ನಿಮ್ಮ ಶುಶ್ರೂಷೆಯಲ್ಲಿ ಬಹುಮುಖ ಸಾಮರ್ಥ್ಯವುಳ್ಳವರಾಗಿರ್ರಿ
1 ವಿವಿಧತೆಯೇ ಜೀವನದ ಸ್ವಾರಸ್ಯ ಎಂದು ಹೇಳಲ್ಪಟ್ಟಿದೆ. ಕೆಲವೊಮ್ಮೆ, ವಿಷಯವೊಂದಕ್ಕೆ ಭಿನ್ನ ಪ್ರಸ್ತಾಪವು ಅದನ್ನು ಹೆಚ್ಚು ಆಸಕ್ತಕರದ್ದಾಗಿ ಮಾಡುತ್ತದೆ. ಇದು ನಮ್ಮ ಶುಶ್ರೂಷೆಯ ವಿಷಯದಲ್ಲಿ ಕಡಿಮೆ ಸತ್ಯದ್ದೇನೂ ಅಲ್ಲ. ನಾವು ಜಾಗರೂಕರಾಗಿಲ್ಲದಿದ್ದಲ್ಲಿ, ನಮ್ಮ ಮನೆ-ಮನೆಯ ಸಾದರಪಡಿಸುವಿಕೆಗಳು ಬಹಳ ಸುಲಭವಾಗಿ ಒಂದೇ ಪಡಿಯಚ್ಚಿನದ್ದಾಗಬಲ್ಲವು. ಅದೇ ಪೀಠಿಕೆಗಳನ್ನು ಪುನಃ ಪುನಃ ಪುನರುಚ್ಛರಿಸುವುದು ನಮಗೂ, ಮನೆಯವರಿಗೂ ತ್ರಾಸಕರವಾಗಬಲ್ಲವು. ಆದಕಾರಣ, ನಿಮ್ಮ ಶುಶ್ರೂಷೆಯಲ್ಲಿ ಬಹುಮುಖ ಸಾಮರ್ಥ್ಯವುಳ್ಳವರಾಗಿರಿ. ಆದರೆ ನೀವಿದನ್ನು ಹೇಗೆ ಸಾಧಿಸಬಲ್ಲಿರಿ?
2 ‘ನಮಸ್ಕಾರ, ರಾಜ್ಯದ ಸುವಾರ್ತೆಯೊಂದಿಗೆ ನಮ್ಮ ನೆರೆಯವರನ್ನು ನಾವು ಸಂದರ್ಶಿಸುತ್ತಾ ಇದ್ದೇವೆ’ ಎಂಬಂತಹ ರೀತಿಯಲ್ಲಿ ಹೇಳುವ ಬದಲು, ನಿಮ್ಮ ಆರಂಭದ ಶಬ್ದಗಳನ್ನು ಬದಲಾಯಿಸುವ ಮಾರ್ಗಗಳನ್ನು ನೀವು ಯಾಕೆ ಯೋಚಿಸಬಾರದು? ರೀಸನಿಂಗ್ ಪುಸ್ತಕದಲ್ಲಿ ಪೀಠಿಕೆಗಳ ಕುರಿತು ಸಮಾಚಾರದ ಸಂಪತ್ತು ತುಂಬಿದೆ. ಪುಟಗಳು 9-15 ರಲ್ಲಿ, 18 ಭಿನ್ನವಾದ ವಿಷಯಗಳ ಮೇಲೆ ಪೀಠಿಕೆಗಳಿರುತ್ತವೆ. ಮತ್ತು ಹೆಚ್ಚಿನ ವಿಷಯಗಳಲ್ಲಿ ಎರಡು, ಮೂರು, ಯಾ ಹೆಚ್ಚು ಸಂಭಾವ್ಯ ಪೀಠಿಕೆಗಳು ಇವೆ.
3 ನೀವು “ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?” ಎಂಬ ಬ್ರೊಷರನ್ನು ಉಪಯೋಗಿಸುವುದಾದರೆ, ಪುಟ 13ರಲ್ಲಿರುವ “ಲೈಫ್⁄ ಹ್ಯಾಪಿನೆಸ್” ವಿಭಾಗದಿಂದ ಈ ಪೀಠಿಕೆಯು ಸಹಾಯಕಾರಿಯಾಗಬಹುದು:
▪ “ಇಂದಿನ ಜೀವನದ ಗುಣಮಟ್ಟದ ಕುರಿತು ನಿಜವಾಗಿ ಚಿಂತಿತರಾಗಿರುವ ಜನರೊಂದಿಗೆ ನಾವು ಮಾತಾಡುತ್ತಾ ಇದ್ದೇವೆ. ಅನೇಕರು ಚಿಂತಿತರಾಗುತ್ತಾರೇನಂದರೆ, ನಿಜವಾದ ಆನಂದ ಮತ್ತು ಸಮಸ್ಯೆ-ರಹಿತ ಜೀವನವು ಸಾಧ್ಯವಿದೆಯೇ? ಈ ಬ್ರೊಷರ್ ಒಂದು ಹುರಿದುಂಬಿಸುವ ಹಾಗೂ ವಿಚಾರ-ಪ್ರೇರಕ ದೃಷ್ಟಿಕೋನವನ್ನು ಒದಗಿಸುತ್ತದೆ.” ಬ್ರೊಷರಿನ ಪುಟ 18 ತೆರೆಯಿರಿ ಮತ್ತು “ಒಂದು ಹೊಸ ಜಗತ್ತು—ಹೇಗೆ ಭಿನ್ನವಾಗಿದೆ?” ವಿಭಾಗದಿಂದ ಒಂದೆರಡು ಅತ್ಯುಜ್ವಲ ಭಾಗಗಳನ್ನು ಓದಿರಿ.
4 ಕೆಲವು ರಾಜ್ಯ ಪ್ರಚಾರಕರು—ವಿಶೇಷವಾಗಿ ಎಳೆಯರು ಮತ್ತು ಹೊಸಬರು, ಆದರೆ ಅನುಭವವುಳ್ಳವರೂ ಕೂಡ—ಕಿರುಹೊತ್ತಗೆ (ಟ್ರ್ಯಾಕ್ಟ್ಸ್) ಗಳನ್ನು ಬಳಸಿ ಮನೆಬಾಗಲುಗಳಲ್ಲಿ ಆಸಕ್ತಕರ ಪ್ರಸ್ತಾಪವನ್ನು ಮಾಡಬಹುದೆಂದು ಕಂಡುಕೊಂಡಿದ್ದಾರೆ.
ಒಬ್ಬ ಎಳೇ ಪ್ರಚಾರಕನು “ಶಾಂತಿಭರಿತ ಹೊಸ ಲೋಕದಲ್ಲಿ ಜೀವನ” ಕಿರುಹೊತ್ತಗೆಯನ್ನುಪಯೋಗಿಸಿ, ಹೀಗೆ ಹೇಳಬಹುದು:
▪ “ಈ ಭೂಮಿಯ ಮೇಲೆ ದೇವರು ಶಾಂತಿ ಮತ್ತು ಆನಂದವನ್ನು ತರುವ ವಿಧದ ಒಂದು ಸಂಕ್ಷಿಪ್ತ ಸಂದೇಶ ನಿಮಗಾಗಿ ನನ್ನ ಹತ್ತಿರ ಇದೆ. ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಹೆಸರಿನ ಈ ಕಿರುಹೊತ್ತಗೆಯನ್ನು ನಿಮಗೆ ನೀಡಲು ನಾನು ಬಯಸುತ್ತೇನೆ.” ಅನಂತರ, ಎಳೇ ವ್ಯಕ್ತಿಯೊಂದಿಗೆ ಕೆಲಸಮಾಡುತ್ತಿರುವ ಪ್ರಾಯಸ್ಥ ಪ್ರಚಾರಕನು, ಮನೆಯವನ ಪ್ರತಿವರ್ತನೆಯ ಆಧಾರದಲ್ಲಿ ಹೆಚ್ಚಿನ ವಿಚಾರಗಳನ್ನು ಯಾ ಹೇಳಿಕೆಗಳನ್ನು ಕೂಡಿಸಬೇಕೋ ಬೇಡವೋ ಎಂದು ನಿರ್ಧರಿಸಬಲ್ಲನು.
5 ಮನೆಯವನು ಆಸಕ್ತಿಯನ್ನು ತೋರಿಸುವುದಾದರೆ, ಪ್ರಾಯಸ್ಥ ಪ್ರಚಾರಕನು ಹೀಗನ್ನಬಹುದು:
▪ “ಭೂವ್ಯಾಪಕವಾಗಿ ಬಲುಬೇಗನೆ ಶಾಂತಿಯು ಸ್ಥಾಪಿಸಲ್ಪಡುವುದು ಎಂದು ತೋರಿಸುತ್ತಾ, ಬೈಬಲು ಭವಿಷ್ಯತ್ತಿಗಾಗಿ ಒಂದು ಅದ್ಭುತಕರ ನಿರೀಕ್ಷೆಯನ್ನು ಒದಗಿಸುತ್ತದೆ. ದೇವರು ವಿಶ್ವದ ಮತ್ತು ಅದರಲ್ಲಿರುವುದೆಲ್ಲದರ ನಿರ್ಮಾಣಿಕನಾಗಿರುವುದರಿಂದ, ನಾವಿಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬಯಸುವಷ್ಟು ಮಾನವ ಕುಲದಲ್ಲಿ ಅವನು ಅಭಿರುಚಿಯುಳ್ಳಾತನಾಗಿರತಕ್ಕದ್ದು ಎಂದು ನೀವು ಒಪ್ಪುವದಿಲ್ಲವೇ? ಭವಿಷ್ಯತ್ತಿಗಾಗಿರುವ ಬೈಬಲ್ ವಾಗ್ದಾನದ ಮೇಲೆ ನಿಮ್ಮ ಅಭಿಪ್ರಾಯವನ್ನು ಆಲಿಸಲು ನಾನು ಇಷ್ಟಪಡುತ್ತೇನೆ.” ಅನಂತರ ಕೀರ್ತನೆ 37:9-11, 29 ಓದಿರಿ.
6 ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಮುಖ್ಯನೋಟವಾಗಿ ತೋರಿಸುವುದಾದರೆ, ಪುಟಗಳು 156 ರಿಂದ 162ರ ತನಕ ಚಿತ್ರಿಸಲ್ಪಟ್ಟ ಭವಿಷ್ಯತ್ತಿನ ಸಕಾರಾತ್ಮಕ ನೋಟವನ್ನು ಯಾಕೆ ಎತ್ತಿತೋರಿಸಬಾರದು? ಚಿತ್ರಗಳ ಪಕ್ಕದಲ್ಲಿ ಕೊಡಲ್ಪಟ್ಟ ಬೈಬಲ್ ಉಲ್ಲೇಖಗಳ ಕಡೆಗೆ ಗಮನ ಸೆಳೆಯಿರಿ. ಈ ವಾಗ್ದಾನಗಳನ್ನು ದೇವರು ನೆರವೇರಿಸುವನು ಎಂದು ನಂಬುವುದು ವ್ಯಾವಹಾರಿಕವೂ ಎಂದು ಮನೆಯವನನ್ನು ವಿಚಾರಿಸಿರಿ. ಈಗಾಗಲೇ ನೆರವೇರಿರುವ ಬೈಬಲಿನ ಪ್ರವಾದನೆಗಳ ಚುಟುಕಾದ ಚರ್ಚೆಯು ಮಾನವ ಕುಲವನ್ನು ಆಶೀರ್ವದಿಸಲು ದೇವರಿಗಿರುವ ಸಾಮರ್ಥ್ಯದಲ್ಲಿ ಮನೆಯವನ ಭರವಸೆಯನ್ನು ಬಲಗೊಳಿಸತಕ್ಕದ್ದು.
7 ಎಲ್ಲಾ ರಾಜ್ಯ ಘೋಷಕರು ದೇವಪ್ರಭುತ್ವ ಹಿತಾಸಕ್ತಿಗಳನ್ನು ವರ್ಧಿಸುವುದರಲ್ಲಿ, ಎಲ್ಲಿ ಸಾಧ್ಯವೋ ಅಲ್ಲಿ ಸತ್ಯದ ಬೀಜಗಳನ್ನು ನೆಡುವುದರಲ್ಲಿ ಮತ್ತು ತೋರಿಸಲ್ಪಟ್ಟ ಆಸಕ್ತಿಯನ್ನು ಬೆಳೆಸುವುದರಲ್ಲಿ ಭಾಗವಹಿಸಲು ಬಯಸುತ್ತಾರೆ. ನಮ್ಮ ಪಾಲನ್ನು ಮಾಡಿಯಾದ ನಂತರ, ಯಾವುದೇ ಭಾವೀ ಬೆಳವಣಿಗೆಯನ್ನು ಯೆಹೋವನ ಹಸ್ತಗಳಲ್ಲಿ ನಾವು ಸಂತೋಷದಿಂದ ಬಿಡಬಲ್ಲೆವು. ನಮ್ಮ ನೆರೆಯವರೊಂದಿಗೆ ಹಂಚಿಕೊಳ್ಳಲು ನಮ್ಮ ಹತ್ತಿರ ವಾರ್ತೆಗಳಲ್ಲಿ ಅತ್ಯುತ್ತಮವಾದದ್ದು ಇದೆ. ಯಾವಾಗಲೂ ಸಿದ್ಧರಾಗಿರುವುದರ ಮೂಲಕ, ರಾಜ್ಯದ ಸಂದೇಶವನ್ನು ಸಾದರಪಡಿಸುವುದರಲ್ಲಿ ನಾವು ಬಹುಮುಖ ಸಾಮರ್ಥ್ಯವುಳ್ಳವರು ಮತ್ತು ಯಾವ ಪ್ರಕಾಶನವನ್ನು ನೀಡಬೇಕೆಂಬದನ್ನು ಆರಿಸುವುದರಲ್ಲಿ ವಿವೇಚನೆಯುಳ್ಳವರು ಆಗಬಲ್ಲೆವು.