ಪರಿಣಾಮಕಾರಿ ಪುನರ್ಭೇಟಿಗಳನ್ನು ಮಾಡುವುದರ ಮೂಲಕ ಅಭಿರುಚಿಯನ್ನು ಕಟ್ಟುತ್ತಿರ್ರಿ
1 ಚೆನ್ನಾಗಿ ತಯಾರಿಸಿದ ಪ್ರತಿಯೊಂದು ಭಾಷಣದಲ್ಲಿ ಒಂದು ಅಭಿರುಚಿ ಕೆರಳಿಸುವ ಪೀಠಿಕೆ, ಒಂದು ಮಾಹಿತಿಪೂರ್ಣ ಪ್ರಧಾನ ಭಾಗ, ಮತ್ತು ಪ್ರೇರೇಪಣೆ ನೀಡುವ ಸಮಾಪ್ತಿ ಸೇರಿರುತ್ತದೆ. ಪೀಠಿಕೆಯು ಸಭಿಕರ ಗಮನವನ್ನು ಸೆರೆ ಹಿಡಿಯುತ್ತದೆ, ಆದರೆ ಪ್ರಧಾನ ಭಾಗ ಮತ್ತು ಸಮಾಪ್ತಿ ಇಲ್ಲದೆ, ಭಾಷಣವು ಅಪೂರ್ಣವಾಗುತ್ತದೆ. ಅದೇ ಸೂತ್ರಗಳು ನಮ್ಮ ಶುಶ್ರೂಷೆಗೂ ಅನ್ವಯಿಸುತ್ತವೆ. ಮೊದಲ ಭೇಟಿಯಲ್ಲಿ ಮನೆಯವನ ಅಭಿರುಚಿಯನ್ನು ಕೆರಳಿಸುವುದು ಒಳ್ಳೇ ವಿಷಯವಾಗಿರುತ್ತದೆ, ಆದರೆ ಪರಿಣಾಮಕಾರಿ ಪುನರ್ಭೇಟಿಗಳನ್ನು ಮಾಡುವುದರ ಮೂಲಕ ಆ ಮೊದಲ ಅಭಿರುಚಿಯನ್ನು ನಾವು ಕಟ್ಟುತ್ತಾ ಇರಬೇಕು.
2 ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸುತ್ತಾನೆ? ಎಂಥ ಆಲೋಚನೆಯನ್ನು ಉದ್ರೇಕಿಸುವ ಪ್ರಶ್ನೆಯದು! ಈ ವಿಷಯವು ಇಂದು ಅನೇಕರ ಮನಸ್ಸುಗಳಲ್ಲಿ ಇದೆ ಎಂದು ನೀವು ಒಪ್ಪುವುದಿಲ್ಲವೊ? ಅದಕ್ಕಾಗಿಯೆ, ಮೇಲಿನ ಲೇಖನದಲ್ಲಿ, ನೀವು ಪುನರ್ಭೇಟಿಯನ್ನು ಮಾಡುವಾಗ ಉತ್ತರಿಸುವ ದೃಷ್ಟಿಯಿಂದ ಮೊದಲ ಭೇಟಿಯ ಅಂತ್ಯದಲ್ಲಿ ಈ ಪ್ರಶ್ನೆಯನ್ನೆಬ್ಬಿಸಿರಿ ಎಂದು ಸೂಚಿಸಲಾಗಿತ್ತು.
3 ನೀವು ಇದನ್ನು ಹೇಳಬಹುದು:
▪ “ಹಲ್ಲೊ. ಹೋದ ಸಲ ನಾವು ಮಾತಾಡುವಾಗ, ಕಷ್ಟಾನುಭವವನ್ನು ದೇವರು ಅನುಮತಿಸಿರುವುದರ ವಿಷಯವು ಮೇಲ್ಬಂತು, ಮತ್ತು ನಾನು ನಿಮಗಾಗಿ ಸ್ವಲ್ಪ ಮಾಹಿತಿಯೊಂದಿಗೆ ಹಿಂದಿರುಗುವುದಾಗಿ ಮಾತು ಕೊಟ್ಟೆ. ದೇವರು ನಿಜವಾಗಿಯೂ ನಮ್ಮನ್ನು ಲಕ್ಷಿಸುವುದಾದರೆ, ಆತನು ಕಷ್ಟಾನುಭವಕ್ಕೆ ಒಂದು ಅಂತ್ಯವನ್ನು ತರುತ್ತಿದ್ದನು ಎಂದು ಅನೇಕರು ಭಾವಿಸುತ್ತಾರೆ. ಪ್ರಾಯಶಃ ನಿಮಗೆ ಹಾಗೆಯೆ ಅನಿಸಿದ್ದಿರಬೇಕು. [ಮನೆಯವನು ಉತ್ತರಿಸುವಂತೆ ಅನುಮತಿಸಿರಿ.] ದೇವರು ನಿಜವಾಗಿಯೂ ಲಕ್ಷಿಸುತ್ತಾನೆಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. [1 ಯೋಹಾನ 4:8 ಓದಿ.] ಇಷ್ಟರವರೆಗೆ ಕಷ್ಟಾನುಭವವನ್ನು ಅನುಮತಿಸಿರುವುದಕ್ಕಾಗಿ ದೇವರಿಗೆ ಉತ್ತಮ ಕಾರಣಗಳು ಇವೆ. ಆ ಕಾರಣಗಳಲ್ಲೊಂದನ್ನು 2 ಪೇತ್ರ 3:9 ರಲ್ಲಿ ವಿವರಿಸಲಾಗಿದೆ. [ಓದಿ.] ಇತರ ಕಾರಣಗಳು ಈ ಬ್ರೊಷರ್ನಲ್ಲಿ ತೋರಿಸಲಾಗಿವೆ.” ನಂತರ ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಬ್ರೊಷರಿನ ಪುಟ 10-12 ರ ಕಡೆಗೆ ತಿರುಗಿರಿ ಮತ್ತು ಅಭಿರುಚಿಯ ಒಂದು ವಿಷಯವನ್ನು ಚರ್ಚಿಸಿರಿ.
4 ಕೆಲವು ಮನೆಯವರು ಹೆಚ್ಚು ಪೂರ್ಣ ವಿವರಣೆಯಲ್ಲಿ ಅಭಿರುಚಿಯುಳ್ಳವರಾಗಿರಬಹುದು, ಮತ್ತು ಅವರಿಗೆ ಉತ್ತರದೊಂದಿಗೆ ಪೂರ್ಣ ಸಮಾಧಾನವಾಗುವ ಮುಂಚೆ ಅನೇಕ ಪುನರ್ಭೇಟಿಗಳ ಅವಶ್ಯವಿರಬಹುದು. ಜನವರಿಯಲ್ಲಿ ನೀಡಲಿರುವ ಸೊಸೈಟಿಯ ಕೆಲವೊಂದು ಹಳೇ 192 ಪುಟದ ಪುಸ್ತಕಗಳಲ್ಲಿರುವ ಒಂದು ಅಧ್ಯಾಯವನ್ನು ವಿಷಯದ ಮುಂದಿನ ಚರ್ಚೆಗೆ ಆಧಾರವನ್ನಾಗಿ ಬಳಸಬಹುದು.
5 ನೀವು ಚರ್ಚೆಯನ್ನು ಸಮಾಪ್ತಿಗೆ ತರುವಾಗ, ಮತ್ತೊಂದು ಪ್ರಶ್ನೆಯನ್ನೆಬ್ಬಿಸಿರಿ ಮತ್ತು ನೀವು ಪುನಃ ಬರುವಾಗ ಕೆಲವೊಂದು ಅಭಿರುಚಿಕರ ಮಾಹಿತಿಯೊಂದಿಗೆ ಭಾಗಿಯಾಗಲು ಸಂತೋಷಿಸುವಿರೆಂದು ಮನೆಯವನಿಗೆ ಹೇಳಿರಿ. ಮರಣದಲ್ಲಿ ಒಬ್ಬ ವ್ಯಕ್ತಿಗೆ ಏನು ಸಂಭವಿಸುತ್ತದೆ ಎಂದು ಅನೇಕ ಜನರು ತಿಳಿಯಲಪೇಕ್ಷಿಸುವರು. ಅನುಕೂಲವಾದ ಒಂದು ಸಮಯದಲ್ಲಿ ಆ ವಿಷಯವನ್ನು ಚರ್ಚಿಸಲು ಯಾಕೆ ಏರ್ಪಡಿಸಬಾರದು?
6 ಮೂರು ಬುನಾದಿ ಸೂತ್ರಗಳನ್ನು ನೀವು ನಿಮ್ಮ ಮನಸ್ಸಿನಲ್ಲಿಡುವುದು ನಿಮಗೆ ಸಹಾಯಕಾರಿಯಾಗಿರುವುದು. ಹೊಂದಿಸಿಕೊಳ್ಳುವವರಾಗಿರಿ. ಬೈಬಲ್ ಚರ್ಚೆಗಾಗಿ ಮನೆಯವನು ಸಮಯವನ್ನು ಬದಿಗಿಡುವುದರಲ್ಲಿ ಅಭ್ಯಾಸವಿಲ್ಲದವನಾಗಿ ಇರಬಹುದು. ಚುಟುಕಾಗಿ ಮಾತಾಡಿರಿ. ಆರಂಭದಲ್ಲಿ ಹೆಚ್ಚು ಹೊತ್ತು ತಕ್ಕೊಳ್ಳಬೇಡಿರಿ ಯಾ ಹೆಚ್ಚು ವಿಷಯಗಳನ್ನು ಆವರಿಸಬೇಡಿರಿ. ಅನೇಕ ಸಂದರ್ಭಗಳಲ್ಲಿ, ಸ್ವಲ್ಪವೇ ಸಮಯದಲ್ಲಿ ಕೆಲವೇ ವಿಷಯಗಳನ್ನು ಆವರಿಸುವಲ್ಲಿ ನಿಮ್ಮ ಸಂದರ್ಶನೆಗೆ ಹೆಚ್ಚು ಅನುಕೂಲಕರ ಪ್ರತಿಕ್ರಿಯೆಯು ಅಲ್ಲಿರುವುದು. ಅನುರಾಗ ಮತ್ತು ಸ್ನೇಹಪರರಾಗಿರ್ರಿ. ಒಬ್ಬ ವ್ಯಕ್ತಿಯಾಗಿ ಆತನಲ್ಲಿ ನೀವು ವೈಯಕ್ತಿಕವಾಗಿ ಅಭಿರುಚಿಯುಳ್ಳವರಾಗಿದ್ದೀರೆಂದು ಮನೆಯವನಿಗೆ ತೋರಿಸಿರಿ.
7 ಮನೆಯವನನ್ನು ಶಾಸ್ತ್ರೀಯ ಸಂಭಾಷಣೆಯಲ್ಲಿ ಒಳಗೂಡಿಸುವುದು ನಮ್ಮ ಒಡನೆಯ ಗುರಿಯಾಗಿರುತ್ತದೆ. ನಂತರ ನಾವು ಒಂದು ಫಲದಾಯಕ ಮನೆ ಬೈಬಲ್ ಅಧ್ಯಯನವನ್ನು ಸದಾ ಜೀವಿಸಬಲ್ಲಿರಿ ಪುಸ್ತಕದಂಥ, ತಕ್ಕದಾದ ಸಾಹಿತ್ಯದಿಂದ ಆರಂಭಿಸ ಬಯಸಬೇಕು. ನೀವು ಪರಿಣಾಮಕಾರಕ ಪುನರ್ಭೇಟಿಗಳನ್ನು ಮಾಡುವುದರ ಮೂಲಕ ಆರಂಭದ ಅಭಿರುಚಿಯ ಮೇಲೆ ತಾಳ್ಮೆಯಿಂದ ಕಟ್ಟುವಲ್ಲಿ ಆ ಸಂತೋಷವು ನಿಮ್ಮದಾಗಬಹುದು.