ನೀವು ಕಾಳಜಿ ವಹಿಸುತ್ತೀರೆಂದು ಪುನರ್ಭೇಟಿಗಳನ್ನು ಮಾಡುವ ಮೂಲಕ ತೋರಿಸಿರಿ
1 ಒಂದು ಮನೇಬಾಗಲಿಂದ ಇನ್ನೊಂದು ಮನೇಬಾಗಲಿಗೆ ಆಸಕ್ತರಿಗಾಗಿ ಹುಡುಕುವುದು, ಇತರರಿಗೆ ರಾಜ್ಯದ ಸಂದೇಶವನ್ನು ಆಲಿಸಲು ಒಂದು ಅವಕಾಶವನ್ನು ಕೊಡುವ ನಿಮ್ಮ ಆಶೆಯನ್ನು ಪ್ರದರ್ಶಿಸುತ್ತದೆ. ಆದುದರಿಂದ ಜನವರಿ ತಿಂಗಳಲ್ಲಿ ನೀವು ನೀಡಿರುವ ಸಾಹಿತ್ಯಗಳನ್ನು ಅನುಸರಿಸಿ ಹೋಗಲು ಖಚಿತಮಾಡಿಕೊಳ್ಳಿರಿ, ಏಕೆಂದರೆ ನೀವು ಇತರರ ಕುರಿತು ಕಾಳಜಿ ವಹಿಸುತ್ತೀರೆಂದು ತೋರಿಸಲು ಇದೊಂದು ಒಳ್ಳೆಯ ವಿಧವಾಗಿದೆ.
2 “ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು” ಪುಸ್ತಕದ ನಿಮ್ಮ ಕೊಡಿಕೆಗಳನ್ನು ಅನುಸರಿಸಲು ಇಲ್ಲೊಂದು ಸಲಹೆಯಿದೆ:
▪ “ನಾವೆಲ್ಲರೂ ಸುವಾರ್ತೆಯನ್ನು ಪಡೆಯಲು ಇಷ್ಟಪಡುತ್ತೇವೆ. ನಿಜವಾದ ಸುವಾರ್ತೆಯು ಲೋಕದಲ್ಲಿ ದುರ್ಲಭ್ಯವೆಂದು ಅನೇಕರಿಗೆ ಅನಿಸುತ್ತದೆ. ನಿಮಗೆ ಅದರ ಕುರಿತಾಗಿ ಹೇಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸುವಾರ್ತೆಯು ನಮ್ಮನ್ನು ಗೆಲವಾಗಿಸಬಲ್ಲದು ಮತ್ತು ನಮ್ಮಲ್ಲಿ ಹುರುಪನ್ನು ತುಂಬಿಸಬಲ್ಲದೆಂದು ನಮಗೆಲ್ಲರಿಗೆ ತಿಳಿದಿದೆ. ಭವಿಷ್ಯತ್ತಿನ ಕುರಿತಾದ ಮಾಹಿತಿಯ ಭರವಸಯುಕ್ತವಾದ ಏಕಮಾತ್ರ ಮೂಲವಾಗಿರುವ ಬೈಬಲಿನಲ್ಲಿ ಅತ್ಯುತಮವ್ತಾದ ಸಮಾಚಾರವನ್ನು ಕಂಡುಕೊಳ್ಳಬಹುದು. [7-9 ಪುಟಗಳ ಮೇಲೆ ಉಲ್ಲೇಖಿಸಲಾಗಿರುವ ಶಾಸ್ತ್ರವಚನಗಳ ಕಡೆಗೆ ನಿರ್ದೇಶಿಸಿರಿ.] ಅಂಥ ಪರಿಸ್ಥಿತಿಗಳು ಬೇಗನೇ ಬರಲಿವೆಯೆಂದು ನಿಮಗೆ ರುಜುಪಡಿಸಲು ನಾವು ಒಂದು ಅವಕಾಶವನ್ನು ಬಯಸುತ್ತೇವೆ.” ಈ ಪುಸ್ತಕದ ಸಹಾಯದೊಂದಿಗೆ ಬೈಬಲಿನ ಅಭ್ಯಾಸವು ಮನೆಯವನಿಗೆ ಈ ವಾಗ್ದಾನಗಳ ಮೇಲೆ ನಂಬಿಕೆಯನ್ನಿಡಲು ಒಂದು ಆಧಾರವಿರಲು ಶಕ್ತರನ್ನಾಗಿ ಮಾಡುವದೆಂದು ವಿವರಿಸಿರಿ.
3 “ನಿನ್ನ ರಾಜ್ಯವು ಬರಲಿ” ಪುಸ್ತಕವನ್ನು ನೀವು ನೀಡಿರುವದಾದರೆ, ನಿಮ್ಮ ಸಂಭಾಷಣೆಯನ್ನು ಈ ರೀತಿಯಲ್ಲಿ ಪುನಃ ಆರಂಭಿಸಲು ನೀವು ಪ್ರಯತ್ನಿಸಬಲ್ಲಿರಿ:
▪ “ಈ ಮುಂಚೆ ನಾವು ದೇವರ ರಾಜ್ಯದ ಕುರಿತಾಗಿ ಮತ್ತು ಅದು ನಮಗಾಗಿ ಏನು ಮಾಡಲಿದೆಯೆಂಬದರ ಕುರಿತಾಗಿ ಮಾತಾಡಿದೆವು. ಆ ರಾಜ್ಯವು ಬೇಗನೇ ಈ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡುವುದು. ನಾವು ಎಂದೂ ಪ್ರಮೋದವನವೊಂದನ್ನು ನೋಡಿರದ ಕಾರಣ, ಅದನ್ನು ಚಿತ್ರಿಸಿಕೊಳ್ಳುವುದು ಕಷವಾಗ್ಟಿರಬಹುದು. ಅದು ಸಾಧಾರಣ ಹೀಗೆ ತೋರಬಹುದು. [4 ಮತ್ತು 5 ನೇ ಪುಟಗಳಲ್ಲಿರುವ ಚಿತ್ರಕ್ಕೆ ಸೂಚಿಸಿರಿ.] ಇಂತಹ ಒಂದು ಪ್ರಮೋದವನವು ಬೈಬಲಿನಲ್ಲಿ ವಾಗ್ದಾನಿಸಲ್ಪಟ್ಟಿದೆ.” ಕೀರ್ತನೆ 72:7ನ್ನು ಓದಿರಿ. ಆಸಕ್ತಿಯಿರುವದಾದರೆ, ಪುಟ 175, ಪ್ಯಾರಗ್ರಾಫ್ 3 ಮತ್ತು 4ಕ್ಕೆ ತಿರುಗಿಸಿರಿ ಮತ್ತು ಬರಲಿರುವ ಪ್ರಮೋದವನದಲ್ಲಿ ನಾವು ಜೀವಿಸಬೇಕಾದರೆ ನಾವೇನು ಮಾಡಬೇಕೆಂದು ತೋರಿಸಿರಿ.
4 “ನಿಜ ಶಾಂತಿ ಮತ್ತು ಭದ್ರತೆ—ಯಾವ ಮೂಲದಿಂದ?” ಎಂಬ ಪುಸ್ತಕದ ಕೊಡಿಕೆಯನ್ನು, ಇಂಥದೊಂದು ಸಂಕ್ಷಿಪ್ತ ನಿರೂಪಯಿಂದ ಅನುಸರಿಸಬಹುದು:
▪ “ಇಂದು ಲೋಕದ ಧುರೀಣರು ಶಾಂತಿ ಮತ್ತು ಭದ್ರತೆಯನ್ನು ತರಲು ಅಶಕ್ತರಾಗಿದ್ದಾರೆ. ಅದನ್ನು ಮಾಡಶಕ್ತನಾಗಿರುವವನು ಕೇವಲ ಯೆಹೋವ ದೇವರೊಬ್ಬನೇ. ನಾವೇನು ಮಾಡುವ ಅಗತ್ಯವಿದೆಯೆಂದು ಬೈಬಲು ನಮಗೆ ತೋರಿಸುತ್ತದೆ. [ಅಧ್ಯಾಯ 9ಕ್ಕೆ ತಿರುಗಿಸಿರಿ ಮತ್ತು ಬೈಬಲಿನ ವಾಗ್ದಾನಗಳಲ್ಲಿ ಭರವಸೆಗಾಗಿ ಒಂದು ಸ್ಥಿರವಾದ ಆಧಾರವಿದೆಯೆಂದು ತೋರಿಸಿರಿ.] ಈ ಪುಸ್ತಕವು ನಿಮಗೆ ಹೇಗೆ ಸಹಾಯ ಮಾಡಬಲ್ಲದೆಂದು ನಾನು ನಿಮಗೆ ತೋರಿಸಲು ಇಷ್ಟಪಡುತ್ತೇನೆ.”
5 “ಇರುವುದು ಈ ಜೀವಿತ ಮಾತ್ರವೂ?” ಪುಸ್ತಕದ ಕೊಡಿಕೆಯನ್ನು ಈ ಸೂಚನೆಯೊಂದಿಗೆ ನೀವು ಅನುಸರಿಸಲು ಶಕ್ತರಾಗಬಹುದು:
▪ “ಈ ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯನ್ನು ನೀಡುವ ಪುಸ್ತಕದ ಒಂದು ಪ್ರತಿಯನ್ನು ನಾನು ನಿಮಗೆ ಈ ಮುಂಚೆ ಬಿಟ್ಟುಹೋಗಿದ್ದೆ. ಈ ಪುಸ್ತಕವನ್ನು ಅವಲೋಕಿಸಿದ ನಂತರ, ನೀವು ಯಾವ ಸಮಾಪ್ತಿಗೆ ಬಂದಿದ್ದೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮರಣದ ಭಯವಿಲ್ಲದೆ ನಾವು ಜೀವಿಸಬಹುದಾದ ಒಂದು ಪ್ರಮೋದವನ ಹೊಸ ಲೋಕದ ವಾಗ್ದಾನವನ್ನು ಕೊಡುವ ಭಾಗಗಳನ್ನು ಓದುವದರಿಂದ ನೀವು ಬಹುಶಃ ಉತ್ತೇಜಿಸಲ್ಪಟ್ಟಿರಬಹುದು. [ಅಧ್ಯಾಯ 16ಕ್ಕೆ ಪುಸ್ತಕವನ್ನು ತೆರೆಯಿರಿ ಮತ್ತು ಪುಟ 137 ರಲ್ಲಿರುವ ಉಪಶೀರ್ಷಿಕೆಯ ಕಡೆಗೆ ನಿರ್ದೇಶಿಸಿರಿ. ಯೆಶಾಯ 25:8 ನ್ನು ಓದಿರಿ.] ನೀವು ಮತ್ತು ನಿಮ್ಮ ಪ್ರಿಯ ಜನರು ಇಂಥ ಒಂದು ಲೋಕದಲ್ಲಿ ಜೀವಿಸಲು ಇಷ್ಟಪಡುವಿರಿ ಎಂದು ನನಗೆ ನಿಶಯವ್ಚಿದೆ. ಪುಟ 143 ರಲ್ಲಿರುವ ಮೊದಲ ಪ್ಯಾರಗ್ರಾಫ್ನಲ್ಲಿ ಇದರ ಕುರಿತಾಗಿ ಏನು ಹೇಳಲಾಗಿದೆಯೆಂದು ಗಮನಿಸಿರಿ.” ಪ್ಯಾರಗ್ರಾಫ್ನ್ನು ಓದಿರಿ, ಮತ್ತು ಯೆಹೋವನಿಗಾಗಿ ಹುಡುಕುವದೆಂದರೆ ಆತನ ವಾಕ್ಯವಾದ ಬೈಬಲನ್ನು ಅಭ್ಯಾಸಿಸುವದರಿಂದ ಆತನ ಕುರಿತಾಗಿ ಮತ್ತು ಆತನ ಉದ್ದೇಶಗಳ ಕುರಿತಾಗಿ ಹೆಚ್ಚನ್ನು ಕಲಿಯುವುದು ಎಂದರ್ಥ ಎಂಬದಾಗಿ ತೋರಿಸಿರಿ.
6 ತನ್ನ ಕುರಿಗಳ ಕಾಳಜಿ ವಹಿಸುವ ಒಬ್ಬ ಪ್ರೀತಿಯುಳ್ಳ ಕುರುಬನೋಪಾದಿ ಯೆಹೋವನು ಒಂದು ಪರಿಪೂರ್ಣ ಮಾದರಿಯನ್ನಿಟ್ಟಿದ್ದಾನೆ. (ಯೆಹೆ. 34:11-14) ಆತನ ಪ್ರೀತಿಯುಕ್ತ ಪರಾಮರಿಸುವಿಕೆಯನ್ನು ಅನುಕರಿಸಲು ನಮ್ಮ ಯಥಾರ್ಥ ಪ್ರಯತ್ನವು ಆತನನ್ನು ಮೆಚ್ಚಿಸುತ್ತದೆ, ನಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತದೆ ಮತ್ತು ಇತರರಿಗೆ ಆಶೀರ್ವಾದಗಳನ್ನು ತರುತ್ತದೆ.