ನಂಬಿಕೆಯಿಲ್ಲದವರಿಗೆ ಸಹಾಯ ಮಾಡಿರಿ
1 ಈ ಆಧುನಿಕ ಸಮಯಗಳಲ್ಲಿ, ಆಲೋಚನೆಯಲ್ಲಿ ಶಿಕ್ಷಿತರೂ ಪ್ರಗತಿಪರರೂ ಆಗಿ ವೀಕ್ಷಿಸಲ್ಪಡಬೇಕೆಂಬುದು ಜನಪ್ರಿಯವಾಗಿ ಪರಿಣಮಿಸಿದೆ. ಆತ್ಮಿಕ ಮೌಲ್ಯಗಳು ಕಡೆಗಣಿಸಲ್ಪಡುವಾಗ, ಮಾನವ ತತ್ವಶಾಸ್ತ್ರಗಳು ಮತ್ತು ಮನಃಕಲ್ಪಿತ ಸಿದ್ಧಾಂತಗಳು ಶಾಘ್ಲಿಸಲ್ಪಡುತ್ತಿವೆ. ಸರಳವಾದ ವಾಸ್ತವಾಂಶಗಳ ಮತ್ತು ಗ್ರಹಿಸಶಕ್ತವಾದ ಸತ್ಯಗಳ ಆಸಕ್ತಿಯನ್ನು ಹೊಂದಿರುವ ಪ್ರಾಮಾಣಿಕ ಜನರು, ಜೀವ—ಇದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿದಲೋ? (ಇಂಗ್ಲಿಷ್) ಎಂಬ ಪುಸ್ತಕವನ್ನು ಪರಿಶೀಲಿಸುವ ಅವಕಾಶವನ್ನು ಸಂತೋಷದಿಂದ ಸ್ವೀಕರಿಸುವರು. ನಂಬಿಕೆಯ ಕೊರತೆಯುಳ್ಳವರಿಗೆ ಈ ಪುಸ್ತಕವು ಸಹಾಯಮಾಡಬಲ್ಲದು. (ರೋಮಾ. 1:19, 20) ಅಭಿರುಚಿಯನ್ನು ವ್ಯಕ್ತಪಡಿಸುವವರೆಲ್ಲರಿಗೆ ಪುನಃ ಸಂದರ್ಶನಗಳನ್ನು ಮಾಡಲು ಖಾತ್ರಿಪಡಿಸಿಕೊಳ್ಳಿರಿ.
2 ನೀವು ನಿಮ್ಮ ಚರ್ಚೆಯನ್ನು ಈ ವಿಧದಲ್ಲಿ ಪ್ರಾರಂಭಿಸಬಹುದು:
◼ “ಮಾನವ ಕುಟುಂಬವು ವಿಕಾಸದಿಂದ ಇಲ್ಲಿಗೆ ಬಂತು ಎಂಬ ವಿಶ್ವಾಸವನ್ನು ಅನೇಕ ಶಿಕ್ಷಕರು ಬೆಂಬಲಿಸುತ್ತಾರೆ ಎಂಬುದಾಗಿ ನೀವು ಅರಿತಿದ್ದೀರೆಂದು ನನಗೆ ಖಾತ್ರಿಯಿದೆ. ಪ್ರತಿಯೊಂದು ವಿಷಯವು ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂತು ಎಂಬುದಾಗಿ ಅದು ಕಲಿಸುತ್ತದೆ. ಅದರ ಕುರಿತಾಗಿ ನೀವೇನು ಭಾವಿಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಅಭಿಪ್ರಾಯವು ಇನ್ನೂ ಒಂದು ಸಿದ್ಧಾಂತದೋಪಾದಿ ವೀಕ್ಷಿಸಲ್ಪಡುತ್ತದೆ. ಒಂದು ಸಿದ್ಧಾಂತವು ‘ಒಂದು ಊಹೆ’ ಅಥವಾ ‘ಒಂದು ಅದೃಢ ಕಲ್ಪನೆ’ ಯಾಗಿದೆ. ಶತಮಾನಗಳ ವರೆಗೆ, ಭೂಮಿಯು ಚಪ್ಪಟೆಯಾಗಿತ್ತೆಂದು ಮನುಷ್ಯರು ನಂಬಿದ್ದರು; ವಾಸ್ತವಾಂಶದ ಮೇಲಾಧರಿತವಲ್ಲದ ಮೂರ್ಖವಾದೊಂದು ಕಲ್ಪನೆಯು ಅದಾಗಿತ್ತೆಂದು ಈಗ ನಮಗೆ ತಿಳಿದಿದೆ. ವಿಕಾಸ ವಾದದ ಸಿದ್ಧಾಂತದಲ್ಲಿ ಸಹ ಇದು ಸತ್ಯವಾಗಿರಬಹುದೋ?” ಪುಟ 4 ರಲ್ಲಿರುವ ಪೀಠಿಕಾ ವ್ಯಾಖ್ಯೆಗಳನ್ನು ಓದಿರಿ, ಮತ್ತು ಅನಂತರ ಯೆಶಾಯ 42:5ನ್ನು ಚರ್ಚಿಸಿರಿ.
3 ಅಥವಾ ನೀವು ಹಿಂದಿರುಗಿದಾಗ ಈ ಸಮೀಪಿಸುವಿಕೆಯನ್ನು ತೆಗೆದುಕೊಳ್ಳಬಹುದು:
◼ “ದೇವರಲ್ಲಿ ವಿಶ್ವಾಸವಿಲ್ಲದ ಜನರನ್ನು ಸಂಧಿಸುವುದು ಸಾಮಾನ್ಯವಾಗಿದೆ. ವರ್ಷಗಳ ಹಿಂದೆ, ಅದು ವಿರಳವಾಗಿತ್ತು. ಇಷ್ಟೊಂದು ಜನರು ದೇವರಲ್ಲಿ ನಂಬಿಕೆಯನ್ನು ಏಕೆ ಕಳೆದುಕೊಂಡಿದ್ದಾರೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕರು ತಮ್ಮ ನಂಬಿಕೆಯ ಕಳೆತವನ್ನು, ಹೆಚ್ಚುತ್ತಿರುವ ಭೀತಿಕಾರಕ ಹಿಂಸೆ ಮತ್ತು ನಮ್ಮ ಲೋಕದಲ್ಲಿರುವ ಕಷ್ಟದೆಶೆಯ ಮೇಲೆ ಆಧ್ಯಾರೋಪಿಸುತ್ತಾರೆ. ಸರ್ವಶಕ್ತನಾದ ಒಬ್ಬ ದೇವರಿರುವುದಾದರೆ, ಈ ಎಲ್ಲ ಯಾತನೆಗಳನ್ನು ಆತನು ಏಕೆ ನಿಲ್ಲಿಸುವುದಿಲ್ಲ? ಎಂದು ಅವರು ತರ್ಕಿಸುತ್ತಾರೆ. ಆ ಪ್ರಶ್ನೆಗೆ ತೃಪ್ತಿದಾಯಕವಾದೊಂದು ಉತ್ತರವನ್ನು ಕಂಡುಕೊಳ್ಳದವರು ಅನೇಕ ವೇಳೆ ನಾಸ್ತಿಕರಾಗಿ ಪರಿಣಮಿಸುತ್ತಾರೆ. ಆದರೆ ದೇವರು ಅಸ್ತಿತ್ವದಲ್ಲಿದ್ದಾನೆ ಮತ್ತು ಆತನು ಬಲು ಬೇಗನೆ ಭೂಮಿಯನ್ನು ಸಂತೋಷವೂ ಶಾಂತಿಯೂ ಆದ ಒಂದು ಸ್ಥಳವಾಗಿ ಮಾಡುವನೆಂಬುದನ್ನು ರುಜುಪಡಿಸುವ ಭಾವಪರವಶಗೊಳಿಸುವ ಪುರಾವೆಯು ಇದೆ.” 196ನೇ ಪುಟದ 19ನೇ ಪ್ಯಾರಗ್ರಾಫ್ನಲ್ಲಿ ಕಂಡುಕೊಳ್ಳುವ ಶಾಸ್ತ್ರೀಯ ವಿಚಾರಗಳನ್ನು ಉಪಯೋಗಿಸುವ ಮೂಲಕ ಚರ್ಚೆಯನ್ನು ಮುಂದುವರಿಸಿರಿ.
4 ಸೂಕ್ತವಿರುವಲ್ಲಿ, ಕೈಯಲ್ಲಿ ನಿಮ್ಮ ಬೈಬಲನ್ನು ಹಿಡಿದು, ಹೀಗೆ ಹೇಳುತ್ತಾ ಸಂಭಾಷಣೆಯನ್ನು ನೀವು ಆರಂಭಿಸಬಹುದು:
◼ “ಬೈಬಲ್ನ ಒಂದು ಅಧ್ಯಯನವು ನಮ್ಮೀ ಸಮಯಗಳಿಗೆ ಏಕೆ ಪ್ರಾಯೋಗಿಕವಾಗಿದೆ ಎಂಬುದನ್ನು ತೋರಿಸಲು ನಾವು ಪುನಃ ಸಂದರ್ಶಿಸುತ್ತಿದ್ದೇವೆ. ಅನೇಕ ಜನರು ಒಂದು ಬೈಬಲನ್ನು ಹೊಂದಿದ್ದಾರೆ, ಆದರೆ ಕೆಲವೇ ಜನರು ಅದನ್ನು ಓದಲು ಸಮಯವನ್ನು ತೆಗೆದುಕೊಳ್ಳುತ್ತಾರೆ. ಧರ್ಮದಲ್ಲಿ ತಮಗೆ ಇನ್ನು ಮುಂದೆ ಹೆಚ್ಚು ಭರವಸೆಯಿಲ್ಲವೆಂದು ಕೆಲವರು ಮುಚ್ಚುಮರೆಯಿಲ್ಲದೆ ನಮಗೆ ಹೇಳುತ್ತಾರೆ. ಅದರ ಕುರಿತು ನಿಮಗೆ ಹೇಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲ್ ದೇವರ ಪ್ರೇರಿತ ವಾಕ್ಯವೆಂದು ನಮಗೆ ಮನಗಾಣಿಸುವ ವಿಷಯಗಳಲ್ಲಿ ಒಂದು, ಅದರ ಪ್ರವಾದನೆಗಳ ನೆರವೇರಿಕೆಯಾಗಿದೆ.” 234ನೇ ಪುಟದ ಪ್ಯಾರಗ್ರಾಫ್ 6 ರಲ್ಲಿರುವ ಶಾಸ್ತ್ರವಚನಗಳಿಗೆ ಸೂಚಿಸಿರಿ.
5 ಈ ವಿಚಾರವು ಒಂದು ಭರವಸೆಯನ್ನೀಯುವ ಪ್ರತಿಕ್ರಿಯೆಯನ್ನು ಪಡೆಯಬಹುದು:
◼ “ಈ ಭೂಮಿಯ ಮೇಲೆ ನಮ್ಮ ಸುತ್ತಲಿರುವ ವಿಷಯಗಳಲ್ಲಿ ಸೊಗಸಾದ ಮತ್ತು ವಿವೇಕದ ಅದ್ಭುತವಾದ ಪುರಾವೆಯನ್ನು ನಾವು ನೋಡಬಲ್ಲೆವು. ಸೂರ್ಯಾಸ್ತದ ಅತ್ಯಂತ ರಮ್ಯವಾದ ಈ ಚಿತ್ರವು ಒಂದು ಯುಕ್ತವಾದ ಉದಾಹರಣೆಯಾಗಿದೆ.” 12 ಮತ್ತು 13 ನೆಯ ಪುಟಗಳಲ್ಲಿರುವ ದೃಷ್ಟಾಂತವನ್ನು ತೋರಿಸಿರಿ. “ಆಲೋಚಿಸಲಿಕ್ಕಾಗಿ ಕೆಲವು ವಿಷಯಗಳು,” ಎಂಬುದರಿಂದ ಅಂಶಗಳನ್ನು ಪ್ರಸ್ತಾಪಿಸಿರಿ ಮತ್ತು ನಮ್ಮ ಲೋಕದ ಕುರಿತಾದ ಅತಿ ಮುಖ್ಯವಾದ ಪ್ರಶ್ನೆಗಳಿಗೆ ಈ ಪುಸ್ತಕವು ಹೇಗೆ ತೃಪ್ತಿದಾಯಕವಾದ ಉತ್ತರಗಳನ್ನು ಒದಗಿಸುತ್ತದೆ ಎಂಬುದನ್ನು ವಿವರಿಸಿರಿ.
6 ತಮ್ಮ ಸೃಷ್ಟಿಕರ್ತನಲ್ಲಿರುವ ನಂಬಿಕೆಗಾಗಿ ಒಂದು ದೃಢವಾದ ಆಧಾರವನ್ನು ಕಂಡುಕೊಳ್ಳಲು ಅವರಿಗೆ ಸಹಾಯ ಮಾಡಲಿಕ್ಕೆ ಈ ಪುಸ್ತಕವನ್ನು ಉಪಯೋಗಿಸುವ ಮೂಲಕ ನಾವು ಇತರರಿಗೆ ಸಂತೋಷವನ್ನು ಉಂಟುಮಾಡಬಲ್ಲೆವು.