ಪ್ರಶ್ನಾ ಪೆಟ್ಟಿಗೆ
◼ ನಾವು ಕೂಟಗಳಿಗೆ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು?
ಪ್ರತಿ ವಾರ ಸಭಾ ಕೂಟಗಳಲ್ಲಿ ನಾವು ಉಪಯುಕ್ತವಾದ ಉಪದೇಶ ಮತ್ತು ಪ್ರೋತ್ಸಾಹವನ್ನು ಪಡೆಯುತ್ತೇವೆ. (ಯೆಶಾ. 48:17; ಇಬ್ರಿ. 10:24, 25) ಆದಾಗಲೂ, ನಾವು ಎಷ್ಟು ಪ್ರಯೋಜನವನ್ನು ಪಡೆಯುವೆವೋ ಅದು, ನಾವು ಚೆನ್ನಾಗಿ ತಯಾರಿಸಿ ಬರುತ್ತೇವೋ ಇಲ್ಲವೋ ಎಂಬದರ ಮೇಲೆ ಬಹುಮಟ್ಟಿಗೆ ಹೊಂದಿಕೊಂಡಿರುತ್ತದೆ.
ಪ್ರತಿಯೊಬ್ಬ ಕುಟುಂಬ ಸದಸ್ಯನಿಗೆ ತನ್ನ ಸ್ವಂತ ಅಭ್ಯಾಸ ಸಾಮಗ್ರಿ ಮತ್ತು ಕೂಟಗಳಿಗೆ ಬೇಕಾಗಿರುವ ಇತರ ವಸ್ತುಗಳಿರುವುದು ಉಚಿತವಾಗಿದೆ. ಒಂದು ಬೈಬಲ್, ಒಂದು ಸಂಗೀತಪುಸ್ತಕ, ಅಭ್ಯಾಸಿಸಲ್ಪಡುವ ಪ್ರಕಾಶನ(ಗಳು), ಒಂದು ನೋಟ್ ಪುಸ್ತಕ, ಮತ್ತು ಒಂದು ಪೆನ್ ಅಥವಾ ಪೆನ್ಸಿಲನ್ನು ಇದು ಒಳಗೂಡುತ್ತದೆ.
ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ, ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್ ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆ ಮಾರ್ಗದರ್ಶಕ ಪುಸ್ತಕವು ಬೇಕಾಗಿದೆ. ಈ ವಿಷಯಗಳು, ಕೊಡಲ್ಪಡುವ ವಿದ್ಯಾರ್ಥಿ ಭಾಷಣಗಳ ಮುಖ್ಯ ವಿಷಯವನ್ನು ಮನಸ್ಸಿನಲಿಡಲ್ಲು ಮತ್ತು ಶಾಲಾ ಮೇಲಿಚಾರಕ್ವನು ಸಲಹೆಯನ್ನು ಕೊಡುತ್ತಿರುವಾಗ ಮನಸ್ಸನ್ನಿಡಲು ನಮಗೆ ಸಹಾಯ ಮಾಡುತ್ತವೆ. ನಮ್ಮ ಸ್ವಂತ ಭಾಷಣಗಳು ಮತ್ತು ಕ್ಷೇತ್ರ ಸೇವೆಯ ನಿರೂಪಣೆಗಳನ್ನು ಉತ್ತಮಗೊಳಿಸಲಿಕ್ಕಾಗಿ ನಾವು ಸಲಹೆ ಮತ್ತು ಸೂಚನೆಗಳ ವೈಯಕ್ತಿಕ ಅನ್ವಯವನ್ನು ಮಾಡಬಲ್ಲೆವು. ಜನವರಿಯಿಂದ, ಇಂಗ್ಲಿಷ್ ಭಾಷೆಯ ಶೆಡ್ಯೂಲಿನಲ್ಲಿರುವ ಉಪದೇಶ ಭಾಷಣಗಳಲ್ಲಿ ಹೆಚ್ಚಿನವು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು ಪುಸ್ತಕದ ಮೇಲೆ ಆಧರಿತವಾಗಿವೆ. ಕುಟುಂಬದ ಪ್ರತಿಯೊಬ್ಬ ಸದಸ್ಯನು ತನ್ನ ಸ್ವಂತ ಪ್ರತಿಯನ್ನು ತೆಗೆದುಕೊಂಡು ಹೋಗುವುದು ಪ್ರಾಯೋಗಿಕವಾಗಿರದು; ಆದರೆ ಪರಾಮರ್ಶೆಗಾಗಿ ಕುಟುಂಬಕ್ಕೆ ಲಭ್ಯವಿರುವಂತೆ ಪ್ರಾಯಶಃ ಒಂದು ಸಂಪುಟವನ್ನು ತರಸಾಧ್ಯವಿದೆ. ಖಂಡಿತವಾಗಿಯೂ, ದೇಶೀಯ ಭಾಷೆಯ ಶೆಡ್ಯೂಲ್‌ಗಳನ್ನು ಅನುಸರಿಸುವ ಸಭೆಗಳಲ್ಲಿ, ಒಬ್ಬೊಬ್ಬ ವ್ಯಕ್ತಿಯು ಆ ಶೆಡ್ಯೂಲ್‌ಗಳಲ್ಲಿ ಆವರಿಸಲ್ಪಡುತಿರುವ್ತ, ಚರ್ಚೆಗಾಗಿ ಬೈಬಲ್ ವಿಷಯಗಳು ಮತ್ತು ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರು ಪುಸ್ತಕದ ತನ್ನ ಸ್ವಂತ ಪ್ರತಿಯನ್ನು ಒಯ್ಯುವುದು ಉಚಿತವಾಗಿರುವುದು.
ಸೇವಾ ಕೂಟಕ್ಕಾಗಿ, ನಮ್ಮಲ್ಲಿ ಸದ್ಯದ ನಮ್ಮ ರಾಜ್ಯದ ಸೇವೆ ಮತ್ತು ರೀಸನಿಂಗ್ ಪುಸ್ತಕವು ಇರುವ ಅಗತ್ಯವಿದೆ. ಪ್ರತ್ಯಕ್ಷಾಭಿನಯಿಸಲ್ಪಡುವ ನಿರೂಪಣೆಗಳಲ್ಲಿ ಉಪಯೋಗಿಸಲಾಗುವ ಸಾಹಿತ್ಯ ವಸ್ತುಗಳಂತಹ, ಕೂಟದ ಸಮಯದಲ್ಲಿ ಸೂಚಿಸಲ್ಪಡುವ ಯಾವುದೇ ಪ್ರಕಾಶನಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ ಒಂದು ಪ್ರತಿ ಹಿರಿಯರೊಂದಿಗೆ ಇರತಕ್ಕದು.
ತಮ್ಮ ಮಕ್ಕಳು ಮೌನವಾಗಿ ಕುಳಿತಿರುವಂತೆ ಮತ್ತು ಸಭಾ ಕೂಟಗಳಲ್ಲಿ ಗಮನ ಕೊಡುವಂತೆ ಮಾಡಲು ಹೆತ್ತವರು ಪ್ರಯತ್ನಿಸಬೇಕು. ಅವರು ಓದಲು ಶಕ್ತರಾಗುವ ಮುಂಚೆಯೇ, ಕಾವಲಿನಬುರುಜು ಮತ್ತು ಇತರ ಪ್ರಕಾಶನಗಳ ವೈಯಕ್ತಿಕ ಪ್ರತಿಗಳನ್ನು ಅವರಿಗೆ ಕೊಡುವುದು, ಆಸಕ್ತಿಯನ್ನು ತೆಗೆದುಕೊಳ್ಳುವಂತೆ ಅವರನ್ನು ಉತ್ತೇಜಿಸುವುದು. ದೇವಪ್ರಭುತ್ವ ಪ್ರಕಾಶನಗಳನ್ನು ಗೌರವಿಸುವಂತೆ ಮತ್ತು ಅವುಗಳನ್ನು ಬಳಸುವಂತೆ ಎಳೆಯರಿಗೆ ಕಲಿಸಲ್ಪಟ್ಟಾಗ, ಜೀವನದುದ್ದಕ್ಕೂ ಹಿತಕರವಾದ ಆತ್ಮಿಕ ಅಭ್ಯಾಸಗಳು ರಚಿಸಲ್ಪಡುತ್ತವೆ.
ಸಭಾ ಕೂಟಗಳಿಂದ ನಾವು ಪಡೆಯುವ ಆನಂದ ಮತ್ತು ತೃಪ್ತಿಯು, ನಾವು ಪೂರ್ಣವಾಗಿ ಸನ್ನದ್ಧರಾಗಿ ಬರುವಾಗ ಮಹತ್ತಾಗಿ ಅತಿಶಯಿಸಲ್ಪಡುತ್ತದೆ. (2 ತಿಮೊ. 3:17) “ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ [ದೇವರ] ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿ” ಕೊಂಡಿರುವುದನ್ನು ಖಚಿತಗೊಳಿಸುವ ಅತ್ಯುತ್ತಮ ವಿಧ ಇದಾಗಿದೆ.—ಕೊಲೊ. 1:9.