನ್ನು ಪಡೆದುಕೊಳ್ಳಬೇಕೆಂಬ ವಿಷಯದಲ್ಲಿ, ನಾವು ದೇವರನ್ನು ಮತ್ತು ಕ್ರಿಸ್ತನನ್ನು ಅನುಕರಿಸುವವರೆಂದು ವ್ಯಕ್ತಪಡಿಸುತ್ತೇವೆ.—2 ಪೇತ್ರ 3:9.