‘ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ನೀಡಿ’
ನಾವು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ, ಪ್ರಥಮ ಭೇಟಿಯಲ್ಲಿ ಅಧ್ಯಯನ ಆರಂಭಿಸಬೇಕಾದ ತಿಂಗಳುಗಳಲ್ಲಿ, ಒಂದುವೇಳೆ ಮನೆಯವನ ಬಳಿ ಈಗಾಗಲೇ ಪುಸ್ತಕ ಇದ್ದು, ಅಧ್ಯಯನ ಬೇಡವೆನ್ನುವಲ್ಲಿ ‘ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ನೀಡಿ’ ಎಂದು ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಏಕೆ?
ಬ್ರೋಷರು ಮತ್ತು ಹಿಂದಿನ ಪತ್ರಿಕೆಗಳಲ್ಲಿ ವಿಧವಿಧವಾದ ಕಾಲೋಚಿತ ವಿಷಯಗಳಿರುತ್ತವೆ. ಅವುಗಳಲ್ಲಿ ಯಾವುದಾದರೊಂದು ವಿಷಯ ಮನೆಯವನ ಮನಸ್ಸನ್ನು ಸ್ಪರ್ಶಿಸಬಹುದು. ಆದ್ದರಿಂದ ನಿಮ್ಮ ಬ್ಯಾಗನ್ನು ಸೇವೆಗಾಗಿ ಸಿದ್ಧಗೊಳಿಸುವಾಗ, ಅದರಲ್ಲಿ ಭಿನ್ನಭಿನ್ನ ಬ್ರೋಷರುಗಳನ್ನೂ ಹಿಂದಿನ ಸಂಚಿಕೆಗಳನ್ನೂ ಸೇರಿಸಿ. ನಿಮ್ಮ ಬಳಿ ಹಳೇ ಪತ್ರಿಕೆಗಳು ಇಲ್ಲದಿರುವಲ್ಲಿ ಪತ್ರಿಕಾ ಕೌಂಟರ್ನಿಂದ ಕೇಳಿ ಪಡೆದುಕೊಳ್ಳಿ. ಆಗ, ಬೈಬಲ್ ಬೋಧಿಸುತ್ತದೆ ಪುಸ್ತಕವಿದ್ದು ಅಧ್ಯಯನ ಬೇಡವೆನ್ನುವ ಮನೆಯವರಿಗೆ ಕೆಲವೊಂದು ಪತ್ರಿಕೆಗಳನ್ನು ಇಲ್ಲವೆ ಬ್ರೋಷರುಗಳನ್ನು ತೋರಿಸಿ, ಅವರಿಗೆ ಆಸಕ್ತಿಕರವಾಗಿರುವಂಥದ್ದನ್ನು ತೆಗೆದುಕೊಳ್ಳುವಂತೆ ಹೇಳಬಹುದು. ಆಮೇಲೆ ಅವರ ಆಸಕ್ತಿಯನ್ನು ಹೆಚ್ಚಿಸಲು ಪುನರ್ಭೇಟಿಗಾಗಿ ಏರ್ಪಾಡುಗಳನ್ನು ಮಾಡಿ. ಬಹುಶಃ ಅದರಿಂದ ಬೈಬಲ್ ಅಧ್ಯಯನವೂ ಆರಂಭವಾದೀತು.