ಒಂದು ಮಹಾ ನಿಕ್ಷೇಪವನ್ನು ಗುರುತಿಸಲು ಇತರರಿಗೆ ಸಹಾಯ ಮಾಡುವುದು
1 ರಾಜ್ಯದ ಸುವಾರ್ತೆಯ ಕುರಿತು ಇತರರಿಗೆ ನಾವು ಸಾರುವಾಗ, ಪ್ರಾಮಾಣಿಕ ಹೃದಯದವರಿಗೆ ದೇವರ ವಾಕ್ಯದ ಶ್ರೇಷ್ಠವಾಗಿರುವ ಮೌಲ್ಯವನ್ನು ಗಣ್ಯಮಾಡುವಂತೆ ಸಹಾಯ ಮಾಡುವುದು ನಮ್ಮ ಗುರಿಗಳಲ್ಲಿ ಒಂದಾಗಿರಬೇಕು. (ಫಿಲಿ. 3:8) ರಾಜ್ಯ ಸಂದೇಶವನ್ನು ಹರಡಿಸುವುದರಲ್ಲಿ ನಮ್ಮ ಬೈಬಲ್ ಆಧಾರಿತ ಸಾಹಿತ್ಯವು ಪ್ರಾಮುಖ್ಯವಾದ ಒಂದು ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ, ಅವರು ಕಲಿತಂಥ ಬೈಬಲ್ ಸತ್ಯಗಳ ಕಾರಣದಿಂದಾಗಿ ಯೆಹೋವನನ್ನು ಸೇವಿಸುವಂತೆ, ಸದಾ ಜೀವಿಸಬಲ್ಲಿರಿ ಪುಸ್ತಕವು ನೂರಾರು ಸಾವಿರ ಜನರಿಗೆ ಸಹಾಯ ಮಾಡಿದೆ.
2 ಅದನ್ನು ತೆಗೆದುಕೊಳ್ಳಲು ಬಯಸುವವರೊಂದಿಗೆ ಸಾಹಿತ್ಯವನ್ನು ಸುಮ್ಮನೆ ಬಿಟ್ಟು ಹೋಗುವುದಕ್ಕಿಂತ ಹೆಚ್ಚಿನದನ್ನು ನಮ್ಮ ಶುಶ್ರೂಷೆಯು ಒಳಗೊಂಡಿದೆ. ಸಂದೇಶವನ್ನು ಅವರಿಗೆ ಹಿಡಿಸುವಂಥ ರೀತಿಯಲ್ಲಿ ಪರಿಚಯಪಡಿಸಬೇಕು, ಮನೆಯವನು ಏನನ್ನು ಹೇಳುತ್ತಾನೊ ಅದನ್ನು ವಿವೇಚನೆಯಿಂದ ಕೇಳಬೇಕು, ಮತ್ತು ಅನಂತರ ‘ಅವನೊಂದಿಗೆ ಶಾಸ್ತ್ರಾಧಾರದಿಂದ ವಿವೇಚಿಸಲು’ ನಾವು ಸಿದ್ಧರಾಗಿರಬೇಕು.—ಅ. ಕೃತ್ಯಗಳು 17:2.
3 ಇದನ್ನು ಹೇಗೆ ಮಾಡಸಾಧ್ಯವಿದೆ? ಬೈಬಲ್ ಮತ್ತು ಅದರ ಸಂದೇಶದಲ್ಲಿ ಅವರು ನಿಜವಾಗಿಯೂ ಆಸಕ್ತರಾಗಿದ್ದಾರೊ ಇಲ್ಲವೊ ಎಂಬುದನ್ನು ತೋರಿಸುವುದಕ್ಕಾಗಿ, ನಮ್ಮ ನಿರೂಪಣೆಗಳು ಮನೆಯವರಿಗೆ ಮಾರ್ಗವನ್ನು ತೆರೆಯಬಲ್ಲವು.
ನೀವು ಹೀಗೆ ಹೇಳಸಾಧ್ಯವಿದೆ:
▪ “ಇಂದು ಲೋಕದಲ್ಲಿ ನಮ್ಮ ಸುತ್ತಲೂ ಏನು ಸಂಭವಿಸುತ್ತಿದೆಯೋ ಅದರ ಅರ್ಥವನ್ನು ಚರ್ಚಿಸಲು ನಾವು ಭೇಟಿಯಾಗುತ್ತಿದ್ದೇವೆ. ದೇವರಲ್ಲಿ ಮತ್ತು ಜೀವಿಸುವುದಕ್ಕಾಗಿ ಬೈಬಲಿನಲ್ಲಿ ಸ್ಥಾಪಿಸಲಾದಂಥ ಆತನ ಮಟ್ಟಗಳಲ್ಲಿ ಕ್ಷೀಣವಾಗುತ್ತಿರುವ ಆಸಕ್ತಿ ಅನೇಕ ಜನರೊಳಗೆ ಇದೆ. ಒಬ್ಬರು ಇನ್ನೊಬ್ಬರ ಕಡೆಗಿನ ಜನರ ಮನೋಭಾವವನ್ನು ಇದು ಬಹಳವಾಗಿ ಪ್ರಭಾವಿಸಿದೆ. ನೀವು ಇದನ್ನು ಗಮನಿಸಿದ್ದೀರೊ? [ಹೇಳಿಕೆಗಾಗಿ ಅನುಮತಿಸಿರಿ. ನಿರ್ದಿಷ್ಟವಾದ ಘಟನೆಗಳನ್ನು ನೀವು ಸೂಚಿಸಬಹುದು.] ಎರಡನೆಯ ತಿಮೊಥೆಯ 3:1-5 ರಲ್ಲಿ ಉಲ್ಲೇಖಿಸಲಾದವರ ಮನೋಭಾವವನ್ನು ದಯವಿಟ್ಟು ಗಮನಿಸಿ, ಮತ್ತು ಇಂದು ಲೋಕವು ಇದರಂತೆ ಧ್ವನಿಸುತ್ತದೆ ಎಂದು ನೀವು ಯೋಚಿಸುತ್ತೀರೊ ಎಂಬುದಾಗಿ ನನಗೆ ಹೇಳಿ. [ಓದಿ; ಹೇಳಿಕೆಗಳಿಗಾಗಿ ಅನುಮತಿ ನೀಡಿರಿ] ಭವಿಷ್ಯದಲ್ಲಿ ಉತ್ತಮ ಪರಿಸ್ಥಿತಿಗಳನ್ನು ನಿರೀಕ್ಷಿಸುವ ಒಳ್ಳೆಯ ಕಾರಣವಿದೆಯೇ?” ಆಸಕ್ತಿಯು ಪ್ರದರ್ಶಿಸಲ್ಪಡುವುದಾದರೆ, ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟಗಳು 12 ಮತ್ತು 13 ರಲ್ಲಿರುವ ಚಿತ್ರಕ್ಕೆ ಸೂಚಿಸಿರಿ ಮತ್ತು 12 ಹಾಗೂ 13 ನೆಯ ಪ್ಯಾರಗ್ರಾಫ್ಗಳಿಗೆ ಗಮನವನ್ನು ನಿರ್ದೇಶಿಸಿರಿ. ಆಸಕ್ತಿಯು ಸೀಮಿತವಾಗಿದ್ದರೆ, ಆಗ ಶಾಂತಿಭರಿತ ಹೊಸ ಲೋಕ ಎಂಬ ಕಿರುಹೊತ್ತಗೆಯನ್ನು ನೀಡಬಹುದು.
4 ಹೆತ್ತವರಲ್ಲೊಬ್ಬರು ಬಾಗಲಿಗೆ ಬರುವುದಾದರೆ, ನಮ್ಮ ಸಂಭಾಷಣೆಯನ್ನು ನಾವು ಈ ರೀತಿಯಲ್ಲಿ ಆರಂಭಿಸಬಹುದು:
▪ “ಕುಟುಂಬ ಜೀವಿತದ ಸಮಸ್ಯೆಗಳೊಂದಿಗೆ ನಾವು ಹೇಗೆ ಉತ್ತಮವಾಗಿ ನಿಭಾಯಿಸಬಲ್ಲೆವು ಎಂಬುದರಲ್ಲಿ ಆಸಕ್ತಿಯುಳ್ಳ ಜನರೊಂದಿಗೆ ನಾವು ಮಾತಾಡುತ್ತಾ ಇದ್ದೇವೆ. ಸಾಧ್ಯವಾದಷ್ಟು ಅತ್ಯುತ್ತಮವಾದದ್ದನ್ನು ಮಾಡಲು ನಾವೆಲ್ಲರೂ ಪ್ರಯತ್ನಿಸುತ್ತೇವೆ, ಆದರೆ ಮಹತ್ತರವಾದ ಸಫಲತೆಯನ್ನು ಪಡೆಯಲು ನಮಗೆ ಸಹಾಯ ಮಾಡಬಲ್ಲ ಯಾವುದಾದರೊಂದು ವಿಷಯ ಇರುವುದಾದರೆ, ನಮಗೆ ಅದರಲ್ಲಿ ಆಸಕ್ತಿ ಇದೆ, ಅಲ್ಲವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕೊಲೊಸ್ಸೆ 3:12-14 ರಲ್ಲಿ ಇರುವಂತೆ ಈ ವಿಷಯದಲ್ಲಿ ಬೈಬಲ್ ಮಾರ್ಗದರ್ಶನವನ್ನು ಕೊಡುತ್ತದೆ. [ಓದಿ.] ಆದುದರಿಂದ, ಒಂದು ಸಫಲವಾದ ಕುಟುಂಬ ಜೀವಿತವನ್ನು ಆನಂದಿಸಲು ಯಾವುದರ ಅಗತ್ಯವಿದೆ? ಈ ಪ್ರಕಾಶನದ, ‘ಕುಟುಂಬ ಜೀವನವನ್ನು ಸಾಫಲ್ಯಗೊಳಿಸುವುದು’ ಎಂಬುದಾಗಿ ಹೆಸರಿಸಲ್ಪಟ್ಟ ಅಧ್ಯಾಯದಲ್ಲಿ ಏನು ಹೇಳಲಾಗಿದೆ ಎಂಬುದನ್ನು ಗಮನಿಸಿ.” ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟ 238 ರಲ್ಲಿ 3 ನೆಯ ಪ್ಯಾರಗ್ರಾಫನ್ನು ಓದಿರಿ. ಮನೆಯವನು ಕಾರ್ಯಮಗ್ನನಾಗಿದ್ದರೆ ಯಾ ಮನಃಪೂರ್ವಕವಾಗಿ ಪ್ರತಿಕ್ರಿಯಿಸದಿದ್ದರೆ, ಕುಟುಂಬ ವಿಷಯಗಳನ್ನು ಚರ್ಚಿಸುವ ಇತ್ತೀಚೆಗಿನ ಒಂದು ಪತ್ರಿಕೆಯನ್ನು ಯಾ ಕುಟುಂಬ ಜೀವನವನ್ನು ಆನಂದಿಸಿರಿ ಎಂಬ ಕಿರುಹೊತ್ತಗೆಯನ್ನು ಸಾದರಪಡಿಸಲು ಪ್ರಯತ್ನಿಸಿರಿ.
5 ರಾಜ್ಯದ ಕುರಿತು ಸಂಪೂರ್ಣವಾದ ಸಾಕ್ಷಿಯನ್ನು ಕೊಡುವುದರಲ್ಲಿ ನಮ್ಮ ಉದ್ದೇಶದ ನೋಟವನ್ನು ಕಳೆದುಕೊಳ್ಳಲು ನಾವು ಎಂದೂ ಬಯಸುವುದಿಲ್ಲ. (ಮತ್ತಾ. 24:14) ಬೈಬಲ್ ಮತ್ತು ನಮಗೆ ಲಭ್ಯವಿರುವ ದೇವಪ್ರಭುತ್ವ ಸಾಹಿತ್ಯದ ಅದ್ಭುತಕರವಾದ ಒದಗಿಸುವಿಕೆಯ ಒಳ್ಳೆಯ ಉಪಯೋಗವನ್ನು ಮಾಡುವ ಮೂಲಕ, ಈ ಬಹುಮುಖ್ಯವಾದ ಸಮಯಗಳಲ್ಲಿ ಆತನ ಚಿತ್ತವನ್ನು ಪೂರೈಸುವುದರಲ್ಲಿ ಆತನ ಆಶೀರ್ವಾದಕ್ಕಾಗಿ ಯೆಹೋವನ ಕಡೆಗೆ ನಾವು ಭರವಸೆಯಿಂದ ನೋಡಬಲ್ಲೆವು.—ಗಲಾ. 6:9.