ಬೈಬಲಿನಲ್ಲಿ ಆಸಕ್ತಿಯನ್ನು ಪ್ರಚೋದಿಸಲು ಹಿಂದಿರುಗುವುದು
1 ಕೆಲವೊಮ್ಮೆ ಸುಸಮಾಚಾರದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದ ಆದರೆ ನಾವು ಭೇಟಿಯಾದ ಗಳಿಗೆಯಲ್ಲಿ ನಮ್ಮೊಂದಿಗೆ ಮಾತಾಡಲು ಬಹಳ ಕಾರ್ಯಮಗ್ನರಾಗಿರುವ ಜನರನ್ನು ನಾವು ಕ್ಷೇತ್ರ ಸೇವೆಯಲ್ಲಿ ಭೇಟಿಯಾಗುತ್ತೇವೆ. ಅವರೊಂದಿಗೆ ರಾಜ್ಯದ ಸಂದೇಶವನ್ನು ಹಂಚಿಕೊಳ್ಳಲು, ಇನ್ನೊಂದು ಸಮಯ ಭೇಟಿಯಾಗಲು ನಾವು ಪ್ರಯತ್ನಿಸುತ್ತೇವೊ? ಅಥವಾ ಬಹುಶಃ ನಮಗೆ ಒಬ್ಬ ಮನೆಯವನೊಂದಿಗೆ ಸ್ವಾರಸ್ಯವುಳ್ಳ ಸಂಭಾಷಣೆಯು ಇರಬಹುದು, ಆದರೆ ಅವನು ಯಾವ ಸಾಹಿತ್ಯವನ್ನೂ ಸ್ವೀಕರಿಸುವುದಿಲ್ಲ. ಸತ್ಯದ ಬಗ್ಗೆ ಅವನೊಂದಿಗೆ ಇನ್ನಷ್ಟು ಮಾತಾಡಲು ನಾವು ಹಿಂದಿರುಗುತ್ತೇವೊ?
2 ನಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸುವುದು ಮತ್ತು ನಾವು ಕಂಡುಹಿಡಿಯಬಹುದಾದ ಎಲ್ಲ ಆಸಕ್ತಿಯನ್ನು ಬಿಡದೆ ಅನುಸರಿಸುವುದು ಪ್ರಾಮುಖ್ಯವಾಗಿದೆ. ಒಂದು ಪುಸ್ತಕವನ್ನು ಯಾ ಪತ್ರಿಕೆಗಳನ್ನು ಸ್ವೀಕರಿಸುವವರಲ್ಲಿಯೇ ನಾವು ಪುನಃ ಸಂದರ್ಶನಗಳನ್ನು ಮಾಡುತ್ತೇವೊ? ಹಾಗಿರುವಲ್ಲಿ, ನಾವು ಕೆಲವೊಂದು ಆಸಕ್ತ ಜನರನ್ನು ಅಲಕ್ಷಿಸುತ್ತಿರಬಹುದು. ಕೇವಲ ಸಾಹಿತ್ಯವನ್ನು ಸ್ವೀಕರಿಸದೆ ಇದದರ್ದಿಂದ, ಯಾರನ್ನಾದರೂ ಹೆಚ್ಚಿನ ಆತ್ಮಿಕ ಉತ್ತೇಜನಕ್ಕೆ ಅವನು ಅಯೋಗ್ಯನೆಂದು ತೀರ್ಮಾನಿಸಲು ನಿಶ್ಚಯವಾಗಿಯೂ ನಾವು ಬಯಸುವದಿಲ್ಲ. (ರೋಮಾಪುರ 14:4 ಹೋಲಿಸಿ.) ಬಹುಶಃ ನಮ್ಮ ಭೇಟಿಯ ಅನಂತರ, ಒಬ್ಬ ಮನೆಯವನು ನಾವು ಹೇಳಿದ ವಿಷಯದ ಕುರಿತು ಯೋಚಿಸಬಹುದು ಯಾ ಅವನನ್ನು ಭೇಟಿ ಮಾಡಲು ನಾವು ಮಾಡಿದ ಪ್ರಯತ್ನವನ್ನು ಅವನು ಗಣ್ಯಮಾಡಬಹುದು. ನಾವು ಹಿಂದುರುಗುವಾಗ, ಅವನು ಬಹಳ ಪ್ರಸನ್ನತೆಯುಳ್ಳವನಾಗಿರಬಹುದು.
3 ಕಾರ್ಯಮಗ್ನನಾಗಿದ್ದ ಒಬ್ಬ ವ್ಯಕ್ತಿಯನ್ನು ಪುನಃ ಸಂದರ್ಶಿಸುವಾಗ, ನೀವು ಹೀಗೆ ಹೇಳಬಹುದು:
▪ “ನಿಮ್ಮನ್ನು ಪುನಃ ಒಮ್ಮೆ ನೋಡಲು ನಾನು ಸಂತೋಷಿಸುತ್ತೇನೆ. ಕಳೆದ ಬಾರಿ ನಾನು ಇಲ್ಲಿ ಇದ್ದಾಗ, ನಿಮಗೆ ಸಮಯ ಇಲ್ಲದೆ ಇದುದ್ದರಿಂದ ನಮಗೆ ಮಾತಾಡಲು ಆಗಲಿಲ್ಲ. ನೀವು ಕಾರ್ಯಮಗ್ನ ವ್ಯಕ್ತಿಯೆಂದು ನಾನು ನೋಡಬಲ್ಲೆ, ಮತ್ತು ನಾನು ಸಂಕ್ಷಿಪ್ತವಾಗಿರುವೆನು. ಪ್ರಾಯಶಃ ನಿಮಗೂ ಮತ್ತು ನೀವು ಪ್ರೀತಿಸುವವರಿಗೂ ಉತ್ತಮ ಆರೋಗ್ಯದ ಕುರಿತು ನೀವು ಚಿಂತಿಸುತ್ತಿರಬಹುದು. ಒಳ್ಳೆಯದು, ಎಲ್ಲ ಅಸ್ವಸ್ಥತೆಗೆ ಒಂದು ಅಂತ್ಯವನ್ನು ತರಲು ದೇವರು ವಾಗ್ದಾನಿಸಿದ್ದಾನೆಂದು ನಿಮಗೆ ಗೊತ್ತಿತ್ತೊ? ಅದು ಸೋಜಿಗದ ಸಂಗತಿಯಾಗಿರದೆ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿ.] ‘ಇಗೋ! ನಾನು ಎಲ್ಲವನ್ನು ಹೊಸದು ಮಾಡುತ್ತೇನೆ’ ಎಂಬ ಹೆಸರುಳ್ಳ ಈ ಬ್ರೋಷರ್ನ ನಾಲ್ಕನೆಯ ಪ್ಯಾರಗ್ರಾಫ್ನಲ್ಲಿರುವ ಅಂಶವನ್ನು ಗಮನಿಸಿ.” ಸಮಯವು ಅನುಮತಿಸುವದಾದರೆ, ಪ್ಯಾರಗ್ರಾಫನ್ನು ಓದಿರಿ ಮತ್ತು ಆಮೇಲೆ ಪುಟ ನಾಲ್ಕರ ಕೆಳಗೆ ಇರುವ ವಚನಗಳಲ್ಲಿ, ಹೊಸ ಲೋಕದ ಪರಿಸ್ಥಿತಿಗಳನ್ನು ಚಿತ್ರಿಸುವ ಒಂದು ವಚನವನ್ನು ಪರಿಗಣಿಸಿರಿ. ಮನೆಯವನು ಕಿವಿಗೊಡುವವನಾಗಿದ್ದರೆ, ಒಂದು ಮನೆ ಬೈಬಲ್ ಅಭ್ಯಾಸವನ್ನು ಪ್ರಾರಂಭಿಸಲು ನೀವು ಶಕ್ತರಾಗಬಹುದು.
4 ಒಂದು ಕಿರುಹೊತ್ತಗೆಯನ್ನು ಸ್ವೀಕರಿಸಿದ ವ್ಯಕ್ತಿಯನ್ನು ಪುನಃ ಸಂದರ್ಶಿಸುವಾಗ, ನೀವು ಹೀಗೆ ಏನಾದರೂ ಹೇಳಬಹುದು:
▪ “ನಾನು ಕಳೆದ ಬಾರಿ ನಿಮ್ಮನ್ನು ಕಂಡಾಗ, ಹೂ ರಿಯಲಿ ರೂಲ್ಸ್ ದ ವರ್ಲ್ಡ್? ಎಂಬ ಹೆಸರುಳ್ಳ ಈ ಕಿರುಹೊತ್ತಗೆಯ ಪ್ರತಿಯನ್ನು ನೀವು ಸ್ವೀಕರಿಸಿದಿರಿ. ಈ ಲೋಕವನ್ನು ಸೈತಾನನು ಆಳುತ್ತಾನೆಂದು ಒಪ್ಪಲು ನಿಮಗೆ ಕಷ್ಟವಾಗಿ ಕಾಣುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆರನೆಯ ಪುಟದಲ್ಲಿರುವ ಮೊದಲನೆಯ ಪ್ಯಾರಗ್ರಾಫನ್ನು ಗಮನಿಸಿರಿ.” ಪ್ಯಾರಗ್ರಾಫನ್ನು ಓದಿ, ಆಮೇಲೆ ಹೀಗೆ ಕೇಳಿ: “ಸೈತಾನನು ನಮ್ಮನ್ನು ಮೋಸಗೊಳಿಸಲು ಬಯಸುವುದೇಕೆ?” ಮನೆಯವನು ಉತ್ತರಿಸಿದ ಅನಂತರ, ಪುಟ ಮೂರರಲ್ಲಿರುವ ನಾಲ್ಕನೆಯ ಪ್ಯಾರಗ್ರಾಫನ್ನು ಜೊತೆಯಾಗಿ ಪರಿಗಣಿಸಿರಿ. ಕಿರುಹೊತ್ತಗೆಯ ಸಂಪೂರ್ಣ ಪರಿಗಣನೆಯೊಂದಿಗೆ ನೀವು ಮುಂದುವರಿಯಬಹುದು, ಯಾ ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ಯಾರು ನಮಗೆ ಸಹಾಯ ಮಾಡುವರು? ಎಂಬ ಬ್ರೋಷರನ್ನು ಪರಿಚಯಪಡಿಸಲು ಮತ್ತು ಪುಟ 18 ರಲ್ಲಿರುವ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಪರಿಗಣಿಸಲು ನೀವು ಬಯಸಬಹುದು.
5 ಒಂದು ಮಿತವಾದ ರೀತಿಯಲ್ಲಿ ವ್ಯಕ್ತಪಡಿಸಿದರೂ, ನಮ್ಮ ಸಾರುವ ಕಾರ್ಯದಲ್ಲಿ ನಾವು ಕಂಡುಕೊಳ್ಳುವ ಆಸಕ್ತಿಯ ವಿಷಯದಲ್ಲಿ ಸಕಾರಾತ್ಮಕವಾಗಿರಲು ಮತ್ತು ಅದನ್ನು ಅನುಸರಿಸಲು ಸಕಾರಣವಿದೆ. ಇತರರ ಬಗ್ಗೆ ಕಾಳಜಿ ವಹಿಸುವುದು, ಸತ್ಯವನ್ನು ಅವರು ಕಲಿಯುವಂತೆ ಸಹಾಯ ಮಾಡಲು ಪ್ರಚೋದಿಸಲ್ಪಡುವುದು ಪ್ರಾಮುಖ್ಯವಾಗಿವೆ. ಯೆಹೋವನ ಸಂಸ್ಥೆಯು ತಮ್ಮ ಆತ್ಮಿಕ ಆವಶ್ಯಕತೆಗಳ ಬಗ್ಗೆ ಇತರರು ಅರಿತುಕೊಳ್ಳುವಂತೆ ಮಾಡಲು ನಮಗೆ ಸಹಾಯ ನೀಡುವ ಸಾಹಿತ್ಯವನ್ನು ಮತ್ತು ಸೂಚಿಸಲಾದ ನಿರೂಪಣೆಗಳನ್ನು ಒದಗಿಸುತ್ತದೆ.—ಮತ್ತಾ. 5:3.
6 ಅಲ್ಪವಾದ ಆಸಕ್ತಿಯನ್ನಾದರೂ ತೋರಿಸಿದ ಯಾರೊಂದಿಗಾದರೂ ನೀವೊಂದು ಹಿತಕರವಾದ ಸಂಭಾಷಣೆಯನ್ನು ಮಾಡಿದ್ದರೆ, ಆಸಕ್ತಿಯನ್ನು ಬೆಳೆಸಲಿಕ್ಕಾಗಿ ಪುನಃ ಭೇಟಿ ಮಾಡಲು ಅಲಕ್ಷಿಸಬೇಡಿ. ಒಂದು ಮನೆ ಬೈಬಲ್ ಅಭ್ಯಾಸವನ್ನು ಆರಂಭಿಸುವುದು ಮತ್ತು ಯಾರನ್ನಾದರೂ ಜೀವಿತದ ಹಾದಿಯ ಮೇಲೆ ನಡೆಸುವುದು ಅದರ ಫಲಿತಾಂಶವಾಗಬಹುದು. ಈ ಜೀವವನ್ನು ರಕ್ಷಿಸುವ ಕಾರ್ಯದಲ್ಲಿ ಎಲ್ಲರೂ ನಿಷ್ಠೆಯಿಂದ ಭಾಗವಹಿಸುತ್ತಾ ಮುಂದುವರಿಯುವಂತೆ ನಾವು ಪ್ರೋತ್ಸಾಹಿಸುತ್ತೇವೆ.—1 ತಿಮೊ. 4:16.