ಡಿಸೆಂಬರ್ಗಾಗಿ ಸೇವಾ ಕೂಟಗಳು
ಡಿಸೆಂಬರ್ 7 ರ ವಾರ
ಸಂಗೀತ 49 (23)
10 ನಿ: ಸ್ಥಳೀಕ ತಿಳಿಸುವಿಕೆಗಳು, ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ರಾಜ್ಯದ ಸಾರುವಿಕೆಯ ಕೆಲಸದಲ್ಲಿ ಅವರಿಗೆ ಪಾಲು ಇರುವುದರಿಂದ ಪ್ರಚಾರಕರನ್ನು ಪ್ರಶಂಸಿಸಿರಿ. ಸ್ಥಳೀಕ ಟೆರಿಟೊರಿಯಲ್ಲಿ ಉಪಯೋಗಿಸಲು ಪ್ರಚಲಿತ ಪತ್ರಿಕೆಗಳಿಂದ ಮಾತಾಡುವ ವಿಷಯಗಳನ್ನು ಸೂಚಿಸಿರಿ.
15 ನಿ: “ದೇವರ ವಾಕ್ಯದ ಶಕ್ತಿ.” ಪ್ರಶ್ನೆ ಮತ್ತು ಉತ್ತರಗಳು. ಎಲ್ಲರು ಕ್ಷೇತ್ರದಲ್ಲಿ ಉಪಯೋಗಿಸಲು ವಿವೇಚಿಸಯೋಗ್ಯ ವಾಕ್ಯಗಳನ್ನು ಮತ್ತು ಸರಳ, ಸಮಂಜಸ ವಾದಸರಣಿಯನ್ನು ಗಮನಿಸುತ್ತಾ ನೀವು ಬೈಬಲನ್ನು ನಂಬಶಕ್ತರೆಂಬುದಕ್ಕೆ ಕಾರಣ ಎಂಬ ಟ್ರ್ಯಾಕ್ಟನ್ನು ಓದುವಂತೆ ಪ್ರೋತ್ಸಾಹಿಸಿರಿ.
20 ನಿ: “ನಿಮ್ಮ ಮೊದಲ ಭೇಟಿಯಲ್ಲೇ ತಳಪಾಯವನ್ನು ಹಾಕಿರಿ.” ಈ ಭಾಗವನ್ನು ನಿರ್ವಹಿಸುವ ಸಹೋದರನು ಪ್ಯಾರಗ್ರಾಫ್ 2 ಮತ್ತು 3 ರಲ್ಲಿರುವ ಎರಡು ಪೀಠಿಕೆಗಳಲ್ಲಿ ಒಂದನ್ನು ಉದಾಹರಿಸುತ್ತಾನೆ ಮತ್ತು ಪ್ಯಾರಗ್ರಾಫ್ 4, 5, ಮತ್ತು 6 ರಲ್ಲಿರುವ ಪ್ರತಿಯೊಂದು ವಿಷಯಗಳನ್ನು ಪ್ರತ್ಯಕ್ಷಾಭಿನಯಿಸುತ್ತಾ ನಾಲ್ಕು ಪ್ರತ್ಯಕ್ಷಾಭಿನಯಗಳನ್ನು ಪರಿಚಯಿಸುತ್ತಾನೆ. ಕೊನೆಯ ಪ್ರತ್ಯಕ್ಷಾಭಿನಯವು ಸದಾ ಜೀವಿಸಬಲ್ಲಿರಿ ಹೇಗೆ ನೀಡಬಹುದೆಂದು ತೋರಿಸಿಕೊಡಬೇಕು.
ಸಂಗೀತ 52 (59) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 14 ರ ವಾರ
ಸಂಗೀತ 141 (64)
5 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆಗಳು.
15 ನಿ: “ನೀವು ಸೂಚನೆಗಳನ್ನು ಪಾಲಿಸುತ್ತೀರೋ?” ವಾಚ್ಟವರ್ನ ಇಂಗ್ಲಿಷ್ ಸಂಚಿಕೆಯ ಅಕ್ಟೋಬರ್ 1, 1990 ರ ಪುಟ 30-1 ರಲ್ಲಿನ ಲೇಖನದ ಮೇಲೆ ಆಧರಿಸಿ ಅಧ್ಯಕ್ಷ ಮೇಲ್ವಿಚಾರಕರಿಂದ ಭಾಷಣ. ಈ ಲೇಖನವು ದೇಶೀಯ ಭಾಷೆಯ ಕಾವಲಿನಬುರುಜು ಸಂಚಿಕೆಗಳಲ್ಲಿ ನವಂಬರ್ 1, 1991 ರಲ್ಲಿ ಕಂಡುಬರುತ್ತದೆ. ನಿರ್ಧಿಷ್ಟ ಅಗತ್ಯತೆಗಳಿಗಾಗಿ ಸ್ಥಳೀಯ ಅನ್ವಯವನ್ನು ಮಾಡಬೇಕು: ಕ್ಷೇತ್ರ ಸೇವೆಯ ಸಮಯವನ್ನು ವರದಿಸುವುದು, ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವುದು, ಕ್ಷೇತ್ರ ಸೇವೆಗೆ ಕೂಟಗಳಿಗೆ ಸಮಯಕ್ಕೆ ಸರಿಯಾಗಿರುವುದು, ರಾಜ್ಯ ಸಭಾಗೃಹದಲ್ಲಿ ಮಕ್ಕಳನ್ನು ಹಿಡಿತದಲ್ಲಿಡುವುದು, ಮತ್ತು ಇತ್ಯಾದಿ. ಎಲ್ಲಿ ತಕ್ಕದ್ದೋ ಅಲ್ಲಿ ಪ್ರಶಂಸೆಯನ್ನೀಯಿರಿ, ಮತ್ತು ಪ್ರತಿಯೊಬ್ಬರು ಸೂಚನೆಗಳನ್ನು ಅನುಸರಿಸುವುದರಿಂದ ಇಡೀ ಸಭೆಯು ಹೇಗೆ ಪ್ರಯೋಜನ ಹೊಂದುತ್ತದೆ ಮತ್ತು ನೇಮಿತ ಸೇವಕರ ಕೆಲಸವು ಸುಲಭವನ್ನಾಗಿ ಮಾಡುತ್ತದೆ ಎಂದು ಎಲ್ಲರು ವಿವೇಚಿಸುವಂತೆ ಸಹಾಯಮಾಡಿರಿ.
10 ನಿ: “ಜನವರಿಯಲ್ಲಿ ಒಬ್ಬ ಸಹಾಯಕ ಪಯನೀಯರರಾಗಿರಿ.” ಪ್ರಶ್ನೆ ಉತ್ತರಗಳ ಮೂಲಕ ಬೆಚ್ಚಗೆ ಮತ್ತು ಹುರುಪಿನಿಂದ ವಿಷಯವನ್ನು ಆವರಿಸಿರಿ. ಸ್ಥಳೀಕ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮತ್ತು ಜನವರಿಯಲ್ಲಿ ದೊಡ್ಡ ಗುಂಪುಗಳಿಗಾಗಿ ಮಾಡಲಿರುವ ವಿಶೇಷ ಏರ್ಪಾಡುಗಳನ್ನು ತಿಳಿಸಿರಿ.
15 ನಿ: ನಾವು ಜನ್ಮ ದಿನಗಳನ್ನು ಆಚರಿಸುವುದಿಲವ್ಲೆಂಬದಕ್ಕೆ ಕಾರಣ. ಹಿರಿಯ ಮತ್ತು ಒಳ್ಳೇ ಮಾದರಿಯ ಹದಿವಯಸ್ಸಿಗೆ ಮುಂಚಿನ ತಂದೆಯಿಲ್ಲದ ಹುಡುಗನೊಂದಿಗೆ ಚರ್ಚೆ. ಒಂದು ಜನ್ಮದಿನದ ಪಾರ್ಟಿಗೆ ಹಾಜರಾಗಲು ತನ್ನ ಸಮವಯಸ್ಕರ ಒತ್ತಡದೊಂದಿಗೆ ವ್ಯವಹರಿಸುವಲ್ಲಿ ಆತನ ಸಹಾಯ ಕೇಳಲು ಹುಡುಗನು ಹಿರಿಯನನ್ನು ಸಮೀಪಿಸುತ್ತಾನೆ. ಅದು ತಪ್ಪೆಂದು ಆತನು ತಿಳಿದಿರುತ್ತಾನೆ ಆದರೆ ಅದನ್ನು ಬೇರೆಯವರಿಗೆ ಸ್ಪಷ್ಟವಾಗಿಗಿ ವಿವರಿಸಶಕ್ತನಾಗಲು ಬಯಸುತ್ತಾನೆ. ಹಿರಿಯನು ದಯೆಯಿಂದ ಮತ್ತು ಸರಳ ಭಾಷೆಯಿಂದ ದ ವಾಚ್ಟವರ್ ಇಂಗ್ಲಿಷ್ ಮುದ್ರಣದ ಸೆಪ್ಟೆಂಬರ್ 1, 1992ರ ಪುಟ 30-1 ರಲ್ಲಿರುವ (ಪಾಕ್ಷಿಕ ಭಾಷೆಯಲ್ಲಿರುವ ಕಾವಲಿನಬುರುಜು ಪತ್ರಿಕೆಯ ಡಿಸೆಂಬರ್ 1, 1992 ರ ಸಂಚಿಕೆಯಲ್ಲಿ ಈ ಲೇಖನವು ದೊರಕುತ್ತದೆ) ಮತ್ತು ರೀಸನಿಂಗ್ ಪುಸ್ತಕದ 68-70 ಪುಟಗಳಲ್ಲಿರುವ ಮಾಹಿತಿಯನ್ನು ಹುಡುಗನೊಂದಿಗೆ ಪುನರಾವರ್ತಿಸುತ್ತಾನೆ.
ಸಂಗೀತ 27 (7) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 21 ರ ವಾರ
ಸಂಗೀತ 179 (29)
15 ನಿ: ಸ್ಥಳೀಕ ತಿಳಿಸುವಿಕೆಗಳು, ಅಕೌಂಟ್ಸ್ ವರದಿ ಮತ್ತು ಕಾಣಿಕೆಗಳ ಅಂಗೀಕಾರ ಸಹಿತವಾಗಿ. ಸ್ಥಳೀಕವಾಗಿ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕಾಗಿ ಆರ್ಥಿಕ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಬೆಚ್ಚಗೆ ಪ್ರಶಂಸಿಸಿರಿ. ತಕ್ಕದ್ದಾಗಿರುವಲ್ಲಿ, ರಜಾ ಅವಧಿಗಾಗಿ ಕ್ಷೇತ್ರ ಸೇವಾ ಏರ್ಪಾಡನ್ನು ತಿಳಿಸಿರಿ. ರಜಾ ಕಾಲದಲ್ಲಿ ಏಳಬಹುದಾದ ವಿವಾದಗಳಿಗಾಗಿ, ಸ್ಕೂಲ್ ಬ್ರೊಷರಿನ 17-21 ಪುಟಗಳನ್ನುಪಯೋಗಿಸಿ, ವಿಶೇಷವಾಗಿ ಮಕ್ಕಳನ್ನು ಹೆತ್ತವರು ತಯಾರಿಸಬೇಕು.
20 ನಿ: “ಅಭಿರುಚಿಯನ್ನು ಬೆಳೆಯಿಸುವ ವಿಧ.” ಭಾಷಣ ಮತ್ತು ಪ್ರತ್ಯಕ್ಷಾಭಿನಯಗಳು, ಸೇವಾ ಮೇಲ್ವಿಚಾರಕರಿಂದ ನಿರ್ವಹಿಸಲ್ಪಡುವುದು. ಪ್ಯಾರಗ್ರಾಫ್ 5 ಮತ್ತು 6 ರಲ್ಲಿ ತೋರಿಸಿರುವ ವಿಧಾನಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತ್ಯಕ್ಷಾಭಿನಯಗಳನ್ನು ಸರಳವಾಗಿ ಮತ್ತು ಅನುಸರಿಸಲು ಸುಲಭವಾಗಿ ಮಾಡಿರಿ.
10 ನಿ: “ತಕ್ಕದಾದ ಮಾತಾಡುವ ವಿಷಯಗಳನ್ನು ಆರಿಸಿರಿ.” ಕ್ಷೇತ್ರ ಸೇವೆಗಾಗಿ ತಯಾರಿ ಮಾಡುವ ಗಂಡ ಮತ್ತು ಹೆಂಡತಿಯ ಮಧ್ಯೆ ಚರ್ಚೆ.
ಸಂಗೀತ 198 (50) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 28 ರ ವಾರ
ಸಂಗೀತ 54 (71)
10 ನಿ: ಸ್ಥಳೀಕ ತಿಳಿಸುವಿಕೆಗಳು. ಈ ವಾರಾಂತ್ಯದಲ್ಲಿ ಪ್ರಚಲಿತ ಪತ್ರಿಕೆಯಿಂದ ಮಾತಾಡುವ ವಿಷಯವನ್ನು ಹೇಗೆ ಉಪಯೋಗಿಸುವುದೆಂದು ಪ್ರತ್ಯಕ್ಷಾಭಿನಯದಿಂದ ತೋರಿಸಿಕೊಡಿರಿ. ಹೋದವಾರದ ಸೇವಾ ಕೂಟದಲ್ಲಿ ಕೊಡಲ್ಪಟ್ಟ ಸಲಹೆಯನ್ನು ಉಪಯೋಗಿಸಿರಿ.
20 ನಿ: “ನನ್ನ ಕಡೆಗೆ ಪುನಃ ತಿರುಗಿರಿ—ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.” ನವಂಬರ್ 1, 1992 ಕಾವಲಿನಬುರುಜು ಪಾಕ್ಷಿಕ ಸಂಚಿಕೆಯಲ್ಲಿ ಪುಟ 28 ರಲ್ಲಿ ಮತ್ತು ಮಾಸಿಕ ಸಂಚಿಕೆಯಲ್ಲಿ ಪುಟ 30 ರಲ್ಲಿ ಇರುವ ಲೇಖನದ ಮೇಲೆ ಆಧರಿಸಿ ಹಿರಿಯನಿಂದ ಭಾಷಣ. ವಾಚ್ಟವರ್ ಇಂಗ್ಲಿಷ್ ಮುದ್ರಣದ ಆಗಸ್ಟ್ 1, 1992 ರ ಸಂಚಿಕೆಯಲ್ಲಿ ಈ ಲೇಖನವು ಕಂಡುಬರುತ್ತದೆ. ಆತನ ಸಂಸ್ಥಾಪನೆಯಿಂದ ಚೆದರಿದ ಮತ್ತು ಅಕ್ರಿಯರಾದ ವ್ಯಕ್ತಿಗಳಿಗೆ ಹಿಂತಿರುಗಿ ಬರಲು ಸ್ವಾಗತಿಸುವ ಆತನ ಇಷ್ಟವನ್ನು ಮತ್ತು ಯೆಹೋವನ ಕರುಣೆಯನ್ನು ಒತ್ತಿ ಹೇಳಿರಿ. ವ್ಯಕ್ತಿಯೊಬ್ಬನು ನಿಜ ಸಂತೋಷವನ್ನು ಯೆಹೋವನ ಸಂಸ್ಥಾಪನೆಯಲ್ಲಿ ಮಾತ್ರ ಕಂಡುಕೊಳ್ಳ ಸಾಧ್ಯವಿದೆಯೆಂದು ತೋರಿಸಿಕೊಡಿರಿ.
15 ನಿ: “ನಮ್ಮ ಸಾಹಿತ್ಯಗಳನ್ನು ನೀವು ಬೆಲೆಯುಳ್ಳದ್ದಾಗಿ ನೋಡುತ್ತೀರೋ?” ಪ್ರೋತ್ಸಾಹದಾಯಕ ಭಾಷಣ.
ಸಂಗೀತ 24 (70) ಮತ್ತು ಸಮಾಪ್ತಿಯ ಪ್ರಾರ್ಥನೆ.