ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು
1 ಸತ್ಯಕ್ಕಾಗಿ ಹಸಿದವರಿಗೆ ಮತ್ತು ಬಾಯಾರಿದವರಿಗೆ ಸಹಾಯ ಮಾಡಲಿಕ್ಕಾಗಿ ಹಿಂದಿರುಗುವುದರಲ್ಲಿ ಪ್ರಾಮಾಣಿಕರಾಗಿರುವಂತೆ, ಜನರೆಡೆಗೆ ಪ್ರೀತಿಯು ನಮ್ಮನ್ನು ಪ್ರಚೋದಿಸಬೇಕು. (ಮತ್ತಾ. 5:6) ಆ ಚಿಗುರು ನಿರ್ನಾಮವಾಗುವಂತೆ ನಾವು ಬಯಸುವುದಿಲ್ಲವಾದರೆ, ಕಂಡುಕೊಳ್ಳಬಹುದಾದ ಆಸಕ್ತಿಯ ಯಾವುದೇ ಚಿಗುರನ್ನು ನಾವು ಗಮನಿಸಬೇಕು ಮತ್ತು ಬೆಳೆಸಬೇಕು. ಸಿದ್ಧತೆಯು ಯಶಸ್ವಿಗೆ ಕೀಲಿ ಕೈಯಾಗಿದೆ.
2 ಬೈಬಲ್ ಅಧ್ಯಯನಗಳನ್ನು ಆರಂಭಿಸುವುದೇ ನಮ್ಮ ಗುರಿಯಾಗಿರಬೇಕು. (ಮತ್ತಾ. 28:20) ಸದಾ ಜೀವಿಸಬಲ್ಲಿರಿ ಪುಸ್ತಕದ ಪ್ರಥಮ ಪ್ರತಿಗಳು ಈ ಪೀಠಿಕಾ ಹೇಳಿಕೆಗಳನ್ನು ಒಳಗೊಂಡಿದ್ದವು: “ಎಳೆಯರು ಅಥವಾ ವೃದ್ಧರು—ಅವರ ಶಿಕ್ಷಣದ ಮಟ್ಟವು ಏನೇ ಆಗಿರಲಿ—ಪ್ರತಿಯೊಬ್ಬರೊಂದಿಗೆ ಅಧ್ಯಯನ ಮಾಡುವುದರಲ್ಲಿ ಉಪಯೋಗಿಸಲಿಕ್ಕಾಗಿ ನಿಶ್ಚಯವಾಗಿಯೂ ಇದು ಅತ್ಯುತ್ತಮವಾದ ಪುಸ್ತಕವಾಗಿದೆ.” ಹೊಸ ಪ್ರಚಾರಕರನ್ನೂ ಪಾಲ್ಗೊಳ್ಳುವಂತೆ ಶಕ್ತರನ್ನಾಗಿ ಮಾಡುತ್ತಾ, ಅಧ್ಯಯನಗಳ ನಡೆಸುವಿಕೆಯನ್ನು ಸುಲಭವನ್ನಾಗಿ ಮಾಡುವಂತಹ ವಿಧಾನದಲ್ಲಿ ಅದು ಬರೆಯಲ್ಪಟ್ಟಿದೆ.
3 ಅಧ್ಯಯನಗಳನ್ನು ನಾವು ಹೇಗೆ ಆರಂಭಿಸಬಲ್ಲೆವು?: ನಾವು ಹಿಂದಿರುಗಿದಾಗ, ನಮ್ಮ ಆರಂಭದ ಭೇಟಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಪ್ರಶ್ನೆ ಅಥವಾ ಯಾವುದಾದರೂ ಅಂಶದೊಂದಿಗೆ ನಮ್ಮ ಚರ್ಚೆಯನ್ನು ಭದ್ರಪಡಿಸುವುದು ಸಾಮಾನ್ಯವಾಗಿ ಒಳ್ಳೆಯದಾಗಿದೆ. “ಮರಣಪಟ್ಟಿರುವ ನಮ್ಮ ಪ್ರಿಯ ಜನರಿಗಾಗಿ ಯಾವ ನಿರೀಕ್ಷೆಯಿದೆ?” ಎಂಬ ಪ್ರಶ್ನೆಯನ್ನು ಬಿಡುವ ಮೂಲಕ ಪ್ರಾಯಶಃ ನೀವು ಮೃತರ ಸ್ಥಿತಿಯ ಕುರಿತು ಚರ್ಚಿಸಿದ್ದೀರಿ. ಪುನರುತ್ಥಾನವು ನಿರಾಧಾರವಾದ ನಿರೀಕ್ಷೆಯಾಗಿಲ್ಲ ಎಂಬುದನ್ನು ವಿವರಿಸಿರಿ; ಈಗಾಗಲೆ ಸಂಭವಿಸಿರುವ ಪುನರುತ್ಥಾನಗಳ ಕುರಿತಾದ ಅನೇಕ ಉದಾಹರಣೆಗಳನ್ನು ಬೈಬಲ್ ದಾಖಲಿಸುತ್ತದೆ. ಪುಟಗಳು 167-9 ರಲ್ಲಿರುವ ದೃಷ್ಟಾಂತಗಳನ್ನು ಪುನರ್ವಿಮರ್ಶಿಸಿರಿ. ತದನಂತರ ಪುಟ 166ರ ಪ್ರಾರಗ್ರಾಫ್ಗಳು 1 ಮತ್ತು 2 ರಲ್ಲಿ ವಿವರಿಸಲ್ಪಟ್ಟಿರುವುದನ್ನು ಚರ್ಚಿಸಿರಿ. ಆಸಕ್ತಿಯಿದ್ದಲ್ಲಿ, ಚರ್ಚೆಯನ್ನು ಮುಂದುವರಿಸಲು ಹಿಂದಿರುಗಿ ಬರುವಿರೆಂದು ಹೇಳಿರಿ.
4 ಮಕ್ಕಳನ್ನು ಬೆಳೆಸುವುದರಲ್ಲಿ ಅನುಭವಿಸಲ್ಪಡುವ ಅಧಿಕಗೊಳ್ಳುತ್ತಿರುವ ಸಮಸ್ಯೆಗಳ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದ ಹೆತ್ತವನೊಬ್ಬನೊಂದಿಗೆ ನೀವು ಮಾತಾಡಿದ್ದಿರಬಹುದು. ನಿಮ್ಮ ಸ್ವಂತ ಮಾತುಗಳಲ್ಲಿ ಹೀಗೆ ಏನನ್ನಾದರೂ ನೀವು ಹೇಳಬಹುದು:
▪ “ಎಲ್ಲಾ ಹೆತ್ತವರು ತಮ್ಮ ಮಕ್ಕಳಿಗಾಗಿ ಅತ್ಯುತ್ತಮವಾದುದನ್ನು ಬಯಸುತ್ತಾರೆ. ಅರ್ಥ ಮತ್ತು ಉದ್ದೇಶವನ್ನು ಹೊಂದಿರುವ ಒಂದು ಸಂತೃಪ್ತಿಕರವಾದ ಜೀವನವನ್ನು ಕಂಡುಕೊಳ್ಳಲಿಕ್ಕಾಗಿ ತಮ್ಮ ಮಕ್ಕಳಿಗೆ ತರಬೇತಿ ನೀಡಲು ಹೆತ್ತವರಿಗೆ ಸಹಾಯ ಮಾಡಬಲ್ಲ ಉಪದೇಶವನ್ನು ಬೈಬಲು ಒಳಗೊಂಡಿದೆ. ಆ ಕಾರಣದಿಂದಲೇ ಕುಟುಂಬಗಳು ಬೈಬಲನ್ನು ಒಟ್ಟಾಗಿ ಅಭ್ಯಸಿಸುವಂತೆ ನಾವು ಬಲವಾಗಿ ಶಿಫಾರಸ್ಸು ಮಾಡುತ್ತೇವೆ. [ಪುಟ 246ರ ಪ್ಯಾರಗ್ರಾಫ್ 23ಕ್ಕೆ ನಿರ್ದೇಶಿಸಿರಿ.] ಪಡೆದುಕೊಂಡ ಜ್ಞಾನವು ಇಡೀ ಕುಟುಂಬಕ್ಕೆ ನಿತ್ಯವಾದ ಆಶೀರ್ವಾದಗಳನ್ನು ತರಬಲ್ಲದು.” ಯೋಹಾನ 17:3ನ್ನು ಓದಿರಿ. ಅವರ ಅಧ್ಯಯನವನ್ನು ಹೇಗೆ ಆರಂಭಿಸಬಹುದೆಂಬುದನ್ನು ಕುಟುಂಬಕ್ಕೆ ತೋರಿಸಲಿಕ್ಕಾಗಿ ಹಿಂದಿರುಗುವ ನಿಮ್ಮ ಮನಃಪೂರ್ವಕತೆಯನ್ನು ವ್ಯಕ್ತಪಡಿಸಿರಿ.
5 ನೀವು ಒಬ್ಬ ಎಳೆಯ ಅಥವಾ ಹೊಸ ಪ್ರಚಾರಕರಾಗಿರುವುದಾದರೆ ಮತ್ತು ಪ್ರಥಮ ಭೇಟಿಯಲ್ಲಿ ಪ್ರಮೋದವನ ನಿರೀಕ್ಷೆಯ ಕುರಿತು ನೀವು ಸಂಕ್ಷಿಪ್ತವಾಗಿ ಮಾತಾಡಿರುವುದಾದರೆ, ಆ ಪುಸ್ತಕವನ್ನು ಪುಟ 3ಕ್ಕೆ ತೆರೆಯುವುದರೊಂದಿಗೆ, ಹೀಗೆ ಏನನ್ನಾದರೂ ವ್ಯಕ್ತಪಡಿಸಿರಿ:
▪ “ದೇವರ ಚಿತ್ತವನ್ನು ಮಾಡುವವರು, ಸಂತೋಷ ಮತ್ತು ಶಾಂತಿ ಇರುವ ಇಂತಹ ಒಂದು ಲೋಕದಲ್ಲಿ ಜೀವಿಸಲಿಕ್ಕಾಗಿ ಎದುರುನೋಡಬಲ್ಲರು ಎಂದು ಬೈಬಲ್ ವಾಗ್ದಾನಿಸುತ್ತದೆ. ಆ ಆಶೀರ್ವಾದವನ್ನು ಅನುಭವಿಸಲಿಕ್ಕಾಗಿ ನಾವು ಏನು ಮಾಡಬೇಕೆಂಬುದನ್ನು ಈ ಪುಸ್ತಕವು ತೋರಿಸುತ್ತದೆ.” ನಮ್ಮ ಅಧ್ಯಯನದ ಕಾರ್ಯವಿಧಾನವನ್ನು ಸಂಕ್ಷಿಪ್ತವಾಗಿ ವಿವರಿಸಿರಿ, ಮತ್ತು ಅದನ್ನು ಪ್ರತ್ಯಕ್ಷಾಭಿನಯಿಸಲು ಸಿದ್ಧರಿದ್ದೀರೆಂದು ಹೇಳಿರಿ.
6 ಯೇಸುವಿನ ಶಿಷ್ಯರೋಪಾದಿ, ಜನರಿಗೆ ಸಹಾಯ ಮಾಡುವ ಹಂಗು ನಮಗಿದೆ. (ರೋಮಾ. 10:14) ನಾವು ಸಾಹಿತ್ಯವನ್ನು ನೀಡಿದ್ದರೆ ಅಥವಾ ಕೇವಲ ಒಂದು ಒಳ್ಳೆಯ ಸಂಭಾಷಣೆಯನ್ನು ಮಾಡಿರುವುದಾದರೆ, ಆಸಕ್ತಿಯನ್ನು ಬೆಳೆಸುವ ಒಂದು ಜವಾಬ್ದಾರಿಯು ನಮಗಿದೆ. (ಮತ್ತಾ. 9:37, 38) ಈ ನೇಮಕವನ್ನು ನಾವು ಸರಿಯಾಗಿ ನೆರವೇರಿಸುವುದಾದರೆ, ಅದರಿಂದ ಫಲಿಸುವ ಆಶೀರ್ವಾದಗಳನ್ನು ಎಲ್ಲರೂ ಹಂಚಿಕೊಳ್ಳಬಲ್ಲೆವು.—1 ತಿಮೊ. 4:16.