ಬ್ರೋಷರ್ಗಳನ್ನು ಉಪಯೋಗಿಸಲು ನೆನಪಿಡಿರಿ
ಮನೆಯಿಂದ ಮನೆ ಯಾ ಅನೌಪಚಾರಿಕವಾಗಿ ಸಾಕ್ಷಿಕಾರ್ಯ ಮಾಡುವಾಗ, ಸಂಭಾಷಣೆಯು ಅನೇಕ ವೇಳೆ ನಮ್ಮ ಆಕರ್ಷಿತ ಬ್ರೋಷರ್ಗಳಲ್ಲಿ ಒಂದರಿಂದ ಆವರಿಸಲ್ಪಟ್ಟ ಒಂದು ವಿಷಯದ ಕಡೆಗೆ ತಿರುಗುತ್ತದೆ. ಮೇ ತಿಂಗಳಿನಲ್ಲಿ ನಾವು ಕಾವಲಿನಬುರುಜು ಮತ್ತು ಎಚ್ಚರ!ಕ್ಕೆ ಚಂದಾಗಳನ್ನು ನೀಡುವಾಗ ಇದನ್ನು ಮನಸ್ಸಿನಲ್ಲಿಡಬಹುದು. ಸೇವೆಯಲ್ಲಿ ನೀವು ತೋರಿಸಲಿರುವ ಪತ್ರಿಕೆಗಳೊಂದಿಗೆ ಹಲವಾರು ಭಿನ್ನವಾದ ಬ್ರೋಷರ್ಗಳನ್ನು ಹೊಂದಿರುವ ಮೂಲಕ, ಒಂದು ಪರಿಣಾಮಕಾರಿ ಸಾಕ್ಷಿಯನ್ನು ನೀಡಲು ಏನು ಆವಶ್ಯವಿದೆಯೊ ಅದನ್ನೇ ಕೊಡಲು ನೀವು ಸಜ್ಜಿತರಾಗಿರುವಿರಿ. ವಿಶೇಷವಾಗಿ ನಮ್ಮ ಸಮಸ್ಯೆಗಳು ಎಂಬ ಬ್ರೋಷರ್ ನಮ್ಮ ಕ್ಷೇತ್ರದಲ್ಲಿರುವ ಜನರಿಗೆ ಸಹಾಯ ಮಾಡಲು ತಯಾರಿಸಲಾಗಿದೆ. ಮನೆಯವನು ಒಂದು ಚಂದಾವನ್ನು ಸ್ವೀಕರಿಸುವ ಪ್ರವೃತ್ತಿಯನ್ನು ತೋರಿಸದಿದ್ದರೆ, ಮೇಯಲ್ಲಿ ನೀವು ತೋರಿಸುವಂತಹ ಪತ್ರಿಕೆಗಳೊಂದಿಗೆ ಯಾ ಅವುಗಳ ಬದಲಾಗಿ ಯಾವುದಾದರೂ ಒಂದು ಬ್ರೋಷರನ್ನು (ಸ್ಕೂಲ್ ಬ್ರೇಷರನ್ನು ಹೊರತು ಪಡಿಸಿ) ರೂ. 4ರ ಕಾಣಿಕೆಗೆ ನೀಡಲು ಸ್ವತಂತ್ರಭಾವವುಳ್ಳವರಾಗಿರ್ರಿ.—ಜ್ಞಾನೋಕ್ತಿ 15:23 ಹೋಲಿಸಿ.