ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
ಆದಿಕ್ರೈಸ್ತರು ಪವಿತ್ರಾತ್ಮದಿಂದ ಬಲಗೊಳಿಸಲ್ಪಟ್ಟು, ಸುವಾರ್ತೆಯನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಘೋಷಿಸುವುದರಲ್ಲಿ ಅತ್ಯಧಿಕ ಹುಮ್ಮಸ್ಸನ್ನು ತೋರಿಸಿದರು. (ಅ. ಕೃ. 1:8; ಕೊಲೊ. 1:23) ಇಸವಿ 2007ನೇ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮವು ನಾವು ಅವರ ಅತ್ಯುತ್ತಮ ಮಾದರಿಯನ್ನು ಅನುಕರಿಸುವಂತೆ ನಮ್ಮನ್ನು ಪ್ರೋತ್ಸಾಹಿಸುವುದು. ಅದರ ಮುಖ್ಯವಿಷಯವು ‘ವಾಕ್ಯವನ್ನು ಬೋಧಿಸುವದರಲ್ಲಿ ಅತ್ಯಾಸಕ್ತಿಯುಳ್ಳವರಾಗಿರ್ರಿ’ ಎಂದಾಗಿದೆ.—ಅ. ಕೃ. 18:5.
ದೇವರ ವಾಕ್ಯವನ್ನು ವರ್ಣಿಸುತ್ತಾ ರಾಜ ದಾವೀದನು ಹೇಳಿದ್ದು: “ಯೆಹೋವನ ಕಟ್ಟಳೆ [ಮರುಜ್ಞಾಪನಗಳು] ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” (ಕೀರ್ತ. 19:7) 2007ರ ವಿಶೇಷ ಸಮ್ಮೇಳನ ದಿನಕ್ಕಾಗಿ ಜಾಗರೂಕತೆಯಿಂದ ತಯಾರಿಸಲ್ಪಟ್ಟಿರುವ ಕಾರ್ಯಕ್ರಮವು, ‘ತಿದ್ದುಪಾಟುಮಾಡುವುದರಲ್ಲಿ’ ಶಾಸ್ತ್ರವಚನಗಳಿಗಿರುವ ಮೌಲ್ಯವನ್ನು ಎತ್ತಿತೋರಿಸುವುದು. ಮತ್ತು ದೇವರ ವಾಕ್ಯವನ್ನುಪಯೋಗಿಸಿ ತುರ್ತುಪಜ್ಞೆಯಿಂದ ಸಾರುವಂತೆಯೂ ಕಲಿಸುವಂತೆಯೂ ನಮ್ಮನ್ನು ಪ್ರಚೋದಿಸುವುದು. (2 ತಿಮೊ. 3:16, 17) ನಮ್ಮ ದೈನಂದಿನ ಜೀವನದಲ್ಲಿ ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನಾವು ಸೈತಾನನ ಪಾಶಗಳಿಂದ ಹೇಗೆ ದೂರವಿದ್ದು ಪ್ರಯೋಜನಪಡೆಯಸಾಧ್ಯವಿದೆ ಎಂಬುದನ್ನೂ ಈ ಹೊಸ ವಿಶೇಷ ಸಮ್ಮೇಳನದ ಕಾರ್ಯಕ್ರಮವು ತೋರಿಸಿಕೊಡುವುದು. ಮಾತ್ರವಲ್ಲ, ಯುವಜನರೂ ಹೊಸಬರೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವಂತೆ ನೆರವುನೀಡಲಿಕ್ಕಾಗಿ ನಾವು ದೇವರವಾಕ್ಯವನ್ನು ಉಪಯೋಗಿಸಲು ಸಹ ಸಹಾಯಮಾಡುವುದು.
ಕಾರ್ಯಕ್ರಮವು ಆರಂಭವಾಗುವುದಕ್ಕೆ ಮುಂಚೆಯೇ ಹಾಜರಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ ಮತ್ತು ಕಾರ್ಯಕ್ರಮಕ್ಕೆ ನಿಕಟ ಗಮನಕೊಡಿರಿ. ನೀವು ವೈಯಕ್ತಿಕವಾಗಿ ಅನ್ವಯಿಸಸಾಧ್ಯವಿರುವ ಅಂಶಗಳನ್ನು ಬರೆದುಕೊಳ್ಳಿರಿ. ನೀವು ಅಲ್ಲಿ ಪಡೆದುಕೊಳ್ಳುವ ಬೋಧನೆಗಳಿಗಾಗಿ ಮತ್ತು ಮರುಜ್ಞಾಪನಗಳಿಗಾಗಿ ಗಣ್ಯತೆಯನ್ನು ತೋರಿಸಿರಿ. ಮತ್ತು ಕಲಿತ ವಿಷಯಗಳನ್ನು ನೀವು ಹೇಗೆ ಕಾರ್ಯರೂಪದಲ್ಲಿ ಹಾಕಬಯಸುವಿರಿ ಎಂಬುದರ ಕುರಿತು ಆಲೋಚಿಸಿರಿ.
ನಿಶ್ಚಯವಾಗಿಯೂ ಈ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮವು ದೇವರ ವಾಕ್ಯದ ಮೇಲೆ ನಮಗಿರುವ ಗಣ್ಯತೆಯನ್ನು ಅಧಿಕಗೊಳಿಸುವುದು, ಹುರುಪಿನಿಂದ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಸ್ಥಿರಚಿತ್ತರಾಗಿರುವುದನ್ನು ಮುಂದುವರಿಸಲು ಮರುಜ್ಞಾಪಿಸುವುದು ಮತ್ತು ಇತರರೂ ಇದನ್ನೇ ಮಾಡುವಂತೆ ನಾವು ಹೇಗೆ ಸಹಾಯಮಾಡಬೇಕೆಂಬುದನ್ನು ತೋರಿಸುವುದು. ಆದುದರಿಂದ, ಈ ಏರ್ಪಾಡಿನ ಮೂಲಕ ಯೆಹೋವನು ಒದಗಿಸುವ ಯಾವುದೇ ಆಧ್ಯಾತ್ಮಿಕ ಮಾರ್ಗದರ್ಶನಗಳನ್ನೂ ಬೋಧನೆಗಳನ್ನೂ ತಪ್ಪಿಸಿಕೊಳ್ಳದಿರಲು ದೃಢನಿರ್ಧಾರವನ್ನು ಮಾಡಿರಿ!—ಯೆಶಾ. 30:20ಬಿ, 21.