ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/92 ಪು. 1
  • ದೇವರ ವಾಕ್ಯದ ಶಕ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಾಕ್ಯದ ಶಕ್ತಿ
  • 1992 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಅತ್ಯಂತ ಮಹಾನ್‌ ಪುರುಷ ಪುಸ್ತಕದಲ್ಲಿ ಬೈಬಲ್‌ ಅಭ್ಯಾಸಗಳನ್ನು ಆರಂಭಿಸುವುದು
    1993 ನಮ್ಮ ರಾಜ್ಯದ ಸೇವೆ
  • ದೇವರ ಕುಮಾರನಾದ ಯೇಸು ಕ್ರಿಸ್ತನ ಕುರಿತು ಇತರರು ಕಲಿಯುವಂತೆ ಸಹಾಯ ಮಾಡಿರಿ
    1993 ನಮ್ಮ ರಾಜ್ಯದ ಸೇವೆ
  • ಅವರು ಸದಾಕಾಲ ಹೇಗೆ ಜೀವಿಸಬಲ್ಲರೆಂದು ಕಲಿಯುವಂತೆ ಜನರಿಗೆ ಸಹಾಯ ಮಾಡಲು ಹಿಂದಿರುಗಿರಿ
    1993 ನಮ್ಮ ರಾಜ್ಯದ ಸೇವೆ
  • ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ ಅಧ್ಯಯನಕ್ಕೆ ಸಿದ್ಧರಿಲ್ಲದವರಿಗೆ ಸಹಾಯ
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1992 ನಮ್ಮ ರಾಜ್ಯದ ಸೇವೆ
km 12/92 ಪು. 1

ದೇವರ ವಾಕ್ಯದ ಶಕ್ತಿ

1 ದೇವರ ವಾಕ್ಯವು ಶಕಿವ್ತುಳ್ಳದ್ದಾಗಿದೆ. (ಇಬ್ರಿ. 4:12) ಇಂದು ಇದರ ರುಜುವಾತನ್ನು ಲಕ್ಷಾಂತರ ಜನರು ಬೈಬಲಿನಲ್ಲಿ ಕಲಿತಂಥ ವಿಷಯಗಳನ್ನು ತಮ್ಮ ಜೀವನದಲ್ಲಿ ಅನ್ವಯಿಸುವುದರ ಮೂಲಕ ಒಳ್ಳೆಯ ಜೀವಿತಕ್ಕೆ ಬಂದಿರುವುದರಿಂದ ನೋಡಸಾಧ್ಯವಿದೆ. ಮೊದಲನೆಯ ಶತಮಾನದಲ್ಲಿ ಯೇಸುವಿನ ಶಿಷ್ಯರು ಇತರರೊಂದಿಗೆ ದೇವರ ವಾಕ್ಯದ ಜ್ಞಾನವನ್ನು ಹಂಚಿಕೊಂಡಾಗಲೂ ಇದು ನಿಜವಾಗಿತ್ತು.—ರೋಮಾ. 12:2.

2 ಬೈಬಲಿನ ಬೋಧನೆಗಳಿಂದ ಜನರು ಪ್ರಯೋಜನ ಹೊಂದಬೇಕಾದರೆ ಅವರು ದೇವರ ವಾಕ್ಯವನ್ನು ಅಂಗೀಕರಿಸಿ ಅದನ್ನು ನಿಷ್ಕ್ರಷ್ಟವಾಗಿ ಅರಿತುಕೊಳ್ಳುವುದು ಅಗತ್ಯ. (1 ಥೆಸ. 2:13) ಡಿಸೆಂಬರ್‌ ತಿಂಗಳಲ್ಲಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಸಾಹಿತ್ಯವನ್ನು ನೀಡುವುದರ ಮೂಲಕ ನಾವು ಜನರಿಗೆ ಬೈಬಲಿನ ಉಪಯುಕ್ತತೆಯ ಬಗ್ಗೆ ಮತ್ತು ನಿಷ್ಕ್ರಷ್ಟ ಜ್ಞಾನವನ್ನು ಪಡೆಯಲಿಕ್ಕಾಗಿ ಅವಕಾಶವನ್ನು ನೀಡಲಿರುವೆವು.

3 ಸದಾ ಜೀವಿಸಬಲ್ಲಿರಿ ಪುಸ್ತಕದ ಕೆಲವೊಂದು ಆಸಕ್ತಿಭರಿತ ಭಾಗಗಳನ್ನು ಪುನಃ ಯಾಕೆ ನೋಡಬಾರದು? ಪುಸ್ತಕದ ಪರಿವಿಡಿಯ ಪಟ್ಟಿಯು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಪಾತ್ರಗಳು, ಮರಣ, ನರಕ, ದುರಾತ್ಮಗಳು, ಪುನರುತ್ಥಾನ ಮತ್ತು ದೇವರ ರಾಜ್ಯದ ಮೂಲ ಧರ್ಮತತ್ವವನ್ನು ಚರ್ಚಿಸುವ ಅಧ್ಯಾಯಗಳಿಗೆ ನಡಿಸುವವು. ಅದರಲ್ಲಿ ಅನೇಕ ಭಾವಚಿತ್ರಗಳು ಮತ್ತು ದೃಷ್ಟಾಂತಗಳು ಇವೆ. ಈ ವೈಶಿಷ್ಟ್ಯಗಳು ನಮ್ಮನ್ನು ನಿಜ ಉತ್ಸಾಹದಿಂದ ಪುಸ್ತಕವನ್ನು ನೀಡಲು ನಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಅದರಲ್ಲಿರುವ ಸುವಾರ್ತೆ ಅಗತ್ಯವೆಂದು ದೃಢವಾಗಿ ಮನದಟ್ಟು ಮಾಡಿಕೊಡಲು ಸಮರ್ಥಗೊಳಿಸುತ್ತದೆ. ಈ ಪ್ರಕಾಶನದ ಬಗ್ಗೆ ನಮಗಿರುವ ಉತ್ಸಾಹವು ಮನೆಯವನು ರಾಜ್ಯದ ಸಂದೇಶಕ್ಕಾಗಿ ಮತ್ತು ನೀಡುವಿಕೆಗೆ ಮನಃಪೂರ್ವಕವಾಗಿ ಪ್ರತಿಕ್ರಿಯೆ ತೋರಿಸುವಂತೆ ಸಹಾಯ ಮಾಡುವುದು.

4 ಮಾನವ ಕುಲದ ಭವಿಷ್ಯತ್ತಿನ ಬಗ್ಗೆ ನಿಜವಾಗಿಯೂ ತಿಳಿದುಕೊಳ್ಳಲು ಇಚ್ಛಿಸುವ ಮನೆಯವನನ್ನು ಭೇಟಿಯಾದರೆ ನಾವು ಹೇಗೆ ಈ ಪುಸ್ತಕವನ್ನು ಉಪಯೋಗಿಸಬಲ್ಲೆವು? ನಾವು ಮೊದಲನೆ ಅಧ್ಯಾಯದ 12 ಮತ್ತು 13 ನೆಯ ಪುಟಗಳಲ್ಲಿರುವ ದೇವರ ಉದ್ದೇಶವು ಭೂಮಿಗೆ ಮತ್ತು ಮಾನವಕುಲಕ್ಕೆ ಏನಾಗಿದೆಯೆಂದು ಎತ್ತಿ ಹೇಳಿ ಈ ಮಹಾ ಆಶೀರ್ವಾದಗಳು ತುಂಬಾ ಹತ್ತಿರದಲ್ಲಿವೆಯೆಂದು ಹೇಳುತ್ತೇವೆ. ಅವನ ಗಮನವನ್ನು ಪುಟ 155 ರಿಂದ 158 ರಲ್ಲಿರುವ ಚಿತ್ರಗಳ ಕಡೆಗೆ ನಾವು ಸೆಳೆಯಬಲ್ಲೆವು. ಮತ್ತು ಈ ಚಿತ್ರಗಳ ಪಕ್ಕದಲ್ಲಿ ಕೊಟ್ಟಿರುವಂಥಾ ವಚನಗಳನ್ನು ಓದುವುದು ಮನೆಯವನಿಗೆ ನಮ್ಮ ಚರ್ಚೆಯು ಬೈಬಲಾಧಾರಿತವೆಂದು ದೃಢಪಡಿಸುತ್ತದೆ.

5 ಕ್ರೈಸ್ತಪ್ರಪಂಚದ ವರ್ತನೆಯಿಂದಾಗಿ ಅನೇಕರು ಬೈಬಲು ದೇವರ ವಾಕ್ಯವೆಂದು ಒಪ್ಪಲು ನಿರಾಕರಿಸುತ್ತಾರೆ. ಈ ಸಂದರ್ಭದಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಬೇರೆ ಧರ್ಮದವರು ಉತ್ಪಾದಿಸಿದ ಫಲಗಳ ಅಂತರವನ್ನು ತಿಳಿಸಲಿಕ್ಕಾಗಿ 22 ನೆಯ ಅಧ್ಯಾಯದಲ್ಲಿನ “ಸತ್ಯ ಧರ್ಮವನ್ನು ಗುರುತಿಸುವುದು” ಎಂಬ ವಿಷಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸ ಸಾಧ್ಯವಿದೆ.

6 ನಾವು ಇಂಗ್ಲಿಷ್‌ ಬೈಬಲಿನಿಂದ ವಚನವನ್ನು ಓದುವಲ್ಲಿ ಮನೆಯವನು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನಲ್ಲಿ ಉಪಯೋಗಿಸಲಾದ ಭಾಷೆಯ ಸ್ವಚ್ಛತೆಯ ಬಗ್ಗೆ ಹೇಳಿಕೆಯನ್ನೀಯಬಹುದು. ಅಥವಾ ಮನೆಯವನಿಗೆ ನಮ್ಮ ಸಂದೇಶದಲ್ಲಿ ಆಸಕ್ತಿ ಇದ್ದರೂ ಆತನ ಹತ್ತಿರ ಬೈಬಲು ಇಲ್ಲದಿರುವುದನ್ನು ನಾವು ಕಂಡುಕೊಳ್ಳಬಹುದು. ಇಂಥಾ ಸಂದರ್ಭಗಳಲ್ಲಿ ನಾವು ಬೈಬಲಿನ ಅದ್ವಿತೀಯ ವೈಶಿಷ್ಟ್ಯಗಳನ್ನು ಮತ್ತು ನಾವು ಬೇರೆಯವರಿಗೆ ಇದನ್ನು ನೀಡಲು ಇಷ್ಟಪಡುವ ಕಾರಣವನ್ನು ವಿವರಿಸಬಹುದು. ಮತ್ತು ಇತರ ವಿಷಯಗಳಲ್ಲದೇ ಬೈಬಲಿನ ಕೊನೆಯ ಪುಟಗಳಲ್ಲಿರುವ ವಿಷಯಸೂಚಿ (ಇಂಡೆಕ್ಸ್‌) ಮತ್ತು “ಚರ್ಚೆಗಾಗಿ ಬೈಬಲ್‌ ವಿಷಯಗಳು” ಇವುಗಳ ಕಡೆಗೆ ಗಮನ ಸೆಳೆಯಬಹುದು. ಇದು ಮನೆಯವನಿಗೆ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಪ್ರತಿಯನ್ನು ನೀಡಲಿಕ್ಕೆ ಯಾ ನಮ್ಮ ಹತ್ತಿರ ಇಲ್ಲವಾದರೆ ಹೊಸ ಪ್ರತಿಯೊಟ್ಟಿಗೆ ಪುನಃ ಸಂದರ್ಶಿಸುವೆವೆಂದು ಹೇಳಲಿಕ್ಕೆ ಅವಕಾಶವನ್ನೀಯಬಹುದು.

7 ಯೆಹೋವನು ಬೈಬಲಿನ ಮೂಲಕ ಮಾನವ ಕುಲದೊಂದಿಗಿನ ತನ್ನ ವ್ಯವಹಾರವನ್ನು ತಿಳಿಯಪಡಿಸಿದ್ದಾನೆ. ಮತ್ತು ಆತನು ತನ್ನ ಅದ್ಭುತವಾದ ವ್ಯಕ್ತಿತ್ವವನ್ನು ನಮಗೆ ಪರಿಚಯಿಸಿದ್ದಾನೆ. ನಾವು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಮತ್ತು ಸದಾ ಜೀವಿಸಬಲ್ಲಿರಿ ಸಾಹಿತ್ಯಗಳನ್ನು ಯೆಹೋವನ ಮತ್ತು ಆತನ ವಾಕ್ಯದ ಶಕ್ತಿಯ ಬಗ್ಗೆ ಇತರರು ಕಲಿಯುವಂತೆ ಸಹಾಯ ಮಾಡಲು ಪರಿಣಾಮಕಾರಿಯಾಗಿ ನೀಡುವಂತಾಗಲಿ!—2 ಕೊರಿಂ. 10:4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ