ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
1 1995 ಕ್ಕಾಗಿರುವ ನಮ್ಮ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮವು “ಸತ್ಯಕ್ಕೆ ಸಾಕ್ಷಿ ನೀಡುತ್ತಾ ಇರ್ರಿ” ಎಂಬ ಮುಖ್ಯವಿಷಯವನ್ನು ಮುಖ್ಯನೋಟವಾಗಿಡುವುದು. ಯೇಸು ನಮಗಾಗಿ ಬಿಟ್ಟುಹೋದ ಮಾದರಿ ಮತ್ತು ಇತರರೊಂದಿಗೆ ಸತ್ಯವನ್ನು ಹಂಚುವದರಲ್ಲಿ ಅವನು ಪ್ರತಿಯೊಂದು ಅವಕಾಶದ ಉಪಯೋಗವನ್ನು ಮಾಡಿದ ವಿಧದ ಮೇಲೆ ಇಡೀ ಕಾರ್ಯಕ್ರಮವು ಕೇಂದ್ರೀಕರಿಸುವುದು. ಕ್ರಿಸ್ತನ ಶಿಷ್ಯರೋಪಾದಿ ಸತ್ಯಕ್ಕೆ ಸಾಕ್ಷಿ ನೀಡುವದರಲ್ಲಿ ಆತನನ್ನು ಅನುಕರಿಸುವ ನಮ್ಮ ಜವಾಬ್ದಾರಿಯನ್ನು ಅದು ಒತ್ತಿಹೇಳುವುದು.—1 ಕೊರಿಂ. 11:1.
2 ಸತ್ಯವನ್ನು ಪ್ರವರ್ಧಿಸುವದರಲ್ಲಿ ಸಭೆಯು ಆಡುವ ಪಾತ್ರವನ್ನು ಪರಿಗಣಿಸಲಾಗುವುದು. ನಮ್ಮ ಪತ್ರಿಕೆಗಳ ಮತ್ತು ಇತರ ಪ್ರಕಾಶನಗಳ ಸದುಪಯೋಗವನ್ನೂ ಒತ್ತಿಹೇಳಲಾಗುವುದು.
3 ಭೇಟಿನೀಡುವ ಭಾಪಣಕರ್ತನಿಂದ ಕೊಡಲ್ಪಡುವ ಪ್ರಮುಖ ಭಾಷಣಕ್ಕೆ “ಸತ್ಯಕ್ಕೆ ಸಾಕ್ಷಿಯನ್ನು ನೀಡುವುದು—ಅದು ಸಾಧಿಸುವ ಸಂಗತಿ” ಎಂಬ ಶೀರ್ಷಿಕೆ ಕೊಡಲ್ಪಟ್ಟಿದೆ. (ಯೋಹಾನ 8:32) ಈ ವಿಶೇಷ ಸಮ್ಮೇಳನ ದಿನವು ಸತ್ಯಕ್ಕಾಗಿ ನಮ್ಮ ಗಣ್ಯತೆಯನ್ನು ಖಂಡಿತವಾಗಿ ಆಳಗೊಳಿಸುವದು ಮತ್ತು ದೃಢನಿಷ್ಠೆಯವರಾಗಿ ಮತ್ತು “ಸತ್ಯದಲ್ಲಿ ಸ್ಥಿರ” ರಾಗಿಯೂ ಉಳಿಯುವಂತೆ ನಮಗೆಲ್ಲರಿಗೂ ಸಹಾಯ ಮಾಡುವುದು.—2 ಪೇತ್ರ 1:12; 1 ಕೊರಿಂ. 15:58.