ಇತರರಿಗೆ ಪ್ರಯೋಜನವಾಗುವಂತೆ ಎಲ್ಲಾ ಆಸಕ್ತಿಯನ್ನು ಅನುಸರಿಸಿಕೊಂಡು ಹೋಗಿ
1 ನಾವು ಒಬ್ಬ ವ್ಯಕ್ತಿಯನ್ನು ಪುನಃ ಭೇಟಿಯಾಗಬೇಕೋ ಇಲ್ಲವೊ ಎಂದು ನಿರ್ಧರಿಸಲು ನಮಗೆ ಸಹಾಯ ಮಾಡುವ ಮುಖ್ಯ ಅಂಶವು ಯಾವುದು? ಆಸಕ್ತಿ! ಯಾವಾಗಲಾದರೂ ಒಬ್ಬನು ರಾಜ್ಯ ಸಂದೇಶದಲ್ಲಿ ಕೊಂಚ ಆಸಕ್ತಿಯನ್ನು ತೋರಿಸಿದರೂ, ಆ ವ್ಯಕ್ತಿಯು ಪ್ರಯೋಜನ ಪಡೆದುಕೊಳ್ಳುವಂತೆ ನಮಗೆ ಸಾಧ್ಯವಿರುವುದೆಲವ್ಲನ್ನು ಮಾಡಲು ನಾವು ಬಯಸುತ್ತೇವೆ. ಆದುದರಿಂದ ವ್ಯಕ್ತಿಯ ಆಸಕ್ತಿಯನ್ನು ಬೆಳೆಸುವ ಮತ್ತು ಒಂದು ಮನೆ ಬೈಬಲಧ್ಯಯನವನ್ನು ಆರಂಭಿಸುವ ಉದ್ದಿಶ್ಯದೊಂದಿಗೆ ನಾವು ಪುನರ್ಭೇಟಿಗಳನ್ನು ಮಾಡುತ್ತೇವೆ. ನಾವು ಸಾಹಿತ್ಯವನ್ನು ಬಿಟ್ಟುಹೋಗದಿರುವಾಗಲೂ ಇದು ನಮ್ಮ ಗುರಿಯಾಗಿರುತ್ತದೆ. ಇದನ್ನು ಹೇಗೆ ಮಾಡಸಾಧ್ಯವಿದೆ?
2 ನಿಮ್ಮ ಹಿಂದಿನ ಸಂಭಾಷಣೆಯು, ಇಂದು ವಿವಾಹ ಸಮಸ್ಯೆಗಳ ಪ್ರಚಲಿತತೆಯ ಕುರಿತಾಗಿ ಇದ್ದಲ್ಲಿ ಮತ್ತು ನೀವು “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ಬಿಟ್ಟುಹೋಗಿರುವಲ್ಲಿ, ನೀವು ನಿಮ್ಮ ಸಂಭಾಷಣೆಯನ್ನು ಈ ರೀತಿಯಲ್ಲಿ ಆರಂಭಿಸಬಹುದು:
◼ “ನನ್ನ ಹಿಂದಿನ ಭೇಟಿಯಲ್ಲಿ, ನಾವು ವಿವಾಹ ಮತ್ತು ನಮಗೆ ಹೆಚ್ಚು ಮಹತ್ತಾದ ಸಂತೋಷವನ್ನು ಕಂಡುಹಿಡಿಯಲು ಸಹಾಯ ಮಾಡಬಲ್ಲ ವ್ಯಾವಹಾರಿಕ ಬೈಬಲ್ ಸಲಹೆಯ ಕುರಿತಾಗಿ ಮಾತಾಡಿದ್ದೆವು. ಅತ್ಯುತ್ತಮ ಕುಟುಂಬಗಳಲ್ಲಿಯೂ, ಕೆಲವೊಮ್ಮೆ ಸಮಸ್ಯೆಗಳು ಏಳುತ್ತವೆಂಬುದು ಸತ್ಯವಲ್ಲವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕೌಟುಂಬಿಕ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ನಮಗೆ ಸಹಾಯ ಮಾಡಬಲ್ಲ ಉತ್ಕೃಷ್ಟ ಸಲಹೆಯನ್ನು ಬೈಬಲ್ ನಮಗೆ ಕೊಡುತ್ತದೆ. ಬೈಬಲನ್ನು ಜೊತೆಯಾಗಿ ಅಧ್ಯಯನಿಸುವ ಮೂಲಕ ಒಂದು ಕುಟುಂಬವು ಆಶೀರ್ವದಿಸಲ್ಪಡಸಾಧ್ಯವಿದೆ.” ಪುಟ 246ಕ್ಕೆ ತಿರುಗಿಸಿರಿ, ಮತ್ತು ಪ್ಯಾರಗ್ರಾಫ್ 23ನ್ನು ಚರ್ಚಿಸಿರಿ. ಯೋಹಾನ 17:3ನ್ನು ಓದಿರಿ, ಮತ್ತು ಬೈಬಲನ್ನು ಮನೆಯಲ್ಲಿ ಅಧ್ಯಯನಿಸಲು ಕುಟುಂಬಕ್ಕೆ ಸಹಾಯ ಮಾಡುವುದರಲ್ಲಿ ನಿಮ್ಮ ನೆರವನ್ನು ನೀಡಿರಿ.
3 ಮಕ್ಕಳು ಮತ್ತು ತರಬೇತಿಗಾಗಿರುವ ಅವರ ಆವಶ್ಯಕತೆಯ ಕುರಿತಾಗಿ ನೀವು ಮಾತಾಡಿದ್ದಲ್ಲಿ, ನೀವು ಚರ್ಚೆಯನ್ನು ಈ ರೀತಿಯಲ್ಲಿ ಮುಂದುವರಿಸಬಹುದು:
◼ “ಈ ಮುಂಚೆ ನಾವು, ಮಕ್ಕಳಿಗೆ ಅವಶ್ಯವಿರುವ ಆತ್ಮಿಕ ತರಬೇತಿ ಮತ್ತು ಹೆತ್ತವರು ಅವರಿಗೆ ಹೇಗೆ ಸಹಾಯ ನೀಡಬಲ್ಲರೆಂಬುದರ ಕುರಿತಾಗಿ ಮಾತಾಡಿದ್ದೆವು. ನಾನು ಮಾತಾಡಿದಂತಹ ಹೆತ್ತವರಲ್ಲಿ ಹೆಚ್ಚಿನವರು ಇಂದು ಅನೇಕ ಯುವ ಜನರ ಕೆಟ್ಟ ನಡತೆಯ ಕುರಿತಾಗಿ ಗಾಬರಿಗೊಂಡಿದ್ದಾರೆ. ನೀವು . . . ಕುರಿತಾಗಿ ಏನು ನೆನಸುತ್ತೀರಿ? [ನಿಮ್ಮ ಸಮುದಾಯದಲ್ಲಿ ಅನೇಕವೇಳೆ ಗಮನಿಸಲ್ಪಟ್ಟಿರುವ ಹರೆಯದ ಅಯೋಗ್ಯ ವರ್ತನೆಯ ಒಂದು ಉದಾಹರಣೆಯನ್ನು ತಿಳಿಸಿರಿ. ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನಲ್ಲಿ ಕೊಡಲ್ಪಟ್ಟಿರುವ ವ್ಯಾವಹಾರಿಕ ಸಲಹೆಯಲ್ಲಿ ಕೆಲವನ್ನು ನಿಮಗೆ ತೋರಿಸಲು ನನ್ನನ್ನು ಅನುಮತಿಸಿರಿ.” ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟ 246 ರಲ್ಲಿರುವ ಪ್ಯಾರಗ್ರಾಫ್ 22ಕ್ಕೆ ತಿರುಗಿಸಿರಿ, ಮುಖ್ಯ ವಿಷಯವನ್ನು ಚರ್ಚಿಸಿರಿ, ಮತ್ತು ಎಫೆಸ 6:4ನ್ನು ಓದಿರಿ. ಹೆಚ್ಚಿನ ಮಕ್ಕಳಿಗೆ ನಿಜವಾಗಿ ಶಿಸ್ತು ಮತ್ತು ಮಾರ್ಗದರ್ಶನೆ ಬೇಕಾಗಿದೆಯೆಂಬುದನ್ನು ತೋರಿಸಿರಿ. ಅದನ್ನು ಒದಗಿಸುವುದರಲ್ಲಿ ಹೆತ್ತವರು ಶ್ರದ್ಧೆಯುಳ್ಳವರಾಗಿರುವಾಗ, ಮಕ್ಕಳು ಹೆಚ್ಚು ಸಂತೋಷಿತರು ಮತ್ತು ತಮ್ಮ ನಡತೆಯಲ್ಲಿ ಹೆಚ್ಚು ಗೌರವಪೂರ್ಣರೂ ಆಗಿರುತ್ತಾರೆ. ನಮ್ಮ ಮಕ್ಕಳೊಂದಿಗೆ ನಾವು ಬೈಬಲನ್ನು ಅಧ್ಯಯನಿಸುವ ವಿಧವನ್ನು ವಿವರಿಸಿರಿ.
4 ನಿಮ್ಮ ಸಂಭಾಷಣೆಯ ವಿಷಯವು ಪ್ರಮೋದವನ ಭೂಮಿಯಾಗಿದ್ದಲ್ಲಿ, ಆಸಕ್ತಿಯನ್ನು ಪುನಃ ಕೆರಳಿಸಲು ನೀವು ಇದನ್ನು ಹೇಳಬಹುದು:
◼ “ದೇವರು ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡುವಾಗ ಭೂಮಿಯು ಹೇಗಿರುವುದೆಂದು ನಮಗೆ ತೋರಿಸಿದಂತಹ ಕೆಲವು ಚಿತ್ರಗಳನ್ನು ನಾವು ಈ ಪುಸ್ತಕದಲ್ಲಿ ನೋಡಿದ್ದೆವು. ನಾವು ಅದನ್ನು ನಮ್ಮ ಪ್ರಿಯ ಜನರೊಂದಿಗೆ ಅನುಭೋಗಿಸಲು ಸಾಧ್ಯವಿಲ್ಲದಿದ್ದರೆ ಇದು ನಮಗೆ ಕೊಂಚವೇ ಅರ್ಥದಲ್ಲಿರುವುದು. ನೀವು ಒಪ್ಪುವುದಿಲ್ಲವೇ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟ 162ಕ್ಕೆ ತಿರುಗಿಸಿರಿ. ಪ್ರಕಟನೆ 21:3, 4ನ್ನು ಓದಿರಿ, ಮತ್ತು ನಮ್ಮ ಪ್ರಿಯ ಜನರು ನಮ್ಮೊಂದಿಗೆ ಹೇಗೆ ಯಾವಾಗಲೂ ಇರಬಲ್ಲರು ಎಂಬುದನ್ನು ವಿವರಿಸಿರಿ. ಒಳ್ಳೇ ಪ್ರತಿಕ್ರಿಯೆಯು ಇರುವಲ್ಲಿ, ಸತ್ತವರು ಜೀವಿತಕ್ಕೆ ಹಿಂದಿರುಗುವರೆಂದು ತೋರಿಸಲು ಯೋಹಾನ 5:28, 29ನ್ನು ಓದಿರಿ. ಪುಸ್ತಕದ ಮುಖಪುಟವನ್ನು ತೋರಿಸುತ್ತಾ ಹೇಳಿರಿ: “ಇದು ನಿಜವಾಗಿಯೂ ಸತ್ಯ—ನಾವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲೆವು!” ಅದು ಸಮೀಪವಿದೆಯೆಂದು ನಮಗೆ ಏಕೆ ತಿಳಿದಿದೆಯೆಂಬುದನ್ನು ಚರ್ಚಿಸಲು ಇನ್ನೊಂದು ಭೇಟಿಗಾಗಿ ಏರ್ಪಡಿಸಿರಿ.
5 ರಾಜ್ಯ ಸಂದೇಶದಿಂದ ಆಸಕ್ತ ವ್ಯಕ್ತಿಗಳು ಪ್ರಯೋಜನ ಹೊಂದುವಂತೆ ಸಹಾಯ ಮಾಡುವುದು, ಒಂದು ಪುನರ್ಭೇಟಿಯ ಮುಖ್ಯ ಉದ್ದೇಶವಾಗಿದೆ. ಆತ್ಮಿಕ ವಿಷಯಗಳಿಗಾಗಿರುವ ಅವರ ಹಸಿವನ್ನು ಕೆರಳಿಸಲು ಹೆಚ್ಚಿನ ಜನರಿಗೆ ಒಂದು ಪ್ರಚೋದಕದ ಅಗತ್ಯವಿದೆ. ಸಾಹಿತ್ಯದಲ್ಲಿರುವ ವ್ಯಾವಹಾರಿಕ ಮೌಲ್ಯದ ನಿರ್ದಿಷ್ಟ ವಿಷಯಗಳಿಗೆ ಅವರ ಗಮನವನ್ನು ನಿರ್ದೇಶಿಸುತ್ತಾ, ಅದು ಅವರಿಗೆ ಬೈಬಲನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಹೇಗೆ ಸಹಾಯ ಮಾಡಬಲ್ಲದೆಂದು ಒತ್ತಿಹೇಳಿರಿ. ಈ ಗುರಿಗಳನ್ನು ಪೂರೈಸುವ ಪುನರ್ಭೇಟಿಗಳು, ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ತಮ್ಮನ್ನು ಪ್ರಯೋಜನ ಪಡಿಸಿಕೊಳ್ಳಲು ಇತರರಿಗೆ ಸಹಾಯ ಮಾಡುವುವು.