ಪ್ರಾಮುಖ್ಯ ಸಾಧನಗಳನ್ನು ವಿವೇಕದಿಂದ ಉಪಯೋಗಿಸುವುದು
1 ನೀವು ಮನೆಯಿಂದ ಮನೆಗೆ ಸಾಕ್ಷಿಯನ್ನೀಯುವಾಗ, ಬೈಬಲ್ ಮತ್ತು ಇತರ ಸಾಧನಗಳನ್ನು ಉಪಯೋಗಿಸುವುದರ ಮೂಲಕ ಒಂದು ರಚನಾತ್ಮಕ, ಶಾಸ್ತ್ರೀಯ ಸಂಭಾಷಣೆಯಲ್ಲಿ ಪ್ರತಿಯೊಂದು ಮನೆಯವನನ್ನು ತೊಡಗಿಸುವುದು ನಿಮ್ಮ ಗುರಿಯಾಗಿರಬೇಕು. (ಹೋಲಿಸಿ 2 ಕೊರಿಂಥ 6:1; 2 ತಿಮೊಥೆಯ 2:15.) ಈ ದಿನಗಳಲ್ಲಿ ನಿಮ್ಮ ಟೆರಿಟೊರಿಯಲ್ಲಿರುವ ಜನರು ಯಾವದರ ಬಗ್ಗೆ ವ್ಯಾಕುಲಿತರಾಗಿರುತ್ತಾರೆ? ಅವರು ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಜೀವಿತದ ಗುಣಮಟ್ಟದಲ್ಲಿನ ಅವನತಿಯ ಕುರಿತು ಚಿಂತಿತರೊ? ಈ ಯಾವುದೇ ವಿಷಯಗಳ ಮೇಲೆ ಕೆಲವೇ ಪೀಠಿಕಾ ಹೇಳಿಕೆಗಳು ಒಂದು ಉತ್ತಮ ಬೈಬಲ್ ಚರ್ಚೆಗೆ ನಡಿಸಬಹುದು.
2 ನೀವು ಹೀಗನ್ನಬಹುದು:
▪ “ಈ ಆಹ್ವಾನ ನೀಡುವ ಸಮಯಗಳಲ್ಲಿ, ಸ್ವಲ್ಪವೇ ಹಣದಲ್ಲಿ ಜೀವನ ಸಾಗಿಸುವುದು ಕಷ್ಟವೆಂದು ಅನೇಕ ಜನರು ಕಂಡುಕೊಳ್ಳುತ್ತಾರೆ. ಪ್ರತಿಯೊಬ್ಬರಿಗೆ ಅನುಕೂಲವಾಗಬಹುದಾದ ವಿಧಾನದಲ್ಲಿ ನಮ್ಮ ಆರ್ಥಿಕ ಸಮಸ್ಯೆಗಳನ್ನು ಮಾನವ ಸರಕಾರಗಳು ಬಗೆಹರಿಸಬಹುದೆಂದು ನೀವು ನೆನಸುತ್ತೀರೊ? [ಉತ್ತರಕ್ಕೆ ಕಿವಿಗೊಡಿರಿ.] ಈ ಆಲೋಚನೆಯನ್ನು ಅತಿ ಪ್ರೋತ್ಸಾಹದಾಯಕವೆಂದು ನಾನು ವ್ಯೆಯಕಿಕ್ತವಾಗಿ ಕಂಡುಕೊಂಡಿರುತ್ತೇನೆ . . . ”
3 ನಂತರ ನೀವು ಕೀರ್ತನೆ 72:12-14 ನ್ನು ಓದಬಹುದು ಮತ್ತು ರೀಸನಿಂಗ್ ಪುಸ್ತಕದ 154-5 ರಲ್ಲಿ ದೊರಕುವ ಒಂದು ಹೆಚ್ಚಿನ ವಚನವನ್ನು ಆರಿಸುವುದರ ಮೂಲಕ ಸಂಭಾಷಣೆಯನ್ನು ಮುಕ್ತಾಯಗೊಳಿಸಬಹುದು. ಅಥವಾ ಒಂದು ವಚನವನ್ನು ಓದಿಯಾದ ಮೇಲೆ, ಶಾಂತಿಭರಿತ ಹೊಸ ಲೋಕದಲ್ಲಿ ಜೀವಿತ ಎಂಬ ಕಿರು ಹೊತ್ತಗೆಯಲ್ಲಿನ ಒಂದು ಪ್ಯಾರಗ್ರಾಫ್ಗೆ ನೀವು ಸೂಚಿಸಬಹುದು. ಅನೇಕ ಪ್ರಚಾರಕರು—ಎಳೆಯರನ್ನು ಸೇರಿಸಿ—ಪ್ಯಾರಗ್ರಾಫನ್ನು ಓದುವುದರ ಮೂಲಕ ಮತ್ತು ತದನಂತರ ಓದಿರುವದರ ಮೇಲೆ ಆತನ ಅಭಿಪ್ರಾಯಕ್ಕಾಗಿ ಮನೆಯವನನ್ನು ಕೇಳುವುದರ ಮೂಲಕ ಕಿರು ಹೊತ್ತಗೆಗಳೊಂದರಿಂದ ಬೈಬಲ್ ಅಧ್ಯಯನಗಳನ್ನು ಸಫಲತೆಯಿಂದ ಆರಂಭಿಸುತ್ತಾರೆ.
4 ಕೆಲವು ಸಮಾಜಗಳಲ್ಲಿ ಸಮೀಪಿಸುವ ಈ ವಿಧವನ್ನು ಬಳಸಲು ನೀವು ಇಷ್ಟಪಡಬಹುದು:
▪ “ಒಂದು ಚರ್ಚಿನ ಸದಸ್ಯರಾದ ಅನೇಕ ಜನರಿಗೆ ಬೈಬಲನ್ನು ಹೇಗೆ ವೀಕ್ಷಿಸಬೇಕೆಂದು ಖಾತರಿ ಇರುವುದಿಲ್ಲ. ನೀವು ಬೈಬಲನ್ನು ದೇವರ ವಾಕ್ಯವೆಂದು ನೆನಸುತ್ತೀರೊ ಅಥವಾ ಕೆಲವು ಜನರು ಭಾವಿಸುವಂತೆ, ಅದೊಂದು ಕೇವಲ ಒಳ್ಳೇ ಸಾಹಿತ್ಯವಾಗಿರುತ್ತದೆಂದು ನಿಮ್ಮ ಭಾವನೆಯೊ? [ಪ್ರತಿಕ್ರಿಯಿಸಲು ಅವಕಾಶವನ್ನೀಯಿರಿ.] ಪ್ರತಿಯೊಬ್ಬರಿಂದ ಅನುಸರಿಸಲ್ಪಡುವಲ್ಲಿ, ಹೆಚ್ಚು ಸಂತೋಷಕರ ಜೀವಿತಗಳನ್ನು ಜೀವಿಸಲು ಸಹಾಯ ಮಾಡಬಹುದಾದ, ವಿವೇಕಪ್ರದ ಸಲಹೆಯ ಮಹತ್ತರ ಮೊತ್ತವು ಬೈಬಲ್ನಲ್ಲಿ ಅಡಗಿದೆಯೆಂದು ಅನೇಕರು ಒಪ್ಪಿಕೊಳ್ಳುತ್ತಾರೆ.”
5 ಈ ಸಂದರ್ಭದಲ್ಲಿ ನೀವು ಒಂದೇ 2 ತಿಮೊಥೆಯ 3:16,17 ರಲ್ಲಿನ ಅಪೊಸ್ತಲ ಪೌಲನ ಹೇಳಿಕೆಯನ್ನು ಪರಿಚಯಿಸಿ, ಚರ್ಚಿಸಬಹುದು ಯಾ ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಎಂಬ ಕಿರು ಹೊತ್ತಗೆಯಲ್ಲಿನ ವಿಷಯಗಳನ್ನು ಉಪಯೋಗಿಸುವುದರ ಮೂಲಕ ಪ್ರಥಮ ಭೇಟಿಯಲ್ಲಿಯೇ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬಹುದು.
6 ಮನೆಯವನು ಅಭಿರುಚಿಯನ್ನು ವ್ಯಕ್ತಪಡಿಸುವಲ್ಲಿ, ನಿಮ್ಮ ಭಾಷೆಯಲ್ಲಿ ಸೂಚಿಸಲಾದ ನೀಡುವಿಕೆಯಾದ ಸೊಸೈಟಿಯ ಒಂದು ಹಳೆಯ 192 ಪುಟದ ಪುಸ್ತಕ ಯಾ ನಮ್ಮ ಸಮಸ್ಯೆಗಳು ಬ್ರೊಷರನ್ನು ನೀವು ತೋರಿಸುವುದಾದರೆ ಅದರ ಮೌಲ್ಯವನ್ನು ಆತನಿಗೆ ತೋರಿಸಿರಿ. ಅಥವಾ, ನೀವು ತಕ್ಕದ್ದೆಂದು ಭಾವಿಸುವುದಾದರೆ, ಕಿರು ಹೊತ್ತಗೆ, ಪತ್ರಿಕೆ, ಯಾ ಬೇರೊಂದು ಬ್ರೊಷರ್ನಿಂದ ತಕ್ಕುದಾದ ವಿಷಯದಲ್ಲಿ ಭಾಗಿಯಾಗುವುದರ ಮೂಲಕ ಇತರ ಪ್ರಾಮುಖ್ಯ ಸಾಧನಗಳ ವಿವೇಕಪ್ರದ ಉಪಯೋಗವನ್ನು ಮಾಡಬಹುದು.
7 ಮೊದಲ ಭೇಟಿಯಲ್ಲೇ ಅಭ್ಯಾಸವನ್ನು ಆರಂಭಿಸಲು ನೀವು ಶಕ್ತರಾಗುವಲ್ಲಿ, ನಂತರದ ತಾರೀಕಿನಲ್ಲಿ ಚರ್ಚೆಯನ್ನು ಮುಂದುವರಿಸಲು ನಿಶ್ಚಿತ ಏರ್ಪಾಡುಗಳನ್ನು ಮಾಡಿರಿ. “ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸುತ್ತಾನೆ?” ಎಂದು ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗೆ ಉತ್ತರದಲ್ಲಿ ನೀವು ಪುನಃ ಮರಳುವಾಗ ಭಾಗಿಯಾಗಲು ಇಷ್ಟಪಡುವಿರೆಂದು ಮನೆಯವನಿಗೆ ಹೇಳುವುದರ ಮೂಲಕ ನೀವು ನಿಮ್ಮ ಮುಂದಿನ ಭೇಟಿಗಾಗಿ ತಳಹದಿಯನ್ನು ಹಾಕಬಹುದು. ಕೆಳಗಿನ ಲೇಖನವು ಪುನರ್ಭೇಟಿಯಲ್ಲಿ ಆ ವಿಷಯವನ್ನು ಹೇಗೆ ಬೆಳೆಯಿಸಬಹುದೆಂದು ಸೂಚಿಸುವುದು.