ನಾವು ಹೊಂದಿರುವಂತಹ ವಿಷಯಗಳಿಗಾಗಿ ಕೃತಜ್ಞರು
1 “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾ. 5:8) ನಮ್ಮ ಪರವಾಗಿ ಯೆಹೋವ ದೇವರು ಮತ್ತು ಆತನ ಪುತ್ರನಿಂದ ಮಾಡಲ್ಪಟ್ಟ ಅತ್ಯುಚ್ಛ ತ್ಯಾಗಕ್ಕಾಗಿ ನಾವೆಲ್ಲರು ಎಷ್ಟು ಕೃತಜ್ಞತೆಯುಳ್ಳವರಾಗಿರಬೇಕು! ಯೇಸುವಿನ ಸುರಿದ ರಕ್ತದ ಮೂಲಕ, ಯಾವ ಮಾನವನೂ ನಮಗೆ ಕೊಡಲಾರದ, ನಿತ್ಯ ಜೀವದ ಅವಕಾಶವು ನಮಗೆ ಕೊಡಲ್ಪಟ್ಟಿದೆ.
2 ನಮ್ಮ ಗಣ್ಯತೆಯನ್ನು ನಾವು ಹೇಗೆ ತೋರಿಸಬಲ್ಲೆವು? ದೇವರ ಪವಿತ್ರ ವಾಕ್ಯವೊಂದರಲ್ಲೇ ಕಂಡುಕೊಳ್ಳಬಹುದಾದ ಸತ್ಯ ಜ್ಞಾನಕ್ಕಾಗಿ ಬಾಯಾರುತ್ತಿರುವ ಅನೇಕ ಜನರಿದ್ದಾರೆ. ಅವರು ಸತ್ಯದ ಜ್ಞಾನಕ್ಕೆ ಬರಬೇಕೆಂಬದು ಯೆಹೋವನ ಚಿತ್ತವಾಗಿದೆ. (1 ತಿಮೊ. 2:4) ‘ದೇವರ ರಾಜ್ಯದ ಸುವಾರ್ತೆಯನ್ನು ಸಾರಿಹೇಳುವ’ ಮೂಲಕ ನಾವು ಸತ್ಯಕ್ಕಾಗಿರುವ ನಮ್ಮ ಗಣ್ಯತೆಯನ್ನು ತೋರಿಸುತ್ತೇವೆ. (ಲೂಕ 4:43) ಕ್ರಿಸ್ತನು ನಮಗಾಗಿ ಸತ್ತದ್ದನ್ನು ನಾವು ಗಣ್ಯಮಾಡುತ್ತೇವೆಂದು ಮತ್ತು ಇತರರನ್ನು ಶಿಷ್ಯರನ್ನಾಗಿ ಮಾಡುವ ಆತನ ಆಜೆಗ್ಞೆ ನಂಬಿಗಸ್ತರಾಗಿ ವಿಧೇಯರಾಗುವ ಮೂಲಕ ನಾವಾತನನ್ನು ಅನುಕರಿಸಲು ಬಯಸುತ್ತೇವೆಂದು ಈ ಕೆಲಸದಲ್ಲಿ ಪೂರ್ಣಹೃದಯದ ಭಾಗವಹಿಸುವಿಕೆಯು ತೋರಿಸುತ್ತದೆ.—ಮತ್ತಾ. 28:19, 20.
3 ನಮಗೆ ತೆರೆದಿರುವ ಸಾರುವಿಕೆಯ ಕೆಲವು ದಾರಿಗಳಾವುವು? ಆಗಿಂದಾಗ್ಗೆ ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವುದು ನಮಗೆ ಸಾಧ್ಯವೋ? ಕಷ್ಟನಷ್ಟ ಗುಣಿಸಿಯಾದ ನಂತರ, ಕೆಲವರು ಕ್ರಮದ ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಬಹುದು. ಈ ಉತ್ತಮ ಅವಕಾಶಗಳ ಲಾಭವನ್ನು ತೆಗೆದುಕೊಳ್ಳುವ ಮೂಲಕ, ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ನಾವು ಕಳೆಯುವ ಸಮಯವನ್ನು ಹೆಚ್ಚಿಸಬಲ್ಲೆವು. ಗತ ಕಾಲಗಳಲ್ಲಿ ನೀವು ಪಯನೀಯರರಾಗಿ ನಮೂದಿಸಿಕೊಳ್ಳಲು ಯೋಚಿಸಿದಿರ್ದಬಹುದು, ಆದರೆ ಅಡಚಣೆಗಳಿದ್ದವು. ಪ್ರಾಯಶಃ ನಿಮ್ಮ ಪರಿಸ್ಥಿತಿಗಳು ಬದಲಾಗಿವೆ. ಹಾಗಿದ್ದಲ್ಲಿ, ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸುವ ಅಥವಾ ಒಬ್ಬ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸುವದರ ಕುರಿತಾಗಿ ನೀವು ಗಂಭೀರವಾಗಿ ಆಲೋಚಿಸಿದ್ದೀರೋ?
4 ನಮ್ಮ ಸುತ್ತಲೂ ಏನು ನಡೆಯುತ್ತಾ ಇದೆಯೋ ಅದನ್ನು ನೋಡುವಾಗ ನಮ್ಮ ಕೃತಜ್ಞತೆಯು ಇನ್ನೂ ಹೆಚ್ಚು ಗಾಢವಾಗುತ್ತದೆ. ಲೋಕವ್ಯಾಪಕವಾಗಿ, ಹೆಚ್ಚುತ್ತಿರುವ ಹಿಂಸೆ, ದ್ವೇಷ ಮತ್ತು ಕಲಹವಿದೆ. ನಮ್ಮ ಸಮಯಗಳನ್ನು ಪೌಲನು “ನಿಭಾಯಿಸಲು ಕಷ್ಟಕರವಾಗಿರುವ” “ಕಠಿನಕಾಲ”ಗಳೆಂದು ಚೆನ್ನಾಗಿಯೇ ವರ್ಣಿಸಿದನು. (2 ತಿಮೊ. 3:1, NW) ಈ ಸಂಕಟಮಯ ಪರಿಸ್ಥಿತಿಗಳ ಮಧ್ಯೆ, ಇತರರೊಂದಿಗೆ ಹಂಚಲು ನಮ್ಮಲ್ಲಿ ಹೇರಳವಾದ ಸುವಾರ್ತೆಯಿದೆ. ಕಾವಲಿನಬುರುಜು ಮತ್ತು ಎಚ್ಚರ! ಎಂಬ ಎರಡು ಶ್ರೇಷ್ಠ ಪತ್ರಿಕೆಗಳು ನಮ್ಮಲ್ಲಿವೆ. ಈ ತಿಂಗಳು ನಾವು ಬಿಡಿ ಪ್ರತಿಗಳನ್ನು ಅಥವಾ ಚಂದಾಗಳನ್ನು ನೀಡಬಹುದು. ಹಲವಾರು ವಿಷಯಗಳ ಮೇಲೆ ನಮ್ಮಲ್ಲಿ ಬ್ರೋಷರ್ಗಳು ಕೂಡ ಇವೆ. ಅವುಗಳನ್ನು ಓದುವವರಿಗೆ ಈ ಪ್ರಕಾಶನಗಳು ನಿಜವಾದ ಚೈತನ್ಯವನ್ನು ತರಬಲ್ಲವು. ನಾವೇನನ್ನು ಹೊಂದಿದ್ದೇವೋ ಅದಕ್ಕಾಗಿ ಕೃತಜ್ಞತೆಯು, ಅದನ್ನು ಇತರರೊಂದಿಗೆ ಹಂಚುವದರಲ್ಲಿ ಉದಾರ ಮನಸ್ಸಿನವರಾಗಿರುವಂತೆ ನಮ್ಮನ್ನು ಪ್ರಚೋದಿಸಬೇಕು.—ಇಬ್ರಿ. 13:16.
5 ನೀವು ಜೀವಿಸುತ್ತಿರುವ ಕ್ಷೇತ್ರದಲ್ಲಿ, ಜನರು ಆತ್ಮಿಕ ವಿಷಯಗಳಲ್ಲಿ ಸ್ವಲ್ಪವೇ ಆಸಕ್ತಿಯನ್ನು ಪ್ರದರ್ಶಿಸುತ್ತಿರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಫಲಪ್ರದವಾಗಿರುವ ಟೆರಿಟೊರಿಗಳಿವೆ. ನಿಮ್ಮ ಮಾತೃಭಾಷೆಯನ್ನು ಬಿಟ್ಟು, ಬೇರೆ ಯಾವುದಾದರೂ ಭಾಷೆಯನ್ನು ನೀವು ಮಾತಾಡಲು ಶಕ್ತರಿರುವದಾದರೆ, ಈ ದೇಶದಲ್ಲಿ ನಿಮ್ಮ ಸಹಾಯದ ನಿಜವಾದ ಅಗತ್ಯವಿರುವ ಒಂದು ಕ್ಷೇತ್ರದಲ್ಲಿ ಒಬ್ಬ ಕ್ರಮದ ಪಯನೀಯರರಾಗಿ ಸೇವಿಸಲು ಸ್ವಇಚ್ಛೆಯಿಂದ ಹೋಗಲು ನಿಮಗೆ ಸಾಧ್ಯವಿದೆಯೋ? ನಿಮ್ಮ ಸರ್ಕಿಟ್ ಮೇಲ್ವಿಚಾರಕರು ಈ ವಿಷಯದ ಮೇಲೆ ಕೆಲವು ಸಲಹೆಗಳನ್ನು ಕೊಡಬಹುದು.
6 ನಾವು ಹೊಂದಿರುವ ವಿಷಯಗಳಿಗಾಗಿ—ನಿಜವಾಗಿಯೂ ಸುವಿಷಯಗಳ ಸಮೃದ್ಧಿಗಾಗಿ—ಕೃತಜ್ಞರಾಗಿರಲು ಸಕಲ ಕಾರಣವೂ ಇದೆ. ಆತನ ನಾಮ ಮತ್ತು ಉದ್ದೇಶಗಳನ್ನು ಇತರರಿಗೆ ತಿಳಿಯಪಡಿಸುವ ಮೂಲಕ ಯೆಹೋವನಿಗೆ ನಮ್ಮ ಕೃತಜ್ಞತೆಯು ಅತ್ಯುತ್ತಮವಾಗಿ ವ್ಯಕ್ತಪಡಿಸಲ್ಪಡಬಲ್ಲದು.—ಯೆಶಾ. 12:4, 5.