“ನಾನು ಆಜ್ಞಾಪಿಸಿದ್ದನ್ನೆಲ್ಲಾ . . .ಉಪದೇಶಮಾಡಿರಿ”
1 ಶಿಷ್ಯರನ್ನಾಗಿ ಮಾಡುವುದರಲ್ಲಿ ಉಪದೇಶಿಸುವುದು ಸೇರಿದೆ. ಒಬ್ಬ ವ್ಯಕ್ತಿಯು ಕ್ರಿಸ್ತನ ಶಿಷ್ಯನಾಗುವ ಮೊದಲು, ಯೇಸು ಆಜ್ಞಾಪಿಸಿದ “ಎಲ್ಲಾ ಸಂಗತಿಗಳನ್ನು ಕಾಪಾಡಿಕೊಳ್ಳುವದಕ್ಕೆ” ಅವನಿಗೆ ಕಲಿಸಲ್ಪಡತಕ್ಕದ್ದು. (ಮತ್ತಾ. 28:19, 20, NW) ಇದನ್ನು ಈಡೇರಿಸುವ ಅತ್ಯುತ್ತಮ ಮಾರ್ಗವು ಒಂದು ಮನೆ ಬೈಬಲ್ ಅಧ್ಯಯನದ ಮೂಲಕವೇ.
2 ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಯಾವಾಗಲೂ ಅಷ್ಟೇನೂ ಸುಲಭವಾಗಿರುವದಿಲ್ಲ. ಬೈಬಲ್ ಅಧ್ಯಯನವೊಂದನ್ನು ಕಂಡುಕೊಳ್ಳಲು ನಿಮಗೆ ಕಷ್ಟವಾಗಿರುವುದಾದರೆ, ನಿರುತ್ಸಾಹಗೊಳ್ಳಬೇಡಿರಿ. ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಯಶಸ್ಸು ಇತರರಿಗೆ ಸತ್ಯವನ್ನು ನೀಡಬೇಕು ಎಂಬ ದೃಢನಿರ್ಧಾರವನ್ನು ಮತ್ತು ಯಥಾರ್ಥವಾದ ಬಯಕೆಯನ್ನು ಅಪೇಕ್ಷಿಸುತ್ತದೆ.—ಗಲಾತ್ಯ 6:9.
3 ಅಭಿರುಚಿಯನ್ನು ಬೆಳೆಸುವುದು: ನಿಮ್ಮ ಆರಂಭಿಕ ಚರ್ಚೆಯು ಕೇವಲ ಸೀಮಿತವಾದ ಅಭಿರುಚಿಯನ್ನು ಉತ್ಪಾದಿಸಬಹುದು. ಪರಿಸ್ಥಿತಿಗಳ ಮೇಲೆ ಹೊಂದಿಕೊಂಡು, ಮನೆಯವನೊಂದಿಗೆ ಒಂದು ಕಿರುಹೊತ್ತಗೆ, ಬ್ರೊಷರ್, ಯಾ ಪತ್ರಿಕೆಗಳನ್ನು ಬಿಟ್ಟುಬಂದಿರಬಹುದು. ಮನೆ ಬೈಬಲ್ ಅಧ್ಯಯನವೊಂದನ್ನು ಆರಂಭಿಸಲು ಇವುಗಳಲ್ಲಿ ಒಂದನ್ನು ಉಪಯೋಗಿಸಲು ನಿಮಗೆ ಸಾಧ್ಯವಾಗಬಹುದು. ಸಂದೇಶದಲ್ಲಿ ಮನೆಯವನು ಅಧಿಕ ಆಸಕ್ತಿಯನ್ನು ತೋರಿಸುವುದಾದರೆ, ನಂತರದ ಭೇಟಿಯೊಂದರಲ್ಲಿ ಇನ್ನೊಂದು ತಕ್ಕದಾದ ಪ್ರಕಾಶನದೆಡೆಗೆ ಅವನನ್ನು ಮಾರ್ಗದರ್ಶಿಸಬಹುದು.
4 ಯಶಸ್ಸಿನ ಕೀಲಿಕೈಯು ತಯಾರಿಯಾಗಿದೆ. ನಿಮ್ಮ ಪುನರ್ಭೇಟಿಯಲ್ಲಿ ಬಳಸಲು ನೀವು ಯೋಜಿಸುವ ಕಿರುಹೊತ್ತಗೆಯಲ್ಲಿ, ಬ್ರೊಷರ್ನಲ್ಲಿ, ಯಾ ಪತ್ರಿಕೆಯಲ್ಲಿ ಉದ್ಧರಿಸಲ್ಪಟ್ಟ ಶಾಸ್ತ್ರವಚನವೊಂದನ್ನು ಸಮಯಕ್ಕೆ ಮುಂಚೆಯೇ ಯಾಕೆ ಆರಿಸಕೂಡದು? ಈ ರೀತಿಯಲ್ಲಿ ನಿಮ್ಮ ಚರ್ಚೆಯೊಂದಿಗೆ ಪ್ರಕಾಶನದ ಹೇಳಿಕೆಗಳನ್ನು ಜೋಡಿಸಲು ಶಕ್ತರಾಗುವಿರಿ. ಪ್ರಕಾಶನದಿಂದ ಒಂದೆರಡು ಪ್ಯಾರಗ್ರಾಫ್ಗಳನ್ನು ನೇರವಾಗಿ ಓದಲೂ ಕೂಡ ಶಕ್ತರಾಗಬಹುದು.
5 ನೀವು ಇದನ್ನು ಹೇಳಬಹುದು:
▪ “ಈಗಲೇ ನೆರವೇರುತ್ತಾ ಇರುವ ಒಂದು ಗಮನಾರ್ಹ ಪ್ರವಾದನೆಯ ಕುರಿತಾದ ಕೊಂಚ ಸಮಾಚಾರವನ್ನು ನಾವು ಹಂಚಿಕೊಳ್ಳುತ್ತಾ ಇದ್ದೇವೆ.” ಮತ್ತಾಯ 24:3 ಓದಿರಿ, ನಂತರ “ನಮ್ಮ ಸಮಸ್ಯೆಗಳು” ಬ್ರೊಷರ್ನ ಪುಟ 13-15 ರಲ್ಲಿರುವ ಚಿತ್ರಗಳನ್ನು ಮತ್ತು ಹೇಳಿಕೆಗಳನ್ನು ಜೋಡಿಸಿರಿ. ತದ್ರೀತಿಯ ಸಮೀಪಿಸುವಿಕೆಯನ್ನು ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಕಿರುಹೊತ್ತಗೆಯನ್ನು ನೀಡುವಾಗಲೂ ಉಪಯೋಗಿಸಬಹುದು.
6 ಒಮ್ಮೆ ಸಾಚ ಅಭಿರುಚಿಯನ್ನು ಅರಿತುಕೊಂಡಾದ ನಂತರ, ಅದನ್ನು ತಡಮಾಡದೆ ಅನುಸರಿಸಿಕೊಂಡು ಹೋಗತಕ್ಕದ್ದು. ಮನೆಯವನ ಮನಸ್ಸಿನಲ್ಲಿ ಹಿಂದಿನ ಸಂಭಾಷಣೆಯು ಇನ್ನೂ ಹಚ್ಚಹಸನಾಗಿರುವಾಗ, ಒಂದು ವಾರದೊಳಗೆ ಪುನಃ ಹೋಗಲು ಪ್ರಯತ್ನಿಸಿರಿ. ಪ್ರತಿ ಬಾರಿ ನೀವು ಭೇಟಿಯಾದಾಗ, ನೀವು ಬಿಟ್ಟುಬಂದ ಪ್ರಕಾಶನದಿಂದ ಕೆಲವು ಪ್ಯಾರಗ್ರಾಪ್ಗಳನ್ನು ಪರಿಗಣಿಸಿರಿ. ಅನಂತರ, ಒಂದು ಯುಕ್ತ ಸಮಯದಲ್ಲಿ, ಅದೇ ಕ್ರಮವಿಧಾನವನ್ನು ಮುಂದುವರಿಸುತ್ತಾ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀವು ಪ್ರಸ್ತಾಪಿಸಬಹುದು.
7 ಯೇಸುವಿನಿಂದ ಮುಂತಿಳಿಸಲ್ಪಟ್ಟ ಮಹಾ ಕೊಯ್ಲಿನಲ್ಲಿ ಇನ್ನೂ ಬಹಳಷ್ಟನ್ನು ಮಾಡಲಿಕ್ಕೆ ಇದೆ. (ಮತ್ತಾ. 9:37, 38) ಪ್ರಾಮಾಣಿಕ ಹೃದಯದವರಿಗೆ ಉಪದೇಶಿಸುವುದನ್ನು ನಾವು ಮುಂದುವರಿಸುತ್ತಿದ್ದ ಹಾಗೆ, ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಮ್ಮ ಸಂಗಡ’ ಅವನು ಇರುವನು ಎಂಬ ಯೇಸುವಿನ ಬಲವರ್ಧಕ ಆಶ್ವಾಸನೆಯು ನಮಗಿದೆ.