ಆಸಕ್ತಿಯನ್ನು ಪ್ರಚೋದಿಸುವ ಪೀಠಿಕೆಗಳು
1 ಪೀಠಿಕೆಗಳ ಅವನ ಉಪಯೋಗದಲ್ಲಿ ಯೇಸುವು ನಿಪುಣತೆಯುಳ್ಳವನಾಗಿದ್ದನು. ಒಂದು ದೊಡ್ಡ ಸಮೂಹಕ್ಕೆ ಯಾ ಏಕ ವ್ಯಕ್ತಿಗೆ ಮಾತಾಡುತ್ತಿರಲಿ, ಅವರನ್ನು ವೈಯಕ್ತಿಕವಾಗಿ ಒಳಗೂಡಿಸುವದರ ಮೂಲಕ ಅವನ ಸಭಿಕರ ಗಮನವನ್ನು ಯೇಸುವು ಸೆರೆಹಿಡಿಯುತ್ತಿದ್ದನು. ಅವನ ಪ್ರಸಂಗದ ಮೌಲ್ಯತೆಯನ್ನು ತನ್ನನ್ನು ಆಲಿಸುವವರಿಗೆ ಅವನು ತೋರಿಸಿದನು.—ಮತ್ತಾ. 5:3-12; ಯೋಹಾ. 4:7-30.
2 ಮುನ್-ತಯಾರಿಯು ಅಗತ್ಯ: ನಮ್ಮ ಸಂದೇಶದಲ್ಲಿ ಆಸಕ್ತಿಯನ್ನು ಪ್ರಚೋದಿಸಲಿಕ್ಕಾಗಿ, ನಮ್ಮ ಪೀಠಿಕೆಗಳಲ್ಲಿ ವ್ಯಕ್ತಿಯನ್ನು ಒಳಗೂಡಿಸುವ, ಅವನ ಚಿಂತೆಗಳಿಗೆ ಸಂಬಂಧಿಸಿರುವ ಮತ್ತು ರಾಜ್ಯದ ಸಂದೇಶವು ಅವನನ್ನು ವ್ಯಕ್ತಿಶಃ ಸಹಾಯಮಾಡುವ ವಿಧವನ್ನು ತೋರಿಸುವ ವಿಷಯಗಳನ್ನು ಜೋಡಿಸತಕ್ಕದ್ದು.
3 ಶುಶ್ರೂಷೆಗಾಗಿ ತಯಾರಿಸುವಾಗ, ಸಮಾಜದಲ್ಲಿರುವ ಜನರ ತತ್ಕ್ಷಣದ ಚಿಂತೆಗಳನ್ನು ಪುನರಾಮರ್ಶಿಸಿರಿ. ಇತ್ತೀಚೆಗಿನ ಒಂದು ಪತ್ರಿಕಾ ವರದಿಯು ಎಲ್ಲರ ಗಮನವನ್ನು ಆಕರ್ಷಿಸಿದೆಯೊ? ಯುವಕನೊಬ್ಬನಿಗೆ ಯಾವುದು ಆಸಕ್ತಕರವಾಗಿರಬಲ್ಲದು? ಒಬ್ಬ ವಯಸ್ಸಾದವನಿಗೆ? ಗಂಡಂದಿರಿಗೆ, ಹೆಂಡತಿಯರಿಗೆ, ಯಾ ಹೆತ್ತವರಿಗೆ? ಪ್ರತಿಯೊಂದು ಮನೆಬಾಗಲಲ್ಲಿ ಒಂದೇ ಪೀಠಿಕೆಯನ್ನುಪಯೋಗಿಸುವ ಬದಲು ಭಿನ್ನವಾದ ಅನೇಕ ಪೀಠಿಕೆಗಳನ್ನು ತಯಾರಿಸುವುದು ಮತ್ತು ಮನೆಯವರ ಪ್ರತಿವರ್ತನೆಯನ್ನು ನೀವು ಅವಲೋಕಿಸುವಂತೆ, ಅವುಗಳನ್ನು ಹೊಂದಿಸಿಕೊಳ್ಳಲು ಸಿದ್ಧರಾಗಿರುವುದು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುವುದು. ಪ್ರತಿ ಬಾರಿ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಅವರು ಹೋಗುವಾಗ, ರೀಸನಿಂಗ್ ಪುಸ್ತಕದಿಂದ ವಿವಿಧ ಪೀಠಿಕೆಗಳನ್ನು ತಯಾರಿಸುವದರಲ್ಲಿ ಮತ್ತು ಉಪಯೋಗಿಸುವುದರಲ್ಲಿ ಒಳ್ಳೆಯ ಯಶಸ್ವಿ ಅನೇಕ ಪ್ರಚಾರಕರಿಗೆ ದೊರಕಿದೆ. (ಆರ್ಎಸ್ ಪುಟಗಳು 9-15) ಇದು ಅವರ ಪ್ರಸ್ತಾವನೆಯನ್ನು ನವೀನತೆಯದ್ದಾಗಿ ಮತ್ತು ಸ್ವಾರಸ್ಯವುಳ್ಳದ್ದಾಗಿ ಮಾಡುತ್ತದೆ.
4 ಸಪ್ಟಂಬರ ತಿಂಗಳಲ್ಲಿ ಈ ರೀತಿಯಲ್ಲಿ ನಿರೂಪಣೆಯೊಂದನ್ನು ಬಳಸಲು ನೀವು ಇಚ್ಛಿಸಬಹುದು:
▪ “ನಮಸ್ಕಾರ, ಇತರರನ್ನು ಆಳುವ ಒಬ್ಬನಲ್ಲಿ ಜನರು ಕಾಣಲು ಬಯಸುವ ಗುಣಗಳ ಕುರಿತಾಗಿ ನಮ್ಮ ಕೆಲವು ನೆರೆಯವರೊಂದಿಗೆ ನಾವು ಮಾತಾಡುತ್ತಾ ಇದ್ದೇವೆ. ಅತಿ ಪ್ರಾಮುಖ್ಯವೆಂದು ನೀವು ಎಣಿಸುವ ಒಂದೆರಡು ಗುಣಗಳು ಯಾವುವು ಎಂದು ನಾನು ನಿಮಗೆ ಕೇಳಬಹುದೇ? [ಪ್ರತಿವರ್ತನೆಗೆ ಅನುಮತಿಸಿರಿ. ಹೇಳಿಕೆಗಳನ್ನು ಅಂಗೀಕರಿಸಿರಿ. ಯೋಗ್ಯವಾಗಿರುವುದಾದರೆ ಒಪ್ಪಿರಿ.] ಮಾನವಕುಲದ ಆಡಳಿತಗಾರನಾಗಿರಲು ಸಮ್ಮತಿಪಡೆದವನ ಅರ್ಹತೆಗಳನ್ನು ಬೈಬಲು ವರ್ಣಿಸುತ್ತದೆಂದು ನಿಮಗೆ ತಿಳಿದಿತ್ತೋ? ಅದು ಇಲ್ಲಿ ಯೆಶಾಯ 9:6, 7 ರಲ್ಲಿದೆ. [ಓದಿರಿ.] ಅಂಥ ಆಡಳಿತಗಾರನೊಬ್ಬನ ಕೆಳಗೆ ಜೀವಿಸುವುದು ಹೇಗಿರಬಹುದೆಂಬುದರ ಕುರಿತು ನೀವು ಏನು ಎಣಿಸುತ್ತೀರಿ?” ಪ್ರತಿವರ್ತಿಸಲು ಬಿಡಿರಿ ಮತ್ತು ಅನಂತರ ಕೀರ್ತನೆ 146:3, 4 ರ ಮತ್ತು ರೀಸನಿಂಗ್ ಪುಸ್ತಕದ ಪುಟಗಳು 153-4 ರಲ್ಲಿ ಯೇಸುವಿನ ಆಡಳಿತೆಯ ಖಾತರಿ ಗುಣಮಟ್ಟದ ಕುರಿತಾದ ಸಮಾಚಾರದ ಕಡೆಗೆ ಗಮನ ಸೆಳೆಯಿರಿ. ಇಲ್ಲವೇ, ಹೆಚ್ಚಿನ ಚರ್ಚೆಯನ್ನು ಪ್ರಚೋದಿಸಲು ಸದಾ ಜೀವಿಸಬಲ್ಲಿರಿ ಪುಸ್ತಕದ 112 ಮತ್ತು 113 ಪುಟಗಳನ್ನುಪಯೋಗಿಸಸಾಧ್ಯವಿದೆ. ತದನಂತರ ಸಾಹಿತ್ಯವನ್ನು ನೀವು ನೀಡಸಾಧ್ಯವಿದೆ.
5 ಕುಟುಂಬಾಭಿಮುಖರಾಗಿರುವ ವ್ಯಕ್ತಿಗಳೊಂದಿಗೆ ನೀವು ಮಾತಾಡುತ್ತಿರುವುದಾದರೆ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಮುಖ್ಯನೋಟವಾಗಿ ತೋರಿಸುವಾಗ, ಈ ಕೆಳಗಿನ ನಿರೂಪಣೆಯು ಕಾರ್ಯಸಾಧಿಸಬಹುದು:
ಸ್ಥಳೀಯ ಶುಭಾಶಯದ ನಂತರ, ನೀವು ಹೀಗನ್ನಬಹುದು:
▪ “ದೈನಂದಿನ ಒತ್ತಡಗಳು ಮತ್ತು ಸಮಸ್ಯೆಗಳು ಇಂದಿನ ಕುಟುಂಬಗಳಿಗೆ ಒಂದು ನಿಜವಾದ ಪಂಥಾಹ್ವಾನವನ್ನೊಡ್ಡುತ್ತವೆ ಎಂದು ಗಮನಿಸಿದ್ದೀರೊ? [ಪ್ರತಿವರ್ತಿಸಲು ಬಿಡಿರಿ.] ಸ್ವಸ್ಥ ಬುದ್ಧಿವಾದಕ್ಕಾಗಿ ಕುಟುಂಬಗಳು ಎಲ್ಲಿಗೆ ತೆರಳಬಹುದೆಂಬುದರ ಕುರಿತು ನಿಮ್ಮಲ್ಲಿ ಏನಾದರೂ ಯೋಚನೆಗಳಿವೆಯೇ? [ಪ್ರತಿವರ್ತಿಸಲು ಬಿಡಿರಿ.] ಈ ವಿಷಯದ ಮೇಲೆ ಬೈಬಲಿಗೆ ಏನು ಹೇಳಲಿಕ್ಕಿದೆ ಎಂಬುದರೆಡೆಗೆ ನಾವು ಗಮನವನ್ನು ಮಾರ್ಗದರ್ಶಿಸುತ್ತಿದ್ದೇವೆ. ಮೊದಲ ಮಾನವ ಜೋಡಿಗೆ ವಿವಾಹದ ಮೂಲಕರ್ತನು ಏನು ಹೇಳಿದ್ದನು ಎಂದು ಗಮನಿಸಿರಿ.” ಆದಿಕಾಂಡ 1:28 ಓದಿರಿ ಮತ್ತು ತದನಂತರ ಸದಾ ಜೀವಿಸಿರಿ ಪುಸ್ತಕದ ಪುಟ 238 ಕ್ಕೆ ತೆರಳಿರಿ ಮತ್ತು ಅಧ್ಯಾಯ 29 ರಲ್ಲಿ ಆಯ್ದಿರುವ ವಿಚಾರಗಳನ್ನುಪಯೋಗಿಸಿ ನಿಮ್ಮ ಚರ್ಚೆಯನ್ನು ಮುಂದರಿಸಿರಿ.
6 ಆಸಕ್ತಿಯನ್ನು ಸೆರೆಹಿಡಿಯುವುದರಲ್ಲಿ ಮತ್ತು ಚರ್ಚೆಗಳಲ್ಲಿ ಆಲಿಸುವವರನ್ನು ಒಳಗೂಡಿಸುವುದರಲ್ಲಿ ಯೇಸುವಿನ ಕ್ರಮವಿಧಾನಗಳನ್ನು ಅನುಕರಿಸುವ ಮೂಲಕ, ಪ್ರಾಮಾಣಿಕ ಹೃದಯದವರಿಗೆ ಆತ್ಮಿಕ ವಿಷಯಗಳ ಮೌಲ್ಯತೆಯನ್ನು ನಾವು ತೋರಿಸುತ್ತೇವೆ.