ರಾಜ್ಯ ಸೇವೆಯ ನಿಮ್ಮ ನಿಕ್ಷೇಪವನ್ನು ವಿಸ್ತರಿಸಿರಿ
1 ಯೇಸು ರಾಜ್ಯ ನಿರೀಕ್ಷೆಯನ್ನು ಅಮೂಲ್ಯವಾದ ನಿಕ್ಷೇಪಕ್ಕೆ ಹೋಲಿಸಿದನು. (ಮತ್ತಾ. 13:44-46) ಯೇಸುವಿನ ದೃಷ್ಟಾಂತಗಳಲ್ಲಿ, ಬಹು ಬೆಲೆಯುಳ್ಳ ಯಾವುದನ್ನೋ ಕೊಂಡುಕೊಳ್ಳಲಿಕ್ಕಾಗಿ ತಮ್ಮ ಎಲ್ಲಾ ಸ್ವತ್ತುಗಳನ್ನು ಮಾರಿದ ಮನುಷ್ಯರಂತೆ ನಾವಿದ್ದೇವೊ? ಹಾಗಿರುವಲ್ಲಿ, ಅದು ಅನನುಕೂಲ ಮತ್ತು ಸ್ವಾರ್ಥತ್ಯಾಗವನ್ನು ಒಳಗೊಂಡಿರಬಹುದಾದರೂ, ನಾವು ದೇವರ ರಾಜ್ಯಕ್ಕೆ ಪ್ರಥಮ ಆದ್ಯತೆಯನ್ನು ಕೊಡುವೆವು.—ಮತ್ತಾ. 6:19-22.
2 ನಮ್ಮ ರಾಜ್ಯ ಸೇವೆಯು ಒಂದು ನಿಕ್ಷೇಪವಾಗಿರುವುದರಿಂದ ಅದನ್ನು ವಿಸ್ತರಿಸುವುದು ನಮ್ಮ ಅಪೇಕ್ಷೆಯಾಗಿರಬೇಕು. ಜೀವನದಲ್ಲಿ ನಮ್ಮ ವೈಯಕ್ತಿಕ ಮಾರ್ಗವು ಏನನ್ನು ತೋರಿಸುತ್ತದೆ? ನಮ್ಮ ರಾಜ್ಯ ಚಟುವಟಿಕೆಯನ್ನು ನಾವು ವಿಸ್ತರಿಸುತ್ತಿದ್ದೇವೊ? ಮನೆಯಿಂದ ಮನೆಯ ಸಾಕ್ಷಿಕಾರ್ಯವನ್ನು ಮಾಡುವುದು, ಪುನರ್ಭೇಟಿಗಳನ್ನು ಮಾಡುವುದು, ಬೈಬಲ್ ಅಧ್ಯಯನಗಳನ್ನು ನಡೆಸುವುದು, ಮತ್ತು ಅನೌಪಚಾರಿಕವಾಗಿ ಸಾಕ್ಷಿ ನೀಡುವುದನ್ನು ಒಳಗೊಂಡು, ಶುಶ್ರೂಷೆಯ ವಿವಿಧ ವೈಶಿಷ್ಟ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಹಾಗೆ ಮಾಡಬಲ್ಲೆವು.
3 ‘ನನ್ನ ಪಾಲನ್ನು ನಾನು ಹೇಗೆ ವಿಸ್ತರಿಸಬಲ್ಲೆ?’ ಹೊಸ ಸೇವಾ ವರ್ಷದ ಆರಂಭದೊಂದಿಗೆ, ಕ್ಷೇತ್ರ ಶುಶ್ರೂಷೆಯಲ್ಲಿ ಕಳೆದಿರುವ ಸಮಯವನ್ನು ಅಧಿಕಗೊಳಿಸಲು ತಾನು ಏನು ಮಾಡಬಹುದೆಂಬುದನ್ನು ನೋಡಲಿಕ್ಕಾಗಿ ತನ್ನ ವೈಯಕ್ತಿಕ ಚಟುವಟಿಕೆಯನ್ನು ಪುನರ್ವಿಮರ್ಶಿಸುವುದು ಮತ್ತು ಹೀಗೆ ಕೇಳಿಕೊಳ್ಳುವುದು ಪ್ರತಿಯೊಬ್ಬನಿಗೂ ಒಳ್ಳೆಯದಾಗಿದೆ: ‘ಆಗಾಗ್ಗೆ ಅಥವಾ ನಿರಂತರವಾಗಿ ಆಕ್ಸಿಲಿಯರಿ ಪಯನೀಯರನೋಪಾದಿ ನಮೂದಿಸಿಕೊಳ್ಳಲಿಕ್ಕಾಗಿ ನನ್ನ ಕೆಲಸಕಾರ್ಯಗಳನ್ನು ನಾನು ಏರ್ಪಡಿಸಬಲ್ಲೆನೊ? ಕೆಲವೊಂದು ಸರಿಪಡಿಸುವಿಕೆಗಳನ್ನು ಮಾಡುವ ಮೂಲಕ, ಕ್ರಮದ ಪಯನೀಯರ್ ಸೇವೆಯನ್ನು ನಾನು ಪ್ರವೇಶಿಸಸಾಧ್ಯವಿದೆಯೊ?’ ಸಪ್ಟಂಬರ 1 ರಿಂದ ದಾಖಲಾಗಿರುವ ಹೊಸ ಪಯನೀಯರರು ಮುಂದಿನ ಪಯನೀಯರ್ ಸೇವಾ ಶಾಲೆಗೆ ಹಾಜರಾಗಲಿಕ್ಕಾಗಿ ಅರ್ಹರಾಗಬಹುದು.
4 ಕೆಲವು ಪ್ರಚಾರಕರು ಅನೌಪಚಾರಿಕ ಸಾಕ್ಷಿಕಾರ್ಯವನ್ನು ಹೆಚ್ಚಾಗಿ ಮಾಡಲಿಕ್ಕಾಗಿ ವೈಯಕ್ತಿಕವಾದ ಒಂದು ಗುರಿಯನ್ನಿಟ್ಟಿದ್ದಾರೆ. ಅನೇಕವೇಳೆ ಈ ಚಟುವಟಿಕೆಯು ಅತ್ಯುತ್ತಮವಾದ ಫಲವನ್ನು ಉತ್ಪಾದಿಸುತ್ತದೆ. ಇತರರು ಪರಿಣಾಮಕಾರಿ ಪುನರ್ಭೇಟಿಗಳನ್ನು ಮಾಡುವುದರಲ್ಲಿ ಅಥವಾ ಹೊಸ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಪ್ರಗತಿಯನ್ನು ಮಾಡುವ ಅಗತ್ಯವಿದೆಯೆಂದು ಭಾವಿಸಬಹುದು.
5 ಯಾವುದೋ ಒಂದು ರೀತಿಯಲ್ಲಿ ನಮ್ಮ ಶುಶ್ರೂಷೆಯು ಮಿತಗೊಳಿಸಲ್ಪಡುತ್ತದೆಂದು ನಾವು ನಿರ್ಣಯಿಸುವಲ್ಲಿ, ಅದನ್ನು ವಿಸ್ತರಿಸಲು ನಾವೇನು ಮಾಡಬಲ್ಲೆವು? ಅದರ ವೆಚ್ಚವನ್ನು ಲಕ್ಷಿಸದೆ ರಾಜ್ಯ ಅಭಿರುಚಿಗಳನ್ನು ಪ್ರಥಮವಾಗಿ ಇಡಲಿಕ್ಕಾಗಿ ನಾವು ಮೊದಲಾಗಿ ಒಂದು ನಿರ್ಧಾರವನ್ನು ಮಾಡಬೇಕೆಂದು, ಹೆಚ್ಚು ಉತ್ತಮವಾದ ಗುರಿಗಳನ್ನು ಯಶಸ್ವಿಯಾಗಿ ತಲಪಿರುವವರು ಶಿಫಾರಸ್ಸು ಮಾಡುತ್ತಾರೆ. (ಮತ್ತಾ. 6:33) ಯೆಹೋವನಲ್ಲಿ ನಂಬಿಕೆ ಮತ್ತು ಸಂಪೂರ್ಣ ಭರವಸೆಯು ಆವಶ್ಯಕವಾಗಿವೆ. (2 ಕೊರಿಂ. 4:7) ಯಥಾರ್ಥವಾದ ಮತ್ತು ನಿರಂತರವಾದ ಪ್ರಾರ್ಥನೆಯ ಮೂಲಕ ಆತನ ಸಹಾಯವನ್ನು ಹುಡುಕಿರಿ. (ಲೂಕ 11:8, 9) ಯೆಹೋವನ ಸೇವೆಯಲ್ಲಿ ನಮ್ಮ ಪಾಲನ್ನು ಅಧಿಕಗೊಳಿಸುವ ನಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಆತನು ಆಶೀರ್ವದಿಸುವನೆಂದು ನಾವು ದೃಢ ವಿಶ್ವಾಸದಿಂದಿರಸಾಧ್ಯವಿದೆ.—1 ಯೋಹಾನ 5:14.
6 ತಮ್ಮ ಶುಶ್ರೂಷೆಯನ್ನು ಯಶಸ್ವಿಕರವಾಗಿ ವಿಸ್ತರಿಸಿರುವ ಇತರ ಸಹೋದರರು ಮತ್ತು ಸಹೋದರಿಯರೊಂದಿಗೆ ಮಾತಾಡಿರಿ. ಅವರು ನಿರಾಶೆಹೊಂದದೆ ವಿಘ್ನಗಳನ್ನು ಜಯಿಸಲು ಹೇಗೆ ಶಕ್ತರಾದರು ಎಂದು ಅವರನ್ನು ಕೇಳಿರಿ. ಅವರ ವೈಯಕ್ತಿಕ ಅನುಭವಗಳು ಬಹುಶಃ ವಿಸ್ತರಿಸಿದ ಶುಶ್ರೂಷೆಯು ಅಪ್ರಾಪ್ಯವಾದದ್ದಾಗಿಲ್ಲ ಎಂಬುದನ್ನು ನಿಮಗೆ ಮನಗಾಣಿಸಲಿಕ್ಕಾಗಿ ನಿರ್ದಿಷ್ಟವಾಗಿ ಅಗತ್ಯವಾಗಿವೆ.
7 ಕ್ಷೇತ್ರ ಸೇವೆಯೊಂದಿಗೆ ಸಂಬಂಧಿಸಿರುವ ಲೇಖನಗಳನ್ನು ನೀವು ಕಾವಲಿನಬುರುಜು ಅಥವಾ ನಮ್ಮ ರಾಜ್ಯದ ಸೇವೆ ಯಲ್ಲಿ ಓದುವಾಗ, ಆ ಸಲಹೆಗಳನ್ನು ನಿಮ್ಮ ಶುಶ್ರೂಷೆಗೆ ಹೇಗೆ ಅನ್ವಯಿಸಬಲ್ಲಿರಿ ಎಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿ. ಸಭಾ ಕೂಟಗಳನ್ನು ಅಥವಾ ಸಮ್ಮೇಳನಗಳನ್ನು ಹಾಜರಾಗುವಾಗಲೂ ಅದೇ ರೀತಿ ಮಾಡಿರಿ. ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಸಲಹೆಗಳು, ಕಳೆದ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಭಾಗವಾಗಿದ್ದ ಒಂದು ಚರ್ಚೆಯ ಮೇಲಾಧಾರಿತವಾಗಿವೆ. ಲೇಖನಗಳ ಸರಣಿಗಳಲ್ಲಿ ಇದು ಪ್ರಥಮವಾಗಿದ್ದು, ಆ ಕಾರ್ಯಕ್ರಮದಿಂದ ಒದಗಿಸಲ್ಪಟ್ಟ ಉತ್ತೇಜನವನ್ನು ಅನ್ವಯಿಸಿಕೊಳ್ಳುವಂತೆ ಮತ್ತು ಅನುಸರಿಸುವಂತೆ ನಮಗೆ ಸಹಾಯಮಾಡಲಿಕ್ಕಾಗಿ ರಚಿಸಲ್ಪಟ್ಟಿದೆ.
8 ತನ್ನ ಶುಶ್ರೂಷೆಯನ್ನು ಪ್ರಧಾನ ಚಿಂತೆಯನ್ನಾಗಿ ಮಾಡುವ ಮೂಲಕ, ಯೇಸು ಅದನ್ನು ಗಂಭೀರವಾಗಿ ವೀಕ್ಷಿಸಿದನು. ಆತನು ಘೋಷಿಸಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ನಾವೂ ಹಾಗೆಯೇ ಭಾವಿಸುತ್ತೇವೊ? ಹಾಗೆ ಭಾವಿಸುವಲ್ಲಿ, ಖಂಡಿತವಾಗಿ ನಾವು ನಮ್ಮ ಚಟುವಟಿಕೆಯನ್ನು ವಿಸ್ತರಿಸಲು ಮತ್ತು ನಮ್ಮ ನಿಕ್ಷೇಪದ ಸಂಗ್ರಹದಿಂದ ‘ಒಳ್ಳೆಯ ವಿಷಯಗಳನ್ನು’ ಇತರರೊಂದಿಗೆ ಹಂಚಲಿಕ್ಕಾಗಿ ಮಾರ್ಗಗಳನ್ನು ಕಂಡುಕೊಳ್ಳುವೆವು.—ಮತ್ತಾ. 12:35; ಲೂಕ 6:45.