ನಿಮ್ಮ ಸಹೋದರರನ್ನು ಉತ್ತಮವಾಗಿ ಅರಿತುಕೊಳ್ಳಿರಿ
1 ಜೊತೆ ಆರಾಧಕರೊಂದಿಗೆ ನಮ್ಮ ಸಂಬಂಧವು, ರಾಜ್ಯ ಸಭಾಗೃಹದಲ್ಲಿ ಅವರೊಂದಿಗೆ ಕೇವಲ ಕೂಟಗಳನ್ನು ಹಾಜರಾಗುವುದಕ್ಕಿಂತ ಹೆಚ್ಚಿನದ್ದನ್ನು ಒಳಗೊಂಡಿದೆ. ನಾವು ದೇವರ ಚಿತ್ತವನ್ನು ಮಾಡುವವರಾಗಿದ್ದೇವೆ, ಮತ್ತು ಅದು ನಮ್ಮನ್ನು ಯೇಸುವಿನೊಂದಿಗೆ ಆತ್ಮಿಕ ಸಂಬಂಧದೊಳಗೆ ತರುತ್ತದೆ. (ಮಾರ್ಕ 3:34, 35) ಅದು ಪ್ರತಿಯಾಗಿ, ನಮ್ಮನ್ನು ಸಭೆಯಲ್ಲಿ, ಯಾರನ್ನು ನಾವು ಪ್ರೀತಿಸಲು ಆಜ್ಞಾಪಿಸಲ್ಪಟ್ಟಿದ್ದೇವೊ ಆ ನಮ್ಮ ಸಹೋದರ ಸಹೋದರಿಯರಾದ ಇತರರೊಂದಿಗೆ ಆತ್ಮಿಕ ಕುಟುಂಬ ಸಂಬಂಧದೊಳಗೆ ತರುತ್ತದೆ. (ಯೋಹಾನ 13:35) ಹೀಗೆ, “ದೇವರ ಮನೆಯವ” ರೊಂದಿಗೆ ಜೊತೆಗೂಡಿರುವವರು ಒಬ್ಬರನ್ನೊಬ್ಬರು ಉತ್ತಮವಾಗಿ ತಿಳಿಯಲು ಪ್ರಯತ್ನಿಸಬೇಕು.—ಎಫೆ. 2:19.
2 ನಿಮ್ಮ ಸಹೋದರರನ್ನು ಹೆಸರುಗಳಿಂದ ತಿಳಿದುಕೊಳ್ಳಿರಿ: ನಿಮ್ಮ ಸಭಾ ಪುಸ್ತಕ ಅಭ್ಯಾಸದಲ್ಲಿರುವ ಎಲ್ಲಾ ಸಹೋದರ ಮತ್ತು ಸಹೋದರಿಯರ ಹೆಸರುಗಳನ್ನು ನೀವು ತಿಳಿದಿರುವಿರೊ? ಆ ಗುಂಪು ಸಾಮಾನ್ಯವಾಗಿ ಸಣ್ಣದಿರುತ್ತದೆ, ಹಾಜರಾಗುವ ಎಲ್ಲರದ್ದಲ್ಲದಿದ್ದಲ್ಲಿ, ಹೆಚ್ಚಿನವರ ಹೆಸರುಗಳನ್ನು ತಿಳಿದುಕೊಳ್ಳಲು ಅದು ಹೆಚ್ಚು ಸುಲಭವನ್ನಾಗಿ ಮಾಡುತ್ತದೆ. ಅವರ ಹೆಸರುಗಳನ್ನೇ ನೀವು ತಿಳಿದಿಲ್ಲವಾದಲ್ಲಿ, ನೀವು ಅವರನ್ನು ಉತ್ತಮವಾಗಿ ತಿಳಿದುಕೊಂಡಿರುವಿರೆಂದು ಹೇಳಶಕ್ತರೊ?
3 ಮಕ್ಕಳನ್ನು ಸೇರಿಸಿ, ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವ ಇತರರನ್ನು ತಿಳಿದುಕೊಳ್ಳುವ ಕುರಿತು ಏನು? ಸ್ನೇಹಿತರ ಒಂದು ಸಣ್ಣ ಗುಂಪಿನೊಂದಿಗೆ ಮಾತ್ರ ಸಹವಾಸಿಸುವ ಪ್ರವೃತ್ತಿಯುಳ್ಳವರಾಗಿ ನಾವಿರಬಹುದು. ಕೆಲವರೊಂದಿಗೆ ಕ್ರಮದ ಸಹವಾಸದಲ್ಲಿ ಆನಂದಿಸುವುದು ತಪ್ಪಲ್ಲದಿರುವಾಗ, ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಯನ್ನು ಮತ್ತು ಭಕ್ತಿವರ್ಧಕ ಸಂಭಾಷಣೆಯನ್ನು ಕೆಲವರಿಗಾಗಿ ಮಾತ್ರ ಮಿತವಾಗಿಡುವುದನ್ನು ನಾವು ಬಯಸುವುದಿಲ್ಲ. ನಮ್ಮೆಲ್ಲ ಸಹೋದರ ಸಹೋದರಿಯರನ್ನು ತಿಳಿದುಕೊಳ್ಳುವ ಒಂದು ಪ್ರಯತ್ನದಲ್ಲಿ, ನಾವು “ವಿಶಾಲ”ವಾಗಬೇಕು. (2 ಕೊರಿಂ. 6:11-13) ಅದು ಅವರನ್ನು ಹೆಸರಿನಿಂದ ತಿಳಿದುಕೊಳ್ಳುವುದನ್ನು ಒಳಗೊಳ್ಳುವುದೆಂಬುದು ಸ್ಪಷ್ಟ.
4 ಸಭಾ ಕೂಟಗಳನ್ನು ನಡೆಸುವ ಸಹೋದರರು ಹಾಜರಾಗುವವರೆಲ್ಲರ ಹೆಸರುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ವೇದಿಕೆಯಿಂದ ಪ್ರತಿಯೊಬ್ಬರನ್ನು ಹೆಸರು ಹೇಳಿ ಕರೆಯುವುದರ ಮೂಲಕ ಅವರ ಹೇಳಿಕೆಗಳು ಗಣ್ಯಮಾಡಲಾದುವೆಂದು ಅವರು ಭಾವಿಸುವಂತೆ ಮಾಡುತ್ತದೆ, ಮತ್ತು ಅದೇ ಸಮಯದಲ್ಲಿ, ಇತರರು ಅವರ ಹೆಸರುಗಳನ್ನು ತಿಳಿದುಕೊಳ್ಳುವಂತಾಗುತ್ತದೆ. ನಿಶ್ಚಯವಾಗಿಯೂ, ಯಾರಿಗೇ ಆಗಲಿ ಪ್ರತಿಯೊಂದು ಹೆಸರನ್ನು ತಿಳಿದುಕೊಳ್ಳಲು ಕಷ್ಟವನ್ನುಂಟುಮಾಡುತ್ತಾ, ಸಭಿಕರಲ್ಲಿ ಹೊಸಬರು ಯಾ ಸಂದರ್ಶಕರು ಯಾವಾಗಲೂ ಇರುವರು. ಹಾಗಿದ್ದರೂ, ಸಂತತವಾದ ಪ್ರಾಮಾಣಿಕ ಪ್ರಯತ್ನಗಳು ಇತರರಿಗೆ ಪ್ರೋತ್ಸಾಹದಾಯಕವಾಗಿವೆ ಮತ್ತು ನಿಜ ವೈಯಕ್ತಿಕ ಅಭಿರುಚಿಯನ್ನು ಪ್ರತಿಬಿಂಬಿಸುತ್ತವೆ.—ರೋಮಾ. 1:11, 12.
5 ಉತ್ತಮವಾಗಿ ಪರಿಚಿತರಾಗಲು ಮುಂತೊಡಗಿರಿ: ಸಂಚರಣಾ ಮೇಲ್ವಿಚಾರಕರು ಸಾಮಾನ್ಯವಾಗಿ ಸಹೋದರ ಸಹೋದರಿಯರ ದೊಡ್ಡ ಸಂಖ್ಯೆಯೊಂದಿಗೆ ಉತ್ತಮವಾಗಿ ಪರಿಚಿತರಾಗಶಕ್ತರಾಗಿದ್ದಾರೆ. ಅವರದನ್ನು ಹೇಗೆ ಮಾಡುತ್ತಾರೆ? ಮೂರು ಪ್ರಮುಖ ವಿಧಾನಗಳಲ್ಲಿ: (1) ಅವರು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಅವರೊಂದಿಗೆ ಕೆಲಸಮಾಡುತ್ತಾರೆ; (2) ಅವರ ಪರಿಸ್ಥಿತಿಗಳು ಅನುಮತಿಸಿದಂತೆ, ಅವರ ಮನೆಗಳಲ್ಲಿ ಅವರನ್ನು ಭೇಟಿಯಾಗಲು ಆಮಂತ್ರಣಗಳನ್ನು ಸ್ವೀಕರಿಸುತ್ತಾರೆ; ಮತ್ತು (3) ಅವರು ವಯಸ್ಕರನ್ನೂ ಮಕ್ಕಳನ್ನೂ ಕೂಟಗಳಲ್ಲಿ ವಂದಿಸಲು ಮುಂತೊಡಗುತ್ತಾರೆ.
6 ನಿಮ್ಮ ಸಹವಾಸದಲ್ಲಿ ವಿಶಾಲವಾಗಲು ಮತ್ತು ನಿಮ್ಮ ಸಹೋದರರನ್ನು ಉತ್ತಮವಾಗಿ ತಿಳಿದುಕೊಳ್ಳಲು ನೀವು ಮಾರ್ಗಗಳನ್ನು ಕಾಣಬಲ್ಲಿರೊ? ಕ್ಷೇತ್ರ ಸೇವೆಯಲ್ಲಿ ನಮ್ಮೊಂದಿಗೆ ಜೊತೆಗೂಡುವಂತೆ ಇತರರನ್ನು ನಾವು ನಿಶ್ಚಯವಾಗಿಯೂ ಆಮಂತ್ರಿಸಬಲ್ಲೆವು. ಮನೆಯಿಂದ ಮನೆಗೆ ಹೋಗುವುದು, ಪುನರ್ಭೇಟಿಗಳನ್ನು ಮಾಡುವುದು, ಬೈಬಲ್ ಅಧ್ಯಯನಗಳಿಗೆ ಹೋಗುವುದು, ಯಾ ಪತ್ರಿಕೆಗಳೊಂದಿಗೆ ರಸ್ತೆಯ ಸಾಕ್ಷಿಕಾರ್ಯವನ್ನು ಮಾಡುವುದು, ಇವೆಲ್ಲವು ಉತ್ತಮವಾಗಿ ಪರಿಚಿತರಾಗುವುದಕ್ಕೆ ಅತ್ಯುತ್ತಮ ವಿಧಾನಗಳಾಗಿವೆ. ಪ್ರಾಯಶಃ ಆಗಾಗ ಭೋಜನದಲ್ಲಿ ಯಾ ಲಘು ಉಪಹಾರಗಳಲ್ಲಿ ಭಾಗವಹಿಸುವಂತೆ, ನಿಮ್ಮ ಮನೆಯನ್ನು ಸಂದರ್ಶಿಸಲು ಇತರರನ್ನು ಆಮಂತ್ರಿಸುವುದು ಕೂಡ ಉತ್ತಮವಾಗಿದೆ. ಹೊಸಬರನ್ನು ಯಾ ನಾಚಿಕೆಯ ಸ್ವಭಾವವುಳ್ಳವರನ್ನು ಸಮೀಪಿಸಲು ಮುಂತೊಡಗುವುದು ಕೇವಲ ಅವರನ್ನು ಆತ್ಮಿಕವಾಗಿ ಭಕ್ತಿವೃದ್ಧಿಯನ್ನುಂಟು ಮಾಡುವುದಲ್ಲದೆ, ಹೇರಳ ಪ್ರತಿಫಲಗಳನ್ನು ಕೂಡ ತರುವುದು.—ಅ. ಕೃ. 20:35; 1 ಥೆಸ. 5:11.
7 ಪೌಲನು ತನ್ನ ಸಹೋದರರನ್ನು ಉತ್ತಮವಾಗಿ ತಿಳಿದಿದ್ದನು. ತನ್ನ ಪತ್ರಗಳಲ್ಲಿ ಅವರಲ್ಲಿ ಅನೇಕರನ್ನು ಹೆಸರಿನ ಮೂಲಕ ವ್ಯೆಯಕಿಕ್ತವಾಗಿ ಅವನು ಕರೆದಿರುವುದು ಅವರಲ್ಲಿ ತನ್ನ ನಿಸ್ವಾರ್ಥ ಅಭಿರುಚಿ ಮತ್ತು ಅವರಿಗೋಸ್ಕರ ತನ್ನ ನಿಜ ಪ್ರೀತಿಯ ಪುರಾವೆಯಾಗಿತ್ತು. (1 ಥೆಸ. 2:17; 2 ತಿಮೊ. 4:19, 20) ನಮ್ಮ ಸಹೋದರರನ್ನು ಉತ್ತಮವಾಗಿ ತಿಳಿದುಕೊಳ್ಳುವ ನಮ್ಮ ಪ್ರಯತ್ನವು ನಮ್ಮೆಲ್ಲರಿಗೆ ಆಶೀರ್ವಾದಗಳ ಅರ್ಥದಲ್ಲಿರುವುದು.