“ಎಲ್ಲ ರೀತಿಯ ಜನರಿಗೆ” ಸಾರಿ
1. ಪರಿಣಾಮಕಾರಿಯಾಗಿ ಸುವಾರ್ತೆ ಸಾರುವವರು ಕುಶಲ ಕೆಲಸಗಾರರಂತೆ ಇದ್ದಾರೆ ಹೇಗೆ?
1 ಒಬ್ಬ ಕುಶಲ ಕೆಲಸಗಾರನ ಬಳಿ ಅನೇಕ ಉಪಕರಣಗಳಿರುತ್ತವೆ. ಪ್ರತಿಯೊಂದನ್ನು ಯಾವಾಗ, ಹೇಗೆ ಬಳಸಬೇಕೆಂದು ಅವನಿಗೆ ತಿಳಿದಿರುತ್ತದೆ. ಹಾಗೆಯೇ ನಮಗೆ ಸೇವಾ ಕೆಲಸದಲ್ಲಿ ನೆರವಾಗುವ ವಿಭಿನ್ನ ಉಪಕರಣಗಳಿವೆ. ವೈವಿಧ್ಯಮಯ ವಿಷಯಗಳ ಕುರಿತ ಬ್ರೋಷರ್ಗಳು ಅದರಲ್ಲಿ ಒಂದು. ಇವುಗಳನ್ನು ತಯಾರಿಸಲಾಗಿರುವುದು ನಾವು “ಎಲ್ಲ ರೀತಿಯ ಜನರಿಗೆ” ಸಾರಲು ನೆರವಾಗಲಿಕ್ಕೇ. (1 ಕೊರಿಂ. 9:22) ಪುರವಣಿಯಲ್ಲಿ ಕೆಲವು ಬ್ರೋಷರ್ಗಳ ಬಗ್ಗೆ ತಿಳಿಸಲಾಗಿದೆ. ಇವುಗಳನ್ನು ಯಾರಿಗಾಗಿ ಬರೆಯಲಾಗಿದೆ ಮತ್ತು ಹೇಗೆ ನೀಡಬಹುದೆಂಬ ಸಲಹೆಗಳೂ ಅದರಲ್ಲಿವೆ.
2. ಯಾವಾಗೆಲ್ಲ ಬ್ರೋಷರ್ಗಳನ್ನು ನೀಡಬಹುದು?
2 ಬ್ರೋಷರ್ ಯಾವಾಗ ಬಳಸಬೇಕು? ಕುಶಲ ಕೆಲಸಗಾರನು ಅಗತ್ಯಕ್ಕನುಸಾರ ಉಪಕರಣ ಬಳಸುತ್ತಾನೆ. ಅದೇ ರೀತಿ, ಒಬ್ಬ ವ್ಯಕ್ತಿಗೆ ಬ್ರೋಷರ್ ನೀಡಿದರೇ ಹೆಚ್ಚು ಉತ್ತಮವೆಂದು ನಮಗನಿಸುವಾಗೆಲ್ಲ ಅದನ್ನು ನೀಡಬಹುದು. ತಿಂಗಳ ನೀಡುವಿಕೆ ಆಗಿರುವಾಗ ಮಾತ್ರ ಬ್ರೋಷರ್ ಬಳಸಬೇಕೆಂದಿಲ್ಲ. ಉದಾಹರಣೆಗೆ, ಬೈಬಲ್ ಬೋಧಿಸುತ್ತದೆ ಪುಸ್ತಕ ನೀಡಬೇಕಾದ ತಿಂಗಳು. ನೀವು ಭೇಟಿಯಾಗುವ ವ್ಯಕ್ತಿ ಕ್ರಿಶ್ಚನ್ ಅಲ್ಲ, ಅವನಿಗೆ ಬೈಬಲಿನಲ್ಲಿ ಆಸಕ್ತಿಯೂ ಇಲ್ಲ. ಆಗೇನು? ಆಗ ಸೂಕ್ತ ಬ್ರೋಷರನ್ನು ನೀಡುವುದು ಉತ್ತಮ. ಆ ವ್ಯಕ್ತಿಯ ಆಸಕ್ತಿಗೆ ಇನ್ನಷ್ಟು ನೀರೆರೆದ ಬಳಿಕ ಬೈಬಲ್ ಬೋಧಿಸುತ್ತದೆ ಪುಸ್ತಕ ನೀಡಬಹುದು.
3. ಸಾಕ್ಷಿಕಾರ್ಯದ ಉಪಕರಣಗಳನ್ನು ನಾವೇಕೆ ಕೌಶಲದಿಂದ ಬಳಸಬೇಕು?
3 ‘ಕೆಲಸದಲ್ಲಿ ಚಟುವಟಿಕೆಯಾಗಿರುವವರನ್ನು’ ಅಂದರೆ ಕುಶಲ ಕೆಲಸಗಾರರನ್ನು ಬೈಬಲು ಪ್ರಶಂಸಿಸುತ್ತದೆ. (ಜ್ಞಾನೋ. 22:29) ನಿಶ್ಚಯವಾಗಿಯೂ ಇಂದು ಬೇರಾವುದೇ ಕೆಲಸ “ಸುವಾರ್ತೆಯನ್ನು ಪ್ರಕಟಿಸುವ ಪವಿತ್ರ ಕೆಲಸ”ಕ್ಕಿಂತ ಪ್ರಾಮುಖ್ಯವಲ್ಲ. (ರೋಮ. 15:16) ಹಾಗಾಗಿ ‘ಯಾವುದರಿಂದಲೂ ಲಜ್ಜಿತರಾಗದ ಕೆಲಸದವರಾಗಲಿಕ್ಕಾಗಿ’ ನಮ್ಮ ಉಪಕರಣಗಳನ್ನು ಕೌಶಲದಿಂದ ಬಳಸುವವರಾಗೋಣ.—2 ತಿಮೊ. 2:15.